ಛಾಯಾಸಿಂಗ್ರಾಜೇಶ್ನಟರಂಗ

ಝೀ ಕನ್ನಡ ವಾಹಿನಿಯಲ್ಲಿ ಅಮೃತಧಾರೆ ಧಾರಾವಾಹಿಯಲ್ಲಿ ನಟಿಸುತ್ತಿರುವ ಭೂಮಿಕಾ ಗೌತಮ್ ಜೋಡಿ ಧಾರಾವಾಹಿ ಪ್ರಿಯರ ಗಮನ ಸೆಳೆಯುತ್ತದೆ. ಈ ಧಾರಾವಾಹಿಯ ಲೀಡ್‌ ರೋಲ್ ನಲ್ಲಿರುವ ನಟಿ ಛಾಯಾಸಿಂಗ್‌ ಹಾಗೂ ನಟ ರಾಜೇಶ್‌ ನಟರಂಗ ಜೋಡಿ ಸೂಪರ್‌ ಆಗಿದ್ದು, ಬಹಳ ಪ್ರಬುದ್ಧತೆಯಿಂದ ಕಾಣಿಸಿಕೊಳ್ಳುತ್ತಾರೆ. ಪ್ರತಿಯೊಂದು ಸಂದರ್ಭವನ್ನೂ ಬಹಳ ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಈ ಜೋಡಿಗಳ ಸೀನ್‌ ಬರಲಿ ಎಂದು ಅಭಿಮಾನಿಗಳು ಸದಾ ಕಾಯುತ್ತಿರುತ್ತಾರೆ.

Lavanya---Shashidhar-hegde2

ಲಾವಣ್ಯಾ ಶಶಿಧರ್ಹೆಗ್ಡೆ

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಪೂರ್ಣಿ ಪಾತ್ರದ ಮೂಲಕ ಪ್ರೇಕ್ಷಕರ ಮನಗೆದ್ದ ಲಾವಣ್ಯಾ ಹಾಗೂ ಅಮೃತಧಾರೆ ಸೀರಿಯಲ್ ನಲ್ಲಿ ಜೀ ಪಾತ್ರ ಮಾಡಿದ್ದ ಶಶಿಧರ್‌ ಹೆಗ್ಡೆ ರಿಯಲ್ ಲೈಫ್‌ ಕಪ್‌. ರಾಜಾರಾಣಿ ಧಾರಾವಾಹಿ ಮೂಲಕ ಪರಿಚಯವಾದ ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಜೋಡಿ ಹಲವು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ನಟಿಸುತ್ತಿದ್ದಾರೆ.

Ranjini-raghavan---Kiran-raj-2

ರಂಜನಿ ರಾಘವನ್ಕಿರಣ್ರಾಜ್

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾದ `ಕನ್ನಡತಿ’ ಧಾರಾವಾಹಿಯಲ್ಲಿ ಕಿರಣ್‌ ರಾಜ್‌ ಹಾಗೂ ರಂಜನಿ ರಾಘವನ್‌ ಅವರು ಒಟ್ಟಾಗಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಈ ಧಾರಾವಾಹಿ ಪೂರ್ಣಗೊಂಡು ಹಲವು ಸಮಯ ಕಳೆದಿದೆ. ಈ ಧಾರಾವಾಹಿ ಮುಗಿದರೂ ಈ ಜೋಡಿಯನ್ನು ವೀಕ್ಷಕರು ಮರೆತಿಲ್ಲ ಎಂದೇ ಹೇಳಬಹುದು. ಈಗ ಕಿರಣ್‌ ರಾಜ್‌ `ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂದರೆ ರಂಜನಿ ಸದ್ಯ ಸಿನಿಮಾ ನಿರ್ದೇಶನದಲ್ಲಿ ಬಿಝಿ ಆಗಿದ್ದಾರೆ.

Siddhu---priya-achar

ಸಿದ್ದು ಪ್ರಿಯಾ ಆಚಾರ್

ಕಿರುತೆರೆಯ ಲವ್ ಬರ್ಡ್ಸ್ ಎಂದೇ ಗುರುತಿಸಿಕೊಂಡರು ಸಿದ್ದು ಮೂಲಿಮನಿ ಹಾಗೂ ಪ್ರಿಯಾ ಆಚಾರ್‌. ಗಟ್ಟಿಮೇಳ, ಪಾರು ಧಾರಾವಾಹಿ ಖ್ಯಾತಿಯ ಸಿದ್ದು ಮೂಲಿಮನಿ ಮತ್ತು ಪ್ರಿಯಾ ಆಚಾರ್‌ ಇತ್ತೀಚೆಗಷ್ಟೆ ಮದುವೆಯಾಗಿದ್ದಾರೆ. ಇಬ್ಬರೂ ಒಟ್ಟಿಗೆ ಧಮಾಕ ಸಿನಿಮಾದಲ್ಲಿ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಫೇಮಸ್‌ ಆಗಿದ್ದ ಪ್ರಿಯಾ ಆಚಾರ್‌ ಗಟ್ಟಿಮೇಳ ಧಾರಾವಾಹಿಯಲ್ಲಿ ಅದಿತಿ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು.

Chandan-kumar---kavitha-gowda-(1)

ಚಂದನ್ಮತ್ತು ಕವಿತಾ

ನಟ ಚಂದನ್‌ ಹಾಗೂ ನಟಿ ಕವಿತಾ ಜೋಡಿ ಕಿರುತೆರೆಯಲ್ಲಿ ಫೇಮಸ್‌. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಇಬ್ಬರೂ ಸತಿಪತಿಗಳ ಪಾತ್ರದಲ್ಲಿ ಮಿಂಚಿದರು. ಸುಮಾರು ಆರು ವರ್ಷಗಳ ಕಾಲ ಮೂಡಿ ಬಂದ ಈ ಧಾರಾವಾಹಿಯಲ್ಲಿ ಚಂದು ಚಿನ್ನು ಪಾತ್ರವನ್ನು ಇಬ್ಬರೂ ನಿಭಾಯಿಸಿದ್ದರು. ಬಳಿಕ ಇಬ್ಬರು ಪರಸ್ಪರ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆಯಾದ ಬಳಿಕ ಇಬ್ಬರೂ `ಕುಕ್‌ ವಿತ್‌ ಕಿರೀಕ್‌’ ಕಾರ್ಯಕ್ರಮದಲ್ಲಿ ಒಟ್ಟಿಗೆ ಪಾಲ್ಗೊಂಡಿದ್ದರು.

Aishwarya-Vinay-1

ಐಶ್ವರ್ಯಾ ಸಾಲಿಮಠ

ವಿನಯ್‌ ಕನ್ನಡ ಕಿರುತೆರೆಯ ತಾರಾ ಜೋಡಿ ಐಶ್ವರ್ಯಾ ಸಾಲಿಮಠ ಹಾಗೂ ವಿನಯ್‌. ಅಗ್ನಿಸಾಕ್ಷಿ ಹಾಗೂ ರಾಮಾಚಾರಿ ಸೀರಿಯ್‌ ನಲ್ಲಿ ಐಶ್ವರ್ಯಾ ಸಾಲಿಮಠ ಅಭಿನಯಿಸಿದ್ದರೆ, ಕನ್ನಡತಿ ಧಾರಾವಾಹಿಯಲ್ಲಿ ವಿನಯ್‌ ನಟಿಸಿದ್ದರು. ಮಹಾಸತಿ ಎಂಬ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಿಗೆ ಮಿಂಚಿದ್ದರು. ಇತ್ತೀಚೆಗಷ್ಟೇ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.

Amrutha---Raghu-3

ಅಮೃತಾ ರಘು ಕೆಂಡ ಸಂಪಿಗೆ ಸೀರಿಯಲ್ ನಲ್ಲಿ ಸಾಧನಾ ಪಾತ್ರ ಮಾಡಿರುವ ಅಮೃತಾ ಹಾಗೂ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಸಾಕೇತ್‌ ಪಾತ್ರದ ಮೂಲಕ ಗಮನ ಸೆಳೆದ ರಘುರವರದು ಲವ್ ಮ್ಯಾರೇಜ್‌. ಈ ಜೋಡಿ ಮಿಸ್ಟರ್‌ಮಿಸೆಸ್ ರಂಗೇಗೌಡ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿ ಕಿರುತೆರೆಯ ಅಭಿಮಾನಿಗಳಿಂದ ಭೇಷ್‌ ಎನ್ನಿಸಿಕೊಂಡಿದ್ದರು. ಈ ಧಾರಾವಾಹಿ ಮುಗಿಯುವಷ್ಟರಲ್ಲಿ ಇವರಿಬ್ಬರೂ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು.

Sushmitha---jagappa-1

ಸುಶ್ಮಿತಾ ಜಗ್ಗಪ್ಪ

ಮಜಾ ಭಾರತದ ರಿಯಾಲಿಟಿ ಶೋ ಖ್ಯಾತಿಯ ಸುಶ್ಮಿತಾ ಹಾಗೂ ಜಗ್ಗಪ್ಪ, ಗಿಚ್ಚಿ ಗಿಲಿಗಿಲಿ ಮೂಲಕ ಎಲ್ಲರ ಗಮನ ಸೆಳೆದರು. ಕನ್ನಡ ಕಿರುತೆರೆಯಲ್ಲಿ ತಮ್ಮ ಕಾಮಿಡಿಯಿಂದಲೇ ಸಾಕಷ್ಟು ಹೆಸರು ಮಾಡಿದ್ದಾರೆ. ರಿಯಾಲಿಟಿ ಶೋನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಸುಶ್ಮಿತಾ ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್ ನಲ್ಲಿ ಪೋಷಕ ಪಾತ್ರ ನಿರ್ವಹಿಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ