ಹೊಸ ವರ್ಷಾಚರಣೆಯ ಸಡಗರಸಂಭ್ರಮ ಎಲ್ಲರ ಉತ್ಸಾಹ ಹೆಚ್ಚಿಸುತ್ತದೆ. ನೀವು ಹೆಚ್ಚಿನ ಗ್ಲಾಮರಸ್ಲುಕ್ಸ್ ಹೊಂದಲು ಕೆಳಗಿನ ಫ್ಯಾಷನ್ಟಿಪ್ಸ್ ನ್ನು ಮರೆಯದೆ ಅನುಸರಿಸಿ……..

ಹೊಸ ವರ್ಷದ ಪಾರ್ಟಿಯಲ್ಲಿ ಫ್ಯಾಷನ್‌ ಕುರಿತಾಗಿ ನಿಮಗೆ ನೂರಾರು ಸಲಹೆಗಳು ದೊರಕಿರಬಹುದು. ನೀವು ಬೇಕಾದರೆ ಗ್ಲಾಮರಸ್‌, ಕ್ಯಾಶ್ಯುಯೆಲ್ ‌ಯಾ ಫಾರ್ಮಲ್ ಲುಕ್ಸ್ ಆರಿಸಿ, ಎಲ್ಲಕ್ಕಿಂತಲೂ ಅತ್ಯಗತ್ಯ ಮಾಹಿತಿ ಎಂದರೆ, ನೀವು ಏನನ್ನೇ ಧರಿಸಿದರೂ, ಅದರಲ್ಲಿ ನೀವು ಕಂಫರ್ಟೆಬಲ್ ಫೀಲ್ ‌ಆಗಬೇಕು. ಹೊಸ ವರ್ಷದ ಸಂಭ್ರಮಾಚರಣೆಯ ಪಾರ್ಟಿಗಾಗಿ, ಫ್ಯಾಷನ್‌ಕುರಿತಾದ ಈ ಟಿಪ್ಸ್ ನಿಮ್ಮನ್ನು ಸ್ಪೆಷಲ್ ಸ್ಟೈಲಿಶ್‌ ಆಗಿ ತೋರಿಸಲು ನೆರವಾಗುತ್ತದೆ.

ಡ್ರೆಸ್ಕೋಡ್ನ್ನು ಅಗತ್ಯ ಫಾಲೋ ಮಾಡಿ : ಎಲ್ಲಕ್ಕೂ ಮೊದಲು ಪಾರ್ಟಿಗೆ ಬೇಕಾದ ಡ್ರೆಸ್‌ ಕೋಡ್‌ (ಏನಾದರೂ ಇದ್ದ ಪಕ್ಷದಲ್ಲಿ) ಕಡೆ ಗಮನಹರಿಸಿ. ಪಾರ್ಟಿಯ ಯಾವುದೇ ಥೀಂ ಯಾ ಡ್ರೆಸ್‌ ಕೋಡ್‌ ಇರಲಿ, ಉದಾ : ಗ್ಲಿಟರೀ, ಬ್ಲ್ಯಾಕ್‌ ವೈಟ್‌, ಕ್ಯಾಶ್ಯುಯೆಲ್ ಇತ್ಯಾದಿ ಏನು ಹೇಳಿರುತ್ತಾರೋ ಆ ಪ್ರಕಾರ ನಿಮ್ಮ ಡ್ರೆಸ್‌ ಇರಲಿ.

ಕ್ಲಾಸಿಕ್ಬ್ಲ್ಯಾಕ್ಡ್ರೆಸ್‌ : ಇದು `ಲಿಟಲ್ ‌ಬ್ಲ್ಯಾಕ್‌ ಡ್ರೆಸ್‌’ ಎಂದೂ ಖ್ಯಾತಿ ಪಡೆದಿದೆ. ಪ್ರತಿ ಸಲದ ನ್ಯೂ ಇಯರ್‌ ಪಾರ್ಟಿಗೂ ಬೆಸ್ಟ್ ಕ್ಲಾಸಿಕ್‌ ಆಯ್ಕೆ ಎಂದರೆ ಇದೇ! ಇದು ಸ್ಟೈಲಿಶ್‌ಎಲಿಗೆಂಟ್‌ ಆಗಿದ್ದು, ಇದನ್ನು ನೀವು ಉತ್ತಮ ಆ್ಯಕ್ಸೆಸರೀಸ್‌ಹೀಲ್ಸ್ ಜೊತೆ ಧರಿಸಬಹುದು.

ಗ್ಲಿಟರ್ಶಿಮರ್‌ : ಹೊಸ ವರ್ಷದ ಪಾರ್ಟಿಯಲ್ಲಿ ತುಸು ಚಮಕ್‌ ಚಮಕ್‌ ಆಗಿ ಮಿಂಚಬೇಕಾದ್ದು ಸಹಜವೇ! ಶಿಮರ್‌, ಗ್ಲಿಟರ್‌ ಯಾ ಸೀಕ್ವೆನ್ಸ್ ಡ್ರೆಸ್‌ ಯಾ ಟಾಪ್‌ ಧರಿಸಿ, ನೀವು ಪಾರ್ಟಿಗಳಲ್ಲಿ ಆಕರ್ಷಣೆಯ ಕೇಂದ್ರಬಿಂದು ಆಗುವಿರಿ. ಸಿಲ್ವರ್‌, ಗೋಲ್ಡ್, ಮೆಟಾಲಿಕ್ ಬಣ್ಣಗಳಲ್ಲಿ ಹೊಳೆ ಹೊಳೆಯುವಂಥ ಡ್ರೆಸೆಸ್‌ ಧರಿಸಿರಿ.

ಪ್ಲೇರ್ಯಾ ಸ್ಟೈಲಿಶ್ಕಾಕ್ಟೇಲ್ ಡ್ರೆಸ್‌ : ನೀವು ತುಸು ವಿಭಿನ್ನ ಸ್ಟೈಲಿಶ್‌ ಆಗಿ ಮಿಂಚಬಯಸಿದರೆ, ಪ್ಲೇರ್‌ ಯಾ ಕಾಕ್‌ ಟೇಲ್ ‌ಡ್ರೆಸ್‌ ಕುರಿತಾಗಿ ವಿಚಾರಿಸಿ. ಇದು ಪಾರ್ಟಿಗಳಲ್ಲಿ ತುಸು ಗ್ಲಾಮರಸ್‌ಜಾದೂ ಮಾಡಬಲ್ಲ ಡ್ರೆಸ್‌ ಗಳಾಗಿವೆ. ಇದನ್ನು ಒಂದು ಉತ್ತಮ ಬೆಲ್ಟ್ ಸ್ಟೈಲಿಶ್‌ ಫುಟ್‌ ವೇರ್‌ ಜೊತೆ ಧರಿಸಿ ನೋಡಿ.

ಮಾನೋಕ್ರೊಮ್ಯಾಟಿಕ್ಲುಕ್ಸ್ : ನೀವು ಒಂದು ಸರಳ ಚಿಕ್‌ ಲುಕ್‌ ಬಯಸಿದರೆ, ಮಾನೋಕ್ರೋಮ್ಯಾಟಿಕ್‌ ಔಟ್‌ ಫಿಟ್‌ ಆರಿಸಿ. ಒಂದೇ ಬಣ್ಣದಲ್ಲಿ ಇಡೀ ಡ್ರೆಸ್‌ (ಉದಾ. ಬ್ಲ್ಯಾಕ್‌ ಯಾ ವೈಟ್‌ ಬಣ್ಣದಲ್ಲಿ) ಧರಿಸಿ, ನೀವು ಬಹಳಷ್ಟು ಸ್ಟೈಲಿಶ್‌ ಆಗಿ ಮಿಂಚಬಹುದು. ಇದನ್ನು ಕಂಫರ್ಟೆಬಲ್ ಫ್ಯಾಷನೆಬಲ್ ಲುಕ್ಸ್ ಗಾಗಿ ಬದಲಾಯಿಸಲು, ಸ್ನೀಕರ್ಸ್‌ ಯಾ ಹೀಲ್ಸ್ ಜೊತೆ ಧರಿಸಿ ನೋಡಿ.

ಲೌಂಜ್ಪಾರ್ಟಿ ಲುಕ್ಸ್ : ಯಾವುದೇ ಪಾರ್ಟಿಗೆ ಕ್ಯಾಶ್ಯುಯೆಲ್ ಲುಕ್ಸ್ ಇದ್ದರೆ, ನೀವು ಸ್ಮಾರ್ಟ್‌ ಜೀನ್ಸ್, ಟಾಪ್‌ಒಂದು ಸ್ಟೈಲಿಶ್‌ಜ್ಯಾಕೆಟ್‌ ಧರಿಸಬಹುದು. ಇದರ ಜೊತೆ ಸ್ಲಿಂಗ್‌ ಬ್ಲಾಗ್‌ಡೇಝಿ ಶೂಸ್‌ ಯಾ ಸ್ನೀಕರ್ಸ್‌ ಧರಿಸಿರಿ. ಇದರಿಂದ ನೀವು ಆರಾಮದಾಯಕ ಸ್ಟೈಲಿಶ್‌ ಎರಡೂ ವಿಧದಲ್ಲಿ ಮಿಂಚಬಹುದು.

ವಿಂಟರ್ಪಾರ್ಟಿಗಳಿಗಾಗಿ ಔಟರ್ವೇರ್‌ : ನೀವು ಮುಖ್ಯವಾಗಿ ಚಳಿಗಾಲದ ಪಾರ್ಟಿ ಅಟೆಂಡ್‌ ಮಾಡುತ್ತಿದ್ದರೆ, ವಿಂಟರ್‌ ಫ್ಯಾಷನ್ ಅನುಸರಿಸ ಬೇಕಾದುದೂ ಅಷ್ಟೇ ಮುಖ್ಯ. ಒಂದು ಟ್ರೆಂಡಿ ಕೋಟ್‌ ಯಾ ಪೇಕ್ಸ್ ಪರ್ಸನಲ್ ಜ್ಯಾಕೆಟ್‌, ನಿಮ್ಮ ಡ್ರೆಸ್‌ ಗೆ ಮತ್ತಷ್ಟು ಆಕರ್ಷಣೆ ಒದಗಿಸುತ್ತದೆ. ಇದನ್ನು ಹಾಟ್‌ ಸ್ಟೈಲಿಶ್‌ ಬೂಟ್ಸ್ ಜೊತೆ ಧರಿಸಿರಿ.

ಸ್ಮೋಕಿಂಗ್ಹಾಟ್ಲುಕ್ಸ್ ಗಾಗಿ ಪ್ಯಾಂಟ್ಸೂಟ್‌ : ನೀವು ತುಸು ವಿಭಿನ್ನ ಫಾರ್ಮಲ್ ಬಯಸುವಿರಾದರೆ, ಪ್ಯಾಂಟ್‌ ಸೂಟ್‌ ನ್ನೇ ಆರಿಸಿ. ಇದೊಂದು ಸ್ಮಾರ್ಟ್‌, ಸ್ಟೈಲಿಶ್‌ಪವರ್‌ ಫುಲ್ ಲುಕ್‌ ನೀಡುತ್ತದೆ. ಇದರ ಜೊತೆ ಹೈ ಹೀಲ್ಸ್ ಮೆಟಾಲಿಕ್‌ ಕ್ಲಚ್‌ ಬ್ಯಾಗ್ ಇರಲಿ.

ಫ್ಲರ್ಟಿ ಫೆಮಿನಿನ್ಟಾಪ್ಸ್ : ಪಾರ್ಟಿಗಳಿಗಾಗಿ ನೀವು ಒಂದು ಫೆಮಿನಿನ್‌ ಟಾಪ್‌ ಧರಿಸಬಹುದು. ಇದು ಆಫ್‌ ಶೋಲ್ಡರ್‌ ಯಾ ಪ್ಲೇಯಿ  ಆಗಿರಬಹುದು. ಇದನ್ನು ಒಂದು ಉತ್ತಮ ಫಿಟೆಡ್‌ ಜೀನ್ಸ್ ಜೊತೆ ಧರಿಸಿರಿ. ಆಗ ನಿಮ್ಮ ಲುಕ್‌ ಅತ್ಯಾಕರ್ಷಕ ಸ್ಟೈಲಿಶ್‌ ಆಗುತ್ತದೆ.

ಸೂಕ್ತ ಆ್ಯಕ್ಸೆಸರೀಸ್ಮಾತ್ರ ಆರಿಸಿ : ಪಾರ್ಟಿಗಳಲ್ಲಿ ನೀವು ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಲು ಉತ್ತಮ ಆ್ಯಕ್ಸೆಸರೀಸ್ ಮಾತ್ರ ಆರಿಸಿ. ಸ್ಟೇಟ್‌ ಮೆಂಟ್‌ ನೆಕ್‌ ಲೇಸ್‌, ಚಂಕೀ ಇಯರ್‌ ರಿಂಗ್ಸ್, ಕ್ರಿಸ್ಟಲ್ ಆ್ಯಂಕಲ್ ಸ್ಟ್ರಾಪ್ಸ್ ಹಾಗೂ ಕ್ಲಚ್‌ ಬ್ಯಾಗ್ಸ್ ನ್ನು ಗಮನವಿಟ್ಟು ಆರಿಸಿಕೊಳ್ಳಿ. ಇವು ನಿಮ್ಮ ಲುಕ್ಸ್ ನ್ನು ಇನ್ನಷ್ಟು ಮತ್ತಷ್ಟು ಸುಪರ್ಬ್‌ ಮಾಡಬಲ್ಲವು.

ಪರ್ಫೆಕ್ಟ್ ಹೇರ್ಸ್ಟೈಲ್ಮೇಕ್ಅಪ್‌ : ಹೇರ್‌ ಸ್ಟೈಲ್‌ಮೇಕಪ್‌ ಸಹ ನಿಮ್ಮ ಲುಕ್ಸ್ ನ ಪ್ರಧಾನ ಪಾತ್ರಗಳು. ನ್ಯೂ ಇಯರ್‌ಪಾರ್ಟಿಗಾಗಿ ನೀವು ಗ್ಲಾಮರಸ್‌ಪ್ಲೇರ್‌ ಲುಕ್ಸ್ ಬಯಸಿದರೆ, ವಾಲ್ಯು ಮೈಸ್ಡ್ ಹೇರ್‌ ಯಾ ಸಾಫ್ಟ್ ವರ್ಕ್ಸ್‌ ಇರಿಸಿಕೊಳ್ಳಿ. ಮೇಕಪ್ ನಲ್ಲಿ ಗ್ಲಿಟರ್‌ ಐಶ್ಯಾಡೋ, ಬೋಲ್ಡ್ ಲಿಪ್ಸ್ ಹೈಲೈಟರ್‌ ನ್ನು ಮರೆಯದೆ ಬಳಸಿಕೊಳ್ಳಿ.

ಕಂಫರ್ಟೆಬಲ್ ಫುಟ್ವೇರ್‌ : ಪಾರ್ಟಿಗಳಲ್ಲಿ ಬಹಳ ಹೊತ್ತು ಡ್ಯಾನ್ಸ್ ಇತ್ಯಾದಿ ಕಾರ್ಯಕ್ರಮಗಳಲ್ಲಿ ಪಾಲುಗೊಳ್ಳುವುದಿದ್ದರೆ, ಮರೆಯದೆ ಕಂಫರ್ಟೆಬಲ್ ಫುಟ್‌ ವೇರ್‌ ಮಾತ್ರ ಆರಿಸಿ. ಇದರಿಂದ ನೀವು ಕೇವಲ ಸ್ಟೈಲಿಶ್‌ ಆಗಿ ಮಾತ್ರ ಕಾಣಿಸುವುದಲ್ಲ, ಆರಾಮವಾಗಿಯೂ ಇರಬಹುದು. ನೀವು ಹೀಲ್ಸ್, ಸ್ಟೇಟ್‌ ಮೆಂಟ್‌ ಸ್ನೀಕರ್ಸ್‌ ಯಾ ಪ್ಲೇಟ್ಸ್ ಸಹ ಧರಿಸಬಹುದು.

ಜಿ. ಪೂಜಾ ಭಟ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ