ನಟ ಶಿವರಾಜ್ ಕುಮಾರ್ ಅವರು ಮತ್ತೊಮ್ಮೆ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಶಿವಣ್ಣ ಅವರು ಹಿಂದಿ ಭಾಷೆಗೆ ಸಂಬಂಧಿಸಿದಂತೆ ಕೊಟ್ಟಿರುವ ಹೇಳಿಕೆಯು ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಇನ್ನೂ ಹಲವರು ಇದು ಶಿವರಾಜ್ ಕುಮಾರ್ ಅವರ ತಪ್ಪಲ್ಲ. ಈ ಹಿಂದಿನ ತಲೆಮಾರಿಗೆ ಹಿಂದಿ ಭಾಷೆಗೆ ಸಂಬಂಧಿಸಿದಂತೆ ಇರುವ ತಪ್ಪು ತಿಳುವಳಿಕೆ ಎಂದೂ ಕೆಲವರು ಹೇಳಿದ್ದಾರೆ.
ತಮ್ಮ ಮುಂಬರುವ ‘ಒರಿಜಿನಲ್ ಮಾನ್‌ಸ್ಟರ್’ಚಿತ್ರದ ಶೀರ್ಷಿಕೆ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದಾಗ, ನಟ ಶಿವರಾಜ್ಕುಮಾರ್ ಭಾಷೆ ಬಗ್ಗೆ ಎಡವಟ್ಟು ಮಾಡಿಕೊಂಡಿದ್ದರು. ಇದಕ್ಕೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವರು. ಶಿವಣ್ಣ ಹೀಗೆ ಮಾಡಿದರೆ ಹೇಗೆ ಎಂದು ಎಲ್ಲರೂ ಪ್ರಶ್ನಿಸಿದ್ದರು. ಇದಕ್ಕೆ ಅವರು ಈಗ ಸ್ಪಷ್ಟನೆ ನೀಡಿದ್ದು, ತಪ್ಪಾಗಿ ಹಾಗೆ ಮಾತನಾಡಿದೆ ಎಂದು ಕ್ಷಮೆ ಕೋರಿದ್ದಾರೆ.
ಶಿವಣ್ಣ ‘ಒರಿಜಿನಲ್ ಮಾನ್‌ಸ್ಟರ್’ ಸಿನಿಮಾ ಮಾಡುತ್ತಿದ್ದು, ಈ ಚಿತ್ರ ಹಿಂದಿಯಲ್ಲೂ ಬರುತ್ತಿದೆ. ‘ಹಿಂದಿಗೆ ನೀವೇ ಡಬ್ ಮಾಡ್ತೀರಾ’ ಎಂದು ಕೇಳಿದಾಗ, ‘ಕಾಲೇಜು ದಿನಗಳಲ್ಲಿ ಹಿಂದಿ ನನ್ನ ಎರಡನೇ ಭಾಷೆ ಆಗಿತ್ತು. ನನಗೆ ಹಿಂದಿ ಮಾತನಾಡಲು ಬರುತ್ತದೆ. ಅದು ಸುಲಭವಾದ ಭಾಷೆ, ನಮ್ಮ ರಾಷ್ಟ್ರೀಯ ಭಾಷೆ ಎಂದಿದ್ದರು. ಈ ವೀಡಿಯೋ ತುಣುಕು ಸೋಶಿಯಲ್ಸಾ ಮೀಡಿಯಾದಲ್ಮಾಲಿ ವ್ಯಾಪಕವಾಗಿ ವೈರಲ್ ಆಗಿತ್ತು.
ಈ ವಿಷಯ ವಿವಾದ ರೂಪ ಪಡೆದುಕೊಳ್ಳುತ್ತಿದ್ದಂತೆ ಶಿವಣ್ಣ ಈ ಕುರಿತು ತಮ್ಮ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ‘ನಾನು ಸಂವಿಧಾನಾತ್ಮಕ ಅಥವಾ ತಾಂತ್ರಿಕ ಅರ್ಥದಲ್ಲಿ ರಾಷ್ಟ್ರಭಾಷೆ ಎಂದು ಹೇಳಿಲ್ಲ. ಬದಲಿಗೆ ದೇಶದಾದ್ಯಂತ ವ್ಯಾಪಕವಾಗಿ ಮಾತನಾಡಲ್ಪಡುವ ಮತ್ತು ಜನಪ್ರಿಯವಾಗಿರುವ ಭಾಷೆ ಎಂಬ ಸರಳ ಅರ್ಥದಲ್ಲಿ ಆ ಮಾತುಗಳನ್ನು ಆಡಿದ್ದು ಎಂದು ಹೇಳಿದ್ದಾರೆ.
ಕನ್ನಡ ಭಾಷೆ, ನಾಡು-ನುಡಿಯ ಬಗ್ಗೆ ತಮಗಿರುವ ಗೌರವ, ಪ್ರೀತಿ ಎಂದಿಗೂ ಮೊದಲ ಸ್ಥಾನದಲ್ಲೇ ಇರುತ್ತದೆ. ಸಿನಿಮಾ ಪ್ರಚಾರದ ವೇಳೆ ಹಿಂದಿ ಸಂಭಾಷಣೆ, ಡಬ್ಬಿಂಗ್ ಬಗ್ಗೆ ಕೇಳಲಾದ ಪ್ರಶ್ನೆಗೆ ತಕ್ಷಣಕ್ಕೆ ಸರಳವಾಗಿ ಉತ್ತರಿಸುವಾಗ ಈ ಮಾತು ಬಂದಿತ್ತೇ ವಿನಃ ಯಾವುದೇ ಭಾಷಾ ಹೇರಿಕೆಯನ್ನು ಬೆಂಬಲಿಸುವ ಉದ್ದೇಶ ಇದರಲ್ಲಿರಲಿಲ್ಲ ಎಂದು ಹೇಳಿದ್ದಾರೆ.





