ಟೊಮ್ಯಾಟೋ ಸಾಂಬಾರ್ ಈರುಳ್ಳಿ ಚಟ್ನಿ
ಬೇಕಾಗುವ ಸಾಮಗ್ರಿ
ಸಣ್ಣಗೆ ಹೆಚ್ಚಿದ ಟೊಮ್ಯಾಟೋ ಒಂದು ಕಪ್ , ಸಿಪ್ಪೆ ರಹಿತ ಸಾಂಬಾರ್ ಈರುಳ್ಳಿ ಅರ್ಧ ಕಪ್, ತೆಂಗಿನ ತುರಿ ೧/೪ ಕಪ್, ಖಾರಕ್ಕೆ ತಕ್ಕಂತೆ ಹಸಿ ಶುಂಠಿ ತುಂಡು, ಅರ್ಧ ಚಮಚ ಸೋಂಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಬಾಣಲೆಯಲ್ಲಿ೪ ಚಮಚ ಎಣ್ಣೆ ಹಾಕಿ, ಅದು ಬಿಸಿಯಾಗುತ್ತಲೇ ಟೊಮ್ಯಾಟೋ, ಈರುಳ್ಳಿ, ಸೋಂಪು ಹಾಕಿ ಚೆನ್ನಾಗಿ ಬಾಡಿಸಿ ಉರಿ ಆರಿಸಿ . ಸ್ವಲ್ಪ ತಣಿದ ನಂತರ ಮಿಕ್ಸಿ ಜಾರಿನಲ್ಲಿ ತಣಿದ ಮಿಶ್ರಣದ ಜೊತೆ ತೆಂಗಿನ ತುರಿ, ಶುಂಠಿ, ಉಪ್ಪು ಹಾಕಿ ನುಣ್ಣಗೆ ರುಬ್ಬಿ ಸಾಸಿವೆ ಒಗ್ಗರಣೆ ಕೊಡಿ.
– ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





