ಸಬ್ಬಸಿಗೆ ಸೊಪ್ಪಿನ  ಮಸಾಲ ವಡೆ  

ಬೇಕಾದ ಸಾಮಗ್ರಿ

ನೆನೆಸಿದ ಕಡಲೆಬೇಳೆ ೨ ಕಪ್, ಹೆಸರುಬೇಳೆ ೨ ಚಮಚ, ಸಣ್ಣಗೆ ಕತ್ತರಿಸಿದ ಎಳೆ ಸಬ್ಬಸ್ಸಿಗೆ ಸೊಪ್ಪು ೧ ಕಪ್,  ಸಣ್ಣಗೆ ಹೆಚ್ಚಿದ ಈರುಳ್ಳಿ ಅರ್ಧ ಕಪ್, ಒಣಮೆಣಸಿನಕಾಯಿ ೫-೬, ಹಸಿಶುಂಠಿ ಸಣ್ಣ ತುಂಡು, ಸೋಂಪು ೧/೪ ಚಮಚ, ಗರಂ ಮಸಾಲಾ ಪುಡಿ  ೧ ಚಮಚ,  ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ

ಕಡಲೇಬೇಳೆ, ಹೆಸರುಬೇಳೆ, ಒಣಮೆಣಸಿನಕಾಯಿ,ಶುಂಠಿ, ಸೋಂಪು, ಉಪ್ಪು ಸೇರಿಸಿ ತರಿತರಿಯಾಗಿ  ರುಬ್ಬಿಕೊಂಡು, ಗರಂ ಮಸಾಲಾ, ಈರುಳ್ಳಿ , ಎಳೆ ಸಬ್ಬಸ್ಸಿಗೆ ಸೊಪ್ಪಿನೊಂದಿಗೆ ಚೆನ್ನಾಗಿ ಕಲೆಸಿ.  ನಂತರ  ವಡೆಯಾಕಾರದಲ್ಲಿ ತಟ್ಟಿ ಎಣ್ಣೆಯಲ್ಲಿ ಮಧ್ಯಮ ಉರಿಯಲ್ಲಿ ಕರಿಯಿರಿ.

-ಕಾವ್ಯಾ ಭಾರದ್ವಾಜ್ 

Kavyaa Bharadwaj (8)

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ