ಓಟ್ಸ್ ಈರುಳ್ಳಿ ವಡೆ  

ಬೇಕಾದ ಸಾಮಗ್ರಿ

ಒಂದು ಗಂಟೆ  ನೆನೆಸಿದ  ಕಡಲೆಬೇಳೆ ೩/೪ ಕಪ್,  ಹೆಸರು ಬೇಳೆ ೧/೪ ಕಪ್ , ಓಟ್ಸ್ ೧ ಕಪ್ , ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಒಣಮೆಣಸಿನಕಾಯಿ ೪-೫, ಹಸಿಶುಂಠಿ ಸಣ್ಣ ತುಂಡು,ರುಚಿಗೆ ತಕ್ಕಷ್ಟು ಉಪ್ಪು, ಸೋಂಪು ೧/೪ ಚಮಚ .

ಮಾಡುವ ವಿಧಾನ

೧/೨ ಕಪ್ ಕಡಲೇಬೇಳೆ,  ಹೆಸರು ಬೇಳೆ , ಓಟ್ಸ್ , ಒಣಮೆಣಸಿನಕಾಯಿ,  ಶುಂಠಿ, ಸೋಂಪು , ಉಪ್ಪು ಸೇರಿಸಿ  ಒಟ್ಟಿಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ . ಒಂದು ಮಿಕ್ಸಿಂಗ್ ಬೌಲ್ ನಲ್ಲಿ  ಅರೆದ ಮಿಶ್ರಣದೊಂದಿಗೆ ಉಳಿದ ೧/೪ ಕಪ್ ನೆನೆಸಿದ ಕಡಲೆಬೇಳೆ,  ಈರುಳ್ಳಿಯೊಂದಿಗೆ  ಚೆನ್ನಾಗಿ ಕಲೆಸಿ.  ನಂತರ ವಡೆಯಾಕಾರದಲ್ಲಿ ತಟ್ಟಿ ಎರಡೂ ಕಡೆ ಕೆಂಪಗಾಗುವವರೆಗೂ ಎಣ್ಣೆಯಲ್ಲಿ ಕರಿಯಿರಿ.

-ಕಾವ್ಯ ಭಾರದ್ವಾಜ್

Kavyaa Bharadwaj (1)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ