ಟೆಕ್ನಾಲಜಿ ಹೆಂಗಸರಿಗೆ ಇದು ವರದಾನವಲ್ಲ
ಅಮೆರಿಕಾದಿಂದ ಇಮಿಂಗ್ರೆಂಟ್ಸ್ ನ್ನು ಓಡಿಸುತ್ತಿದ್ದಾರೆಂದರೆ, ಕಾರಣ ಈಗ ಅಮೆರಿಕನ್ನರಿಗೆ ಟೆಕ್ನಾಲಜಿ ನೆರವಿನಿಂದ ಕರಿಯರು, ಹಳದಿ, ಬೂದು, ವಿಧರ್ಮದವರು, ಕಂದಾಚಾರಿಗಳ ನೆರವಿಲ್ಲದೆ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂಬುದರ ಅರಿವಾಗಿದೆ. ಈಗ ಟ್ಯಾಕ್ಸಿಗಳನ್ನೇ ಗಮನಿಸಿ. ಅಲ್ಲಿ ಹೆಚ್ಚಾಗಿ ಟ್ಯಾಕ್ಸಿ ಡ್ರೈವರ್ ಗಳೆಲ್ಲ ಹೊರದೇಶದವರು. ಕೆಲವರಂತೂ ನಕಲಿ ಡಾಕ್ಯುಮೆಂಟ್ಸ್ ನೆರವಿನಿಂದ ಟ್ಯಾಕ್ಸಿ ಓಡಿಸುತ್ತಿದ್ದಾರೆ, ಕೆಲವರು ವಿದ್ಯಾರ್ಥಿಗಳಿರಬಹುದು, ಯಾ ಬೇರೆಡೆ ಕೆಲಸ ಮಾಡುವ ಪಾರ್ಟ್ ಟೈಮರ್ಸ್ ಇರಬಹುದು.
ಅಲ್ಲಿ ರೈಡ್ ಹೀಲಿಂಗ್ ನ ಬಿಸ್ ನೆಸ್ 50 ಮಿ.ಡಾಲರ್ ಗೂ ಹೆಚ್ಚು. ಇದರಲ್ಲಿ ಹೆಚ್ಚಿನ ಖರ್ಚು ಡ್ರೈವರ್ ಗಳದ್ದೇ! ಊಬರ್ ನಂಥ ಕಂಪನಿಗಳಲ್ಲಿ 50%-70% ಖರ್ಚು ಡ್ರೈವರ್ ಗಳದ್ದೇ ಆಗಿರುತ್ತದೆ. ಇದು ಹೆಚ್ಚೂ ಕಡಿಮೆ ವಿದೇಶಿಗರ ಕೈವಶ ಆಗಿರುತ್ತದೆ. ಅಲ್ಲಿನ ಯುವಪಡೆ ತಮ್ಮ ಬಿಳಿಯ ಕೈಗಳಿಂದ ಸ್ಟೇರಿಂಗ್ ಮುಟ್ಟಿ ಗ್ರೀಸ್ ನಿಂದ ಕೊಳಕಾಗಿಸಿಕೊಳ್ಳಲು ಬಯಸುವುದಿಲ್ಲ. 50 ಮಿ. ಡಾಲರ್ ನ ಬಿಸ್ ನೆಸ್ ಗೆ ಟೆಕ್ನಾಲಜಿ ಸಪೋರ್ಟ್ ದೊರೆತರೆ, ಡ್ರೈವರ್ ರಹಿತ ರೋಬೋ ಟ್ಯಾಕ್ಸಿಗಳು ಅಮೆರಿಕಾದ ಬೀದಿಗಿಳಿಯುತ್ತವೆ. ಇದರಿಂದ ಆ ಧಂಧೆ ಎಷ್ಟೋ ಅಗ್ಗ ಆಗುವುದಲ್ಲದೆ, ಈ ಮಂದಿ ಇತರ ಕರಿಯರು, ವಿದೇಶಿಗಳನ್ನು ಮುಟ್ಟಿಸಿಕೊಳ್ಳುವ, ಸಹಿಸಿಕೊಳ್ಳುವ ಅಗತ್ಯ ಇರುವುದಿಲ್ಲ!
ಮೊದಲಿನಿಂದಲೂ ಅಮೆರಿಕನ್ನರು ವರ್ಣಭೇದ ನೀತಿಯಲ್ಲಿ ನಿಸ್ಸೀಮರು. ಅನಾದಿ ಕಾಲದಿಂದಲೂ ಅಲ್ಲಿಗೆ ಕರಿಯರು ಗುಲಾಮರಾಗಿ ವಲಸೆ ಬಂದಾಗಿನಿಂದ ರೇಸಿಸಮ್ ಅಲ್ಲಿ ಮಾಮೂಲಿ ಆಗಿಹೋಗಿದೆ. ಅಂಥ ಕರಿಯರನ್ನು ಅವರು ನಾಯಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ನಮ್ಮಲ್ಲಿ ಸವರ್ಣೀಯರುಗಳನ್ನು ನಡೆಸಿಕೊಳ್ಳುವಂತೆ. ಇಲ್ಲಿನವರು ಸಮಾನತೆಯ ಹಕ್ಕು ಕೇಳುವಂತೆಯೇ, ಕರಿಯರು 10-15 ವರ್ಷ ಅಲ್ಲೇ ನೆಲೆಸಿದ ಮೇಲೆ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. 400 ವರ್ಷಗಳಿಂದಲೂ ಕರಿಯರು ಅವರಿಗೆ ಗುಲಾಮರಾಗಿ ದುಡಿಯುತ್ತಿದ್ದಾರೆ.
ಈಗಿನವರು ಅಲ್ಲಿನ ನಾಗರಿಕರೆನಿಸಿದ್ದಾರೆ. ಆದರೂ 2ನೇ ದರ್ಜೆ ಪ್ರಜೆಗಳೆನಿಸುತ್ತಾರೆ. ಕಪ್ಪು ಪಂಗಡದ ಬರಾಕ್ ಒಬಾಮಾ ಅವರ ಪ್ರೆಸಿಡೆಂಟ್ ಸಹ ಆದರು. ಕೂದಲೆಳೆಯ ಅಂತರದಲ್ಲಿ ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಸೋತರು. ಆದರೂ ಆಕೆಗೆ ಸೋಶಿಯಲ್ ಯಾ ಎಕನಾಮಿಕ್ ಈಕ್ವಾಲಿಟಿ ಸಿಕ್ಕಿಲ್ಲ. ಅಲ್ಲಿನ ಬಿಳಿಯರು ಟೆಕ್ನಾಲಜಿ ಹಾಗೂ ಚರ್ಚುಗಳ ನೆರವಿನಿಂದ ಈ ಕರಿಯರನ್ನು ಕಂಟ್ರೋಲ್ ಮಾಡುತ್ತಾರೆ, ಹೆಂಗಸರನ್ನು ಬುಗುರಿ ಆಡಿಸುತ್ತಾರೆ, ಇಮಿಗ್ರೆಂಟ್ಸ್ ನ್ನು ಓಡಿಸುತ್ತಾರೆ.
ಈಗ ಡ್ರೈವರ್ ರಹಿತ ಆಟೋಮ್ಯಾಟಿಕ್ ರೋಬೋ ಟ್ಯಾಕ್ಸಿಗೆ, ಪ್ರತಿ ಕಿ.ಮೀ.ಗೆ 79 ಡಾಲರ್ ತಗುಲುತ್ತದೆ, ಅಂದ್ರೆ 700-800 ರೂ. ಅದೇ ಡ್ರೈವರ್ ಸಹಿತ ಗಾಡಿಗೆ ಎಲ್ಲಾ ಕೂಡಿ 175-275 ರೂ. ಮಾತ್ರ!! ತಾವೇ ಗಾಡಿ ಓಡಿಸಿದರೆ ಕೇವಲ 70-80 ರೂ. ಮಾತ್ರ!! ಅಂದ್ರೆ ಟೆಕ್ನಾಲಜಿ ಅಭಿವೃದ್ಧಿ ಹೊಂದುತ್ತಿದ್ದಂತೆ ಈಗ ದುಬಾರಿ ಎನಿಸುವ ಈ ದರ, ಮುಂದೆ ತಗ್ಗಬಹುದೇನೋ…..?
ಅಮೆರಿಕನ್ ಹೆಂಗಸರು ಬಿಳಿಯರು ಅಥವಾ ಕರಿಯರೇ ಆಗಿರಲಿ, ಅವರುಗಳಿಗೆ ಇದರಿಂದ ಭಾರಿ ನಷ್ಟ ತಪ್ಪಿದ್ದಲ್ಲ. ಏಕೆಂದರೆ ಇಂದು ಮಧ್ಯಮವರ್ಗದ ಬಹಳಷ್ಟು ಹೆಂಗಸರು ಮಕ್ಕಳು ದೊಡ್ಡವರಾದ ನಂತರ, ತಾವೇ ಟ್ಯಾಕ್ಸಿ ಓಡಿಸತೊಡಗಿದ್ದಾರೆ. ಇದರಲ್ಲಿ ಹೆಚ್ಚಿನ ಸ್ಕಿಲ್ಸ್ ಬೇಕಿಲ್ಲ. ಈ ರೋಬೋ ಟ್ಯಾಕ್ಸಿಗಳು ನಮ್ಮ ದೇಶಕ್ಕೆ ಬರಲಿ ಬಿಡಲಿ, ಇವು ಹೆಂಗಸರಿಗೆ ಎಲ್ಲೆಡೆ ನಷ್ಟದಾಯಕವೇ! ಹೆಂಗಸರು ಈ ಧಂಧೆಯಿಂದ ಆದಾಯ ಗಳಿಸಬಾರದೆಂಬ ಷಡ್ಯಂತ್ರ ಇದೆ. ಹೆಣ್ಣುಮಕ್ಕಳು ಶಾಲಾಕಾಲೇಜುಗಳ ಓದಿನಲ್ಲಿ ಮುಂದಿದ್ದರೂ, ಕಾರ್ಯ ಸ್ಥಳಗಳಲ್ಲಿ ಹಿಂದುಳಿಯುತ್ತಾರೆ. ಹೀಗಾಗಿ ಅವರಿಗೆ ಅಳಿದುಳಿದ ಕೆಲಸಗಳೂ ಮಾಯವಾಗುತ್ತಿವೆ. ಭಾರತದಲ್ಲಿ ಕಾಮರ್ಸ್ ನಿಂದ ಬಾಡಿಗೆ ಅಂಗಡಿಗಳನ್ನು ನಡೆಸುತ್ತಿರುವ ಹೆಂಗಸರು, ಕೈತಪ್ಪಿ ಹೋಗುತ್ತಿವೆ. ಏಕೆಂದರೆ ಡೆಲಿವರಿಯ ಗುತ್ತಿಗೆ ಇನ್ನೂ ಹುಡುಗಿಯರ ಕೈಗೆ ಸಿಗುತ್ತಿಲ್ಲ. ಈ ಮಹಾನ್ ಟೆಕ್ನಾಲಜಿ ದೆಸೆಯಿಂದ ಹಿಂದುಳಿದವರು, ಅಶಿಕ್ಷಿತರು, ನಗರಕ್ಕೆ ಹೊಸದಾಗಿ ಕೆಲಸ ಹುಡುಕಿಕೊಂಡು ಬರುವವರು, ಮುಖ್ಯವಾಗಿ ಹೆಂಗಸರಿಗೆ ನಷ್ಟ ಎಂದೂ ತಪ್ಪಿದ್ದಲ್ಲ!
ಕಂದಾಚಾರದ ಕೊಡುಗೆ ಇದು ಯಾರಿಂದ ಬಂದದ್ದು?
ಡೆಹರಾಡೂನ್ ಕೇವಲ ಉತ್ತರಾಖಂಡ ರಾಜ್ಯದ ರಾಜಧಾನಿ ಮಾತ್ರವಲ್ಲ, ಅನಾದಿ ಕಾಲದಿಂದ ಈ ನಗರ ಎಲಿಟ್ ಬಗೆಯ ನಗರವೆಂದೇ ಹೆಸರಾಗಿದೆ. ಇಲ್ಲಿ ಹಲವಾರು ಖ್ಯಾತಿವೆತ್ತ ಪಬ್ಲಿಕ್ ಶಾಲೆಗಳಿವೆ. ಹಾಗೆಯೇ ಅತ್ಯುತ್ತಮ ರಿಟೈರ್ ಮೆಂಟ್ ಹೋಮ್ಸ್ ಸಹ ಲಭ್ಯ. ಆಂಗ್ಲರು ಮಸ್ಸೂರಿವರೆಗೂ ತಲುಪಲು ಈ ಊರನ್ನು ವಿಶೇಷವಾಗಿ ಅಭಿವೃದ್ಧಿ ಪಡಿಸಿದರು. ಏಕೆಂದರೆ ಹಿಂದೆಲ್ಲ ಕುದುರೆ ಸವಾರಿ ಒಂದೇ ಅನಿವಾರ್ಯವಗಿತ್ತು. ಆದರೆ ಆಂಗ್ಲರ ದರ್ಬಾರಿನಲ್ಲಿ ಅದು ಅತ್ಯಧಿಕ ಸೌಲಭ್ಯಗಳುಳ್ಳ ಶಾಪಿಂಗ್ ಪಾಯಿಂಟ್ ಆಯ್ತು.
ಇದೀಗ ನಗರ ವಿಸ್ತಾರವಾಗಿ ಬೆಳೆದಂತೆ, ಅದು ಮತ್ತಷ್ಟು ಬೆಟರ್ ಆಗುತ್ತಿದೆ. ಅಲ್ಲಿ ಈಗ ಎಲ್ಲೆಲ್ಲೂ ಸಣ್ಣಪುಟ್ಟ, ಇಕ್ಕಟ್ಟಾದ, ಉತ್ತಮ ಮಟ್ಟದ ಮನೆಗಳನ್ನು ಕಾಣಬಹುದಾಗಿದೆ. ಹಿಂದೆಲ್ಲ ಇದು ಯೂರೋಪ್ ಖಂಡದ ಮನೆಗಳಂತೆಯೇ ಕಾಣುತ್ತಿತ್ತು. ಆಗ ಇವು ಶಾಂತ, ಶುಭ್ರ, ಸೇಫ್, ವೆಲ್ ಆರ್ಗನೈಸ್ಡ್ ಆಗಿದ್ದ. ಇಲ್ಲಿನ ರೆಸಿಡೆನ್ಶಿಯಲ್ ಶಾಲೆಗಳಲ್ಲಿ ಓದು ಮಕ್ಕಳ ಪೋಷಕರು, ಸಾಮಾನ್ಯವಾಗಿ ಹೆಚ್ಚು ದಿನಗಳ ಕಾಲ ಮಕ್ಕಳಿಗಾಗಿ ಇಲ್ಲೇ ಉಳಿಯುತ್ತಿದ್ದರು. ಹೀಗಾಗಿ ಅವರು ಈ ಊರಿಗೆ ಒಂದು ಸ್ಪೆಷಲ್ ಟಚ್ ನೀಡಿದ್ದರು.
ಯಾವಾಗಿನಿಂದ ಭಗವಾ ಗ್ಯಾಂಗ್ ದೇಶದ ಸಮಾಜದ ಮೇಲೆ ಆಕ್ರಮಣ ಶುರು ಮಾಡಿದರೋ, ಈ ಊರು ಸಹ ಇತರ ಊರುಗಳಂತೆಯೇ ಕಂದಾಚಾರಿಗಳ ಕಪಿಮುಷ್ಟಿಗೆ ಸಿಲುಕಿತು. ತಮ್ಮವರಲ್ಲದ ಇತರರ ಮೇಲೆ ಅಧಿಕಾರ ಚಲಾಯಿಸುವುದೇ ಇಲ್ಲಿನ ಕಂದಾಚಾರಿಗಳು ಮೌಲ್ಯಯುತ ಹಿಂದೂ ಹಕ್ಕೆಂದು ಭಾವಿಸುತ್ತಾರೆ. ಇಲ್ಲಿನ ಯುವಜನತೆಯ ತಾಯಂದಿರು ಸಹ ಇತರ ನಗರಗಳಂತೆಯೇ ಕಿಟೀ ಪಾರ್ಟಿಗಳಲ್ಲಿ ಅಲ್ಲಿಗೆ ಬಂದಿರದ ಹೆಂಗಸರನ್ನು ನಿಂದಿಸುತ್ತಾ ಟೈಂಪಾಸ್ ಮಾಡುತ್ತಾರೆ. ಜೊತೆಗೆ ಅಲ್ಲಿ ಇಲ್ಲಿ ತೀರ್ಥಸ್ಥಳಗಳಿಗೆ ಹೋಗಿ, ಆ ಪ್ರಸಾದ ತಂದು ಲೋಕಲ್ ಬೇಕರಿ ಪ್ರಾಡಕ್ಟ್ಸ್ ಜೊತೆ ಹಂಚಿ, ಕಂದಾಚಾರವನ್ನು ಗರಿಷ್ಠ ಮಟ್ಟದಲ್ಲಿ ಹರಡುತ್ತಾರೆ.
ಕಳೆದ ಡಿಸೆಂಬರ್ ನ ಕೊನೆಯಲ್ಲಿ ಶಾಪಿಂಗ್ ನಡೆಸುತ್ತಿದ್ದ ಇಬ್ಬರು ತ್ರಿಪುರಾದ ಕಿಶೋರರ ಕುರಿತಾಗಿ, ಇಂಥ ಅಂಧ ಕಂದಾಚಾರಿ ಹುಡುಗರು, ಅವರನ್ನು ವಿದೇಶಿಗಳೆಂದು ಭಾವಿಸಿ ಚುಡಾಯಿಸಿದ್ದಾರೆ. ನಂತರ ಕೈಕೈ ಮಿಲಾಯಿಸಿ ಮಾರಾಮಾರಿಗೆ ಇಳಿದಿದ್ದಾರೆ. ಲಟಾಪಟಿಯಲ್ಲಿ ತ್ರಿಪುರಾದ ಆ ಹುಡುಗರು ಅಲ್ಲೇ ಸತ್ತುಹೋದರು.
ನಮ್ಮ ದೇಶದಲ್ಲಿ ಅನಾದಿ ಕಾಲದಿಂದಲೂ ಕಂದಾಚಾರಿಗಳ ದೌರ್ಜನ್ಯಕ್ಕೆ ಸಿಲುಕಿ ಸತ್ತ ಎಷ್ಟೋ ಮಂದಿಯಲ್ಲಿ ಇವರೂ ಸೇರಿದರು. ರಾಮಮಂದಿರದ ನಿರ್ಮಾಣದ ಹೆಸರಲ್ಲಿ ಸಾಂವಿಧಾನಿಕವಾಗಿ ಅಲ್ಲದೆ, ಪೂಜಾರಿಗಳ ದರ್ಬಾರಿನಲ್ಲಿ ಮಂದಿರ ಚಲಾಯಿಸಿದಾಗಿನಿಂದ ಇದು ಮಿತಿ ಮೀರಿದೆ. ಅಲ್ಲಿನ ಮನೆ ಮನೆಗಳ ವಿಷಯದಲ್ಲೂ ಪೂಜಾರಿಗಳ ಕೈಚಳಕ ಎದ್ದು ಕಾಣುತ್ತಿದೆ. ಹೊರಗಡೆಯೂ, ಪಾರ್ಲಿಮೆಂಟ್ ನಲ್ಲೂ, ಪೊಲೀಸ್ ಗಿರಿಯಲ್ಲೂ, ಆಡಳಿತದಲ್ಲೂ ಈ ಕಂದಾಚಾರ ಮೇರೆ ಮೀರಿದೆ. ಕಿಟೀ ಪಾರ್ಟಿಗಳಿಂದ ಹಿಡಿದು ರಾಜಕೀಯ ಪಕ್ಷಗಳರೆಗೂ ಇಡೀ ದೇಶವನ್ನು ಡಿಲೈಡ್ ಮಾಡಿಟ್ಟಿದ್ದಾರೆ.
ಪರಿಸ್ಥಿತಿ ಎಲ್ಲಿಗೆ ಮುಟ್ಟಿದೆ ಎಂದರೆ, ಜನ ಸ್ವಿಗ್ಗಿಗಳಿಂದ ಊಟ ತರಿಸುತ್ತಾರೆ. ಆದರೆ ತಂದವನು ಯಾವ ಧರ್ಮದವನು ಎಂದೆಲ್ಲ ಕೇಳುತ್ತಿದ್ದಾರೆ. ವಿಡಂಬನೆ ಎಂದರೆ ಇದೇ ಜನ ವಿದೇಶೀ ಕ್ರೈಸ್ತ ಕಂಪನಿ ತಯಾರಿಸಿದ ಐಫೋನ್ ಗಳನ್ನು ಬಳಸುತ್ತಾರೆ, ಅಮೆರಿಕಾದ ಕೋಕ್ ಹೀರುತ್ತಾರೆ, ಸ್ವಿಸ್ ಚಾಕಲೇಟ್ ಮೆಲ್ಲುತ್ತಾರೆ, ತಮ್ಮ ಗಾಡಿಗಳಲ್ಲಿ ಸೌದಿ ಅರೇಬಿಯಾದಿಂದ ಆಮದಾದ ಪೆಟ್ರೋಲ್ ಬಳಸುತ್ತಾರೆ.
ಧರ್ಮದ ಗುರಿ ಸದಾ ಡಬಲ್ ಸ್ಟಾಂಡರ್ಡ್ ಆಗಿದೆ. ವಿಶ್ವದಲ್ಲಿನ ಪ್ರತಿ ಧರ್ಮ ತಾನೇ ಇತರ ಧರ್ಮಗಳಿಗಿಂತ ಅತಿ ಶುದ್ಧಪವಿತ್ರ ಎಂದು ಡಂಗೂರ ಸಾರುತ್ತಾ, ಕುತರ್ಕ ಸುಳ್ಳಿನ ಸರಮಾಲೆ ಬಳಸುತ್ತದೆ. ಸ್ವಧರ್ಮೀಯರಲ್ಲದವರನ್ನು ಶತ್ರು ಎಂದೇ ಭಾವಿಸುತ್ತದೆ. ಆದರೆ ಅವರುಗಳೊಂದಿಗೆ ವ್ಯವಹಾರ ಮಾತ್ರ ತಪ್ಪಿದ್ದಲ್ಲ. ಅದು ನಾರ್ತ್ ಈಸ್ಟ್ ನವರು ಯಾ ಸಮೀಪದ ಚರ್ಮದ ಕುಟೀರ ಯಾ ಮೋರಿ ಬಾಚುರಿರಬಹುದು.
ತ್ರಿಪುರಾದ ಆ ಹುಡುಗರು ಇಂಥ ಕಂದಾಚಾರಿಗಳಿಗೆ ಬಲಿಯಾದರು. ಇದು ಇಲ್ಲಿಗೇ ಮುಗಿಯುವಂಥದ್ದಲ್ಲ. ಇದು ಇನ್ನೂ ಹೆಚ್ಚಲಿದೆ. ಮುಂದೊಂದು ದಿನ ಭಾರತ ಆಘ್ಘಾನಿಸ್ತಾನ್, ಪಾಕಿಸ್ತಾನ್, ಇರಾನ್ ಗಳಂತೆಯೇ ಆಗಿಹೋಗುವುದರಲ್ಲಿ ಆಶ್ಚರ್ಯವಿಲ್ಲ. ಕಂದಾಚಾರಿಗಳು ತಮ್ಮದೇ ದರ್ಬಾರು ನಡೆಯಲಿ ಎಂಬುದಕ್ಕಾಗಿ ಯಾವ ಹಂತಕ್ಕಾದರೂ ಇಳಿಯಲು ಸಿದ್ಧ. ಇದು ವಿಶ್ವವಿಡೀ ನಡೆಯುತ್ತಿದೆ. ಹಾಗಿರುವಾಗ ನಮ್ಮಲ್ಲಿ ನಡೆಯದೇ?
ಪುಸ್ತಕಗಳು ಮುಖ್ಯವೋ ಯಾ ಮೊಬೈಲೋ?
ಇತ್ತೀಚಿನ ಯಂಗ್ ಪೇರೆಂಟ್ಸ್ ಸದಾ ಚಿಂತೆಗೆ ಒಳಗಾಗಿರುವ ವಿಷಯ ಎಂದರೆ, ಅವರ ಬೆಳೆಯುತ್ತಿರುವ ಮಕ್ಕಳು ತಮ್ಮ ಮೇಲೆ ಬಿಲ್ ಕುಲ್ ಅವಲಂಬಿತರಲ್ಲ, ಅವರನ್ನು ಏನೇ ಕೇಳಿದರೂ ದುರಹಂಕಾರದಿಂದ ಬಾಯಿ ಬಡಿಯುತ್ತಾರೆ ಅಂತ. ಇತ್ತೀಚೆಗೆ 10 ದಾಟಿದ ಮಕ್ಕಳೂ ಸಹ ರೆಬೆಲ್ ಆಗುವ ಲಕ್ಷಣ ತೋರುತ್ತಿವೆ. ತಮ್ಮ ಪ್ರೈವೆಸಿಗೆ ಅತ್ಯಧಿಕ ಮಹತ್ವ ನೀಡುತ್ತಾ ಪೊಸೆಸಿವ್‌ಆಗುತ್ತಿದ್ದಾರೆ. ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ತಿಳಿಯಲು ಪೇರೆಂಟ್ಸ್ ಯತ್ನಿಸಿದರೆ, ಅದು ಅವರಿಗೆ ತಿಳಿಯಬಾರದು ಎಂಬಂತೆ ಈ ಮಕ್ಕಳು ಮಾಡಿಡುತ್ತಾರೆ. ಏಕೆಂದರೆ ಇದೀಗ ಮಕ್ಕಳು ಪೋಷಕರಿಗೆ ಮುಚ್ಚಿಟ್ಟ ಪುಸ್ತಕ ಅಲ್ಲವಲ್ಲ….. ಪಾಸ್ ವರ್ಡ್ ನಿಂದ ಬಂಧಿಸಲ್ಪಟ್ಟ ಮೊಬೈಲ್ ತರಹ ಆಗಿಹೋಗಿದ್ದಾರೆ.
ಇದರ ಹೊಣೆ ಯಾರದು? ಸಮಾಜ, ಮೊಬೈಲ್ ನ ಸೋಶಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ಸ್, ಟಿವಿ ಚಾನೆಲ್, ಇಂಟರ್ ನೆಟ್ ಮೇಲೆಯೇ ಹೊರಿಸಲಾಗುತ್ತದೆ. ಆದರೆ ಈ ಬ್ಲೇಮ್ ನೇರವಾಗಿ ಪೋಷಕರದೇ! ಏಕೆಂದರೆ ಕಳೆದ 40 ವರ್ಷಗಳಿಂದ ದೇಶದಲ್ಲಿ ವೈರ್ ಲೆಸ್ ನ ಒಂದು ದೊಡ್ಡ ಅಟ್ಮಾಸ್ಛಿಯರ್ ಕ್ರಿಯೇಟ್ ಆಗಿದೆ.
ಬಿಜೆಪಿ ವತಿಯಿಂದ ಶುರುವಾದ ಹಿಂದೂ ಮುಸ್ಲಿಂ ವಿವಾದದ ಅಧಿಕಾರದಾಹ, ಇದೀಗ ಮನೆಮನೆಯಲ್ಲೂ ಪ್ರವೇಶಿಸಿದೆ.
ಇಂದು ಡೈನಿಂಗ್ ಟೇಬಲ್ ಯಾ ಡ್ರಾಯಿಂಗ್ ರೂಮ್ ಇರಲಿ, ಎಲ್ಲೆಲ್ಲೂ ಹಿಂದೂಮುಸ್ಲಿಂ ಬೋಧನೆ ಮಾಮೂಲಿ ಆಗಿಹೋಗಿದೆ. ದಲಿತರಿಗೆ ಸಿಗುತ್ತಿರುವ ರಿಸರ್ವೇಶನ್ ವಿಷಯವನ್ನು ಮತ್ತೆ ಮತ್ತೆ ಪುನರಾವರ್ತಿಸುತ್ತಾ, ಏನು ಬೋಧಿಸಲಾಗುತ್ತಿದೆ ಎಂದರೆ, ನಮ್ಮ ಸಮಾಜದಲ್ಲಿನ ಕೆಲವು ಜನ, ಎಲ್ಲರಿಗೆ ಸರಿಸಮಾನರಾಗಿ ಇರಲು ಹುಟ್ಟಿನಿಂದಲೇ ಅರ್ಹರಲ್ಲ, ಈ ಹಾಳು ಸಂವಿಧಾನ ಅದನ್ನು ಅವರಿಗೇಕೆ ಕೊಡುತ್ತಿದೆಯೋ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.
ಮಕ್ಕಳನ್ನು ಆಂಗ್ಲ ಮಾಧ್ಯಮಗಳಲ್ಲಿ ಓದಿಸಿ ತಮ್ಮ ಮಿತಿ ಮೀರಿದ ಖರ್ಚಿನ ಹೊರೆ ಹೊರುತ್ತಾರೆ. ಅದು ಈ ಪೇರೆಂಟ್ಸ್ ನ ವಿವಾದಗಳಲ್ಲಿ ಎದ್ದು ಕಾಣಿಸುತ್ತದೆ, ಅದು ಬೆಳೆಯುತ್ತಿರುವ ಮಕ್ಕಳ ಎದುರೇ ಪತಿಪತ್ನಿ ಕಿತ್ತಾಡುವುದು ಮಾಮೂಲಾಗಿದೆ. ಆಂಗ್ಲ ಮಾಧ್ಯಮ ಶಾಲೆಗಳಲ್ಲಿ, ಅಕ್ಕಪಕ್ಕದಲ್ಲಿ ನೆರೆಯ ಕ್ಲಾಸ್ ಮೇಟ್ ಇರಲೇಬಾರದು ಎಂಬಂತೆ ಆಗಿಹೋಗಿದೆ. ಬೆಳೆಯುತ್ತಿರುವ ಮಕ್ಕಳಿಗೆ ತಮ್ಮ ಸಮಾನವಯಸ್ಕ ಮಕ್ಕಳು ಸಿಗುವುದು ದುಸ್ತರವಾಗುತ್ತಿದೆ. ಹೀಗಾಗಿ ಅವರು ಹೆಚ್ಚು ಸೆಲ್ಫ್ ಸೆಂಟರ್ಡ್‌ಆಗುತ್ತಿದ್ದಾರೆ.
ಗಾಯದ ಮೇಲೆ ಆ್ಯಸಿಡ್ ಎರಚುವೆತೆ, ಪೇರೆಂಟ್ಸ್ ಈಗ ಮಕ್ಕಳನ್ನು ಮನೆಯ ದಾದಿ ವಶಕ್ಕೆ ಒಪ್ಪಿಸಿ ತಂತಮ್ಮ ಮನರಂಜನೆಯಲ್ಲಿ ಮುಳುಗುತ್ತಿದ್ದಾರೆ. ಹಠಮಾರಿ ಮಕ್ಕಳನ್ನು ಲಾಲಿಸುವುದು ಹೇಗೆ ಎಂದೇ ಅವರಿಗೆ ತಿಳಿಯುತ್ತಿಲ್ಲ. ಏಕೆಂದರೆ ಈ ಆಧುನಿಕ ಪೇರೆಂಟ್ಸ್ ಗೆ ಮಕ್ಕಳು ಆಟಿಕೆ ಸಮಾನ ಯಾ ಸಮಸ್ಯೆಯ ಪ್ರತಿರೂಪ. ಪೇರೆಂಟ್ಸ್ ಸ್ವತಃ ತಾವು ಯಾವ ಪುಸ್ತಕವನ್ನೂ ಓದುವುದಿಲ್ಲ ಅಥವಾ ಮಕ್ಕಳನ್ನೂ ಓದಿಸುವುದಿಲ್ಲ. ಇದರ ಪರಿಣಾಮವಾಗಿ ಬೆಳೆಯುತ್ತಿರುವ ಅವರ ಮಕ್ಕಳು ಮೊಬೈಲ್ ನಲ್ಲಿ ಅಡಲ್ಟ್ ಚಿತ್ರ ನೋಡುತ್ತಾ ಕಾಲ ಕಳೆಯುತ್ತಿದ್ದಾರೆ.
ಆ ಮಕ್ಕಳಿಗೆ ಆರಂಭದಲ್ಲಿ ಈ ಅಡಲ್ಟ್ ಚಿತ್ರಗಳ, ಅದರ ಜ್ಞಾನ ಬಲು ಗಮ್ಮತ್ತು ಎನಿಸುತ್ತದೆ. ಆದರೆ ಕ್ರಮೇಣ ಮೊಬೈಲ್ ಕಂಟೆಂಟ್‌ಅನ್ ಎಡಿಟೆಡ್ ಹಾಗೂ ಇರ್‌ರೆಸ್ಪಾನ್ಸಿಬಲ್ ಆಗಿದ್ದು, 10 ವರ್ಷದವರು ಮಾತ್ರವಲ್ಲ, 30+ನವರು ಸಹ ನೋಡಲಿಕ್ಕೆ ಲಾಯಕ್ ಅಲ್ಲ ಎಂದು ಅರಿವಾಗುವಷ್ಟರಲ್ಲಿ ಕಾಲ ಮಿಂಚಿ ಹೋಗಿರುತ್ತದೆ. ಬಿಟ್ಟಿ ಎಂದಾಗ ಕಸ ತಾನೇ ಸಿಗುವುದು? ಇಂಥ ಕಸದ ಜೊತೆ ಆಟವಾಡುತ್ತಾ ಬೆಳೆಯುವ ಮಕ್ಕಳ ಬೌದ್ಧಿಕ ಮಟ್ಟ ಕಸವೇ ಆಗಿಹೋಗುತ್ತದೆ. ಹೀಗಾಗಿ ಆಧುನಿಕ ಪೇರೆಂಟ್ಸ್ ಈ ಬ್ಲೇಮ್ ಗೇಮ್ ನಲ್ಲಿ ತಾವೇ ನಂ.1 ಎಂಬುದನ್ನು ನಿರ್ಲಕ್ಷಿಸಬಾರದು.





