ಸಬ್ಬಸಿಗೆ ಸೊಪ್ಪಿನ ಮಸಾಲ ವಡೆ
ಬೇಕಾದ ಸಾಮಗ್ರಿ
ನೆನೆಸಿದ ಕಡಲೆಬೇಳೆ ೨ ಕಪ್, ಹೆಸರುಬೇಳೆ ೨ ಚಮಚ, ಸಣ್ಣಗೆ ಕತ್ತರಿಸಿದ ಎಳೆ ಸಬ್ಬಸ್ಸಿಗೆ ಸೊಪ್ಪು ೧ ಕಪ್, ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಒಣಮೆಣಸಿನಕಾಯಿ ೫-೬, ಹಸಿಶುಂಠಿ ಸಣ್ಣ ತುಂಡು, ಸೋಂಪು ೧/೪ ಚಮಚ, ಗರಂ ಮಸಾಲಾ ಪುಡಿ ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಕಡಲೇಬೇಳೆ, ಹೆಸರುಬೇಳೆ, ಒಣಮೆಣಸಿನಕಾಯಿ,ಶುಂಠಿ, ಸೋಂಪು, ಉಪ್ಪು ಸೇರಿಸಿ ತರಿತರಿಯಾಗಿ ರುಬ್ಬಿಕೊಂಡು, ಗರಂ ಮಸಾಲಾ, ಈರುಳ್ಳಿ , ಎಳೆ ಸಬ್ಬಸ್ಸಿಗೆ ಸೊಪ್ಪಿನೊಂದಿಗೆ ಚೆನ್ನಾಗಿ ಕಲೆಸಿ. ನಂತರ ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ.
–ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





