ಮೂಲಂಗಿ ಚಟ್ನಿ
ಬೇಕಾಗುವ ಸಾಮಗ್ರಿ
ಮೂಲಂಗಿ ತುರಿ ೧ ಕಪ್,ತೆಂಗಿನ ತುರಿ ಅರ್ಧ ಕಪ್, ಹೆಚ್ಚಿದ ಸಾಂಬಾರ್ ಈರುಳ್ಳಿ ೨, ಕೊತ್ತಂಬರಿ ಸೊಪ್ಪು ಸ್ವಲ್ಪ, ಹಸಿಮೆಣಸಿನಕಾಯಿ ೩-೪, ನಿಂಬೇರಸ ೧ ಚಮಚ , ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ
ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ರುಬ್ಬಿ ಸಾಸಿವೆ ಇಂಗಿನ ಒಗ್ಗರಣೆ ಕೊಟ್ಟರೆ ರುಚಿಕರ ಮೂಲಂಗಿ ಚಟ್ನಿ ರೆಡಿ.
–ಕಾವ್ಯಾ ಭಾರದ್ವಾಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ





