ಕಿರುಚಾಡಿ ಮತ್ತಷ್ಟು ಜೋರಾಗಿ ಕಿರುಚಾಡಿ : ನೋಡೋಣ, ನೀವು ಇನ್ನೆಷ್ಟು ಜೋರಾಗಿ ಕಿರುಚಬಲ್ಲಿರಿ ಅಂತ! ಇಂಥ ಒಂದು ಕಾಂಪಿಟಿಶನ್‌ ನಡೆದದ್ದು, ಜಪಾನಿನ ಶೌಟಿಂಗ್‌ ಐಲ್ಯಾಂಡಿನಲ್ಲಿ! ಈ ದ್ವೀಪದ ಹಳ್ಳಿಯ ಜನರೆಲ್ಲರೂ ಜನವರಿ 1 ರಂದು ಒಂದೆಡೆ ಒಟ್ಟಾಗಿ ಸೇರಿ ಜೋರು ಜೋರಾಗಿ ಕಿರುಚಾಡುತ್ತಾರೆ, ಇದನ್ನು ಗಮನಿಸುವ ವೀಕ್ಷಕರು ಇವರಲ್ಲಿ ಯಾರು ಗಟ್ಟಿಗರೆಂದು ಘೋಷಿಸುತ್ತಾರೆ.

loud-voice2

`ನರೋಟೋಬರೋಟೋ’ ಹೆಸರಿನ ಈ ಹಬ್ಬ, ಅಲ್ಲಿನ ಸ್ಥಳೀಯರಲ್ಲಿ ಬಲು ಪಾಪ್ಯುಲರ್‌. ಇದನ್ನು ಕೇಳಲೆಂದೇ/ನೋಡಲೆಂದೇ ಹೊರಗಿನಿಂದಲೂ ಅಸಂಖ್ಯಾತ ಜನ ಸೇರುತ್ತಾರೆ. ಇದೊಳ್ಳೆ ಮಜಾ ಅಲ್ವಾ?

Nutcracker-5

ಬರಲಿ ಜೋರಾಗಿ ಚಪ್ಪಾಳೆ ! : ನಟ್‌ ಕ್ರಾಕರ್‌, ವೆಸ್ಟ್ ನ ಒಂದು ಪಾಪ್ಯುಲರ್‌ ಪ್ಲೇ ಎನಿಸಿದೆ. ಇದು ವಿದೇಶಗಳಲ್ಲಿ ಪ್ರತಿ ಶಾಲೆಯಲ್ಲೂ ವರ್ಷಕ್ಕೆ 2-4 ಸಲ ನಡೆಯುತ್ತಿರುತ್ತದೆ. ರಷ್ಯನ್‌ ಲೇಖಕ ಚೈಕೋಸ್ಕೀನ ನಾಟಕಗಳೆಂದರೆ, ಅಲ್ಲಿನ ಮಕ್ಕಳಿಗೆ ಅಚ್ಚುಮೆಚ್ಚು. ಅಮೆರಿಕಾದ ಉಟಾಹ್‌ ಎಂಬದಲ್ಲಿ ಇದು ಕ್ರಿಸ್‌ ಮಸ್‌ ಸೀಸನ್‌ ನಲ್ಲಿ ವೇದಿಕೆ ಮೇಲೆ ಪ್ರದರ್ಶಿಸಲಾದ ನಾಟಕ. ಈ ಮಕ್ಕಳ ಪೇರೆಂಟ್ಸ್ ಇದನ್ನು ವೀಕ್ಷಿಸಲು ಹಾಲ್ ‌ತುಂಬಾ ತುಂಬಿರುತ್ತಾರೆ. ಇಂಥ ನಾಟಕಗಳನ್ನು ವೇದಿಕೆ ಮೇಲೆ ಪ್ರದರ್ಶಿಸುವುದರಿಂದ ಅಲ್ಲಿನ ವಿದ್ಯಾರ್ಥಿಗಳಿಗೆ ಸಿಗುವ ಜ್ಞಾನ, ಖಂಡಿತಾ ಕ್ಲಾಸ್‌ ರೂಮಿನ ಪಠ್ಯದಿಂದ ಸಿಗುವುದಿಲ್ಲ. ಇವುಗಳ ರಿಹರ್ಸ್‌ ನಲ್ಲೇ ಸಾವಿರಾರು ಬಾರಿ `ನೀನಾ ನಾನಾ’ ಎಂದು ಜಗಳಗಳವಾಗುತ್ತವೆ. ಆದರೆ ಕೊನೆಯಲ್ಲಿ ಪ್ರೇಕ್ಷಕರ ಕಿವಿಗಡಚಿಕ್ಕುವ ಕರತಾಡನದಿಂದ ಎಲ್ಲವೂ ಸುಖಾಂತ್ಯ!

winter-revels-2025-3

ಚಮತ್ಕಾರದ ನಿರೀಕ್ಷೆ ಇಲ್ಲಿ ಬೇಕಾರ್‌ : ರಾಮಾಯಣ, ಮಹಾಭಾರತ, ಪಂಚತಂತ್ರ, ಅಲ್ಲಾದ್ದೀನ್‌, ಈಸೋಪನ ಕಥೆಗಳು ವಿಶ್ವದ ಎಲ್ಲಾ ಸಂಸ್ಕೃತಿಯಲ್ಲೂ ಕಂಡು ಬರುತ್ತವೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಇದಕ್ಕೆ ಯಾರು ಅತಿಯಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ಅಂಡಾಲೂಸಿಯನ್‌ ಟ್ರೆಶರ್ಸ್‌ ಎಂಬ ಕಥೆಗಳು ಸ್ಪೇನ್‌ ಇತ್ಯಾದಿ ದೇಶಗಳಲ್ಲಿ ಬಹಳಷ್ಟು ಕೇಳಿ ಬರುತ್ತವೆ. ವರ್ಷದಲ್ಲಿ 12 ಸಲ ಇವುಗಳನ್ನು ಅಲ್ಲಿನ ಎಲ್ಲಾ ಹಳ್ಳಿ, ನಗರಗಳ ವೇದಿಕೆಗಳಲ್ಲಿ ಪ್ರದರ್ಶಿಸಲಾಗುತ್ತದೆ. ಈ ನಾಟಕಗಳಲ್ಲಿ ಚಮತ್ಕಾರಗಳೂ ನಡೆಯುತ್ತವೆ, ಆದರೆ ಪಾಶ್ಚಿಮಾತ್ಯರು ಈ ಚಮತ್ಕಾರಗಳನ್ನು ತಮ್ಮ ಪೂರ್ವಜರ ವೈಜ್ಞಾನಿಕ ಆವಿಷ್ಕಾರಗಳೊಂದಿಗೆ ಜೋಡಿಸಲು ಹೋಗುವುದಿಲ್ಲ.

cherry-growers-australia-hong-k

ಮಾರಿದಾಗ ತಾನೇ ವ್ಯಾಪಾರ : ಇತ್ತೀಚೆಗೆಲ್ಲ ಫಾರ್ಮ್ ಪ್ರಾಡಕ್ಟ್ಸ್ ನ್ನು ಮಾರಾಟ ಮಾಡಲು ಸಹ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ. ಆಸ್ಟ್ರೇಲಿಯಾದ ಚೆರ್ರೀ ಹಣ್ಣು ಬಲು ಉತ್ತಮ ಎನಿಸಿದೆ. ಆದರೆ ಇದನ್ನು ಹಾಂಕಾಂಗಿನ ಈಟಿಂಗ್‌ ಜಾಯಿಂಟ್ಸ್ ನಲ್ಲಿ ಮಾರಾಟ ಮಾಡಲು, ಅಲ್ಲಿನ ರೈತರು ತಮ್ಮ ಇಡೀ ಮಾರಾಟಗಾರರ ತಂಡದೊಡನೆ ಹಾಂಕಾಂಗ್‌ ತಲುಪಿ ಚೆರ್ರೀ ತಿನ್ನಿಸಿದರು. ಈ ಚಿತ್ರದಲ್ಲಿನ ಹಿನ್ನೆಲೆಯಲ್ಲಿ ಕಾಣುವ ಚೆರ್ರೀ ಹಣ್ಣಿನಷ್ಟೇ ನೈಜವಾಗಿ ಆ ಹಣ್ಣಿನ ಗಾತ್ರ ಇರುತ್ತದೋ ಇಲ್ಲವೋ ಹೇಳಲಾಗದು, ಆದರೆ ಪರಿಶ್ರಮಪಟ್ಟು ಮಾರಾಟ ಮಾಡಿದಾಗ ಮಾತ್ರ ವ್ಯಾಪಾರ ನಡೆದೀತೇ ಹೊರತು, ಮನೆಯಲ್ಲಿ ಕೂರುವುದರಿಂದ ಅಲ್ಲ!

healthyline-newyear-copy

ಫಿಜಿಕಲಿ ಸಂಧಿಸಿ, ಡಿಜಿಟಲಿ ಅಲ್ಲ! : ಹೆಚ್ಚುತ್ತಿರುವ ಏಜಿಂಗ್‌ ಪಾಪ್ಯುಲೇಶನ್‌ ಗಾಗಿ, ಹಳೆಯ ಫೆಸ್ಟಿವ್ ‌ರಿಲಿಜನ್‌ ನೊಂದಿಗೆ ಸಂಬಂಧ ಹೊಂದಿಲ್ಲ, ತಮ್ಮ ಬಂಧುಬಾಂಧವರೊಂದಿಗೆ ಬೆರೆಯಲು ಒಂದು ನೆನಪಷ್ಟೆ. ಇಂದಿನ ಯಂಗ್‌ ಜನರ ಬಳಿ ಹಣ ಇಲ್ಲ, ಸಮಯ ಇಲ್ಲ. ಹೀಗಾಗಿ ಅವರು ಹಬ್ಬಗಳ ನೆಪದಲ್ಲಿ ಏಜ್ಡ್ ರಿಲೇಟಿವ್ಸ್ ಅಥವಾ ಪೇರೆಂಟ್ಸ್ ಆದರೂ ಸರಿ, ಯಾವಾಗಲೋ ಅಪರೂಪಕ್ಕೆ ಸಂಧಿಸುತ್ತಾರೆ. ಹೀಗಾಗಿ ಅವರು ಹಬ್ಬಗಳ ನಿರೀಕ್ಷೆಯಲ್ಲಿರುತ್ತಾರೆ. ಅದು ಕ್ರಿಸ್‌ಮಸ್‌, ನ್ಯೂ ಇಯರ್‌, ಯುಗಾದಿ ಯಾ ದೀಪಾವಳಿ ಇರಬಹುದು. ಹೀಗೆ ನಮ್ಮವರು ಎನಿಸಿಕೊಂಡವರನ್ನು ಸಂಧಿಸಲು ಕಾರಣ ಹುಡುಕುತ್ತಾ ಕೂರಬೇಡಿ, ಅವರನ್ನು ನೇರವಾಗಿ ಹೋಗಿ ಭೇಟಿಯಾಗಬೇಕೇ ಹೊರತು ಡಿಜಿಟಲ್ ಮೆಸೇಜ್‌ ಗಳಿಂದಲ್ಲ! ನೀವು ಅವರನ್ನು ನಿರ್ಲಕ್ಷಿಸಿದರೆ, ಅವರ ಮುಂದಿನ ಪೀಳಿಗೆಯಾದ ಜೆನ್‌, ನಿಮ್ಮನ್ನು ಇನ್ನಷ್ಟು ಮತ್ತಷ್ಟು ನಿರ್ಲಕ್ಷಿಸುತ್ತಾರೆ. ಏಕೆಂದರೆ ಈ ನವ ಪೀಳಿಗೆಗೆ ಒಡಹುಟ್ಟಿದರು, ತಾಯಿತಂದೆ ಯಾ ಅಜ್ಜಿ ತಾತಾ ಯಾರೂ ಬೇಕಿಲ್ಲ.

blue-origin-astronauts-sarah-kn

ಪ್ರಶಸ್ತಿ ಪಡೆದ ಖುಷಿ : ಇದೀಗ ಗ್ಲೋಬಲ್ ಸ್ಪೇಸ್‌ ಅವಾರ್ಡ್ಸ್ ಸಹ ಕೊಡಲ್ಪಡುತ್ತಿವೆ. ಇದು ಸ್ಪೇಸ್‌ ಅಡ್ವೆಂಚರ್‌, ರಿಸರ್ಚ್‌ ಹಾಗೂ ಇನೋವೇಶನ್‌ ನಲ್ಲಿ ವಿಶಿಷ್ಟ ಸಾಧನೆ ಮಾಡಿದವರಿಗಾಗಿ. ಸಾರಾ ಒಬ್ಬ ನೈಟ್‌ ಆ್ಯಸ್ಟ್ರೋನಾಟ್‌, ಈಕೆಗೆ ಪ್ರಶಸ್ತಿ ನೀಡಿದರು ಆಸ್ಟ್ರೋನಾಟ್‌, ಜೆ.ಡಿ. ರಸೇಲ್‌. ಇತ್ತೀಚೆಗ ಸ್ಪೇಸ್‌ ನಲ್ಲಿ ಖಾಸಗಿ ಕಂಪನಿಗಳು ಸಹ ದೊರಕುತ್ತಿವೆ, ಹೀಗಾಗಿ ಈಗ ಇದು ಸರ್ಕಾರದ ಮಾನೋಪೋಲಿ ಅಲ್ಲ, ಏಕೆಂದರೆ ಈ ಸ್ಪೇಸ್‌ ಪ್ರೋಗ್ರಾಮ್ ನಿಂದಲೇ ಸ್ಯಾಟಲೈಟ್‌ ನಡೆಯುತ್ತಿದೆ. ಇದರ ಕಾರಣವೇ ಎಲ್ಲಾ ಮೊಬೈಲ್ ‌ಗಳಲ್ಲೂ ಜಿಪಿಎಸ್‌ ನಡೆಯುತ್ತಿವೆ. ಈಗ ಸ್ಪೇಸ್‌ ಲಿಂಕ್‌ ಸಹ ಬರುತ್ತಿವೆ, ಇದರಿಂದ ಸಿಗ್ನಲ್ ಔಟ್‌ ಆಫ್‌ ಆರ್ಡರ್ ಆಗುವ ಗೋಜಿಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ