ವಿಂಟರ್ ನಲ್ಲಿ ನಿಮ್ಮ ಕೇಶ ಸೌಂದರ್ಯ ಹಾಗೂ ಆರೋಗ್ಯ ಹೇಗಿರಬೇಕು ಎಂದು ತಜ್ಞರಿಂದ ತಿಳಿಯೋಣವೇ….?
ಚಳಿಗಾಲದ ಇಡೀ ಸೀಸನ್ ಪೂರ್ತಿ ಥಂಡಿ ಹವೆ ಹಾಗೂ ಕನಿಷ್ಠ ಆರ್ದ್ರತೆಯ ಕಾಟ ತಪ್ಪದು. ಇದು ನಮ್ಮ ಚರ್ಮವನ್ನು ಮಾತ್ರ ಹಿಂಸಿಸುವುದಲ್ಲ, ಕೂದಲಿನ ಮೇಲೂ ಗಾಢ ದುಷ್ಪ್ರಭಾವ ಬೀರುತ್ತದೆ. ಈ ಸೀಸನ್ ನಲ್ಲಿ ಕೂದಲು ಅತಿ ಶುಷ್ಕ, ನಿರ್ಜೀವ ಹಾಗೂ ದುರ್ಬಲ ಆಗುತ್ತದೆ. ಇದರ ಸಮರ್ಪಕ ಆರೈಕೆ ಮಾಡದಿದ್ದಲ್ಲಿ ಕೂದಲು ಬೇಗ ಬೇಗ ತುಂಡಾಗುವಿಕೆ, ಮುರಿಯುವಿಕೆ, ಉದುರುವಿಕೆಯ ಸಮಸ್ಯೆಗೆ ತುತ್ತಾಗುತ್ತದೆ. ಜೊತೆಗೆ ಸೀಳುತುದಿ ಹಾಗೂ ಡ್ಯಾಂಡ್ರಫ್ ಸಮಸ್ಯೆ ತಪ್ಪಿದ್ದಲ್ಲ.
ಈ ಸೀಸನ್ ನಲ್ಲಿ ಕೂದಲು ದುರ್ಬಲ ಆಗುವುದೇಕೆ ಹಾಗೂ ಇದಕ್ಕೆ ಪರಿಹಾರವೇನು ಎಂದು ತಜ್ಞರಿಂದ ಕೇಳಿ ತಿಳಿಯೋಣವೇ?
ಆರ್ದ್ರತೆಯ ಕೊರತೆ : ಚಳಿಗಾಲದ ಹವೆಯಲ್ಲಿ ಸಹಜವಾಗಿಯೇ ಆರ್ದ್ರತೆ (ಹ್ಯುಮಿಡಿಟಿ)ಯ ಕೊರತೆ ಕಾಡುವುದರಿಂದ, ಕೂದಲು ಬಲು ಡ್ರೈ ದುರ್ಬಲ ಆಗುತ್ತದೆ.
ಅತಿಯಾದ ಬಿಸಿ ನೀರಿನ ಬಳಕೆ : ಥಂಡಿ ಹಿಂಸೆ ತಡೆಯಲಾರದೆ, ಹೆಂಗಸರು ತಲೆಗೆ ಸ್ನಾನ ಮಾಡುವಾಗ ಅತಿಯಾದ ಬಿಸಿ ನೀರನ್ನು ಬಳಸುತ್ತಾರೆ. ಅದು ಸ್ಕಾಲ್ಪ್ ನ ನೈಸರ್ಗಿಕ ತೈಲಾಂಶಗಳನ್ನು ತೊಲಗಿಸಿ, ಅದನ್ನು ಮತ್ತಷ್ಟು ಅಧಿಕ ಡ್ರೈಗೊಳಿಸುತ್ತದೆ.
ಥಂಡಿ ಹವೆ ಹಾಗೂ ಪರಿಸರ ಮಾಲಿನ್ಯ : ಥಂಡಿ ಹವೆ ಕೂದಲಿನ ಆರ್ದ್ರತೆ ನಾಶಪಡಿಸಿ, ಪರಿಸರ ಮಾಲಿನ್ಯದಿಂದ ಅದು ಮತ್ತಷ್ಟು ಮಗದಷ್ಟು ನಿರ್ಜೀವಗೊಳ್ಳುವಂತೆ ಮಾಡುತ್ತದೆ.
ಡ್ಯಾಂಡ್ರಫ್ ನ ಸಮಸ್ಯೆ : ಸ್ಕಾಲ್ಪ್ ನ ಡ್ರೈನೆಸ್ ಹೆಚ್ಚುವುದರಿಂದ ತಲೆಹೊಟ್ಟಿನ ಸಮಸ್ಯೆ ತಂತಾನೇ ಹೆಚ್ಚುತ್ತದೆ. ಇದರಿಂದ ಕೂದಲು ಉದುರುವಿಕೆ, ತಲೆಯಲ್ಲಿ ತುರಿಕೆ, ಕಡಿತ ಸಹ ಹೆಚ್ಚುತ್ತದೆ. ಚಳಿಗಾಲದಲ್ಲಿ ಕೂದಲಿನ ಆರೈಕೆಗಾಗಿ, ಹೆಚ್ಚಿನ ಪೋಷಣೆ ಒದಗಿಸಲು, ನಿಯಮಿತವಾಗಿ ಕೊಬ್ಬರಿ ಎಣ್ಣೆ ಅಥವಾ ಇತರ ತೈಲಗಳಿಂದ ಮಸಾಜ್ ಮಾಡಬೇಕು.
ಜೋಜೋಬಾ ಆಯಿಲ್ : ಇದು ಕೂದಲಿನಲ್ಲಿ ಆಳವಾಗಿ ಇಳಿದು, ಅದರ ಆರ್ದ್ರತೆ ಕಾಪಾಡುತ್ತದೆ.
ಕೊಬ್ಬರಿ ಎಣ್ಣೆ : ಇದು ಕೂದಲಿಗೆ ನೈಸರ್ಗಿಕವಾಗಿ ಆರ್ದ್ರತೆ ಒದಗಿಸುತ್ತದೆ ಹಾಗೂ ಶೀತಗಾಳಿಯಿಂದ ಕೂದಲನ್ನು ರಕ್ಷಿಸುತ್ತದೆ.
ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್ಸ್ : ಇದು ತಲೆಗೂದಲಿನ ಡ್ರೈನೆಸ್ ತೊಲಗಿಸಿ, ಅದನ್ನು ಹೆಚ್ಚು ಮೃದುವಾಗಿಡುತ್ತದೆ.
ಸೂಕ್ತ ಶ್ಯಾಂಪೂ ಕಂಡೀಶನರ್ ನ ಬಳಕೆ : ಸಲ್ಫೇಟ್ ಪ್ಯಾರಾಬೀನ್ ಮುಕ್ತ ಶ್ಯಾಂಪೂವನ್ನೇ ಬಳಸಬೇಕು. ರೋಸ್ ಮೆರಿ ಎಸೆನ್ಶಿಯಲ್ ಆಯಿಲ್ ವುಳ್ಳ ಕಂಡೀಶನರ್ ನ್ನೇ, ಕೂದಲಿನ ಆಳಕ್ಕೆ ತಿಕ್ಕಿ ಚೆನ್ನಾಗಿ ಮಸಾಜ್‌ಮಾಡಿ. ಇದರಿಂದ ಉತ್ತಮ ಪೋಷಣೆ ಸಿಗುತ್ತದೆ. ತಲೆ ಸ್ನಾನದ ನಂತರ ಕಂಡೀಶನರ್ ಬಳಸಲು ಮರೆಯದಿರಿ. ಆಗಾಗ ಹೇರ್ ಮಾಸ್ಕ್ ಬಳಸುತ್ತಿರಬೇಕು. ವಾರದಲ್ಲಿ ಕನಿಷ್ಠ 1-2 ಸಲ ಬಳಸಲೇಬೇಕು ಎಂಬುದನ್ನು ಮರೆಯದಿರಿ.

ಡ್ರೈ ಸ್ಕಾಲ್ಪ್ ಗಾಗಿ : ಆ್ಯಲೋವೇರಾ, ಜೇನುತುಪ್ಪ, ಟೀಟ್ರೀ ಆಯಿಲ್ ಬೆರೆಸಿ ಮಿಶ್ರಣ ರೆಡಿ ಮಾಡಿ.
ಡ್ಯಾಮೇಜ್ಡ್ ಕೂದಲಿಗಾಗಿ : ಆರ್ಗನ್ ಆಯಿಲ್,ಅವಕಾಡೋ ಆಯಿಲ್ ಬೆರೆಸಿ ಮಾಸ್ಕ್ ರೆಡಿ ಮಾಡಿ, ನೀಟಾಗಿ ಮಸಾಜ್ ಮಾಡಿಕೊಳ್ಳಿ.
ಕೂದಲನ್ನು ಸರಿಯಾಗಿ ತೊಳೆಯುವ ಕ್ರಮ : ಎಂದೂ ಮರಳುವ ನೀರು ಬೇಡ, ಉಗುರು ಬೆಚ್ಚಗಿನ ನೀರಿನಿಂದಲೇ ತಲೆ ತೊಳೆಯಿರಿ. ಹೀಗೆ ಕೂದಲನ್ನು ತೊಳೆದ ನಂತರ, ಕೊನೆಯಲ್ಲಿ ತಣ್ಣೀರಿನಿಂದ ತೊಳೆದುಕೊಳ್ಳಿ. ಆಗ ಕೂದಲಿನ ಆರ್ದ್ರತೆ ಒಳಗೇ ಲಾಕ್‌ಆಗುತ್ತದೆ!
ಡ್ಯಾಂಡ್ರಫ್ ನಿಂದ ಪಾರಾಗಲು : ಕೆಮಿಕಲ್ ರಹಿತ ನಿಮ್ಮ ಹರ್ಬಲ್ ಶ್ಯಾಂಪೂಗೆ ಅಗತ್ಯವಾಗಿ ಟೀಟ್ರಿ ಆಯಿಲ್‌ಬೆರೆಸಿಕೊಂಡು ಅದನ್ನು ನಿಯಮಿತವಾಗಿ ಬಳಸಿಕೊಳ್ಳಿ. ವಾರದಲ್ಲಿ 1-2 ಸಲ ಆ್ಯಪಲ್ ಸೈಡರ್‌ವಿನಿಗರ್ ನ್ನು ತಲೆಯ ನೆತ್ತಿಗೆ ತಿಕ್ಕಿ ತೊಳೆಯಿರಿ.
ಉದುರುವ ಕೂದಲನ್ನು ರಕ್ಷಿಸಲಿಕ್ಕಾಗಿ : ಕೂದಲನ್ನು ತೊಳೆದ ನಂತರ, ಅಗತ್ಯವಾಗಿ ಹೇರ್‌ಸೀರಂ ಹಚ್ಚಿಕೊಳ್ಳಿ. ಒದ್ದೆ ಕೂದಲನ್ನು ಎಂದೂ ಬಾಚಲು ಹೋಗಬೇಡಿ.
ಚಳಿಗಾಲದಲ್ಲಿ ಏನನ್ನು ಮಾಡಬೇಕು? ಏನನ್ನು ಮಾಡಬಾರದು? : ಕೂದಲು ಸದಾ ಹೈಡ್ರೇಟೆಡ್‌ಆಗಿರಬೇಕು. ಇದಕ್ಕಾಗಿ ಧಾರಾಳವಾಗಿ ದಿನಕ್ಕೆ 8-10 ಗ್ಲಾಸ್‌ನೀರು ಕುಡಿಯಿರಿ. ಆಗ ಮಾತ್ರ ನಿಮ್ಮ ದೇಹ ಕೂದಲು ಎರಡೂ ಸದಾ ಹೈಡ್ರೇಟೆಡ್ ಆಗಿರುತ್ತದೆ.
ಪೌಷ್ಟಿಕ ಆಹಾರ ಮಾತ್ರ ಸೇವಿಸಿ : ಸದಾ ಬ್ಯಾಲಸೆನ್ಸ್ಡ್ ಪೌಷ್ಟಿಕ ಆಹಾರ ಮಾತ್ರ ಸೇವಿಸಿ, ಸದಾ ಹುರಿದ ಕರಿದ ಆಹಾರಕ್ಕೆ ಮರುಳಾಗಬೇಡಿ. ಪ್ರೋಟೀನ್, ವಿಟಮಿನ್, ಮಿನರಲ್ಸ್, ಒಮೇಗಾ3 ಫ್ಯಾಟಿ ಆ್ಯಸಿಡ್, ವಿಟಮಿನ್‌ಧಾರಾಳವಾಗಿರುವಂಥ ಹಣ್ಣು ತರಕಾರಿ ಸೇವಿಸಿ.
ಸಾಫ್ಟ್ ಫ್ಯಾಬ್ರಿಕ್ ಮಾತ್ರ ಬಳಸಿರಿ : ಕಾಟನ್, ಸ್ಯಾಟಿನ್ ಯಾ ಸಿಲ್ಕ್ ಪಿಲ್ಲೋ ಕವರ್ ಮಾತ್ರ ಬಳಸಿರಿ. ಆಗ ತಲೆಗೂದಲಿನ ಆರ್ದ್ರತೆ ಹಾಗೇ ಉಳಿಯುತ್ತದೆ.
ನೈಸರ್ಗಿಕ ರೂಪದಲ್ಲಿ ಮಾತ್ರ ಕೂದಲನ್ನು ಒಣಗಿಸಿ : ಹೇರ್‌ಡ್ರೈಯರ್/ಬ್ಲೋಯರ್‌ಇತ್ಯಾದಿ ಕೂದಲಿಗೆ ಸಂಬಂಧಿಸಿದ ಉಪಕರಣಗಳನ್ನು ಬಳಸಲೇಬೇಡಿ.
ಹೀಟ್ ಸ್ಟೈಲಿಂಗ್ ಟೂಲ್ಸ್ ನ್ನು ಎಂದೂ ಅಧಿಕ ಸಲ ಉಪಯೋಗಿಸಬಾರದು : ಇವನ್ನು ನೀವು ತೀರಾ ಅನಿವಾರ್ಯವಾದಾಗ 1-2 ನಿಮಿಷಕ್ಕಷ್ಟೇ ಅದರ ಬಳಕೆ ಸೀಮಿತವಾಗಿರಲಿ (ಆದೂ ವಾರದಲ್ಲಿ 1-2 ಸಲ ಮಾತ್ರ). ಸ್ಟ್ರೇಟ್ ನರ್ ನಂಥವನ್ನು ಆದಷ್ಟೂ ದೂರವಿರಿಸಿ.
ಹಾರ್ಶ್ ಕೆಮಿಕಲ್ಸ್ ಬೆರೆತ ಯಾವುದೇ ಶ್ಯಾಂಪೂ, ಕಂಡೀಶನರ್ ಹೇರ್ ಆಯಿಲ್, ಇತ್ಯಾದಿ ಬೇಡ : ಹಾರ್ಶ್ ಕೆಮಿಕಲ್ಸ್ ಬೆರೆತಿರುವಂಥ, ಕೂದಲಿಗೆ ಹಾನಿ ಮಾಡುವಂಥ ಶ್ಯಾಂಪೂ, ಕಂಡೀಶನರ್, ಆಯಿಲ್ ಬೇಡ.
ಒದ್ದೆ ಕೂದಲನ್ನೂ ಎಂದೂ ಗಂಟು ಹಾಕಿಕೊಳ್ಳಬೇಡಿ : ಒದ್ದೆ ಕೂದಲನ್ನು ನೀಟಾಗಿ ಕಾಟನ್ ಟವೆಲ್ ನಿಂದ ಒರೆಸಿ ಚೆನ್ನಾಗಿ ಒಣಗಿಸಿದ ನಂತರವೇ, ಕೂದಲನ್ನು ಗಂಟು ಹಾಕಿಕೊಳ್ಳಬೇಕು ಯಾ ಬಾಚಬೇಕು. ತೇವಾಂಶ ಇರುವಾಗ ಖಂಡಿತಾ ಬೇಡ.
ವಹಿಸಬೇಕಾದ ವಿಶೇಷ ಎಚ್ಚರಿಕೆಗಳು : ಕೂದಲನ್ನು ಎಂದೂ ಓವರ್ ಸ್ಟೈಲಿಂಗ್ ಮಾಡಲು ಹೋಗಬೇಡಿ. ಬೆಳಗಿನ ಎಳೆ ಬಿಸಿಲಿನಲ್ಲಿ ಅಗತ್ಯ ಓಡಾಡಿ, ಇದರಿಂದ ಕೂದಲಿಗೆ ನೈಸರ್ಗಿಕ ವಿಟಮಿನ್ ಡಿ ಸಿಗುತ್ತದೆ. ನಿಯಮಿತವಾಗಿ ಹೇರ್‌ಸ್ಪಾ ಮಾಡಿಸುತ್ತಿರಿ. ಶೀತ ಗಾಳಿಯಿಂದ ಪಾರಾಗಲು, ಸ್ಕಾರ್ಫ್ ಯಾ ಕ್ಯಾಪ್ ನಿಂದ ಕೂದಲನ್ನು ಅಗತ್ಯ ರಕ್ಷಿಸಿ.
– ಪ್ರತಿನಿಧಿ





