*ಮೊದಲು, “ಯೋಗ ದೇಹಕ್ಕೆ ಬಹಳ ಒಳ್ಳೆಯದು” ಅಂದರು;*
*ಬೆಳಗ್ಗೆ ಐದು ಗಂಟೆಗೆ ಎದ್ದು ಯೋಗಾಸನ ಕಲಿತೆವು,*
*”ಹೃದಯ ಗಟ್ಟಿಯಾಗಬೇಕಾದ್ರೆ ದಿನಾ ಓಡಲೇಬೇಕು” ಅಂದರು;*
*ಶೂ ಹಾಕಿಕೊಂಡು ರಸ್ತೆಯಲ್ಲಿ ಓಡುವುದನ್ನೂ ಕಲಿತೆವು.*
*”ಹೊಟ್ಟೆ ಕರಗಿಸಬೇಕಾ? ಮೊದಲು ಆ ಸಕ್ಕರೆ ಬಿಡಿ” ಅಂದರು;*
*ನಮ್ಮಿಷ್ಟದ ಜಿಲೇಬಿ, ಮೈಸೂರ್‌ಪಾಕ್ ಎಲ್ಲವನ್ನೂ ತ್ಯಜಿಸಿದೆವು.*
*”ಊಟವಾದ ತಕ್ಷಣ ಮಲಗದೆ , ನೂರು ಹೆಜ್ಜೆ ನಡೆಯಿರಿ” ಅಂದರು;*
*ರಾತ್ರಿ ಊಟವಾದ ಮೇಲೆ ಗಲ್ಲಿ ಗಲ್ಲಿಯಲ್ಲೆಲ್ಲ ನಡೆಯುವುದನ್ನೂ ಕಲಿತೆವು.*

*”ಮನಸ್ಸಿನ ಹತೋಟಿಗೆ ಪ್ರಾಣಾಯಾಮ ಒಂದೇ ದಾರಿ” ಅಂದರು;*
*ಮೂಗು ಹಿಡಿದುಕೊಂಡು ಉಸಿರು ಬಿಡುವುದನ್ನೂ ಕಲಿತೆವು.*
*”ತೂಕ ಇಳಿಯಬೇಕಾದ್ರೆ ಉಪವಾಸ (Intermittent Fasting) ಮಾಡಿ” ಅಂದರು;*
*ಹೊಟ್ಟೆ ಹಸಿದು ಉರಿಯುತ್ತಿದ್ದರೂ ಪತ್ಯ ಕಾಯುವುದನ್ನು ಪಾಲಿಸಿದೆವು.*
*”ವಯಸ್ಸಾದಂತೆ ಸ್ನಾಯು ಕರಗಬಾರದು, ವೈಟ್ಸ್ (Weights) ಎತ್ತಿ” ಅಂದರು;*
, *ಜಿಮ್ಮಿಗೆ ಹೋಗಿ ಕಬ್ಬಿಣ ಎತ್ತಲು ಆರಂಭಿಸಿದೆವು!*
*”ನೆಮ್ಮದಿಯ ನಿದ್ರೆಗೆ ರಾತ್ರಿ ಮೊಬೈಲ್ ನೋಡಬೇಡಿ” ಅಂದರು;*
*ರಾತ್ರಿ ಒಂಬತ್ತಕ್ಕೇ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿದೆವು.*
*”ಆಯುಷ್ಯ ಗಟ್ಟಿಯಾಗಲು ಅಲ್ಕಲೈನ್ (Alkaline) ನೀರೇ ಕುಡಿಯಿರಿ” ಅಂದರು;*
*ಮನೆಯ ದುಬಾರಿ RO ಫಿಲ್ಟರ್ ಅನ್ನೇ ಕಿತ್ತು ಎಸೆದೆವು!*
*”ಮನಸ್ಸಿಗೆ ಶಾಂತಿಗೆ ಪ್ರಕೃತಿಯ ಮಡಿಲಿಗೆ ಹೋಗಿ, ಟ್ರೆಕ್ಕಿಂಗ್ ಮಾಡಿ” ಅಂದರು;*
*ಕೈಯಲ್ಲಿ ಕೋಲು ಹಿಡಿದುಕೊಂಡು ಊರೂರು, ಗುಡ್ಡ-ಬೆಟ್ಟಗಳನ್ನೆಲ್ಲ ಅಲೆದೆವು.*
*ಕುಳಿತುಕೊಳ್ಳುವುದು ಹೊಗೆಸೊಪ್ಪಿಗಿಂತ ಅಪಾಯಕಾರಿ, ನಿಂತುಕೊಂಡೇ ಕೆಲಸ ಮಾಡಿ” ಅಂದರು;*
*ಕಾಲಿನ ನರಗಳು ಹಿಡಿದುಕೊಳ್ಳುವವರೆಗೆ ನಿಂತುಕೊಂಡೇ ಕೆಲಸ ಮಾಡಿದೆವು!*
*”ದೇಹದಲ್ಲಿ ‘ವಿಟಮಿನ್ ಡಿ’ ಕಮ್ಮಿಯಾಗಿದೆ, ಬೆಳಗಿನ ಬಿಸಿಲಿಗೆ ಮೈ ಒಡ್ಡಿ” ಅಂದರು;*
*ಬೆಳಗ್ಗೆ ಎದ್ದು ಸೂರ್ಯನ ಕಡೆ ಮುಖ ಮಾಡಿ, ಕಾಗೆಗಳು ತಲೆಯ ಮೇಲೆ* *ಹಾದುಹೋಗುವವರೆಗೆ ಬಿಸಿಲಿನಲ್ಲಿ ನಿಂತುಕೊಂಡೆವು.*
*”ಸಾಮಾನ್ಯ ಎಣ್ಣೆ ಬೇಡ, ಕೋಲ್ಡ್ ಪ್ರೆಸ್ಡ್ ಗಾಣದ ಎಣ್ಣೆ ಅಥವಾ ಆಲಿವ್ ಆಯಿಲ್ ಬಳಸಿ” ಅಂದರು;*

*ದುಬಾರಿ ಎಣ್ಣೆ ತಂದು, ತರಕಾರಿ ಒಗ್ಗರಣೆಗೆ ಬೊಗಸೆ ಗಟ್ಟಲೆ ದುಡ್ಡು ಸುರಿದೆವು.*
*ಸಾದಾ ಅಕ್ಕಿಯಿಂದ Glycemic ಇಂಡೆಕ್ಸ್ ಹೆಚ್ಚಾಗುತ್ತೆ ಬ್ರೌನ್ ರೈಸ್ ಬಳಸಿ ಎಂದರು*
*ಕಷ್ಟಪಟ್ಟು ಹುಡುಕಿ ತಂದು ತಿಂದೆವು*
*ಸಕ್ಕರೆಯಿಂದ ಇನ್ಸುಲಿನ್ ಹೆಚ್ಚಾಗುತ್ತೆ ಬೆಲ್ಲ ತಿನ್ನಿ ಅಂದರು*
*ಬೆಲ್ಲದ ಚಹಾ ಕುಡಿಯುವರ* *ಮುಖ ನೋಡದವರು ಬೆಲ್ಲದ ಪೆಂಟಿ ತಂದೆವು*
*ಈಗ ಹೊಸದಾಗಿ ರಿಸರ್ಚ್ ಬಂದಿದೆಯಂತೆ—”ಇಷ್ಟೆಲ್ಲಾ ಮಾಡಿ ದಿನಾ ‘ಸ್ಟ್ರೆಸ್’ ತಗೊಂಡ್ರೆ ಎಲ್ಲವೂ ವೇಸ್ಟ್, ಸುಮ್ಮನೆ ಪ್ರಶಾಂತವಾಗಿ ವಿಶ್ರಾಂತಿ ತಗೊಳ್ಳಿ!” ಅಂತಿದ್ದಾರೆ*
*ಅಲ್ಲಾ ಸ್ವಾಮಿ, ಇಷ್ಟೆಲ್ಲಾ ಸಾಯುವಷ್ಟು ಕಷ್ಟಪಟ್ಟು ಬದುಕುವುದು ಬದುಕುವುದಕ್ಕೋ?*
*ಅಥವಾ ಜೀವಂತವಾಗಿದ್ದೇವೆ ಅಂತ ಲೋಕಕ್ಕೆ ತೋರಿಸುವುದಕ್ಕೋ?*
*ಇಷ್ಟೆಲ್ಲಾ ಮಾಡಿದ ಮೇಲೆಯೂ, “ಆ ಬಿಸ್ಕತ್ತು ತಿಂದ್ಯಾ? ಈ ಎಣ್ಣೆ ತಿಂದ್ಯಾ?” ಅಂತ ಇನ್ನೊಬ್ಬರು ಬೆಟ್ಟು ಮಾಡಿ ತೋರಿಸುತ್ತಾರೆ.*
*ಕೊನೆಗೆ ನಾವು ಬದುಕುವುದು ನಮಗಾಗಿಯೋ? ಅಥವಾ ಇನ್ನೊಬ್ಬರಿಗೆ ನಮ್ಮ ದೇಹ ತೋರಿಸಲಿಕ್ಕೋ*
*ಕಾಪಾಡು ಗುರು ನಾರಾಯಣ ನರಸಿಂಹ ಶಿವಾ ಕಾಪಾಡು ಈ ದಿನಕ್ಕೊಂದು ಸಲಹೆ ಕೊಡುವ ‘ಆರೋಗ್ಯ ಜ್ಞಾನಿಗಳಿಂದ’!*





