ಟೆಕ್ನಾಲಜಿ ಹೆಂಗಸರಿಗೆ ಇದು ವರದಾನವಲ್ಲ

ಅಮೆರಿಕಾದಿಂದ ಇಮಿಂಗ್ರೆಂಟ್ಸ್ ನ್ನು ಓಡಿಸುತ್ತಿದ್ದಾರೆಂದರೆ, ಕಾರಣ ಈಗ ಅಮೆರಿಕನ್ನರಿಗೆ ಟೆಕ್ನಾಲಜಿ ನೆರವಿನಿಂದ ಕರಿಯರು, ಹಳದಿ, ಬೂದು, ವಿಧರ್ಮದವರು, ಕಂದಾಚಾರಿಗಳ ನೆರವಿಲ್ಲದೆ ತಮ್ಮ ಕೆಲಸ ಮಾಡಿಕೊಳ್ಳಬಹುದು ಎಂಬುದರ ಅರಿವಾಗಿದೆ. ಈಗ ಟ್ಯಾಕ್ಸಿಗಳನ್ನೇ ಗಮನಿಸಿ. ಅಲ್ಲಿ ಹೆಚ್ಚಾಗಿ ಟ್ಯಾಕ್ಸಿ ಡ್ರೈವರ್‌ ಗಳೆಲ್ಲ ಹೊರದೇಶದವರು. ಕೆಲವರಂತೂ ನಕಲಿ ಡಾಕ್ಯುಮೆಂಟ್ಸ್ ನೆರವಿನಿಂದ ಟ್ಯಾಕ್ಸಿ ಓಡಿಸುತ್ತಿದ್ದಾರೆ, ಕೆಲವರು ವಿದ್ಯಾರ್ಥಿಗಳಿರಬಹುದು, ಯಾ ಬೇರೆಡೆ ಕೆಲಸ ಮಾಡುವ ಪಾರ್ಟ್‌ ಟೈಮರ್ಸ್ ಇರಬಹುದು.

ಅಲ್ಲಿ ರೈಡ್‌ ಹೀಲಿಂಗ್‌ ನ ಬಿಸ್‌ ನೆಸ್‌ 50 ಮಿ.ಡಾಲರ್‌ ಗೂ ಹೆಚ್ಚು. ಇದರಲ್ಲಿ ಹೆಚ್ಚಿನ ಖರ್ಚು ಡ್ರೈವರ್‌ ಗಳದ್ದೇ! ಊಬರ್‌ ನಂಥ ಕಂಪನಿಗಳಲ್ಲಿ 50%-70% ಖರ್ಚು ಡ್ರೈವರ್‌ ಗಳದ್ದೇ ಆಗಿರುತ್ತದೆ. ಇದು ಹೆಚ್ಚೂ ಕಡಿಮೆ ವಿದೇಶಿಗರ ಕೈವಶ ಆಗಿರುತ್ತದೆ. ಅಲ್ಲಿನ  ಯುವಪಡೆ ತಮ್ಮ ಬಿಳಿಯ ಕೈಗಳಿಂದ ಸ್ಟೇರಿಂಗ್‌ ಮುಟ್ಟಿ ಗ್ರೀಸ್‌ ನಿಂದ ಕೊಳಕಾಗಿಸಿಕೊಳ್ಳಲು ಬಯಸುವುದಿಲ್ಲ. 50 ಮಿ. ಡಾಲರ್ ನ ಬಿಸ್‌ ನೆಸ್‌ ಗೆ ಟೆಕ್ನಾಲಜಿ ಸಪೋರ್ಟ್‌ ದೊರೆತರೆ, ಡ್ರೈವರ್‌ ರಹಿತ ರೋಬೋ ಟ್ಯಾಕ್ಸಿಗಳು ಅಮೆರಿಕಾದ ಬೀದಿಗಿಳಿಯುತ್ತವೆ. ಇದರಿಂದ ಆ ಧಂಧೆ ಎಷ್ಟೋ ಅಗ್ಗ ಆಗುವುದಲ್ಲದೆ, ಈ ಮಂದಿ ಇತರ ಕರಿಯರು, ವಿದೇಶಿಗಳನ್ನು ಮುಟ್ಟಿಸಿಕೊಳ್ಳುವ, ಸಹಿಸಿಕೊಳ್ಳುವ ಅಗತ್ಯ ಇರುವುದಿಲ್ಲ!

ಮೊದಲಿನಿಂದಲೂ ಅಮೆರಿಕನ್ನರು ವರ್ಣಭೇದ ನೀತಿಯಲ್ಲಿ ನಿಸ್ಸೀಮರು. ಅನಾದಿ ಕಾಲದಿಂದಲೂ ಅಲ್ಲಿಗೆ ಕರಿಯರು ಗುಲಾಮರಾಗಿ ವಲಸೆ ಬಂದಾಗಿನಿಂದ ರೇಸಿಸಮ್ ಅಲ್ಲಿ ಮಾಮೂಲಿ ಆಗಿಹೋಗಿದೆ. ಅಂಥ ಕರಿಯರನ್ನು ಅವರು ನಾಯಿಗಳಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಾ ಬಂದಿದ್ದಾರೆ. ನಮ್ಮಲ್ಲಿ ಸವರ್ಣೀಯರುಗಳನ್ನು ನಡೆಸಿಕೊಳ್ಳುವಂತೆ. ಇಲ್ಲಿನವರು ಸಮಾನತೆಯ ಹಕ್ಕು ಕೇಳುವಂತೆಯೇ, ಕರಿಯರು 10-15 ವರ್ಷ ಅಲ್ಲೇ ನೆಲೆಸಿದ ಮೇಲೆ ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ. 400 ವರ್ಷಗಳಿಂದಲೂ ಕರಿಯರು ಅವರಿಗೆ ಗುಲಾಮರಾಗಿ ದುಡಿಯುತ್ತಿದ್ದಾರೆ.

ಈಗಿನವರು ಅಲ್ಲಿನ ನಾಗರಿಕರೆನಿಸಿದ್ದಾರೆ. ಆದರೂ 2ನೇ ದರ್ಜೆ ಪ್ರಜೆಗಳೆನಿಸುತ್ತಾರೆ. ಕಪ್ಪು ಪಂಗಡದ ಬರಾಕ್‌ ಒಬಾಮಾ ಅವರ ಪ್ರೆಸಿಡೆಂಟ್‌ ಸಹ ಆದರು. ಕೂದಲೆಳೆಯ ಅಂತರದಲ್ಲಿ ಕಮಲಾ ಹ್ಯಾರಿಸ್‌ ಚುನಾವಣೆಯಲ್ಲಿ ಸೋತರು. ಆದರೂ ಆಕೆಗೆ ಸೋಶಿಯಲ್ ಯಾ ಎಕನಾಮಿಕ್‌ ಈಕ್ವಾಲಿಟಿ ಸಿಕ್ಕಿಲ್ಲ. ಅಲ್ಲಿನ ಬಿಳಿಯರು ಟೆಕ್ನಾಲಜಿ ಹಾಗೂ ಚರ್ಚುಗಳ ನೆರವಿನಿಂದ ಈ ಕರಿಯರನ್ನು ಕಂಟ್ರೋಲ್ ‌ಮಾಡುತ್ತಾರೆ, ಹೆಂಗಸರನ್ನು ಬುಗುರಿ ಆಡಿಸುತ್ತಾರೆ, ಇಮಿಗ್ರೆಂಟ್ಸ್ ನ್ನು ಓಡಿಸುತ್ತಾರೆ.

ಈಗ ಡ್ರೈವರ್‌ ರಹಿತ ಆಟೋಮ್ಯಾಟಿಕ್‌ ರೋಬೋ ಟ್ಯಾಕ್ಸಿಗೆ, ಪ್ರತಿ ಕಿ.ಮೀ.ಗೆ 79 ಡಾಲರ್‌ ತಗುಲುತ್ತದೆ, ಅಂದ್ರೆ 700-800 ರೂ. ಅದೇ ಡ್ರೈವರ್‌ ಸಹಿತ ಗಾಡಿಗೆ ಎಲ್ಲಾ ಕೂಡಿ 175-275 ರೂ. ಮಾತ್ರ!! ತಾವೇ ಗಾಡಿ ಓಡಿಸಿದರೆ ಕೇವಲ 70-80 ರೂ. ಮಾತ್ರ!! ಅಂದ್ರೆ ಟೆಕ್ನಾಲಜಿ ಅಭಿವೃದ್ಧಿ ಹೊಂದುತ್ತಿದ್ದಂತೆ ಈಗ ದುಬಾರಿ ಎನಿಸುವ ಈ ದರ, ಮುಂದೆ ತಗ್ಗಬಹುದೇನೋ.....?

ಅಮೆರಿಕನ್‌ ಹೆಂಗಸರು ಬಿಳಿಯರು ಅಥವಾ ಕರಿಯರೇ ಆಗಿರಲಿ, ಅವರುಗಳಿಗೆ ಇದರಿಂದ ಭಾರಿ ನಷ್ಟ ತಪ್ಪಿದ್ದಲ್ಲ. ಏಕೆಂದರೆ ಇಂದು ಮಧ್ಯಮವರ್ಗದ ಬಹಳಷ್ಟು ಹೆಂಗಸರು ಮಕ್ಕಳು ದೊಡ್ಡವರಾದ ನಂತರ, ತಾವೇ ಟ್ಯಾಕ್ಸಿ ಓಡಿಸತೊಡಗಿದ್ದಾರೆ. ಇದರಲ್ಲಿ ಹೆಚ್ಚಿನ ಸ್ಕಿಲ್ಸ್ ‌ಬೇಕಿಲ್ಲ. ಈ ರೋಬೋ ಟ್ಯಾಕ್ಸಿಗಳು ನಮ್ಮ ದೇಶಕ್ಕೆ ಬರಲಿ ಬಿಡಲಿ, ಇವು ಹೆಂಗಸರಿಗೆ ಎಲ್ಲೆಡೆ ನಷ್ಟದಾಯಕವೇ! ಹೆಂಗಸರು ಈ ಧಂಧೆಯಿಂದ ಆದಾಯ ಗಳಿಸಬಾರದೆಂಬ ಷಡ್ಯಂತ್ರ ಇದೆ. ಹೆಣ್ಣುಮಕ್ಕಳು ಶಾಲಾಕಾಲೇಜುಗಳ ಓದಿನಲ್ಲಿ ಮುಂದಿದ್ದರೂ, ಕಾರ್ಯ ಸ್ಥಳಗಳಲ್ಲಿ ಹಿಂದುಳಿಯುತ್ತಾರೆ. ಹೀಗಾಗಿ ಅವರಿಗೆ ಅಳಿದುಳಿದ ಕೆಲಸಗಳೂ ಮಾಯವಾಗುತ್ತಿವೆ. ಭಾರತದಲ್ಲಿ ಕಾಮರ್ಸ್‌ ನಿಂದ ಬಾಡಿಗೆ ಅಂಗಡಿಗಳನ್ನು ನಡೆಸುತ್ತಿರುವ ಹೆಂಗಸರು, ಕೈತಪ್ಪಿ ಹೋಗುತ್ತಿವೆ. ಏಕೆಂದರೆ ಡೆಲಿವರಿಯ ಗುತ್ತಿಗೆ ಇನ್ನೂ ಹುಡುಗಿಯರ ಕೈಗೆ ಸಿಗುತ್ತಿಲ್ಲ. ಈ ಮಹಾನ್‌ ಟೆಕ್ನಾಲಜಿ ದೆಸೆಯಿಂದ ಹಿಂದುಳಿದವರು, ಅಶಿಕ್ಷಿತರು, ನಗರಕ್ಕೆ ಹೊಸದಾಗಿ ಕೆಲಸ ಹುಡುಕಿಕೊಂಡು ಬರುವವರು, ಮುಖ್ಯವಾಗಿ ಹೆಂಗಸರಿಗೆ ನಷ್ಟ ಎಂದೂ ತಪ್ಪಿದ್ದಲ್ಲ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ