ಧರ್ಮ ಇಷ್ಟು ಬೆದರಿಸುವುದಾದರೂ ಏಕೆ?

ವಿಶ್ವದ ಕೆಲವು ಸಂಸ್ಥೆಗಳು, ಬೇಡದ ಅನಗತ್ಯ ವಸ್ತುಗಳ ಪಟ್ಟಿ ಮಾಡುತ್ತಾ ಇರುತ್ತವೆ. ಆದರೆ ಈ ಪಟ್ಟಿಯಲ್ಲೇ ನಮ್ಮ ಜೀವನದ ಸಿಹಿಕಹಿ ಅಡಗಿರುತ್ತದೆ. ನ್ಯೂಸ್‌ವರ್ಲ್ಡ್ ರಿಪೋರ್ಟ್‌, ವಿಶ್ವದ 35ಕ್ಕೂ ಹೆಚ್ಚಿನ ಫ್ರೆಂಡ್ಲಿ ದೇಶಗಳ ಪಟ್ಟಿ ಮಾಡಿದೆ. ಇದರಲ್ಲಿ ಹೆಚ್ಚಿನ ಯೂರೋಪ್‌ ಖಂಡಕ್ಕೆ ಸೇರಿವೆ.

ಸಾಮಾನ್ಯವಾಗಿ ಹಣವುಳ್ಳವರು ಬೇಗ ಫ್ರೆಂಡ್ಲಿ ಆಗಿಬಿಡುತ್ತಾರೆ, ಅವರಿಗೆ ಬಡವರಿಂದ ಏನೂ ಆಗಬೇಕಿಲ್ಲ. ಇಂಥವರಿಗೆ ತಮ್ಮ ಬಾಲ್ಯದಿಂದಲೇ, ಇತರ ಜನರ ಬಣ್ಣ, ಮಾತು, ಬಟ್ಟೆಬರೆ, ಸಣ್ಣ ಮನೆ ಇರುವವರ ಕಂಡು ಹೆದರುವ ಅಗತ್ಯವಿಲ್ಲ ಎಂದೇ ಕಲಿಸಲಾಗಿರುತ್ತದೆ. ಹಾಗೆ ನೋಡಿದರೆ ಎಲ್ಲಕ್ಕಿಂತ ಹೆಚ್ಚು ಬೆದರಿಸುವುದು ಅಂದ್ರೆ ಧರ್ಮ! ಯಾರು ನಮ್ಮ ಧರ್ಮದವರಲ್ಲೇ ಅವರೆಲ್ಲ ಶತ್ರುಗಳು ಎಂದೇ ಪ್ರತಿ ಧರ್ಮ ಕಲಿಸುತ್ತದೆ.

ಹಿಂದೂ ಧರ್ಮವಂತೂ ಎಲ್ಲಕ್ಕಿಂತ ಹೆಚ್ಚು ಕಂದಾಚಾರ ಮಾರ್ಗ ಹಿಡಿದಿದೆ. ಯಾವಾಗಿನಿಂದ ಅಧಿಕಾರ ದಾಹಕ್ಕಾಗಿ ಧರ್ಮವನ್ನು ಬಳಸಲಾಗುತ್ತದೋ, ಅಧಿಕಾರ ಉಳಿಸಿಕೊಳ್ಳಲೆಂದು ಧರ್ಮ ನೆಪಾಗಿದೆಯೋ, ಆಗಿನಿಂದ ಧರ್ಮವನ್ನು ಜನರಿಗಾಗಿ ಅಲ್ಲ, ಅವರನ್ನು ಬೆದರಿಸಲೆಂದೇ ಬಳಸಲಾಗುತ್ತಿದೆ! ಇದು ಪ್ರೀತಿ ವಾತ್ಸಲ್ಯಕ್ಕಾಗಿ ಅಲ್ಲ, ಧರ್ಮ ಕಂಡು ಹೆದರಿಕೆ ಇರಲಿ ಎನ್ನಲಾಗುತ್ತಿದೆ.

ಈ ಪಟ್ಟಿಯಲ್ಲಿ ಎಲ್ಲಕ್ಕಿಂತ ಮೇಲೆ ಕೆನಡಾ ಇದೆ. ಅಲ್ಲಿ ನಮ್ಮ ಸಿಖ್ಖರು ಬಹಳಷ್ಟು ಮಂದಿ ಇದ್ದಾರೆ. ಕೆನಡಾದವರ ಜೊತೆ ಬೆರೆತು ಒಂದಾಗಿ, ಮಂತ್ರಿ ಪದವಿ ಸಹ ಗಿಟ್ಟಿಸಿದ್ದಾರೆ. ಕೆನಡಾ ಸರ್ಕಾರಕ್ಕೆ ತನ್ನದೇ ಆದ ಧರ್ಮವಿಲ್ಲ. ಅದೇ ತರಹ ಅಮೆರಿಕಾ ಸಹ ಹಿಂದೆಲ್ಲ ಬಲು ಫ್ರೆಂಡ್ಲಿ ದೇಶ ಎನಿಸಿತ್ತು. ಆದರೆ ಯಾವಾಗಿನಿಂದ ಅಲ್ಲಿ ಚರ್ಚಿನ ಪ್ರಾಬಲ್ಯ ಶುರುವಾಯಿತೋ ಅದರ ಹೆಸರಲ್ಲಿ `ಮೇಕ್‌ ಅಮೆರಿಕಾ ಗ್ರೇಟ್‌ ಅಗೇನ್‌’ ಎನ್ನುತ್ತಲೇ, ಬಿಳಿಯ ಕ್ರೈಸ್ತರು, ಅಮೆರಿಕಾದ ಬಿಳಿಯರಲ್ಲದವರ ಮೇಲೆ ದಬ್ಬಾಳಿಕೆ ನಡೆಸುತ್ತಾ ಅವರನ್ನು ಶತ್ರುಗಳಾಗಿಸಿದ್ದಾರೆ.

ಸ್ಪೇನ್‌, ನ್ಯೂಝಿಲೆಂಡ್‌, ನೆದರ್‌ ಲೆಂಡ್‌, ಪೋರ್ಚುಗಲ್, ಆಸ್ಟ್ರೇಲಿಯಾ, ಇಟಲಿ, ನಾರ್ವೆ ಇತ್ಯಾದಿ ದೇಶಗಳೂ ಈ ಪಟ್ಟಿಯಲ್ಲಿದ್ದು, 9ನೇ ಸ್ಥಾನದಲ್ಲಿ ಥೈಲೆಂಡಿದೆ. ಹಿಂದೆಲ್ಲ ಅಲ್ಲಿ ಭಾರತೀಯರು ನೆಮ್ಮದಿಯಾಗಿದ್ದರು, ಈಗಲ್ಲ. 22ನೇ ಸ್ಥಾನದಲ್ಲಿ ಮಲೇಷಿಯಾ, 24ನೇ ಸ್ಥಾನದಲ್ಲಿ ಸಿಂಗಾಪುರ್‌, 33ನೇ ಸ್ಥಾನದಲ್ಲಿ ಏಷ್ಯಾದ ಇಂಡೋನೇಷ್ಯಾ ಹಾಗೂ 35ನೇ ಸ್ಥಾನದಲ್ಲಿ ವಿಯೆಟ್ನಾಂ ಇದೆ.

ವಿಶ್ವದ ಅತಿ ಶ್ರೀಮಂತ ದೇಶ ಅಮೆರಿಕಾ 35 ಸ್ಥಾನಗಳಲ್ಲೂ ಇಲ್ಲ. ಮತ್ತೊಂದು ಶ್ರೀಮಂತ ದೇಶ ಚೀನಾ ಸಹ ಇಲ್ಲ, ಅತಿ ದಟ್ಟ ಜನಸಂದಣಿಯ ಭಾರತ ಇಲ್ಲ! ಈ 3 ದೇಶಗಳೂ ವಿಶಾಲವಾಗಿದ್ದರೂ ಫ್ರೆಂಡ್ಲಿ ಅಲ್ಲ. ಅಮೆರಿಕಾ ಅಂತೂ ಎಷ್ಟು ಅನ್‌ ಫ್ರೆಂಡ್ಲಿ ಎಂದರೆ, ಅಲ್ಲಿ ಎಷ್ಟು ಜನಸಂಖ್ಯೆ ಇದೋ ಅದಕ್ಕೆ 4 ಪಟ್ಟು ಗನ್‌ ಪಿಸ್ತೂಲು ರೈಫಲ್ ಹರಡಿವೆ, ಹಾಗಾಗಿಯೇ ಆ ಜನ ಇತರರನ್ನು ಬೆದರಿಸಲೆಂದೇ ಅವನ್ನು ಹೆಚ್ಚು ಬಳಸುತ್ತಾರೆ.

ನಮ್ಮಲ್ಲಿಯಂತೂ ಪೊಲೀಸರ ಬಳಿ ಮಾತ್ರವೇ ಗನ್‌ ಇರುತ್ತದೆ. ಇದನ್ನು ಅವರು ಎಲ್ಲಾ ಎನ್‌ ಕೌಂಟರ್‌ ಗಳಿಗೂ ಬಳಸಬಹುದಾಗಿದೆ. ಆದರೆ ಎಲ್ಲರ ಕೈಗಳಲ್ಲೂ ಲಾಠಿ ಅಂತೂ ಇದೆ. ತನ್ನ ವೃದ್ಧಾಪ್ಯದಲ್ಲಿ ಗಾಂಧಿ ಆಸರೆಗಾಗಿ ಲಾಠಿ ಬಳಸಿದ್ದರು. ಆದರೆ ನಮ್ಮಲ್ಲಿ ಲಾಠಿಯುಳ್ಳವರು ಪಕ್ಕಾ ಅನ್‌ ಫ್ರೆಂಡ್ಲಿ ಆಗುತ್ತಿದ್ದಾರೆ. ಏಕೆಂದರೆ ಅವರು ಅದನ್ನು ಆಸರೆಗಾಗಿ ಅಲ್ಲದೆ, ತಲೆ ಒಡೆಯಲೆಂದೇ ಬಳಸುತ್ತಾರೆ. ಬಾಲ್ಯದಿಂದಲೇ ನಮಗೆ ಇತರೆ ಧರ್ಮ, ಜಾತಿ, ಬಣ್ಣ, ಭಾಷೆಯರು ಗೆಳೆಯರಾಗಲು ಸಾಧ್ಯವಿಲ್ಲ ಎಂದೇ ಕಲಿಸಲಾಗುತ್ತದೆ. ನಮ್ಮಲ್ಲಿ ಆಫೀಸ್‌, ಶಾಲೆ, ವಠಾರ, ಒಂದೇ ಅಪಾರ್ಟ್‌ ಮೆಂಟ್‌ ಯಾ ಮಲ್ಟಿ ಕಟ್ಟಡಗಳಲ್ಲಿನ 400-500 ಮನೆಗಳಲ್ಲಿ ಭಯಂಕರ ಗ್ರೂಪಿಸಂ ಇದೆ. ಪ್ರತಿಯೊಬ್ಬರೂ ಇನ್ನೊಬ್ಬರ ಪಾಲಿಗೆ ಶತ್ರು ಆಗುತ್ತಾರೆ. ಇದರಲ್ಲಿ ಪ್ರಮುಖವಾಗಿ ಧರ್ಮ, ಉಪಧರ್ಮ, ದೇವದೇವಿಯರು, ಬದುಕಿರುವ ಅಥವಾ ಸತ್ತವರ ಪ್ರಾಬಲ್ಯಗಳೇ ಹೆಚ್ಚು.

ಎಲ್ಲರೊಂದಿಗೆ ಫ್ರೆಂಡ್ಲಿ ಆಗಿರುವುದು ಒಂದು ಅತ್ಯಗತ್ಯ ಗುಣ. ನಾಗರಿಕತೆ ಇದನ್ನೇ ಆಧರಿಸಿದೆ. ಒಬ್ಬಂಟಿ ವ್ಯಕ್ತಿ ಏನೂ ಮಾಡಲಾರ. ಇಂದಿನ ಸಮಾಜ ಬಹುತೇಕರ ಗೆಳೆತನದ ಮೇಲೆ ನಿಂತಿದೆ. ನಮಗೆ ಈ ಸಮಾಜ ವಿಭಜನೆ ಕಲಿಸಿದರೆ, ಈ ವೈರಸ್‌ ನಮ್ಮ ಮನೆಗಳಿಗೂ ಲಗ್ಗೆ ಇಡುತ್ತದೆ. ಪತಿಪತ್ನಿ, ಹೆತ್ತವರು ಮಕ್ಕಳು, ಯಾರ ನಡುವಲ್ಲಾದರೂ ಇದು ಆಗಬಹುದು.

ಸಣ್ಣಪುಟ್ಟ ಶ್ರೀಮಂತ ದೇಶಗಳು ಫ್ರೆಂಡ್ಲಿ ಆಗಿವೆ. ಹಾಗಾಗಿಯೇ ಅಲ್ಲಿ ಭಾರತೀಯರು ನುಗ್ಗಿ ನಮ್ಮೆದಿಯಾಗಿದ್ದಾರೆ. ಆದರೆ ಅವರ ಭಾಷೆ, ಬಣ್ಣ, ಧರ್ಮ ಎಲ್ಲವೂ ವಿಭಿನ್ನ. ಬ್ರೆಝಿಲ್‌, ಐಸ್ ಲೆಂಡ್‌, ಬೆಲ್ಜಿಯಂ, ಕ್ರೋಶಿಯಾ ಇತ್ಯಾದಿ ಸುಖೀ, ಸಮೃದ್ಧಿ, ಫ್ರೆಂಡ್ಲಿ ಎನಿಸಿವೆ. ಆಫ್ರಿಕಾ ಯಾ ಮಿಡಲ್ ಈಸ್ಟ್ ನ ಯಾವ ದೇಶ ಅಲ್ಲ. ಏಕೆಂದರೆ ಆಫ್ರಿಕನ್ನರಿಂದ ಲೂಟಿ ಹೋಗುವ ಭಯವೇ ಹೆಚ್ಚು. ಮಿಡಲ್ ಈಸ್ಟ್ ನ ಶ್ರೀಮಂತ ದೇಶಗಳಲ್ಲಿ ಕಂದಾಚಾರಿ ಪೊಲೀಸರ ಕಾರಣ ಸದಾ ಭಯದ ವಾತಾವರಣ ಹರಡಿದೆ. ಈ ಅನ್ ಫ್ರೆಂಡ್ಲಿ ದೇಶಗಳಲ್ಲಿ ಹೊರಗಿನವರೂ ಭಯಪಡುತ್ತಲೇ ಇರುತ್ತಾರೆ, ಈ ದೇಶಗಳವರೂ ನೆರೆ ರಾಷ್ಟ್ರ ಕಂಡು ಭಯಪಡುತ್ತಿರುತ್ತಾರೆ.

ಫ್ರೆಂಡ್‌ ಶಿಪ್‌ ಅಂದ್ರೆ ಯಾರನ್ನೋ ತಂದು ಮನೆಗೆ ತುಂಬಿಸಿಕೊಳ್ಳಿ ಅಂತ ಅಲ್ಲ. ಇದರ ಅರ್ಥ ಅವರಿಗೂ ನಿಮಗೂ ಪರಸ್ಪರ ಭಯ ಇರಬಾರದು ಅಂತ. ಆಪತ್ತಿನ ಕಾಲದಲ್ಲಿ ಪರಸ್ಪರ ನೆರವು ಸಿಗಬೇಕು. ಈಗ ನೀವೇ ಎಣಿಸಿ ನೋಡಿ, ನೀವೆಷ್ಟು ಫ್ರೆಂಡ್ಲಿ ಆಗಿದ್ದೀರಿ ಅಂತ? ಯಾವ ಅಪರಿಚಿತರಿಗೆ ನಿಮ್ಮ ಸ್ವಂತದ ಹಣದಲ್ಲಿ ಎಷ್ಟು ಸಹಾಯ ಮಾಡಿದ್ದೀರಿ? ನಮ್ಮ ದೇಶದಲ್ಲಿ ದೇವರ ಹೆಸರಲ್ಲಿ ಹಣ ಹರಕೆ ರೂಪದಲ್ಲಿ ಸಂದಾಯವಾಗುತ್ತದೆ, ಅಲ್ಲೆಲ್ಲ ಭಕ್ತರ ನಡುವೆ ಘರ್ಷಣೆ ತಪ್ಪಿದ್ದಲ್ಲ, ತಳ್ಳಾಟದಲ್ಲಿ ಜೀವಗಳಿಗೆ ಬೆಲೆಯೇ ಇಲ್ಲ. ಪೂಜಾ ಸ್ಥಳಗಳು ಫ್ರೆಂಡ್ಲಿ ಆಗಿರಲು ಸಾಧ್ಯವೇ ಇಲ್ಲವೇನೋ ಅನಿಸುತ್ತವೆ.

ಮಾನೋಪೋಲಿ ಖತರ್ನಾಕ್ಆದೀತು

ಇಂಡಿಗೋ ಏರ್‌ ಲೈನ್ಸ್ ಡಿಸೆಂಬರ್‌ ನ ಮೊದಲ ವಾರದಲ್ಲಿ ಫಿಯಾಸ್ಕೋ ಒಂದು ಡೇಂಜರ್‌ ಝೋನ್‌ ನತ್ತ ಗುರಿ ಮಾಡುತ್ತಿದೆ. ಅಂದ್ರೆ ಪ್ರತಿಯೊಂದು ಬಗೆಯ ಮಾನೋಪೋಲಿ ಎಷ್ಟು ಭಯಂಕರ ಆದೀತು ಅಂತ. ಇಂಡಿಗೋ ಸುಮಾರು ಸಾವಿರಾರು ಫ್ಲೈಟ್ಸ್ ಕ್ಯಾನ್ಸಲ್ ಮಾಡಿತು. ಇವುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಸೀಟು ಈಗಾಗಲೇ ಸೇಲ್ ‌ಆಗಿದ್ದವು. ಹೀಗಾಗಿ ಪ್ರಯಾಣಿಕರು ಪ್ಲಾನ್ ಮಾಡಿ ಹೋಟೆಲ್‌, ಟ್ಯಾಕ್ಸಿ ಇತ್ಯಾದಿ ಬುಕ್‌ ಮಾಡಿಸಿದ್ದರು. ಮದುವೆಗಾಗಿ ಮಂಟಪಗಳು ಬುಕ್‌ ಆಗಿದ್ದವು. ಒಂದು ನಗರದ ಏರ್ ಪೋರ್ಟ್‌ ನಿಂದ ಮತ್ತೊಂದು ನಗರಕ್ಕೆ ಹೊರಡಲು ಸಹ ಟಿಕೆಟ್ಸ್ ಖರೀದಿಸಲಾಗಿತ್ತು. ಅವುಗಳಲ್ಲಿ ಕೆಲವು ಇಂಡಿಗೋ ಆಗಿರಲಿಲ್ಲ.

45 ದಿನಗಳಲ್ಲಿ ಜನರ ಹಲವು ಲಕ್ಷ ಕೋಟಿಗಳಷ್ಟು ಹಣ ಹಾಳಾಗಿ ಹೋಯಿತು. ಈ ಜನರ ಬಳಿ ಹಣ ಇದೆ, ಎತ್ತರದ ಧ್ವನಿ ಇದೆ, ಸ್ಥಿತಿಗತಿ ಚೆನ್ನಾಗಿದ್ದು ಮೀಡಿಯಾ ಸಪೋರ್ಟ್‌ ಇದೆ, ಪ್ರಭಾವಶಾಲಿಗಳು ಸಹ. ಇಷ್ಟೆಲ್ಲ ಇದ್ದರೂ ಇಂಡಿಗೋ ಕಂಪನಿ ಮುಂದೆ ನಿಸ್ಸಹಾಯಕರಾಗಿ ಏರ್‌ ಪೋರ್ಟ್‌ ಗಳಲ್ಲಿ ಧರ್ಮಶಾಲೆ ಮುಂದೆ ಗಂಟೆಗಟ್ಟಲೆ ಕಾಯುವಂತೆ, ಹಲವು ದಿನಗಳನ್ನೇ ಕಾಯುತ್ತಾ ಕಳೆದರು.

ಎಷ್ಟೋ ಸಾವಿರ ಮಂದಿಯ ಲಗೇಜ್‌ ಕಳೆದುಹೋಯಿತು. ಹಲವು ತಿಂಗಳ ನಂತರ ಇಂಡಿಗೋ ಅವನ್ನೆಲ್ಲ ರದ್ದಿಯವನಿಗೆ ಮಾರಬಹುದು. ಇವುಗಳಲ್ಲಿ ಒಡವೆ ವಸ್ತ್ರ, ಡಾಕ್ಯುಮೆಂಟ್ಸ್, ಏನೆಲ್ಲ ಇರಬಹುದು.

ಹೀಗಾದದ್ದಾದರೂ ಏಕೆ? ಏಕೆಂದರೆ ಮಾನೋಪೋಲಿ ಸರ್ಕಾರ ತಾನೇ ಮಾಡದಿದ್ದರೂ ಮಾಡಿಸಿತು. ಮೋದಿ ಸರ್ಕಾರ ಗೊತ್ತಿದ್ದೂ ಹೀಗೆ ಮಾಡಿಸಿತು. ಇಂಡಿಗೋದ ಬೋರ್ಡ್‌ ನಲ್ಲಿ ಅಮಿತಾಭ್ ಕಾರಂತ್‌ ರಂಥ ನರೇಂದ್ರ ಮೋದಿಯವರ ಆಪ್ತ ಮಾಜಿ  ಅಧಿಕಾರಿಗಳೂ ಇದ್ದಾರೆ, ಉದ್ಯಮಶೀಲರೂ ಇದ್ದಾರೆ, ಇವರೆಲ್ಲ ಮೋದಿಯವರನ್ನು ಹೊಗಳುವುದರಲ್ಲಿ ಸುಸ್ತಾಗರು. ಆದರೆ ವಿಡಂಬನೆ ಎಂದರೆ ಮೋದಿ ರಷ್ಯಾದ ರಾಷ್ಟ್ರಪತಿ ವ್ಲಾದಿಮೀರ್‌ ಪುತಿನ್‌ ರ ಸೇವಾ ಭಾಗ್ಯ ಬಿಟ್ಟು ಜನತೆಯ ಕೂಗು ಕೇಳಿದ್ದರೆ ತಾನೇ?

ಈ ಜನತೆಯವರು ಅಂದ್ರೆ, ಸರ್ಕಾರದ ಎಲ್ಲ ಕೆಲಸಗಳ ಸಮರ್ಥಕರು, ಕಣ್ಣು ಮುಚ್ಚಿ ನಂಬಿಬಿಡುತ್ತಾರೆ. ಪರಮ ಆಸ್ತಿಕರು, ರಾಮಮಂದಿರಕ್ಕೆ ಹೋಗುವುದು ಬಹುತೇಕರ ಆಯ್ಕೆಯಾಗಿತ್ತು. ಕೆಲವರು ರಾಮೇಶ್ವರಂ, ಹಲವರು ತಿರುಪತಿ, ಕಾಶಿ, ನಾಸಿಕ್‌, ವೈಷ್ಣೋದೇವಿಗೆ ಹೊರಡುವವರಿದ್ದರು. ಆದರೆ ಇಂಡಿಗೋ ಇವರೆಲ್ಲರ ತಲೆ ಮೇಲೆ ಹೊಡೆದು ಮೂಲೆಗೊತ್ತರಿಸಿತು. ಇಡೀ ದೇಶವನ್ನು ಹೀಗೆ ಒತ್ತರಿಸಲು ಬೋರ್ಡ್‌ ನ ಕೇವಲ 6 ಮಂದಿ ಸಾಕು ಎಂದು ನಿರೂಪಿಸಿತು. ಇತರ ದೇಶದ ಸೇನೆಯ ಆಕ್ರಮಣದ ಅಗತ್ಯವಿಲ್ಲ ಎಂದು ಸಾರಿತು. ಆದರೆ ಇಂಡಿಗೋದ ದೇಶಭಕ್ತಿ ಕುರಿತು ಏನು ಹೇಳುವುದು? ಆದರೆ ಘೋಷಣೆ ಕೂಗುವವರು ಮಾತ್ರ ಮಾವೋವಾದಿ, ಕಮ್ಯುನಿಸ್ಟ್, ದೇಶದ್ರೋಹಿ, ಪಾಕಿಸ್ತಾನಿ ಇತ್ಯಾದಿಗಳಿಂದ ಹೆಸರಿಸುವುದು ಮಾಮೂಲಿ ಆಗಿದೆ.

ಇಂಡಿಗೋ ತರಹವೇ ನಮ್ಮಲ್ಲಿ ಬಹುತೇಕ ವಿಷಯ ಮಾನೋಪೋಲಿ ಆಗಿಹೋಗಿದೆ. ಏರ್‌ ಟೆಲ್‌ಜಿಯೋ ಮಾನೋಪೋಲಿಗಳಿಂದ ದೂರವಾಣಿ ಕ್ಷಣ ಮಾತ್ರದಲ್ಲಿ ನಿಂತೇ ಹೋದೀತು. ಗೂಗಲ್ ಕೋಟ್ಯಂತರ ಜೀಮೇಲ್ ‌ಅಕೌಂಟ್ಸ್ ನಿಲ್ಲಿಸಿ, ಸಂದೇಶ ಕಳಿಸುವುದನ್ನೇ ನಿಲ್ಲಿಸೀತು. ಹಣದ ಕೊಡುಕೊಳ್ಳುವಿಕೆ ನಿಂತೇಹೋದೀತು. ವಾಟ್ಸ್ ಆ್ಯಪ್‌ ತಂತಾನೇ ಕ್ಲೋಸ್ ಆಗಿ ಕೋಟ್ಯಂತರ ಸಂಪರ್ಕ ತಪ್ಪಿಸೀತು. ಬಂದ್‌ ಆಗಿ ಹೋಂ ಡೆಲಿವರಿ ಖತಂ ಆದೀತು. ಕೆಲವೇ ಮಂದಿಯ ಕೈಗಳಲ್ಲಿ ಈಗ ಶತಕೋಟ್ಯಂತರ ಜೀವಿಗಳ ಜೀವ ಅಡವಿಟ್ಟಂತಾಗಿದೆ. ಇದರಲ್ಲಿ ಭಾರತ ಸೇರಿದಂತೆ ವಿಶ್ವದ ಅನೇಕ ದೇಶದ ಮಂದಿ ಈಡಾಗಿದ್ದಾರೆ. ಇಂಡಿಗೋ ಇದೀಗ ಒಂದು ಸ್ಯಾಂಪ್‌ ನೀಡಿದೆ, ಅಷ್ಟೆ. ತಾನು ಮನಸ್ಸು ಮಾಡಿದರೆ ಕ್ಷಣಮಾತ್ರದಲ್ಲಿ ಹೀಗೆ ಕೋಟ್ಯಂತರ ಹಣ ಸ್ವಾಹಾ ಮಾಡಿಬಿಡಬಲ್ಲೆ ಎಂದು ನಿರೂಪಿಸಿದೆ. ಇದರ ಮುಂದೆ ಸಶಕ್ತ ಸರ್ಕಾರ ಏನೂ ಮಾಡಲಾಗದು.

ಹಿಂದೆಲ್ಲ ಒಂದು ದೇಶದ ಲಗ್ಗೆಗೆ, ಇನ್ನು ನಿಯಂತ್ರಿಸಲು ಸೇನೆಯ ಅಗತ್ಯವಿತ್ತು. ಇಂದು ಇಂಥ ಒಂದು ಬೋರ್ಡ್‌ ರೂಮಿನಲ್ಲಿ ಕ್ಷಣಗಳಲ್ಲಿ ನಿರ್ಧರಿಸಲ್ಪಡುತ್ತವೆ. ಯಾವುದೇ ರಕ್ತಪಾತವಿಲ್ಲದೇ ಇಡೀ ದೇಶ ಜೇಲು ಆಗಿಹೋದೀತು. ಕೋವಿಡ್‌ ನಲ್ಲಿ ಸರ್ಕಾರ ಲಾಕ್‌ ಡೌನ್‌ ಘೋಷಿಸಿ ಇದನ್ನೇ ಮಾಡಿತ್ತು. ಇದೀಗ ಖಾಸಗಿ ಕಂಪನಿಗಳು ತಮ್ಮ ಉದ್ಧಂಡತನ ತೋರುತ್ತಿವೆ.

ಕೇವಲ ಘೋಷಣೆಗಳಿಂದ ವಿಶ್ವ ನಡೆಯುವುದಿಲ್ಲ

ಅಮೆರಿಕಾದ ರಾಷ್ಟ್ರಪತಿ ಡೊನಾಲ್ಡ್ ಟ್ರಂಪ್‌ ರ ಅಸಾಧ್ಯದ ಸುಂಕದ ವಿರುದ್ಧ, ಚೀನಾ ಈ ವರ್ಷ ಅಮೆರಿಕಾದಿಂದ ಸೋಯಾಬೀನ್ ಜೋಳ ಖರೀದಿಸುವುದನ್ನೇ ನಿಲ್ಲಿಸಿಬಿಟ್ಟಿತು. ಹೀಗಾಗಿ ಇಂಥ ಲಕ್ಷಾಂತರ ಟನ್ನುಗಳು ಅಮೆರಿಕಾದಲ್ಲೇ ಕೊಳೆಯುತ್ತಾ ಬಿದ್ದಿವೆ. ಚೀನಾದ ಮೇಲೆ ಹೀಗೆ ಸುಂಕ ಹೇರಿದರು, ಇಂಥ ತೋಟದ ಮಾಲೀಕರಿಂದ ರಾಷ್ಟ್ರಪತಿ ಆಗಿ ಚುನಾಯಿತರಾದ ಅದೇ ಟ್ರಂಪಣ್ಣ! ಒಂದು ವಿಧದಲ್ಲಿ ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಅಮೆರಿಕನ್ನರು ಪರಿತಪಿಸುತ್ತಿದ್ದಾರೆ. ಇದರಲ್ಲಿ ಬಿಳಿಯರು, ಧರ್ಮನಿಷ್ಠ ರೈತರು, ರಿಪಬ್ಲಿಕನ್‌ ಪಾರ್ಟಿಯ ಅಂಧಭಕ್ತರು, ಟ್ರಂಪಣ್ಣನ ತಲೆಬಾಲವಿಲ್ಲದ ನೀತಿಗೆ ಬಲಿಯಾಗುತ್ತಿದ್ದಾರೆ.

18.57 ಶತಕೋಟಿಗಳ ಡಾಲರ್‌ ಗಳಷ್ಟು ಜೋಳನ್ನು ನಿಯಮಿತವಾಗಿ ರಫ್ತು ಮಾಡುತ್ತಿದ್ದ ಅಮೆರಿಕಾದಿಂದ, ಚೀನಾ ತಾನೇ 5.21 ಶತಕೋಟಿಗಳಷ್ಟು ಡಾಲರ್‌ ನ ಜೋಳ ಆಮದು ಮಾಡಿಕೊಳ್ಳುತ್ತಿತ್ತು. ಸೋಯಾಬೀನ್‌ ವ್ಯಾಪಾರ 70-75% ಚೀನಾದ್ದೇ ಆಗಿತ್ತು. ಯಾವಾಗಿನಿಂದ ಟ್ರಂಪಣ್ಣ ಚೀನಾ ವಿರುದ್ಧ ಸುಂಕ ಸಮರ ಸಾರಿದನೋ, ಚೀನಾ ಅಮೆರಿಕಾದಿಂದ ಆಮದು ಮಾಡಿಕೊಳ್ಳುವುದನ್ನೇ ರದ್ದು ಮಾಡಿತು. ಇದೀಗ ಅಮೆರಿಕಾದ ದವಸಧಾನ್ಯ ಕೊಳೆಯತೊಡಗಿದೆ. ಚೀನಾ ತನ್ನ ಹಂದಿಗಳಿಗಾಗಿ ಈ ಪಾಟಿ ಸೋಯಾ ಆಮದು ಮಾಡುತ್ತಿತ್ತು, ಅದನ್ನು ಈಗ ಬ್ರೆಝಿಲ್ ‌ಮತ್ತಿತರ ದೇಶಗಳಿಂದ ಖರೀದಿಸುತ್ತಿದೆ.

ಹೀಗಾಗಿ ಅಮೆರಿಕಾ ಭಾರತದ ಮಾರುಕಟ್ಟೆಯಲ್ಲಿ ತನ್ನ ಈ ಕಚಡಾ ಕೃಷಿ ಉತ್ಪನ್ನ ಮಾರಲು ಯತ್ನಿಸುತ್ತಿದೆ. ಆದರೆ ಇದರಿಂದ ಭಾರತೀಯ ಮಾರುಕಟ್ಟೆ ಒಂದೇ ಸಲ ಮಖಾಡೆ ಮಲಗುವ ಸಾಧ್ಯತೆಗಳಿವೆ. ಇದರಿಂದ ಭಾರತೀಯ ಬಡ ರೈತರು ಮತ್ತಷ್ಟು ಹಸಿವಿನಿಂದ ಸಾಯುತ್ತಾರೆ. ಹೀಗಾಗಿ ಅಮೆರಿಕಾದ ಹಠದಿಂದ ಭಾರತ ತನ್ನ ಮಾರುಕಟ್ಟೆಯನ್ನು ಸಮರ್ಪಿಸಲು ಸಿದ್ಧವಾಗಿಲ್ಲ. ಚೀನಾ ಏನೋ ಖರೀದಿಸಲು ರೆಡಿ, ಆದರೆ ಅಮೆರಿಕಾದಿಂದಲ್ಲ! ಟ್ರಂಪಣ್ಣ ಹಾಗೂ ಆತನ ಕೆಂಪು ಟೋಪಿಯ ತಂಡ, ಎಲ್ಲಿಯವರೆಗೂ ಇದನ್ನು ಮಾರಲು ಹೊಸ ಮಾರುಕಟ್ಟೆ ಹುಡುಕಿಕೊಳ್ಳುವುದಿಲ್ಲವೇ, ಅಲ್ಲಿಯವರೆಗೆ ಅಮೆರಿಕನ್‌ ರೈತರು 2 ಬೆಳೆ ಬೆಳೆದಿರುತ್ತಾರೆ. ಕೋಟ್ಯಂತರ ಅಮೆರಿಕನ್‌ ರೈತರು, ಟ್ರಂಪಣ್ಣನ ಹಠಕ್ಕೆ ಮೂಕ ಬಲಿಪಶು ಆಗಬೇಕಿದೆ.

ಪ್ರಕರಣ ಹೊಲಗದ್ದೆ ಅಥವಾ ಕಾರ್ಖಾನೆಗಳದ್ದೇ ಇರಲಿ, ಯಾವುದೇ ಹೊಸ ಮಾರುಕಟ್ಟೆ ಹುಟ್ಟು ಹಾಕುವುದು ಸುಲಭದ  ವಿಷಯವಲ್ಲ. ಗ್ರಾಹಕರನ್ನು ಗುರುತಿಸಿ ಅವರ ಇಷ್ಟದ ವಸ್ತು ತಯಾರಿಸಿ ಕೊಡುವಲ್ಲಿ ಬಹಳ ಸಮಯ ತಗುಲುತ್ತದೆ. ಅಮೆರಿಕನ್ ರೈತರು ಚೀನಾಗಾಗಿ ಬೆಳೆಯುತ್ತಿದ್ದಂಥ ಸೋಯಾ ಯಾ ಜೋಳಗಳನ್ನು ಬೇರೆಡೆ ಮಾರಾಟ ಮಾಡುವುದು, ಕರ್ನಾಟಕದಲ್ಲಿ ಕನ್ನಡ ಪತ್ರಿಕೆಗಳನ್ನು ಮಾರಿದಷ್ಟೇ ಕಠಿಣಕರ! ಮಾರಾಟ ಮಾಡುವವರು ಆತುರದಲ್ಲಿದ್ದಾರೆ ಎಂದು ಗೊತ್ತಾದರೆ, ಬೇಕೆಂದೇ ಬೆಲೆಯನ್ನು ತಗ್ಗಿಸುತ್ತಾರೆ. ಭಾರತದ ರೈತರ ತರಹ ಅಮೆರಿಕಾದ ರೈತರ ಗತಿಯೂ ಆದೀತು. ಇಲ್ಲಿನಷ್ಟು ಕಡುಕಷ್ಟ ಅಲ್ಲದಿದ್ದರೂ, ಗೋಳಂತೂ ತಪ್ಪುವುದು. ಅಲ್ಲಿನ ಮಧ್ಯವರ್ತಿಗಳೂ ಸಹ ಧಾರಾಳ ಲಾಭದ ಹಣ ಹೊಡೆದುಬಿಡುತ್ತಾರೆ. ಅಮೆರಿಕಾದ ರೈತರು ಸಹ ಸಾಕಷ್ಟು ಸಾಲಬಾಧೆಯಲ್ಲಿ ಮುಳುಗಿದ್ದಾರೆ. ಪಕ್ಕಾ ಧರ್ಮನಿಷ್ಠರಾದ ಅವರು, ತಮ್ಮ ಹೊಸ ಧರ್ಮಗುರು ಪೋಪ್‌ ಟ್ರಂಪಣ್ಣನ ವೋಟರ್‌ ಆಗಿದ್ದೇ ಕುತ್ತಿಗೆಗೆ ಬಂದಿದೆ.

ಇದೀಗ ಅವರು ತಮ್ಮ ಧರ್ಮದ ಕಾರಣ ಹೆಚ್ಚಿನ ಹಾನಿಗೆ ಒಳಗಾಗಬೇಕಿದೆ. ಇದರಿಂದ ಅವರ ನಿಷ್ಠೆ ತಗ್ಗಬಹುದೇ? ಖಂಡಿತಾ ಇಲ್ಲ. ಆದರೆ ಅವರ ಅಚಲಬಂಡೆಯಂಥ ಭಕ್ತಿಯಲ್ಲಿ ಈಗಾಗಲೇ ಬಿರುಕು ಕಾಣಿಸಿದೆ, ಏಕೆಂದರೆ ಬರಿದೇ ಘೋಷಣೆಗಳಿಂದ ವ್ಯವಹಾರ ನಡೆಯದು. ಟ್ರಂಪಣ್ಣನ ಘೋಷಣೆಗಳಿಂದ ಅಮೆರಿಕಾದ ಪ್ರಜೆಗಳು, ಇರಾನ್‌ ಆಫ್ಘಾನಿಸ್ತಾನ್‌ ಗಳಲ್ಲಿ ಅನುಭವಿಸುತ್ತಿರುವ ಯಾತನೆಯನ್ನೇ ಅನುಭವಿಸಬೇಕಾದೀತು. ಹಿಂದೆ ಹಿಟ್ಲರ್‌ ಸ್ಟಾಲಿನ್‌ ರ ಯುಗದಲ್ಲಿ ಯೂರೋಪಿಯನ್ನರು ಹೀಗೇ ನೋವು ಅನುಭವಿಸಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ