ಸಂವಿಧಾನದಲ್ಲಿ ಸೆಕ್ಯುಲರ್ ಎಂಬ ಶಬ್ದ ಪ್ರಿಯೆಂಬ್ ನಲ್ಲಿದೆ. ಇತ್ತೀಚೆಗೆ BJP ಹಾಗೂ ಹಿಂದೂತ್ವದ ಭಾರಿ ಕೀಲಿ ಮಾಡುತ್ತಾ, ಅಲ್ಲಿಂದ ಈ ಶಬ್ದವನ್ನು ಉಚ್ಚಾಟಿಸಬೇಕು ಎನ್ನುತ್ತಿದ್ದಾರೆ, ಆಗ ಭಾರತವನ್ನು ಒಂದು ತರಹದಲ್ಲಿ ಹಿಂದೂ ರಾಷ್ಟ್ರ ಎಂದು ಘೋಷಿಸಬೇಕೆಂಬುದು.
ಆ ಹಿಂದೂ ರಾಷ್ಟ್ರದ ಅರ್ಥವೇನು? ಭಾರತದಲ್ಲಿ ಹಿಂದೂಗಳ ಮೇಲೆ ಶೋಷಣೆ ನಡೆಯುತ್ತಿದೆಯೇ? ಹಿಂದೂ ಸೆಕೆಂಡ್ ಕ್ಲಾಸ್‌ಸಿಟಿಜನ್ ಎಂದು ಫೀಲ್ ಆಗಲು ಈ ಸೆಕ್ಯುಲರ್ ಶಬ್ದ ಕಾರಣವೇ? ಈ ಶಬ್ದದ ಬಳಕೆಯಿಂದ ಹಿಂದೂಗಳು ತಮ್ಮನ್ನು ತಾವು ಅಸುರಕ್ಷಿತರೆಂದು ಭಾವಿಸುತ್ತಿದ್ದಾರೆಯೇ? ಈ ಶಬ್ದದ ಉಚ್ಚಾಟನೆಯಿಂದ ಈ ದೇಶದಲ್ಲಿ ಚಿನ್ನದ ಸುರಿಮಳೆ ಆಗಲಿದೆಯೇ? ಬಡ ಹಿಂದೂಗಳಿಗೆ ಹೆಚ್ಚಿನ ಹಣ ಸಿಗಲಿದೆಯೇ?
ಹಾಗೇನೂ ಆಗೋದಿಲ್ಲ ಬಿಡಿ. ಸೆಕ್ಯುಲರ್ ಶಬ್ದದ ಅರ್ಥ ಕೇವಲ ಇಷ್ಟೆ, ಸರ್ಕಾರ ಹಿಂದೂ, ಮುಸ್ಲಿಂ, ಬೌದ್ಧ, ಸಿಖ್, ಜೈನ, ಕ್ರೈಸ್ತ, ಪಾರಸಿ ಯಾ ನಾಸ್ತಿಕರ ಜೊತೆ ಭೇದಭಾವ ಮಾಡೋದಿಲ್ಲ ಅಂತ. ಈ ಧರ್ಮಗಳನ್ನು ಅನುಸರಿಸುವವರನ್ನು ಸೆಕೆಂಡ್ ಕ್ಲಾಸ್ ಸಿಟಿಜನ್ ಎನ್ನಲಾಗದು. ಬಹುಸಂಖ್ಯಾತರಾದ 80% ಹಿಂದೂ ಇದರಿಂದ ಹೆಚ್ಚಿನ ಲಾಭ ಏನು ಗಳಿಸಲಿದ್ದಾರೆ? ಸಾಮಾನ್ಯ ಹಿಂದೂ ಕುಟುಂಬ, ಲಿಬರ್ ಯಾ ಕನ್ಸರ್ವೇಟಿವ್ ಆಗಿರಲಿ. ಈ ಶಬ್ದ ಇದ್ದರೂ ತೆಗೆದರೂ, ಬದಲಾಗದು. ಹಾಗಿರುವಾಗ ಕೆಲವರೇಕೆ ಈ ಶಬ್ದದ ಹಿಂದೆ ಹೀಗೆ ಬಿದ್ದಿದ್ದಾರೆ?
ಇದರ ಹಿಂದೆ ಎಲ್ಲಕ್ಕೂ ಹೆಚ್ಚಿನ ದೊಡ್ಡ ಭಾವನೆ ಪೌರಾಣಿಕ ಧರ್ಮವನ್ನು ವಾಪಸ್ಸು ತರುವುದಾಗಿದೆ. ಹಿಂದೂಗಳು ತಮ್ಮ ಹಕ್ಕನ್ನು ತಾವೇ ಕಳೆದುಕೊಳ್ಳುವಂಥ ಧರ್ಮ ಪುನಸ್ಥಾಪಿಸುವುದು ಅಂತ. ಇದಕ್ಕೆ ಬಲಿ ಆಗುವವರು ಹೆಂಗಸರು! 80% ಹಿಂದೂಗಳ ಅರ್ಧದಷ್ಟು ಜನಸಂಖ್ಯೆಯರು. ಸೆಕ್ಯುಲರ್ ಶಬ್ದದ ನೆಪದಲ್ಲಿ ಹಿಂದೂ ಹೆಂಗಸರಿಗೆ ಬಹಳಷ್ಟು ಧಾರ್ಮಿಕ ಅನ್ಯಾಯಗಳಿಂದ ಮುಕ್ತಿ ಸಿಕ್ಕಿವೆ. ಸೆಕ್ಯುಲರ್‌ಈಕ್ವಾಲಿಟಿ ಶಬ್ದಗಳ ಬಳಕೆಯಿಂದ, ಹಿಂದೂ ಹೆಂಗಸರಿಗೆ ವಸತಿಯಿಂದ ಮುಕ್ತಿ ಸಿಕ್ಕಿತು. ಸೆಕ್ಯುಲರಿಸಂ ಕಾರಣ ಶಾಲಾಕಾಲೇಜುಗಳ ಬಾಗಿಲು ಎಲ್ಲರಿಗೂ ತೆರದಂತಾಗಲು, ಹೆಣ್ಣಿಗೂ ಸಮಾನ ಶಿಕ್ಷಣದ ಅವಕಾಶ ಲಭಿಸಿತು. ಬೀದಿಗಳಲ್ಲಿ ಪ್ರತಿಯೊಂದು ತರಹದ ಜನರು ಓಡಾಡಲಿಕ್ಕೆ ಪ್ರಾಥಮಿಕ ಹಕ್ಕು ಸಿಕ್ಕಿತು. ಸಹಜವಾಗಿ ಇದು ಹೆಂಗಸರಿಗೂ ದಕ್ಕಿತು. ಮನಸ್ಸು ಬಯಸಿದ ಡ್ರೆಸ್ ಧರಿಸಿ, ಮನಸ್ಸು ಬಂದೆಡೆ ಸಾರ್ವಜನಿಕವಾಗಿ ಸುತ್ತಾಡುವ ಹಕ್ಕು ಪಡೆದುಕೊಂಡರು.
ಹಿಂದೆಲ್ಲ ರೈಲ್ವೆ ಸ್ಷೇಷನ್ ಗಳಲ್ಲಿ ಹಿಂದೂಮುಸ್ಮಾನರಿಗೆ ಬೇರೆ ಬೇರೆ ಮೂಲದ ನೀರು ಸಿಗುತ್ತಿತ್ತು. ಎರಡೂ ಕಡೆಯ ಗಂಡಸರು ತಾವು ನೀರು ಕುಡಿದು, ಪರಿವಾರದವರಿಗಾಗಿ ರೈಲ್ವೆ ಚೊಂಬಿನಲ್ಲಿ ನೀರು ಕೊಂಡೊಯ್ಯುತ್ತಿದ್ದರು. ಸೆಕ್ಯುಲರಿಸಮ್ ಬಂದ ನಂತರ ಧರ್ಮದ ಈ ಭೇದಭಾವ ತಳ್ಳಿಹಾಕಿತು, ಸೆಕ್ಸ್ ನ ಭೇದಭಾವ ದೂರಾಯಿತು. ಕಂದಾಚಾರದ ಕಂಬ, ರೇಖೆಗಳು, ತಂತಾನೇ ದೂರ ಸರಿದಾಗ, ಎಷ್ಟೋ ಇತರ ಅಡೆತಡೆಗಳೂ ಹಾಗೆ ದೂರವಾಗುತ್ತಾ ಹೋಗುತ್ತವೆ. ಹೆಂಗಸರು ಈಗ ತಾವೇ ಬಂದು ಸಾಲಲ್ಲಿ ನಿಂತು ನೀರು ಪಡೆಯುತ್ತಾರೆ, ಗಂಡಸರ ಮಧ್ಯೆ ಸಮಾನತೆಯ ಹಕ್ಕು ಪಡೆಯುತ್ತಾರೆ.
ಕಂದಾಚಾರಿಗಳು ಹಿಂದೂ ಹೆಂಗಸರನ್ನು ಮುಖ್ಯವಾಗಿ ಧರ್ಮದ ಹೆಸರಲ್ಲಿ ಮೂಲೆಗೊತ್ತರಿಸಲು ನೋಡುತ್ತಾರೆ, ಇದಕ್ಕೆ ಸಂವಿಧಾನ ಅಡ್ಡಿ ಮಾಡುತ್ತಿದೆ. ಎಷ್ಟೋ ಕಡೆ ಹೆಂಗಸರನ್ನು ಬೇಕೆಂದೇ ಬೇರೆಯಾಗಿ, ಕೆಳಮಟ್ಟದಲ್ಲಿ ದುರ್ಬಲರೆಂದು ಸಾರುವ ನೀತಿಗಳನ್ನು ಒಪ್ಪದೆ, ಸಂವಿಧಾನ ಅದನ್ನು ತಿರಸ್ಕರಿಸಿದೆ. ಸಂವಿಧಾನದ ದೃಷ್ಟಿಯಲ್ಲಿ ಕಾನೂನಿನ ಪ್ರಕರಣಗಳಲ್ಲಿ ಗಂಡುಹೆಣ್ಣು ಸರಿಸಮ. ವಿಧುರ ವಿಧವೆ ಸರಿಸಮ, ಮಗ ಮಗಳು ಸರಿಸಮ. ಆದರೆ ಇದನ್ನು ಪೌರಾಣಿಕ ಮಂದಿ ಒಪ್ಪಲು ತಯಾರಿಲ್ಲ. ಅವರು ಸೆಕ್ಯುಲರಿಸಮ್ ಜೊತೆಜೊತೆಗೆ ಜೆಂಡರ್ ಈಕ್ವಾಲಿಟಿಯನ್ನೂ ಕೊನೆಗಾಣಿಸಲು ಪ್ರಯತ್ನಿಸುತ್ತಾರೆ. ಪಾಕಿಸ್ತಾನ್, ಇರಾನ್, ಆಘ್ಘಾನಿಸ್ತಾನ್ ಗಳಲ್ಲಿ ಅತ್ತ ಸೆಕ್ಯುಲರಿಸಮ್ ಇಲ್ಲ, ಇತ್ತ ಜೆಂಡರ್ ಈಕ್ವಾಲಿಟಿಯೂ ಇಲ್ಲ. ಅಲ್ಲಿ ಹೆಂಗಸರನ್ನು ಬೇಕೆಂದೇ ಹಿಜಾಬ್, ಬುರ್ಕಾ, ಪರದೆಗಳಲ್ಲಿ ಅಡಗಿಸಿಟ್ಟು, ನೌಕರಿಗೂ ಕಳಿಸುವುದಿಲ್ಲ. ಅಲ್ಲಿನ ಗಂಡಸರು ಆ ಹೆಂಗಸರನ್ನು ತಮ್ಮ ಸ್ವತ್ತು ಎಂದೇ ಗುರುತಿಸುತ್ತಾರೆ, ಭಾರತದಲ್ಲಿ ಸ್ವಾತಂತ್ರ್ಯಪೂರ್ವ ಇದ್ದಂತೆ.
ಇಲ್ಲಿನ ಕಂದಾಚಾರಿಗಳು ಹೆಂಗಸರನ್ನು ಕೇವಲ ಮಂದಿರದ ಮುಂದೆ ಕಲಶ ಹೊರಲು, ಸಾಧುಬಾಬಾಗಳ ಸೇವೆ, ಪತಿಯ ಸೂಚನೆಯಂತೆ ನಡೆದುಕೊಳ್ಳುವ ದಾಸಿಯರನ್ನಾಗಿ ಮಾಡಲು ಬಯಸುತ್ತಾರೆ. ಸೆಕ್ಯುಲರಿಸಮ್ ಶಬ್ದ ಇಂಥವರ ಪ್ಲಾನಿಂಗ್ ಗೆ ಅಡ್ಡಿಪಡಿಸುತ್ತದೆ.
ಸೆಕ್ಯುಲರ್ ಶಬ್ದ ದೂರಾದಾಗ ಧರ್ಮ ಮುಂದೆ ಬಂದು ಮೆರೆಯುತ್ತದೆ, ಹಿಂದೂ ಧರ್ಮಗುರುಗಳ ಮಾತು ವೇದವಾಕ್ಯ ಆಗುತ್ತದೆ. ಈಗಲೂ ಸಹ ಸಂಸದ್ ನ ಉದ್ಘಾಟನೆಗೆ ಮಹಿಳಾ ರಾಷ್ಟ್ರಪತಿಗಳನ್ನು ಆಮಂತ್ರಿಸದೆ, ಪುರೋಹಿತರನ್ನಷ್ಟೇ ಕರೆಸಲಾಗಿತ್ತು. ಇದು ಜೀವನದ ಪ್ರತಿ ಘಟ್ಟದಲ್ಲಿಯೂ ಕಂಡುಬರಲಿದೆ.
ಕೈಲಾಗದ ಆಡಳಿತ ತ್ರಸ್ತ ಜನತೆ
ರೆಸಿಡೆನ್ಶಿಯ್ ಏರಿಯಾಗಳಲ್ಲಿ ಅಂಗಡಿ, ಕಛೇರಿ, ಕೋಚಿಂಗ್ ಸೆಂಟರ್, ಸಣ್ಣಪುಟ್ಟ ಕಾರ್ಖಾನೆಗಳ ಮೇಲೆ ನಗರಪಾಲಿಕೆ ಆ್ಯಕ್ಷನ್‌ತೆಗೆದುಕೊಳ್ಳುತ್ತಲೇ ಇರುತ್ತದೆ. ಆದರೆ ಇಂಥ ಆ್ಯಕ್ಷನ್ ತೆಗೆದುಕೊಳ್ಳುವುದು ಅಂದ್ರೆ, 500 ಮನೆಗಳ ಕಾಲೋನಿಗಳಲ್ಲಿ 100 ಮನೆಗಳಲ್ಲಿ ಅಂಗಡಿ, ಕಛೇರಿಗಳು ತೆರೆಯಲ್ಪಟ್ಟಾಗ ಮಾತ್ರ!
ರೆಸಿಡೆನ್ಶಿಯಲ್ ಏರಿಯಾ ಅಲ್ಲಿ ವಾಸಿಸುವರ ಸೆಕ್ಯುರಿಟಿ ಬೆಲೂನ್ ಆಗಿರುತ್ತದೆ, ಅಲ್ಲಿ ವಾಣಿಜ್ಯ ವ್ಯವಹಾರಗಳು ಒಂದು ಪಿನ್ ತರಹ ಚುಚ್ಚುತ್ತವೆ. ಕೆಲವರು ಹೆಚ್ಚಿನ ಹಣದ ದುರಾಸೆಗೆ ತಮ್ಮ ವಾಸಯೋಗ್ಯ ಮನೆಗಳನ್ನು ವಾಣಿಜ್ಯ ವಹಿವಾಟಿಗೆ ಒಪ್ಪಿಸುತ್ತಾರೆ, ಯಾ ಮಾರಿಬಿಡುತ್ತಾರೆ. ದಶಕಗಳಿಂದ ಅಲ್ಲೇ ವಾಸಿಸುವ ಜನರಿಗೆ ಇದರಿಂದ ಯಾವ ಪರಿಣಾಮ ಬೀರಬಲ್ಲದು ಎಂದು ಯೋಚಿಸುವುದಿಲ್ಲ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಪ್ರತಿ ಮನೆಯಲ್ಲಿ 1 ಯಾ 3ಕ್ಕೆ ಮೀರದಂತೆ ಕಾರುಗಳಿರುತ್ತವೆ, ಕಮರ್ಶಿಯಲ್ ಎಸ್ಟಾಬ್ಲಿಶ್ ಮೆಂಟ್ ಗಳ ಅಕ್ಕಪಕ್ಕ 5-7 ರಿಂದ ಹಿಡಿದು 10-20 ಕಾರುಗಳು ಬರಬಹುದಾಗಿವೆ. ನಾಯಿಕೊಡೆಗಳಂತೆ ಎಲ್ಲೆಲ್ಲೂ ಶಾಲೆಗಳು ತೆರೆಯಲ್ಪಟ್ಟು, ಅಲ್ಲಿನ ಮಕ್ಕಳನ್ನು ಕರೆದೊಯ್ಯಲು ಕೆಲವು ಗಂಟೆಗಳಿಗಾಗಿ 50-100 ವಾಹನಗಳು ಬಂದು ನಿಲ್ಲುತ್ತವೆ.
ದೆಹಲಿಯ ಸಮೀಪದ ಗುರುಗ್ರಾಮದಲ್ಲಿ 1, 2, 3ರಲ್ಲಿ ಆಡಳಿತ ಮಂಡಳಿಯು 800 ಮನೆಗಳಲ್ಲಿ ಎನ್ ಕ್ರೋಚ್ ಮೆಂಟ್ ಹಾಗೂ ಕಮರ್ಷಿಯಲ್ ಲಾಭಕ್ಕಾಗಿ ಕಾರುಬಾರು ಶುರು ಮಾಡಿದಾಗ, ಕೋರ್ಟು ಮಧ್ಯೆ ಪ್ರವೇಶಿಸಬೇಕಾಯಿತು. ಆದರೆ ಇಲ್ಲಿ ಪ್ರಶ್ನೆ ಅಂದ್ರೆ 800 ರವರೆಗೂ ಆ ಸಂಖ್ಯೆ ಹೆಚ್ಚಿದ್ದು ಹೇಗೆ? ಮಹಾನಗರಪಾಲಿಕೆ ಹಾಗೂ ಇತರ ಅಧಿಕಾರಿಗಳು ನಿದ್ದೆ ಮಾಡುತ್ತಿದ್ದರೆ? ಮೊದಲ ಅಂಗಡಿ ಅಲ್ಲಿ ತೆರೆಯಲ್ಪಟ್ಟಾಗಲೇ ಅವರು ಏಕೆ ವಿರೋಧಿಸಲಿಲ್ಲ?
ದೆಹಲಿಯಲ್ಲಿ ಒಮ್ಮೆ ಸುಪ್ರೀಂ ಕೋರ್ಟ್ ನ ಜಜ್ ಸಬರ್ ಲಾಲ್ ಸಾಹೇಬರು, ರೆಸಿಡೆನ್ಶಿಯಲ್ ಮನೆಗಳಿರಬೇಕಾದ ಕಡೆ ವಾಣಿಜ್ಯ ವ್ಯವಹಾರಗಳು ಇರುವ ಕುರಿತು, ಅದರ ವಿರುದ್ಧ ತೀವ್ರವಾಗಿ ಹೋರಾಡಿದರು. ಈಗ 10 ವರ್ಷಗಳ ನಂತರ, ಪರಿಸ್ಥಿತಿ ಹಾಗೆಯೇ ಉಳಿದುಬಿಟ್ಟಿದೆ. ಕೆಲವು ವರ್ಷ ಅವುಗಳನ್ನು ಸೇವ್ ಮಾಡಿ, ಅವನ್ನು ಬಂದ್ ಆಗಿಸುತ್ತಾರೆ. ನಂತರ ದುಡ್ಡುಕಾಸು ಕೈ ದಾಟಿಸಿ, ಆ ವಾಣಿಜ್ಯ ವ್ಯವಹಾರಗಳು ಇನ್ನಷ್ಟು ಮತ್ತಷ್ಟು ಪ್ರಕಾಶಿಸುತ್ತವೆ.
ಇವೆಲ್ಲ ಮಹಾನಗರಗಳಲ್ಲಿ ಮಾಮೂಲೇ! ಜೈಪುರದ ಸೀ ಸ್ಕೀಮ್ ರೆಸಿಡೆನ್ಶಿಯಲ್ ಕಾಲೋನಿ, ದೊಡ್ಡ ದೊಡ್ಡ ಶೋರೂಮುಗಳಾಗಿ ಹೋಗಿವೆ. ಅದೇ ಏರಿಯಾದಲ್ಲಿ ಸ್ವಂತ ಮನೆಗಳಲ್ಲಿ ವಾಸಿಸುವವರು ಅವನ್ನು ಬಿಟ್ಟಿರಲಾಗದೆ, ಈ ಕಷ್ಟ ಸಹಿಸಲಾಗದೆ ಒದ್ದಾಡುತ್ತಾರೆ. ತಮ್ಮ ಅಕ್ಕಪಕ್ಕದ ವಾತಾವರಣ ಗಬ್ಬೆದ್ದು ಹೋಗಿರುವುದನ್ನು ಅವರು ಸಹಿಸಲಾರರು.
ನಗರ ರೂಪಿಸುವವರು, ಆಯಾ ಜಾಗಗಳಲ್ಲಿ ಏನೇನು ನಡೆಯಬೇಕೆಂದು ನಿಯಮವೇ ಮಾಡಿಲ್ಲವೆಂದರೆ ಅದು ಸರಿ, ಆದರೆ ಅವರು ನಿಯಮ ಮಾಡಿಟ್ಟು, ಈ ಏರಿಯಾ ಕೇವಲ ವಾಸಯೋಗ್ಯಕ್ಕೆ ಮಾತ್ರ, ಇದು ವಾಣಿಜ್ಯ ವ್ಯವಹಾರಕ್ಕೆ ಇದು ಕೈಗಾರಿಕೆಗೆ ಅಂತಿರುವಾಗ ಈ ಕಾನೂನನ್ನು ಸರಿಯಾಗಿ ನಡೆಸಬೇಕಲ್ಲವೇ? ನಿಯಮಗಳೆಲ್ಲ ಜಾರಿಗೊಂಡ ನಂತರ ಅಲ್ಲಿನ ಜಮೀನಿನ ಮಾಲೀಕರು, ಇತರ ಮಾಲೀಕರಿಗೆ, ಹಣದಾಸೆಗೆ ಬಲಿಯಾಗಿ ಅದನ್ನು ಯಾರು ಯಾರಿಗೋ ನೀಡುವಂತಿಲ್ಲ. 100ಕ್ಕೆ 100ರಷ್ಟು ಅಲ್ಲಿ ವಾಸಿಸುವ ಜನ ಒಪ್ಪಿದಾಗ ಮಾತ್ರ, ಈ ನಿಯಮ ಬದಲಿಸಬಹುದು, ಏಕೆಂದರೆ ಆರಂಭದಲ್ಲಿ ಅಲ್ಲಿನ 100ಕ್ಕೆ 100ಷ್ಟು ಮಾಲೀಕರು ಅದು ಕೇವಲ ರೆಸಿಡೆನ್ಶಿಯಲ್ ಆಗಿರುತ್ತದೆ ಎಂದೇ ನಂಬಿದ್ದರು.
ಸುಪ್ರೀಂ ಕೋರ್ಟ್ ಗುರುಗ್ರಾಮದಲ್ಲಿ ಏನಾದರೂ ಹೆಚ್ಚಿನ ಬದಲಾವಣೆ ತಂದೀತು ಎಂಬುದಕ್ಕೆ ಯಾವ ಗ್ಯಾರಂಟಿಯೂ ಇಲ್ಲ. ಅಲ್ಲಿನ ನಗರವಾಸಿಗಳು ದಿನೇ ದಿನೇ ಬಲಿಷ್ಠರಾಗುತ್ತಿರುವ ಅಲ್ಲಿನ ಬಿಲ್ಡರ್ಸ್, ಕಮರ್ಷಿಯಲ್ ಜಮೀನು ಮಾಲೀಕರ ವಿರುದ್ಧ ಹೇಗೆ ತಾನೇ ಹೋರಾಡಬಲ್ಲರು? ಇಂದಲ್ಲ ನಾಳೆ ಬೇರೆ ದಾರಿಕಾಣದೆ, ಅವರು ಸತಿಸುತರೊಂದಿಗೆ ಅಲ್ಲಿನ ಏರಿಯಾ ಖಾಲಿ ಮಾಡಬೇಕಾಗುತ್ತದೆ. ನಿಜಕ್ಕೂ ಇದು ಆಡಳಿತ ಮಂದಿಯ ಕೈಲಾಗದ ಹೇಡಿತನವಾಗಿದೆ. ಮುಂದೇನಾಗಬಹುದು ಎಂದು ಯೋಚಿಸದೆ ಹೀಗೆ ಮಾಡುತ್ತಾರೆ. ರೆಸಿಡೆನ್ಶಿಯಲ್ ಏರಿಯಾದಲ್ಲಿ ಕಮರ್ಷಿಯಲ್ ಕೆಲಸ ಆಗದು, ಸುರಕ್ಷತೆಯ ಗ್ಯಾರಂಟಿ ಎಂದು ಅದು ಕಾಲೋನಿಯ ನಿವಾಸಿಗಳನ್ನು ಕನ್ವಿನ್ಸ್ ಮಾಡಲಾಗದು,
ಧರ್ಮದ ಕಪಿಮುಷ್ಟಿಯಲ್ಲಿ ಅಖಂಡ ಚಾಲಾಕಿತನ
ಒಂದು ಕಡೆ ಶ್ರೀಮಂತ, ಸುಶಿಕ್ಷಿತ ಮನೆತನದ ಹುಡುಗಿಯರು ಹುಡುಗರ ತರಹವೇ ಶಿಕ್ಷಣ ಪಡೆಯು ಸಮಾನತೆ ಮೆರೆಯುತ್ತಿದ್ದರೆ, ಮತ್ತೊಂದು ಕಡೆ ಕಲಿತವರ ಮನೆಯ ಸೊಸೆಯರಾಗಿ ಅಲ್ಲಿನ ಮಾನಸಿಕತೆಗೆ ಹೆಣಗಾಡುತ್ತಾ, ಆಷಾಢಭೂತಿತನ, ಧಾರ್ಮಿಕ ನಾಟಕಗಳು, ಪೂಜೆ ಪುನಸ್ಕಾರ, ತೀರ್ಥಯಾತ್ರೆ ಇತ್ಯಾದಿಗಳಲ್ಲಿ ಹಿಂದಿನ ಕಾಲಕ್ಕೇ ಹೋಗುತ್ತಿದ್ದಾರೆ. ಹಿಂದೂ ಧರ್ಮೀಯರು ಹೆಜ್ಜೆ ಹೆಜ್ಜೆಗೂ ಮಗಳು, ಸೊಸೆಯರನ್ನು ಪರಿವಾರದ ನಿರರ್ಥಕ ಸದಸ್ಯರೆಂದೇ ಭಾವಿಸುತ್ತಾರೆ. ತಾಯಿ ತಂದೆ ಸುಶಿಕ್ಷಿತ ಹೆಣ್ಣುಮಕ್ಕಳ ಮದುವೆ ಮಾಡಿಸಿ ತಮ್ಮ ಕರ್ತವ್ಯ ಮುಗಿಯಿತೆನ್ನುತ್ತಾರೆ. ಆ ಅತ್ತೆಮನೆಯವರು ಈ ಸುಶಿಕ್ಷಿತ ಸೊಸೆಯರ ಕೈಲಿ ಮಕ್ಕಳನ್ನು ಹೆರಿಸುತ್ತಾ, ಸದಾ ವ್ರತ, ಉಪವಾಸ, ಪ್ರವಚನಗಳಲ್ಲಿ ಕೆಡುತ್ತಾರೆ. ನಡುನಡುವೆ ಕಿಟಿ ಪಾರ್ಟಿಗಳ ಲಾಲಿಪಾಪ್ ಸಿಗುತ್ತದೆ.
ಯಾರು ತಮ್ಮ ಅಸ್ತಿತ್ವ ತೋರಿಸ ಬಯಸುತ್ತಾರೋ ಅಂಥ ಹುಡುಗಿಯರು ಸಮಸ್ಯೆ ಎದುರಿಸಬೇಕಾಗುತ್ತದೆ. ಇವರುಗಳು ಅವಿಭಕ್ತ ಕುಟುಂಬಗಳಲ್ಲಿ 2005ರ ಸೋನಿಯಾ ಗಾಂಧಿಯ ಸಂಶೋಧನೆಯ ಲಾಭ ಪಡೆಯಬಯಸುತ್ತಾ, ವಿವಾಹದ ನಂತರ ತಮ್ಮ ಅಸ್ತಿತ್ವ ಸಾಕಾರಗೊಳಿಸಲು ಬಯಸುತ್ತಾರೆ. ಮನೆಯ ಆಸ್ತಿ, ಅಂಗಡಿ, ವ್ಯಾಪಾರ ಉದ್ಯಮಗಳಲ್ಲಿ, ದೊಡ್ಡ ಕಾರ್ಪೊರೇಟ್ ಗ್ರೂಪುಗಳನ್ನು ನಡೆಸ ಬಯಸುತ್ತಾರೆ. ಇತ್ತೀಚೆಗೆ ಸಾಧಾರಣ ಕೋರ್ಟುಗಳು ಕೇವಲ ವಿಚ್ಛೇದನ ಬಯಸುವ ಹೆಂಗಸರಿಂದ ಮಾತ್ರ ತುಂಬಿರುವಾಗ, ಅದೇ ಕಂಪನಿ ಕೋರ್ಟುಗಳು ಹೆಣ್ಣುಮಕ್ಕಳ ಹಕ್ಕುಗಳನ್ನು ವಿಶ್ಲೇಷಿಸುವಲ್ಲಿ ವಿಶಲವಾಗಿವೆ. ಮುಂದಿನ ದಶಕಗಳಲ್ಲಿ ದೊಡ್ಡ ದೊಡ್ಡ ಔದ್ಯೋಗಿಕ ಮನೆತನ ತುಂಡು ತುಂಡಾಗಿ, ಅದರ ಮುಖ್ಯ ಪಾಲು ಈ ಹುಡುಗಿಯರಿಗೆ ದಕ್ಕಿದರೆ ಯಾವ ಆಶ್ಚರ್ಯವೂ ಇಲ್ಲ.
ಇಲ್ಲಿನ ಸಮಸ್ಯೆ ಎಂದರೆ, ಈ ಹೆಣ್ಣುಮಕ್ಕಳು ಶಾಲಾಕಾಲೇಜುಗಳಲ್ಲಿ ಎಷ್ಟೇ ಸ್ಮಾರ್ಟಾಗಿ ಕಲಿತಿರಲಿ, ಈ ಶ್ರೀಮಂತ ಮನೆತನದ ಮಗಳು, ಸೊಸೆಯರು ಸಹ ಧಾರ್ಮಿಕ ಢೋಂಗಿತನ ಬಿಟ್ಟು ಆಚೆ ಬರಲಾರರು. ಭೌತಶಾಸ್ತ್ರ, ಎಂಜಿನಿಯರಿಂಗ್ ಕಲಿತೂ ಸಹ ಇವರು ಮಡಿಹೆಂಗಸರಂತೆ ಮಂದಿರಕ್ಕೆ ಮುಗಿಬೀಳುತ್ತಾರೆ. ಅವು ಇರುವುದೇ ಹೆಂಗಸರನ್ನು ಗುಲಾಮಗಿರಿಗೆ ದೂಡಲು. ಈ ಮಹಾಮಂದಿರದ ಸ್ವಾಮೀಜಿಗಳ ಭಕ್ತಿಯರೆಲ್ಲರೂ ದೊಡ್ಡ ದೊಡ್ಡ ಉದ್ಯಮಗಳ ಮನೆತನದವರೇ! ಎಲ್ಲಾ ತರಹದ ಆಧುನಿಕ ಶಿಕ್ಷಣ ಪಡೆದಿದ್ದರೂ ತಮ್ಮ ವಿವೇಕವನ್ನು ಕೂಪಮಂಡೂಕತನಕ್ಕೆ ಸೀಮಿತಗೊಳಿಸಿಕೊಳ್ಳುತ್ತಾರೆ.
ಅದೇ ಗಂಡಸರು, ಧರ್ಮದ ಆಸರೆಯನ್ನು ಒಂದು ಡಿಪ್ಲೊಮೆಸಿ ರೂಪದಲ್ಲಿ ಹೊಂದುತ್ತಾರೆ. ಧರ್ಮದ ನೆಪದಲ್ಲಿ ಅರು ಸಾವಿರಾರು ರಾಜಕಾರಣಿಗಳನ್ನು ಭೇಟಿಯಾಗುವ ಅವಕಾಶ ಪಡೆಯುತ್ತಾರೆ. ಧರ್ಮದ ಹೆಸರಿನಲ್ಲಿ ಅವರು ತಮ್ಮ ಸಮಸ್ತ ವ್ಯಾವಹಾರಿಕ ಖಾಸಗಿ ಪಾಪಗಳನ್ನೂ ಪುಣ್ಯವಾಗಿ ಪರಿವರ್ತಿಸಿಕೊಳ್ಳುತ್ತಾರೆ. ಧರ್ಮವೇ ಅವರನ್ನು ತಮ್ಮ ಮನೆಯ ಹೆಂಗಸರು, ಪತ್ನಿ, ತಾಯಿ, ತಂಗಿ, ಮಗಳು, ಸೊಸೆಯರನ್ನು ಕಂಟ್ರೋಲ್ ಮಾಡಲು ಕಲಿಸುತ್ತದೆ. ಹೆಣ್ಣುಮಕ್ಕಳಿಗೆ ಈ ಚಾಲಾಕಿತನ ನಿಜಕ್ಕೂ ವ್ಯರ್ಥವೇ, ಆದರೆ ಅವರು ಇದರಾಚೆ ಬರಲು ಬಯಸುವುದೇ ಇಲ್ಲ.
ಬೋರ್ಡ್ ಮೀಟಿಂಗ್, ಕೋರ್ಟು ಕಛೇರಿಗಳ ಸಂದರ್ಭಗಳಲ್ಲಿ ಇವರುಗಳ ಸ್ಪಷ್ಟ ರೂಪ ಗೋಚರಿಸುತ್ತದೆ. ಏಕೆಂದರೆ ಅವರಿಗೆ ಈಗಲೂ ಸಹ ಅಂಥ ಕಂದಾಚಾರಿ ಮಾನಸಿಕತೆಯಿಂದ ಹೊರಬರಲು ಒಂದು ಪೀಳಿಗೆಯ ಅವಧಿ ಬೇಕಾದೀತು. ತನ್ನ ತಂದೆ, ಪತಿಯ ಮನೆಗಳಲ್ಲಿ ಒಂದು ಷಡ್ಯಂತ್ರ ಆಗಿರುವ ತಮ್ಮ ಬದುಕನ್ನು ಇವರು ಸರಿಪಡಿಸಿಕೊಳ್ಳುವುದು ಯಾವಾಗ? ಗಂಡು ಮಕ್ಕಳಿಗೆ ಇದರಿಂದ ಲಾಭವಿದೆ, ಆದರೆ ಹೆಣ್ಣುಮಕ್ಕಳ ಅಂತರಾಳದಲ್ಲಿ ತಮ್ಮ ಧಾರ್ಮಿಕ ಕೊಡುಗೆಯಿಂದ ಹುಟ್ಟಿದ ದುರ್ಬಲತೆಯೊಂದಿಗೆ ಏಗುತ್ತಲೇ ಬದುಕಬೇಕಾಗುತ್ತದೆ.
ಅಂದ ಹಾಗೆ ನಮ್ಮಲ್ಲಿ ಎಲ್ಲಾ ಹಿರಿಯ ಉದ್ದಿಮೆಗಳ ಮನೆತನದಲ್ಲಿ ಭಾರಿ ಮಂದಿರಗಳು ಕಂಡುಬರುತ್ತವೆ, ಯಾವ ಕಟ್ಟಲ್ಪಟ್ಟ ಹೊರ ಮಂದಿರಗಳನ್ನೇ (ಗುಪ್ತವಾಗಿ) ಖರೀದಿಸಲಾಗಿದೆ. ಇಂಥ ವಾತಾವರಣದಲ್ಲಿ ಬೆಳೆಯುವ ಹೆಣ್ಣುಮಕ್ಕಳು ವರ್ಚಸ್ಸಿನ ಹೋರಾಟದಲ್ಲಿ ಸೋಲುತ್ತಾರೆ, ಸಂಸ್ಕೃತಿಯ ಪ್ರತೀಕಗಳಾಗಿ ವೈಯಕ್ತಿಕವಾಗಿ ಕೊರಗುತ್ತಾರೆ!





