ಬೌದ್ದಿಕವಾಗಿ ಬೆಳೆದ ಮೃದುಲ ಉದಾತ್ತ
ದ್ಯೇಯಗಳನ್ನಿಟ್ಟುಕೊಂಡು ಓದಿನ ಜೊತೆಗೆ
ಸರ್ಕಾರೇತರ ಸಂಸ್ಥೆ( NGO) ಯಲ್ಲಿಸ್ವಯಂ
ಸೇವಕಿಯಾಗಿ ಕೆಲಸ ಮಾಡುತ್ತಿದ್ದಳು.ಬಡ
ಮಕ್ಕಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ,
ಶೋ ಷಿತ ಮಹಿಳೆಯರ ಸಲುವಾಗಿ ಸಹಾಯ
ಕೋರಲು ಹಲವಾರು ಸಂಘ-ಸಂಸ್ಥೆಗಳಿಗೆ
ಬೇಟೆ ನೀಡಬೇಕಾದ್ದರಿಂದ ಮನೆಗೆ ಬರಲು
ಕೆಲವೊಮ್ಮೆ ತಡವಾಗುತ್ತಿತ್ತು. ಹೀಗೆ ತಡವಾಗಿ
ಬಂದಾಗ ತಾಯಿ ನೀನೇನು ಗಂಡು
ಹುಡುಗನಲ್ಲಹೊ ತ್ತುಗೊ ತ್ತಿಲ್ಲದೆ ಬರೋ ಕೆ
ಎಂದು ರೇಗುತ್ತಿದ್ದಾಗ ಅವಳೂ ಸೋ ಲದೆ
ಅಮ್ಮ ಅವರಿಗೇನು ಎರಡು ಕೊಂಬು ಇರುತ್ತಾ
ಈಗೀನ ಹೆಣ್ಣುಮಕ್ಕಳೇ ನೂ ಕಡಿಮೆಯಿಲ್ಲ
ಡಾಕ್ಟರ್, ಇಂಜಿನಿಯರ್, ಸೈಂಟಿಸ್ಟ್,
ಆಕಾಶದಲ್ಲಿಹಾರೊ ವಿಮಾನಕ್ಕೆ ಪೈಲಟ್
ಆಗೋ ದರ ಜೊತೆಗೆ,ದೇಶದ ಚುಕ್ಕಾಣಿ
ಹಿಡಿದಿರೊ ಮಂತ್ರಿನೂ ಆಗಿದಾರೆ ನೀನು
ಹೆಣ್ಣಾಗಿ ಕೂಡ ಅವರ್ನೆ ಮೇಲೆ ಮಾಡಿ
ಮಾತಾಡಿತಿಯಲ್ಲಮ್ಮ ಎನ್ನುತ್ತಿದ್ದಳು.
ಅವಳ ಅಣ್ಣಮಾಧವ್ ಚಪ್ಪಾಳೆ ತಟ್ಟುತ್ತಾ
ಸೂಪರಮ್ಮ ಇವಳ ಮಾತಿನ ವೈಖರಿ,
ಚಾಕಚಕ್ಯತೆ ನೋ ಡಿದರೆ ನಾಳೆ ಇವಳೂ
ಮಂತ್ರಿ ಹಾಗೊ ಹಾದಿಲಿದಾಳೆ ನೀನು ಸುಮ್ನೆ
ಗಾಬರಿಯಾಗ್ತಿಯ ಎಂದು ಹೇಳುತ್ತಾತಂಗಿಗೆ
ಹಸ್ತಲಾಘವ ನೀಡಿದ್ದ. ಅವರ ತಾಯಿ ತಲೆ
ಚಚ್ಚಿಕೊಂಡು ಗೊ ಣಗುತ್ತಲೆ ಒಳಗೆ
ಹೋ ಗಿದ್ದರಲ್ಲದೆ
ಗಂಡನ ಎದುರು ಇವಳಿಗೆ ಯಾಕೆ ನನ್ನ ಭಯ
ಏನೆಂದು ಅರ್ಥವಾಗುವುದಿಲ್ಲ,
ವೈಚಾರಿಕವಾಗಿ,ಸುಸಂಸ್ಕೃತವಾಗಿ
ಹೋ ರಾಡಬಲ್ಲಯಾವುದೇ ಗಂಡಿನೊ ಂದಿಗೆ
ಹೆಣ್ಣುಗೆಲ್ಲಬಹುದೆ ಹೊ ರತು ಪೈಶಾಚಿಕವಾಗಿ,
ಮೃಗೀಯವಾಗಿ ವರ್ತಿಸುವ ಗಂಡಿನೊ ಂದಿಗೆ
ಗೆಲ್ಲಲು ಸಾದ್ಯವೇ? ಸೃಷ್ಟಕರ್ತ ಗಂಡಿಗಿಂತ
ಹೆಣ್ಣಿಗೆ ಏನೇ ವಿಶೇಷ ಕೊಡುಗೆ ನೀಡಿದ್ದರೂ
ದೈಹಿಕವಾಗಿ ಗಂಡಿಗಿಂತ ದುರ್ಬಲಳಲ್ಲವೆ
ಸಮಯ ಸಂದರ್ಭ ನಮ್ಮ ಕೈಯಲ್ಲಿ
ಇರುತ್ತದೆಯೇ ಎಂದು ಕಳವಳ
ವ್ಯಕ್ತಪಡಿಸಿದ್ದರು.
ಕಾಲ ಏನೇ ಬದಲಾಗಿದ್ದರೂ ವೈಚಾರಿಕವಾಗಿ,
ಆರ್ಥಿಕವಾಗಿ, ಬೌದ್ಧಿಕವಾಗಿ ಹೆಣ್ಣುಗಂಡಿಗೆ
ಸರಿಸಮಾನವಾಗಿ ಮುಂದುವರೆದಿದ್ದರೂ
ಅವಳಿಗೆ ಗಂಡಿನ ರೌದ್ರತೆಯ ಮುಂದೆ ಸೋ ಲು
ಕಟ್ಟಿಟ್ಟ ಬುತ್ತಿಎಂಬುದು ಅವರ ಅಭಿಮತ. ಆಗ
ಅವರು ಪ್ಲೀಸ್ ಕುಸುಮ ಪೇಪರ್ನಲ್ಲಿ
ಬರೋ ದನೆಲ್ಲಾ ಓದಿ ಅವಳ ಆಸೆ
ಆಕಾಂಕ್ಷೆಗಳಿಗೆ ಅಡ್ಡಿಮಾಡಬೇಡ ಕಾರಣವಿಲ್ಲದೆ
ಅವಳೇ ನು ತಿರುಗುತ್ತಿಲ್ಲ.ಅವಳು ವಯಸ್ಸಿಗೆ
ಬಂದಾಗಿನಿಂದ ನನ್ನ ಎದುರಿಗೆ ಹೇಳಿದ್ದಲ್ಲದೆ
ನೂರು ಬಾರಿಯಾದರೂ ಅವಳ ಎದುರಿಗೆ
ಹೇಳಿದಿಯಾ, ಅವಳು ನಿನ್ನ ದ್ವೇಷಿಸೊ ಹಾಗೆ
ಮಾಡ್ಕೊ ಬೇಡ ಎನ್ನುತ್ತಿದ್ದರು. ತಂದೆಗೆ ಮಗಳ
ಆದರ್ಶ,ಗುರಿ,ಸಮಾಜಮುಖಿ ಕೆಲಸದ ಬಗ್ಗೆ
ಮೆಚ್ಚುಗೆಯೆ. ಯಾರೋ ಒಬ್ಬರೋ ಇಬ್ಬರು
ಅಂತವರು ಇರ್ತಾರಂತ ನೀನು
ಭಯಬೀಳೊ ದಲ್ಲದೆ ಅವಳಿಗೂ ಒತ್ತಡ
ಹೇರಿತಿಯಾ ಅಂದಾಗ ನಾನೇನು ಅವಳ ಆಸೆ
ಆಕಾಂಕ್ಷಿಗಳಿಗಾಗಲಿ, ಏಳ್ಗೆಗೆಗಾಗಲಿ ಅಡ್ಡಿ
ಮಾಡ್ತಿಲ್ಲಅವಳುದು ಬಿಸಿ ರಕ್ತಏನಾದರೂ
ಸಾಧಿಸಬೇಕೆನ್ನೊ ಛಲ, ಮುನ್ನುಗ್ಗೊ ಛಾತಿ
ಇರೋ ದರಿಂದಲೆ ತಾಯಿಯಾಗಿಮುಂಜಾಗ್ರತೆ
ವಹಿಸೋ ದು
ತಪ್ಪಾ ಎನ್ನುತ್ತಿದ್ದಳು. ನಿಮ್ಮ ತಾಯಿ ಮಗಳ
ನಡುವೆ ನಾವು ಮೆತ್ತಗೆ ಆಗ್ತಿವಿ ಅಷ್ಟೇ ಎಂದೂ
ಅವರು ನಗುತ್ತಿದ್ದರು. ಮನೆಯಲ್ಲಿಈ ರೀತಿಯ
ವಾಗ್ವಾದ ತಾಯಿ ಮಗಳ ನಡುವೆ ನಡೆಯುತ್ತಲೆ
ಇತ್ತು. ತಂದೆಯದು ಅವರಿಬ್ಬರ ನಡುವಿನ
ರಾಯಭಾರಿ ಕೆಲಸ ಮಾತ್ರ.
ಇಂದು ಕೂಡ ಕತ್ತಲೆಯಾಗುತ್ತಲೆ ತಾಯಿ
ಫೋನ್ ಮೇಲೆ ಫೋನ್ ಮಾಡಿದ್ದಲ್ಲದೆ ತನ್ನನ್ನು
ಕರೆತರಲು ಅಣ್ಣನನ್ನು ಕಳಿಸಿರುವರೆಂದು
ಮೃದುಲಾ ದುಮುಗುಟ್ಟತ್ತಲೆ ಮನೆಗೆ
ಬಂದವಳು ತನ್ನ ಕೋಣೆಯೊಳಗೆ ಹೋ ಗಿ
ದಡಾರನೆ ಬಾಗಿಲು ಮುಚ್ಚಿಕೊಂಡಳು. ಅಣ್ಣನಿಗೆ
ಯಾವುದೇ ನಿರ್ಬಂಧ ಹೇರದ ತಾಯಿ ತನಗೆ
ಮಾತ್ರ ಕತ್ತಲೆಯಾಗುವುದರೊ ಳಗೆ ಮನೆಗೆ
ಸೇರಬೇಕೆಂದು ಅಲಿಖಿತ ಶಾಸನ
ಹೊ ರಡಿಸಿರುವರೆಂದು ತಾಯಿಯ ಮೇಲೆ
ಬೇಸರ,ಕೋಪ ಎರಡು ಬಂದಿತ್ತಲದೆ ಸಹಾಯ
ಕೇಳಲು ಹೋ ದ ಸಂಸ್ಥೆಯಲ್ಲಿಕೂಡ ಅವರನ್ನು
ವಿಚಿತ್ರವಾಗಿ ನೋ ಡಿದ್ದರು.
ಊಟಕ್ಕೂ ಕರೆದರೂ ಬರದೆ ಒಂದು ಪೇಪರ್
ಹಿಡಿದು ಮನಸ್ಸಿನ ಬೇಸರ, ಕೋಪ,ದುಃಖ
ತನ್ನೆಲ್ಲಾಭಾವನೆಗಳನ್ನು ಅದರ ಮೇಲೆ
ಇಳಿಸಿದಳು.
ಹೆಣ್ಣು
ಹೆಣ್ಣಿಗೆ ಪ್ರತಿಯೊಂದು ಹೆಜ್ಜೆಯಲಿ
ತೊ ಡರುಗಾಲು ಹಾಕುವರೇಕೆ?
ಶತಮಾನಗಳೇ ಕಳೆದರೂ ಹೆಣ್ಣಗಿರುವ
ಸಂಕೋಲೆ ಕಳಚಿಲ್ಲವೇಕೆ?
ಹೆಣ್ಣಿನಲಿ ತಾಯಿ ಇರುವಳು ಎಂಬುದನು
ಮರೆತಿರುವರೇಕೆ?
ಪ್ರತಿ ನಿಮಿಷಕೂ ಸಮಾಜಕ್ಕೆ ಇದನು
ನೆನಪಿಸಬೇಕೆ?
ನಮ್ಮ ಸಮಾಜದಲಿ ಹೆಣ್ಣಿಹೆಣ್ಣೆಗೆ ಶತ್ರುವೇಕೆ?
ಸಮಯ
ಸಂದರ್ಭಕ್ಕೆ ತಕ್ಕಂತೆ
ಸಹಾಯ,
ಸಹಕಾರ ನೀಡಬಾರದೇಕೆ?
ಪದ್ಮಾ ಉಮೇಶ್
ಅವಳು ಬೇರೆಯವರ ಬಗ್ಗೆಯಾದರೆ ತಲೆ
ಕೆಡಿಸಿಕೊಳ್ಳುತ್ತಿರಲಿಲ್ಲ, ಜಾಡಿಸಿಕೊಂಡು
ಓಡಾಡಿಬಿಡುತ್ತಿದ್ದಳು.ಆದರೆ ತಾಯಿ ಕೂಡ
ತನಗೆ
ಅಡೆತಡೆ ಮಾಡುವರಲ್ಲಎಂದು ಅವಳಿಗೆ ಅಳು
ಒತ್ತರಿಸಿ ಬಂದಿತ್ತು. ತಂದೆ ಬಂದು
ಸಮಾದಾನಿಸಿದ ನಂತರವೆ ಊಟ ಮಾಡಿ
ಮಲಗಿದ್ದು. ಅವಳು ಮಲಗಿದ ನಂತರ ಬರೆದು
ಅಲ್ಲೆಬೀಸಾಡಿದ್ದಪೇಪರನ್ನು ಮೃದುಲಳ ತಂದೆ
ಅವಳ ಚಿಂತನೆಯನ್ನು ನೋ ಡು ಎನ್ನುವಂತೆ
ಹೆಂಡತಿಯ ಮುಂದೆ ತಂದು ಹಿಡಿದಾಗ ಅವರು
ನಿಟ್ಟುಸಿರಿಟ್ಟರು.
ಬೆಳಿಗ್ಗೆ ಎದ್ದನಂತರ ಹಾಲ್ಗೆಬಂದಾಗ ಟಿವಿ
ಯಲ್ಲಿಬಿತ್ತರಗೊ ಳ್ಳುತ್ತಿರುವ ಸುದ್ದಿನೋ ಡಿ
ಮೃದುಲ ನಡುಗಿ ಮರಗಟ್ಟಿಹೋ ದಳು.
ಮಗಳಿಗಾಗಿ ಕಾಫಿ ಹಿಡಿದು ಬಂದ ತಾಯಿ
ಕರೆದರೂ ಸ್ಪಂದಿಸದೆ ಹೋ ದಾಗ ತೋ ಳು
ಹಿಡಿದು
ಅಲುಗಾಡಿಸಿದರು. ಅವಳು ತಾಯಿಯ
ಹೆಗಲಿಗೊ ರಗಿ ಬಿಕ್ಕಿ -ಬಿಕ್ಕಿ ಅಳತೊ ಡಗಿದಾಗ
ಗಾಬರಿಗೆ ತಾಯಿ ಹಿಡಿದ ಕಾಫಿ ಕಪ್ ನೆಲ
ಸೇರಿತು. ಅವರು ಆತಂಕಗೊ ಂಡು
ವಿಚಾರಿಸಿದಾಗ ಏನು ಹೇಳದೆ ಟಿವಿ ಕಡೆ ಕೈ
ತೋ ರಿದಳು.
ಹಿಂದಿನ ರಾತ್ರಿ ರಾಕ್ಷಸರ ಮೃಗೀಯ ಕೃತ್ಯಕ್ಕೆ
ಬಲಿಯಾದ ಹುಡುಗಿಯ ಬಗ್ಗೆ
ಪ್ರಸಾರವಾಗುತ್ತಿತ್ತು. ಆ ಹುಡುಗಿ ಅವಳ ಜೊತೆ
NGO ದಲ್ಲಿಕೆಲಸ ಮಾಡುವ
ಸ್ನೇಹಿತೆಯಾಗಿದ್ದುಹಿಂದಿನ ರಾತ್ರಿ ಮೃದುಲ
ಕೂಡ ಅವಳ ಜೊತೆಯಲ್ಲೆಕೆಲಸದ ನಿಮಿತ್ತ
ಅವಳ ಗಾಡಿಯಲ್ಲೆಹೋ ಗಿ ಬರುತ್ತಿದ್ದಳು.
ಅಕಸ್ಮಾತಾಗಿ ಮಾಧವ್ ಆ ಕಡೆ ಹೋ ಗಿದ್ದಲ್ಲದೆ
ಆಗಲೇ ಕತ್ತಲಾಗುತ್ತಿದ್ದರಿಂದ ತಂಗಿಯನ್ನು
ಮನೆಗೆ ಕರೆದಕೊಂಡು ಬಂದಿದ್ದ. ಮೃದುಲ
ಸ್ವಲ್ಪದರಲ್ಲೆತಪ್ಪಿಸಿಕೊಂಡಿದ್ದಳು. ಮಾದ್ಯಮ
ದವರು ವಿಷಯ ಪ್ರಸಾರ ಮಾಡುವುದರ
ಜೊತೆಗೆ ಕೆಲವು ಹಿರಿಯರು, ಬುದ್ದಿಜೀವಿಗಳನ್ನು
ಕೂಡಿಸಿ ಅವರ ಜೊತೆಗೆ ವಿಚಾರ ವಿಮರ್ಶೆ
ಮಾಡುತ್ತಿದ್ದರು. ಅವರಲ್ಲಿಒಬ್ಬರು ರಾತ್ರಿ
ಹೊ ತ್ತಲ್ಲದ ಹೊ ತ್ತಲ್ಲಿಹೆಣ್ಣುಹುಡುಗಿಯರು
ಹೊ ರಗೆ ಬರುವುದಾದರೂ ಏಕೆ ಈ ಹುಡುಗಿ
ಯಾದರೂ ಸಮಾಜಮುಖಿ ಕೆಲಸದಲ್ಲಿ
ತೊ ಡಗಿಸಿಕೊಂಡಿತ್ತುಪಾಪ ಆದರೆ ಬೇರೆ
ಹುಡುಗಿಯರು ಪಬ್-ಕ್ಲಬ್ ಎಂದು ಬೇಕಾಬಿಟ್ಟಿ
ತಿರುಗುವರು ಎಂದರೆ, ಇನ್ನೊ ಬ್ಬರು ಇಂದಿನ
ಹೆಣ್ಣುಮಕ್ಕಳು ನಮೆಗೆ ಗಂಡಿನಂತೆ ಸ್ವಾತಂತ್ರ್ಯ
ಕೊಡುವುದಿಲ್ಲವೆಂದು ಜಗಳವಾಡುತ್ತಾರೆ
ತಂದೆ-ತಾಯಿಗಳಿಗೆ ಎಲ್ಲಾಮಕ್ಕಳು ಒಂದೆ.
ಮಕ್ಕಳಿಗೆ ಒಂದೇ ತೆರನಾಗಿ ಪ್ರೀತಿ ನೀಡುತ್ತಾರೆ
ಆದರೆ ಹೆಣ್ಣುಮಕ್ಕಳ ಬಗ್ಗೆಸ್ವಲ್ಪ ಕಾಳಜಿ
ವಹಿಸುತ್ತಾರೆ ಇಂತಹ ಕೃತ್ಯ
ನಡೆಯಬಾರದೆಂದು ಆದರೆ ಮಕ್ಕಳಿಗೆ ಅದು
ಕಡಿವಾಣ ಎನಿಸುತ್ತದೆ ಇಂತಹ ಘಟನೆಗಳು
ಆವಾಗ- ಆವಾಗ ನಡೆಯುತ್ತಿದ್ದರು ಹೆಣ್ಣು
ಮಕ್ಕಳಿಗೆ ಬುದ್ದಿಬರುವುದಿಲ್ಲಎಂದರೆ,
ಇನ್ನೊ ಬ್ಬರು ಸೀರೆ ತಂತಿಯ ಮೇಲೆ ಬಿದ್ದರೂ,
ತಂತಿ ಸೀರೆಯ ಮೇಲೆ ಬಿದ್ದರೂ ಹರಿಯುವುದು
ಸೀರೆನೆ ಎನ್ನುವಂತೆ ಹೆಣ್ಣಿನ ಬಾಳೆ
ಹಾಳಾಗುವುದು ಎಂದು ಗಾದೆಯ ಮಾತು
ಮೂಲಕ ಚರ್ಚೆ ಪೂರ್ಣ
ಗೊ ಳಿಸಿದರು.ಅವರೆಲ್ಲರಾ ಮಾತು
ಕೇಳಿಸಿಕೊಳ್ಳುತ್ತಿದ್ದಮೃದುಲ ಮಾತ್ರ ಕಣ್ಣೀರು
ಮಿಡಿಯುತ್ತಾತಾಯಿಯಲ್ಲಿಮತ್ತೆ-ಮತ್ತೆಕ್ಷಮೆ
ಕೇಳುತ್ತಲೇ ಅವರ ಬೆಚ್ಚನೆಯ ಒಡಲಲ್ಲಿ
ಮತ್ತಷ್ಟು-ಮಗದಷ್ಟು ಮುದುರಿಹೋ ದಳು.





