ಗೋಡಂಬಿ ಬರ್ಫಿ  

ಬೇಕಾಗುವ ಸಾಮಗ್ರಿ

ಗೋಡಂಬಿ ೧ ಕಪ್, ಸಕ್ಕರೆ ೧ ಕಪ್, ಕಂಡೆನ್ಸ್ಡ್ ಮಿಲ್ಕ್ ೧ ಚಮಚ , ತುಪ್ಪ ೧/೨ ಕಪ್ .

ಮಾಡುವ ವಿಧಾನ 

ಗೋಡಂಬಿಯನ್ನು ನುಣ್ಣಗೆ ಪುಡಿಮಾಡಿಕೊಳ್ಳಿ. ದಪ್ಪತಳದ ಪಾತ್ರೆಗೆ ಒಂದು ಚಮಚ  ತುಪ್ಪ ಹಾಕಿ , ಸ್ವಲ್ಪ  ಬಿಸಿಯಾಗುತ್ತಲೇ ಸಕ್ಕರೆ ಹಾಗು ಅದು ಕರಗುವಷ್ಟು  ನೀರು ಸೇರಿಸಿ  ಸಣ್ಣ ಉರಿಯಲ್ಲಿ ಇಡಿ. ಸಕ್ಕರೆ ಕರಗಿ ಕುದಿ ಬರುವಾಗ ಕಂಡೆನ್ಸ್ಡ್ ಮಿಲ್ಕ್ , ಅರೆದ ಗೋಡಂಬಿಪುಡಿಯನ್ನು ಸೇರಿಸಿ  ಕೈಯಾಡಿಸುತ್ತಿರಿ ಅವಶ್ಯಕತೆಗೆ ತಕ್ಕಂತೆ ತುಪ್ಪ ಹಾಕಿ ಚೆನ್ನಾಗಿ ಮಗುಚಿ.  ಮಿಶ್ರಣ ಪಾತ್ರೆಯನ್ನು ಬಿಟ್ಟು ಬರುತ್ತಿದ್ದಂತೆ, ತುಪ್ಪದ ಜಿಡ್ಡು ಕಾಣಿಸಿದ ತಟ್ಟೆಯ  ಮೇಲೆ ಮಿಶ್ರಣವನ್ನು ಸಮವಾಗಿ ಹರಡಿ. ಸ್ವಲ್ಪ ತಣಿದ ನಂತರ ಸಣ್ಣ ಬಿಲ್ಲೆಗಳನ್ನಾಗಿ ಕತ್ತರಿಸಿ ತೆಗೆಯಿರಿ .

ಕಾವ್ಯಾ ಭಾರದ್ವಾಜ್ 

Kavyaa Bharadwaj (4)

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ