ಓಟ್ಸ್ ಈರುಳ್ಳಿ ವಡೆ
ಬೇಕಾದ ಸಾಮಗ್ರಿ
ಒಂದು ಗಂಟೆ ನೆನೆಸಿದ ಕಡಲೆಬೇಳೆ ೩/೪ ಕಪ್, ಹೆಸರು ಬೇಳೆ ೧/೪ ಕಪ್ , ಓಟ್ಸ್ ೧ ಕಪ್ , ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಒಣಮೆಣಸಿನಕಾಯಿ ೪-೫, ಹಸಿಶುಂಠಿ ಸಣ್ಣ ತುಂಡು,ರುಚಿಗೆ ತಕ್ಕಷ್ಟು ಉಪ್ಪು, ಸೋಂಪು ೧/೪ ಚಮಚ .
ಮಾಡುವ ವಿಧಾನ
೧/೨ ಕಪ್ ಕಡಲೇಬೇಳೆ, ಹೆಸರು ಬೇಳೆ , ಓಟ್ಸ್ , ಒಣಮೆಣಸಿನಕಾಯಿ, ಶುಂಠಿ, ಸೋಂಪು , ಉಪ್ಪು ಸೇರಿಸಿ ಒಟ್ಟಿಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ . ಒಂದು ಮಿಕ್ಸಿಂಗ್ ಬೌಲ್ ನಲ್ಲಿ ಅರೆದ ಮಿಶ್ರಣದೊಂದಿಗೆ ಉಳಿದ ೧/೪ ಕಪ್ ನೆನೆಸಿದ ಕಡಲೆಬೇಳೆ, ಈರುಳ್ಳಿಯೊಂದಿಗೆ ಚೆನ್ನಾಗಿ ಕಲೆಸಿ. ನಂತರ ವಡೆಯಾಕಾರದಲ್ಲಿ ತಟ್ಟಿ ಎರಡೂ ಕಡೆ ಕೆಂಪಗಾಗುವವರೆಗೂ ಎಣ್ಣೆಯಲ್ಲಿ ಕರಿಯಿರಿ.
-ಕಾವ್ಯ ಭಾರದ್ವಾಜ್

आगे की कहानी पढ़ने के लिए सब्सक्राइब करें
ಸಬ್ ಸ್ಕಿರಪ್ಶನ್ ಜೊತೆ ಪಡೆಯಿರಿ
700ಕ್ಕಿಂತಲೂ ಹೆಚ್ಚಿನ ಆಡಿಯೋ ಕಥೆಗಳು
6000ಕ್ಕೂ ಹೆಚ್ಚಿನ ಸ್ವಾರಸ್ಯಕರ ಕಥೆಗಳು
ಗೃಹಶೋಭಾ ಪತ್ರಿಕೆಯ ಎಲ್ಲಾ ಹೊಸ ಲೇಖನಗಳು
5000ಕ್ಕೂ ಹೆಚ್ಚಿನ ಲೈಫ್ ಸ್ಟೈಲ್ ಟಿಪ್ಸ್
2000ಕ್ಕೂ ಹೆಚ್ಚಿನ ಬ್ಯೂಟಿ ಟಿಪ್ಸ್
2000ಕ್ಕೂ ಹೆಚ್ಚಿನ ಟೇಸ್ಟಿ ಫುಡ್ ರೆಸಿಪೀಸ್
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





