ಯಾರು ತಾನೇ ಪರವಶರಾಗರು? : ಆ್ಯಶ್ಲೆ ಪಾಲ್ ಇಂದಿನ ಆಧುನಿಕ ಯುವಪೀಳಿಗೆಯ ಪಾಪ್ಯುಲರ್ ಸಿಂಗರ್. ಆಕೆಯ ಪ್ರತಿ ಪ್ರದರ್ಶನಕ್ಕೂ ಸಾವಿರಾರು ಮಂದಿ ಜೊತೆಗೂಡುತ್ತಾರೆ. ಆಕೆಯ ಆಲ್ಬಂ `ಬಿಂಗೋ ಬೇಬಿ’ ಲಕ್ಷಾಂತರ ಹಣ ಗಳಿಸಿತು. ಲಕ್ಷಾಂತರ ಮಂದಿ ಇದರ ಪೈರೇಟೆಡ್ ಆವೃತ್ತಿ ಇಳಿಸಿಕೊಂಡರು. ಶಾರೀರ ಮಧುರವಾಗಿದ್ದು, ಶರೀರ ಗ್ಲಾಮರಸ್ ಆಗಿದ್ದು, ಡ್ಯಾನ್ಸ್ ಮನಮೋಹಕವಾದರೆ, ಯಾರು ತಾನೇ ಪರಶರಾಗರು…..?

ರೋಮಾಂಚನ ಮತ್ತು ಮಸ್ತಿ : ಇದೀಗ ಟೆಕ್ನಾಲಜಿ ಅತ್ಯುತ್ತಮ ಮನರಂಜನೆಗಾಗಿ ಬಳಸಲ್ಪಡುತ್ತಿದೆ. ಇದೊಂದು ಹೊಸ ಬಗೆಯ ಅಡ್ಟ್ಸ್‌ಸ್ಪೋರ್ಟ್ಸ್ ಅರೇನಾ. ಇಲ್ಲಿ ಆಟಗಾರರು ಒಂಟಿಯಾಗಿ ಅಥವಾ ತಂಡಗಳಲ್ಲಿ ಯಂತ್ರಗಳ ಜೊತೆ ಆಟವಾಡುತ್ತಾರೆ. ಈ ಫೋಟೋದಲ್ಲಿನ ಆಟದಂತೆ, ಓಡೋಡುತ್ತಾ ಈ ಹುಡುಗಿ ನಿತಂಬಗಳಿಂದ ಬಟನ್ ಒತ್ತಬೇಕಿದೆ. ಆಕೆಗೆ ದಾರಿ ಫಿಕ್ಸ್ ಆಗಿರುತ್ತದೆ. ಕೇಳಲು ಸುಲಭ, ಮಾಡಲು ಕಷ್ಟ, ಆದರೆ ಚ್ಯಾಲೆಂಜಿಂಗ್ ಹೌದು! ಈ ತರಹದ ಆಟದ ಕೇಂದ್ರಗಳು ಈಗ ಎಲ್ಲೆಡೆ ನಾಯಿಕೊಡೆಗಳಂತೆ ಕಂಡುಬರುತ್ತಿವೆ. ಇದೀಗ ಖೋಖೋ, ಕಬಡ್ಡಿ ಆಟ ಯಾರಿಗೆ ಬೇಕಿದೆ?

ಧರ್ಮವಲ್ಲ ಇಂಥ ಚರ್ಚೆ ಅಗತ್ಯ : ಇವರಿಗೆ ವೀಲ್ ಚೇರ್ ಬೇಕಿಲ್ಲ, ಆದರೆ ಈ ಜನ ವಿಶ್ವವಿಡೀ ವೀಲ್ ಚೇರ್ ಹಂಚುತ್ತಾರೆ. ಇದುವರೆಗೂ ಸುಮಾರು 15 ಲಕ್ಷಕ್ಕೂ ಹೆಚ್ಚು ಇಂಥ ವೀಲ್ ಚೇರ್ಸ್ ನ್ನು ದಾನ ಮಾಡಿದ್ದಾರೆ. `ಮಿರಾಕಲ್ಸ್ ಆಫ್ ಮೊಬಿಲಿಟಿ’ ಸಂಸ್ಥೆಯ ಹೆಸರಿನಲ್ಲಿ ಈ ಜನ ವೀಲ್ ಚೇರ್ ಹಂಚುತ್ತಾರೆ. ಇದಕ್ಕಾಗಿ ವಿಶ್ವದೆಲ್ಲೆಡೆಯಿಂದ ಚಂದಾ ಸಂಗ್ರಹಿಸುತ್ತಾರೆ. ಅಂದಹಾಗೆ ಸರ್ಕಾರ ಮುಂದೆ ಬಂದು ಇಂಥ ಕೆಲಸ ಮಾಡಿಸಬೇಕು, ಆದರೆ ಎಲ್ಲಾ ಸರ್ಕಾರಗಳಿಗೂ ಮೋಜು ಉಡಾಯಸುವುದಕ್ಕೇ ಸಮಯ ಸಾಲದು. ಈ ಸಂಸ್ಥೆ ಆರಂಭಿಸಿದವರು ಡಾನ್ ಶಾಂಡರ್ಫರ್. ಧರ್ಮ ಕರ್ಮ ಪಕ್ಕಕ್ಕಿಡಿ, ಇಂಥ ಆದರ್ಶ ಕೆಲಸಗಳ ಕಡೆ ಗಮನಹರಿಸಿ!

ಹೊಳೆಯುತ್ತಿದೆ ಈ ಬಿಸ್ ನೆಸ್ : ವೆಲ್ ನೆಸ್ ನ ಬಿಸ್ ನೆಸ್ ಇದೀಗ ಪ್ರತಿದಿನ ಎಲ್ಲೆಲ್ಲೂ ಮಿಂಚುತ್ತಿದೆ. ನಮ್ಮ ದೇಹವನ್ನು ಸರಿಯಾಗಿ ಬಳಸಿಕೊಳ್ಳದಿದ್ದರೆ ವರ್ಷಗಟ್ಟಲೆ ಹಾಸಿಗೆ ಹಿಡಿಯಬೇಕಾದೀತು ಎಂಬ ವಾಸ್ತವ ಇದೀಗ ಸೋಮಾರಿ ಜನರಿಗೂ ಅರ್ಥವಾಗುತ್ತಿದೆ. ಹೀಗಾಗಿ ವಿಶ್ವದಾದ್ಯಂತ ಪ್ರತಿ ಮಹಾನಗರದಲ್ಲೂ ವೆಲ್ ನೆಸ್ ಕೇಂದ್ರಗಳು ಹುಟ್ಟಿಕೊಂಡಿವೆ. ಅದೇ ರೀತಿ ಟೂರಿಸಮ್ ಸಹ ವೆಲ್ ನೆಸ್ ಜೊತೆಗೂಡಿದೆ. ರೂಂ, ಟ್ರಾವೆಲ್, ಡೈನಿಂಗ್ ಜೊತೆ ವೆಲ್ ನೆಸ್ ಸ್ಪಾಟ್ ಎಲ್ಲೆಲ್ಲೂ ರಾರಾಜಿಸುತ್ತಿದೆ! ಕೆಲವು ಉಚಿತ, ಕೆಲಕ್ಕೆ ಪೇ ಮಾಡಬೇಕು, ಆದರೆ ಎಲ್ಲೆಡೆ ಗ್ರಾಹಕರಿದ್ದೇ ಇದ್ದಾರೆ!

ಡ್ರೆಸ್ ನೋಡುವುದೋ… ಧರಿಸಿದವಳನ್ನೋ? : ಚಳಿಗಾಲದ ಮಜಾ ಅಂದ್ರೆ, ನೀವು ತೆಳುವಾಗಿರದಿದ್ದರೂ ನಡೆಯುತ್ತದೆ, ಮೈ ಮೇಲೆ ಧಾರಾಳ ದುಬಾರಿ, ಅತಿ ದುಬಾರಿ ಡ್ರೆಸ್ ಹೇರಿಕೊಂಡು ಪ್ರದರ್ಶಿಸಬಹುದು. ಇಲ್ಲವೇ ವಯಾನ್ ಎಂಬಾಕೆ ಡಿಸೈನ್ ಮಾಡಿದ ಈ ಡ್ರೆಸೆಸ್, ಮಂಜು ಬೀಳುವ ಪ್ರದೇಶಗಳಿಗೆಂದೇ ಹೇಳಿ ಮಾಡಿಸಿದ್ದು. ಇದು ಬಲು ದುಬಾರಿ, ಜೊತೆಗೆ ಚಳಿಯಿಂದ ರಕ್ಷಿಸುತ್ತದೆ. ನಮ್ಮಲ್ಲಿ ಚಳಿಗಾಲದಲ್ಲಿ ಸಿಲ್ಕ್ ಗೆ ಪ್ರಾಮುಖ್ಯತೆ ಇದೆ. ಆದರೆ ದಕ್ಷಿಣದ ಎಲ್ಲೆಡೆ ಸರ್ವ ಋತುಗಳಲ್ಲೂ ಅಂಥ ಭಾರಿ ರೇಷ್ಮೆ ಹೇಗೆ ಉಡುತ್ತಾರೋ…. ಸೋಜಿಗವೇ ಸರಿ! ಇಲ್ಲೆಲ್ಲ ಸೆಖೆ, ಕೆಂಡದ ಬಿಸಿಲು ಎಂಬ ಋತುಗಳೇ ಜಾಸ್ತಿ. ಈಕೆಯ ಫರ್ ನ ಡ್ರೆಸ್ ನ್ನು ಯಾರು ಬೇಕಾದರೂ ಧರಿಸಬಹುದು, ದಕ್ಷಿಣದವರು ಭಾರಿ ಜರಿಯ ರೇಷ್ಮೆ ಸೀರೆ ಉಟ್ಟಾಗ ಇತರರು ಬೆರಗಾಗುವಂತೆಯೇ ಇದೂ ಫೀಲ್ ನೀಡುತ್ತದೆ!

ಇಲ್ಲೇನೂ ತಮಾಷೆ ನಡೆಯುತ್ತಿಲ್ಲ : ಇಲ್ಲಿ ಇಷ್ಟೊಂದು ಜನಜಂಗುಳಿ ನೋಡಿದರೆ ಏನೋ ತಮಾಷೆ ನಡೆಯುತ್ತಿರಬೇಕು ಅನ್ಸುತ್ತೆ. ಹಾಗೇನೂ ಇಲ್ಲ, ಇದು ಒಂದು ಹೆಲ್ತ್ ಎಕ್ಸ್ ಪೋಗೆ ಸಂಬಂಧಿಸಿದ್ದು. ಇದು ಸೌದಿ ಅರಬ್ ನಲ್ಲಿ ನಡೆದದ್ದು. ಇದೀಗ ಜನ ಕಡಿಮೆ ತಿನ್ನುವುದರಿಂದ ಅಲ್ಲ, ಅತಿ ಹೆಚ್ಚು ಅಥವಾ ತಪ್ಪಾದ್ದನ್ನು ತಿನ್ನುವುದರಿಂದ ರೋಗಿಷ್ಟರಾಗಿ ಸಾಯುತ್ತಿದ್ದಾರೆ. ಹೀಗಾಗಿ ನೋಡಲು ಸಮರ್ಪಕವಾಗಿರುವ ಹೆಲ್ತ್ ಸೆಂಟರ್ಸ್, ಟ್ರೀಟ್ ಮೆಂಟ್ ಗಾಗಿ ಜನರನ್ನು ಒಟ್ಟುಗೂಡಿಸಿ, ಈ ರೀತಿ ಎಕ್ಸ್ ಪೋಗೆ ಎಲ್ಲರನ್ನೂ ಆಹ್ವಾನಿಸುತ್ತದೆ, ಜನ ತಂಡೋಪತಂಡವಾಗಿ ಮುಗಿಬೀಳುತ್ತಾರೆ. ಇಲ್ಲಿ ಕೊಟ್ಯಂತರ ಬಿಸ್ ನೆಸ್ ನಡೆಯುತ್ತದೆ. ಹೆಲ್ತ್ ಬಿಸ್ ನೆಸ್ ಇದೀಗ ಮನರಂಜನೆಯ ಬಿಸ್ ನೆಸ್ ಗಿಂತ ಹೆಚ್ಚು ಜನಪ್ರಿಯಾಗುತ್ತಿದೆ!





