ಅಬ್ಬಬ್ಬಾ…. ಒಂದೇ ಮುಖದಲ್ಲಿ ಇಷ್ಟೊಂದು ರಂಧ್ರಗಳೇ?! : ಈ ಹುಚ್ಚು ಇದೀಗ ಅಮೆರಿಕಾದ ಯೂರೋಪ್‌ ನಲ್ಲಿ ಸ್ವಾತಂತ್ರ್ಯದ ಸಿಂಬಲ್ ಆಗಿದೆ. ಇದು ನ್ಯಾಚುರಲ್ ಬ್ಯೂಟಿಯನ್ನೂ ಹಾಳು ಮಾಡಿಬಿಡುತ್ತದೆ. ಅಲ್ಲಿನ ಯೂಥ್‌ ಕೇವಲ ರೆಬೆಲ್ ‌ಎಂದು ತೋರಿಸಿಕೊಳ್ಳಲು, ಎಷ್ಟೊಂದು ಪಿಯರ್ಸಿಂಗ್‌ ಮಾಡಿಸಿಕೊಳ್ಳುತ್ತಾರೆಂದರೆ ಅವರುಗಳ ತಾಯಿತಂದೆ ಕೋಪಿಸಿಕೊಂಡು, ಕಾಡಿಬೇಡಿದರೂ ಈ ಚಟ ತಪ್ಪಲ್ಲ. ಈ ರೋಗ ಈಗ ವಿಶ್ವದೆಲ್ಲೆಡೆ ಹರಡುತ್ತಿದೆ. ಹೀಗಾಗಿ ಗಲ್ಲಿಗಲ್ಲಿಗಳಲ್ಲೂ ಮೆಹಂದಿ, ಟ್ಯಾಟೂ, ಪಿಯರ್ಸಿಂಗ್‌ ಆರ್ಟಿಸ್ಟ್ ಜೋರಾಗಿ ದಂಧೆ ನಡೆಸುತ್ತಿದ್ದಾರೆ, ಕೈತುಂಬಾ ಹಣ ಬಾಚಿಕೊಳ್ಳುತ್ತಿದ್ದಾರೆ. ಸಾಧು ಬಾಬಾಗಳು ಕುಂಭಮೇಳದಲ್ಲಿ ಇಂಥದ್ದೇ ರಂಧ್ರ ಪ್ರದರ್ಶಿಸುತ್ತಾರೆ, ಹಾಗಿರುವಾಗ ಈ ಹೈಕಳಿಗೆ ಏನು ಹೇಳುವುದು?

friday-the-13th-tattoo-pierci

ಇಲ್ಲಂತೂ ಸಾವಿರಾರು ಅಡೆತಡೆಗಳಿವೆ! : ಇಟಲಿಯ ಒಪೇರಾ ಇಟಾಲಿಯಾನಾ ಎಂಬಾಕೆ, ವಾಷಿಂಗ್ಟನ್‌ ನ ನೀಡ್‌ ಎಂಬಲ್ಲಿ ಒಂದು ಕಾನ್ಸರ್ಟ್‌ ನಡೆಸಿಕೊಟ್ಟಳು. ಇದು ನಮ್ಮ ದೇಶದ ಇಂಡಿಯಾ ಗೇಟ್‌ಕರ್ತವ್ಯ ಪಥದಂಥ ಜಾಗಗಳು. ನಮ್ಮಲ್ಲಿ ಅಂತೂ ಇಂಥಕ್ಕೆಲ್ಲ ಸಾವಿರಾರು ಅಡೆತಡೆಗಳಿವೆ, ಇಂಡಿಯಾ ಗೇಟ್‌ ನಲ್ಲಿ ಇಂಥ ಕಾನ್ಸರ್ಟ್‌ ಬಡಪಟ್ಟಿಗೆ ಜರುಗೀತೇ? ಆದರೆ ಅಲ್ಲಿನ ಲಿಂಕನ್‌ ಮೆಮೋರಿಯಲ್ ಹಾಗೂ ವಾಷಿಂಗ್ಟನ್‌ ನೀಡ್‌ ಗಳ ನಡುವೆ ಆಗಾಗ ಇಂಥ ಇವೆಂಟ್ಸ್ ನಡೆಯುತ್ತಲೇ ಇರುತ್ತವೆ, ಇದನ್ನು ನೋಡಲು ಸಾವಿರಾರು ಮಂದಿ ಸೇರುತ್ತಾರೆ. ಆದರೆ ನಮ್ಮ ನೇತಾಗಳು ಇಲ್ಲಿ ಸದಾ ಗಾಬರಿಗೊಳ್ಳುತ್ತಿರುತ್ತಾರೆ. ಒಂದು ಕಾಲದಲ್ಲಿ ಇಂಡಿಯಾ ಗೇಟ್‌ ಬಳಿಯ ಬೋಟ್‌ ಕ್ಲಬ್‌ ಸಹ ಪ್ರತಿದಿನ ಸಾವಿರಾರು ಮಂದಿಯ ಜನದಟ್ಟಣೆ ಕಾಣುತ್ತಿತ್ತು, ವರ್ಷದಲ್ಲಿ ಒಮ್ಮೊಮ್ಮೆ ಲಕ್ಷಾಂತರ ಮಂದಿಯದು. ಈಗಂತೂ ಶಾಸಕರು ಬಹಳ ಭಯಪಡುತ್ತಾರೆ.

hnw-pre-nup

ಮದುವೆಗೂ ಧರ್ಮಕ್ಕೂ ಏನು ಸಂಬಂಧ : ಮದುವೆ ನಂತರ ಪ್ರೇಮಿಗೆ ಖಾಸಗಿ ವಿಮಾನದಲ್ಲಿ ಪ್ರವಾಸ ಹೊರಡಲು ಅವಕಾಶ ಸಿಕ್ಕಿತು. ಆದರೆ ಇಲ್ಲಿ ನಡೆದದ್ದು ಬೇರೆ. ಪ್ರೇಮಿಯಲ್ಲ, ಆತ ಈಗ ಪತಿ, ಅವನೇ ದುಶ್ಮನ್‌ ತರಹ ಬುಸುಗುಡುತ್ತಿದ್ದಾನೆ. ಈ ಪ್ರಕರಣ ಮನೆ ಮುರಿದು ಕಾನೂನಿನ ಕಟಕಟೆ ಪ್ರವೇಶಿಸಿತು. ಮಾಜಿ ಪತಿ ಖಾಸಗಿ ವಿಮಾನಗಳಲ್ಲಿ ಹಾರಾಡಿದರೆ ಮಾಜಿ ಪತ್ನಿ ಲೋಕಲ್ ಟ್ರೇನುಗಳಲ್ಲಿ ಸುತ್ತಾಡುವುದೇ? ಇದರ ತೀರ್ಪು ಮದುವೆಗೆ ಮುನ್ನವೇ ಪ್ರೀ ನ್ಯೂಪಿಟ್‌ ಅಗ್ರಿಮೆಂಟ್‌ ನಲ್ಲಿ ನಮೂದಿಸಲಾಗಿರುತ್ತದೆ. ಪ್ರೀತಿ ಪ್ರೇಮ ಸಪ್ತಸಾಗರದಾಚೆಗೆ ತೇಲಾಡುತ್ತಿದ್ದಾಗ, ನವಜೋಡಿ ಈ ಸಂಬಂಧ ಶಾಶ್ವತ ಎಂದೇ ಭಾವಿಸುತ್ತಾರೆ. ಆದರೆ ಈ ಆಧುನಿಕ ದಿನಗಳಲ್ಲಿ ಅರ್ಧ ಪಾಲು ಮದುವೆಗಳು ಡೈವೋರ್ಸ್‌ ಕಡೆ ತಿರುಗುತ್ತಿರುವಾಗ ವಕೀಲರು, ಪುರೋಹಿತರು ಏನೂ ಮಾಡಲಾಗದು, ಮಧ್ಯದಲ್ಲಿ ಫ್ಯೂಚರ್‌ ಗಾಗಿ ಬೇಕಾದ ಲೀಗಲ್ ಕಾಗದಪತ್ರ ಅತ್ಯಗತ್ಯವಾಗಿ ರೆಡಿ ಮಾಡಿಸಬೇಕು, ಮದುವೆಗೆ ಮೊದಲೇ ವಿಚ್ಛೇದನದ ಎಲ್ಲಾ ಕಾಗದಪತ್ರ ರೆಡಿ ಆಗಿ ಹೋಗುತ್ತದೆ! ಧರ್ಮವನ್ನು ನಡುವೆ ಎಳೆತಂದು ಮದುವೆ ಜೀವನ ಪರ್ಯಂತ ಇವರು ಬಾಂಧವ್ಯ ಎನ್ನುವ ಪುರೋಹಿತರು, ತಮ್ಮ ಕೆಲಸಕ್ಕೆ ಖೋತಾ ಆಗುತ್ತಿರುವುದು ಕಂಡು ದುಃಖಿಸುತ್ತಿದ್ದಾರೆ.

9235-wadeandchrisbrown

ಹೀಗೊಂದು ಮೋಜು ಮಸ್ತಿ : ಇದೀಗ ಡ್ಯಾನ್ಸ್ ಮಾಡಬೇಕೆಂದರೆ ಯಾರು ವಯಸ್ಸಿಗೆ ಪ್ರಾಧಾನ್ಯತೆ ಕೊಡುತ್ತಾರೆ? ಸರಿಯಾದ ಸಂಗೀತ, ಸಂದರ್ಭ, ಮುಕ್ತ ಮನಸ್ಸು, ಸಪೋರ್ಟ್‌ ಮಾಡುವ ಡ್ಯಾನ್ಸಿಂಗ್‌ ಪಾರ್ಟ್‌ ನರ್‌ ಇದ್ದ ಮೇಲೆ ಯಾರ ಜೊತೆಗಾದರೂ ಕುಣಿಯಬಹುದು, ವಯಸ್ಸು ಅಡ್ಡಿಯಾಗದು. ಸೋಶಿಯಲ್ ಮೀಡಿಯಾ ಇಂಥ ಅವಕಾಶ ಕೊಡುತ್ತಿದೆ, ಆದರೆ ಯಾರು ಈ ಶಾಟ್ ನ್ನು ಮಿಸ್‌ ಯೂಸ್‌ ಮಾಡುತ್ತಾರೋ ಗೊತ್ತಾಗುವುದಿಲ್ಲ. ಹೀಗಾಗಿ ಡ್ಯಾನ್ಸ್ ನ್ನು ನಿಮ್ಮ ಆಪ್ತರ ನಡುವೆ ಮಾತ್ರ ಇರಿಸಿಕೊಳ್ಳಿ, ನಿಮ್ಮ ಆಪ್ತರಿಗಾಗಿ ಮಾತ್ರ ಮಾಡಿಕೊಳ್ಳಿ, ಫಾಲೋಯೆರ್ಸ್‌ ಹೆಚ್ಚಿಸುವ ನೆಪಕ್ಕಾಗಿ ಅಲ್ಲ.

store2

ಆಗಲೂ ಪ್ರೆಸ್ಟೀಜ್ಅಷ್ಟೇ ಇರುತ್ತದೆ : ಇದೀಗ ಲೇಡೀಸ್‌ ಹ್ಯಾಂಡ್‌ ಬ್ಯಾಗ್‌ ಲಕ್ಷ ಬದಲು ಕೋಟಿ ಮುಟ್ಟಿರುವಾಗ ಅಂಥ ಸೆಕೆಂಡ್ ಹ್ಯಾಂಡ್‌ ಬ್ಯಾಗುಗಳಿಗೂ ಡಿಮ್ಯಾಂಡ್‌ ಹೆಚ್ಚುತ್ತಿದೆ! `ಇಂಪಾಸಿಬಲ್ ಬ್ಯಾಗ್ಸ್’ ಎಂದ ಕಂಪನಿ ತನ್ನ ಆನ್‌ ಲೈನ್‌ ವಿಸಿಟ್‌ ಮಾಡುವ ಗ್ರಾಹಕರಿಗೆಂದೇ ಲಾಕ್‌ಇನ್‌ ಸ್ಟೋರ್‌ ತೆರೆದು, ಅಲ್ಲಿ ಸೆಕೆಂಡ್‌ ಹ್ಯಾಂಡ್‌ ಬಾಗ್ಸ್ ಅಗ್ಗದಲ್ಲಿ ಸಿಗುವಂತೆ ಮಾಡಿದೆ. ಖ್ಯಾತ ಬ್ರಾಂಡ್ಸ್ ನವರು ಇಂಥವನ್ನು ಕಂಡು ಮೂಗು ಸಿಂಡರಿಸುತ್ತಾರೆ, ಆದರೆ ಅವರು ಏನು ತಾನೇ ಮಾಡಲು ಸಾಧ್ಯ? ಶೋರೂಮಿನಿಂದ ಖರೀದಿಸಿದ ಕೋಟ್ಯಂತರ ಬೆಲೆ ಬಾಳುವ ಬ್ಯಾಗ್‌ ಬೀರು ಅದೇ ಪ್ರೆಸ್ಟೀಜ್‌ ಈ ಅಗ್ಗದ ಬ್ಯಾಗುಗಳೂ ಬೀರುತ್ತಿವೆ!

mothersday-2

ಡೈರೆಕ್ಷನ್ನೀಡುವವರು ಬೇಕು : ಈ ಮೂವರಲ್ಲಿ ಒಬ್ಬಾಕೆ ಟೀನ್ಸ್ ಗಾಗಿ ಫೌಂಡೇಶನ್‌ ನಡೆಸಿದರೆ, ಮತ್ತೊಬ್ಬಳು ಸ್ವಿಮ್ ವೇರ್ ಡಿಸೈನ್‌ ಮಾಡುತ್ತಾಳೆ, ಕೊನೆಯವಳು ಮಾಡೆಲಿಂಗ್‌ ನ ಎಕ್ಸ್ ಪರ್ಟ್‌ ಫೋಟೋಗ್ರಾಫರ್‌. ಮೂವರೂ ಕೂಡಿ ಕಂಗೆಟ್ಟಿರುವ ಅಮೆರಿಕಾದ ಟೀನ್ಸ್ ಗೆ ಲೈಫ್‌ ಸ್ಟೈಲ್‌ಲೈಫ್‌ ಪ್ರಿಸರ್ವೇಶನ್‌ ನ ಫಾರ್ಮುಲಾ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಾಲಿಗೆ ಅಮೆರಿಕಾ ಅಂದ್ರೆ ಭುವಿಗಿಳಿದ ಸ್ವರ್ಗ, ಅಲ್ಲಿನವರೆಲ್ಲರೂ ಮಹಾನ್‌ ಬುದ್ಧಿವಂತರೆಂದೇ ಭಾವಿಸುತ್ತೇವೆ. ಅಸಲಿ ವಿಷಯ ಅಂದ್ರೆ, ಅಲ್ಲಿನ ಟೀನ್ಸ್ ಬಲು ಡಿಪ್ರೆಶನ್‌ ಗೆ ತುತ್ತಾಗಿ, ಲಾಸ್‌ ಆಫ್‌ ಪರ್ಪಸ್‌ ಗೆ ಬಲಿಯಾಗುತ್ತಿದ್ದಾರೆ. ಅಲ್ಲಿನ ಪೇರೆಂಟ್ಸ್ ತಮ್ಮಷ್ಟಕ್ಕೇ ಬಿಝಿ. ಅಡಲ್ಟ್ ಟೀಚರ್ಸ್‌ ಟೀನ್ಸ್ ರ ಕಾಟದಿಂದ ಬೇಸತ್ತಿದ್ದಾರೆ. ಇವರುಗಳಿಗೆ ಹೆಸರಿಗೆ ಲಕ್ಷಾಂತರ FB ‌ಫ್ರೆಂಡ್ಸ್ ಇದ್ದಾರೆ, ಕಷ್ಟಕ್ಕೆ ನೆರವಾಗುವವರು ಒಬ್ಬರೂ ಇಲ್ಲ. ಅಲ್ಲಿನ ವಿದ್ಯಾಭ್ಯಾಸವಂತೂ ಕೇಳೋದೇ ಬೇಡ! ಅವರಿಗೆ ಸರಿಯಾದ ಮಾರ್ಗದರ್ಶಕರು ಬೇಕಷ್ಟೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ