ರೇಸಿಂಗ್ ಪ್ರಮೋಷನ್ಸ್ ಪ್ರೈವೇಟ್ ಲಿಮಿಟೆಡ್ (RPPL) ಆಯೋಜಿಸುವ ಪ್ರತಿಷ್ಠಿತ ‘ಇಂಡಿಯನ್ ರೇಸಿಂಗ್ ಫೆಸ್ಟಿವಲ್’(IRF) 2026ರ ಹೊಸ ಆವೃತ್ತಿಗೆ ಅದ್ಧೂರಿ ಚಾಲನೆ ದೊರೆಯಲಿದೆ.

ಇದರ ಭಾಗವಾಗಿ ನಡೆಯಲಿರುವ ‘ಎಫ್4 (F4) ಇಂಡಿಯನ್ ಚಾಂಪಿಯನ್‌ಶಿಪ್ 2026’ರ ಮೊದಲ ಸುತ್ತಿನ ರೇಸ್‌ಗೆ ಸೆಪ್ಟೆಂಬರ್ 12 ಮತ್ತು 13ರಂದು ಕೊಯಮತ್ತೂರಿನ ಕಾರಿ ಮೋಟಾರ್ ಸ್ಪೀಡ್‌ವೇಯಲ್ಲಿ ಚಾಲನೆ ದೊರೆಯಲಿದೆ.

ಈ ಬಾರಿಯ ರೇಸಿಂಗ್ ಸೀಸನ್‌ನಲ್ಲಿ ದೇಶದ ಪ್ರಮುಖ ರೇಸಿಂಗ್ ಟ್ರ್ಯಾಕ್‌ಗಳಲ್ಲಿ F4 ಚಾಂಪಿಯನ್‌ಶಿಪ್‌ನ ಆರು ಸುತ್ತುಗಳು ಹಾಗೂ ‘ಇಂಡಿಯನ್ ರೇಸಿಂಗ್ ಲೀಗ್’ (IRL)ನ ನಾಲ್ಕು ಸುತ್ತುಗಳ ರೋಮಾಂಚಕ ಸ್ಪರ್ಧೆಗಳು ನಡೆಯಲಿವೆ. ಡಿಸೆಂಬರ್‌ನಲ್ಲಿ ನವಿ ಮುಂಬೈ ಸ್ಟ್ರೀಟ್ ಸರ್ಕ್ಯೂಟ್‌ನಲ್ಲಿ ನಡೆಯಲಿರುವ ಐತಿಹಾಸಿಕ ‘ಸ್ಟ್ರೀಟ್ ರೇಸ್’ ಮೂಲಕ ಈ ಬಾರಿಯ ರೇಸಿಂಗ್ ಹಬ್ಬಕ್ಕೆ ತೆರೆ ಬೀಳಲಿದೆ.ಎಫ್‌ಐಎ (FIA) ಪ್ರಮಾಣೀಕೃತ ‘ಎಫ್4 ಇಂಡಿಯನ್ ಚಾಂಪಿಯನ್‌ಶಿಪ್’ ಕೊಯಮತ್ತೂರಿನಿಂದ ಆರಂಭವಾಗಲಿದ್ದು, ನವಿ ಮುಂಬೈನಲ್ಲಿ ನಡೆಯಲಿರುವ ಅಂತಿಮ ಸುತ್ತಿನೊಂದಿಗೆ ಮುಕ್ತಾಯಗೊಳ್ಳಲಿದೆ.

ಭಾರತೀಯ ನೆಲದಲ್ಲಿ ನಡೆಯುವ ಈ ಚಾಂಪಿಯನ್‌ಶಿಪ್‌ ಮುಂದಿನ ಪೀಳಿಗೆಯ ‘ಸಿಂಗಲ್-ಸೀಟರ್’ ಚಾಲಕರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು, ಅಮೂಲ್ಯ ರೇಸಿಂಗ್ ಅನುಭವ ಪಡೆಯಲು ಹಾಗೂ ಪ್ರಮುಖ ‘ಸೂಪರ್ ಲೈಸೆನ್ಸ್’ ಅಂಕಗಳನ್ನು ಗಳಿಸಲು ಉತ್ತಮ ವೇದಿಕೆ ಕಲ್ಪಿಸಲಿದೆ. ಈ ಬಾರಿಯ ರೇಸಿಂಗ್ ಗ್ರಿಡ್‌ನಲ್ಲಿ ಎಂಟು ದೇಶಗಳನ್ನು ಪ್ರತಿನಿಧಿಸುವ ಚಾಲಕರು ಒಟ್ಟು ಎಂಟು ತಂಡಗಳ ಪರವಾಗಿ ಕಣಕ್ಕಿಳಿಯಲಿದ್ದಾರೆ.

ಅಕ್ಟೋಬರ್‌ನಲ್ಲಿ ಇಂಡಿಯನ್ ರೇಸಿಂಗ್ ಲೀಗ್ ಕೂಡ ಸ್ಪರ್ಧೆಗೆ ಕಣಕ್ಕಿಳಿಯಲಿದೆ. ನಾಲ್ಕು ಸುತ್ತುಗಳ ಈ ಲೀಗ್ ಅಕ್ಟೋಬರ್ 24 ಮತ್ತು 25ರಂದು ಚೆನ್ನೈನ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಆರಂಭವಾಗಲಿದೆ. 2026ರ ಇಂಡಿಯನ್ ರೇಸಿಂಗ್ ಲೀಗ್‌ನಲ್ಲಿ ಆರು ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. ಅವುಗಳೆಂದರೆ – ಕಿಚ್ಚ ಸುದೀಪ್ ಮಾಲೀಕತ್ವದ ಕಿಚ್ಚಾಸ್ ಕಿಂಗ್ಸ್ ಬೆಂಗಳೂರು, ಜಾನ್ ಅಬ್ರಹಾಂ ಮಾಲೀಕತ್ವದ ಗೋವಾ ಏಸಸ್ ಜೆಎ ರೇಸಿಂಗ್, ಸೌರವ್ ಗಂಗೂಲಿ ನೇತೃತ್ವದ ಕೋಲ್ಕತ್ತಾ ರಾಯಲ್ ಟೈಗರ್ಸ್, ನಾಗ ಚೈತನ್ಯ ಮಾಲೀಕತ್ವದ ಹೈದರಾಬಾದ್ ಬ್ಲ್ಯಾಕ್‌ಬರ್ಡ್ಸ್, ಅರ್ಜುನ್ ಕಪೂರ್ ಬೆಂಬಲಿತ ಸ್ಪೀಡ್ ಡೀಮನ್ಸ್ ದೆಹಲಿ ಹಾಗೂ ಅಕಾರ್ಡ್ ಗ್ರೂಪ್ ಮಾಲೀಕತ್ವದ ಚೆನ್ನೈ ಟರ್ಬೋ ರೈಡರ್ಸ್.ಈ ನಡುವೆ, ಎಫ್4 ಇಂಡಿಯನ್ ಚಾಂಪಿಯನ್‌ಶಿಪ್ ಭಾರತ ಹಾಗೂ ವಿದೇಶಗಳ ಮುಂದಿನ ಪೀಳಿಗೆಯ ಸಿಂಗಲ್-ಸೀಟರ್ ಚಾಲಕರ ಪ್ರತಿಭೆಯನ್ನು ಅನಾವರಣಗೊಳಿಸಲಿದೆ. 2026ರ ಗ್ರಿಡ್‌ನಲ್ಲಿ ಎಂಟು ರಾಷ್ಟ್ರೀಯತೆಗಳನ್ನು ಪ್ರತಿನಿಧಿಸುವ ಚಾಲಕರು ಸ್ಪರ್ಧಿಸಲಿದ್ದಾರೆ. ಅವರಲ್ಲಿ ಆರನ್ ಮೆಹ್ತಾ (ಸಿಂಗಾಪುರ), ಸ್ವರ್ಣವ್ ದಾಸ್ (ಭಾರತ), ಸಾಯಿ ಆದಿತ್ಯ (ಅಮೆರಿಕ/ಭಾರತ), ಅನಯ್ ದೋಷಿ (ಕೀನ್ಯಾ), ಭುವನ್ ಬೋನು (ಭಾರತ), ಶ್ರವಣ್ ಶಣ್ಮುಗವೇಲ್ (ಯುನೈಟೆಡ್ ಕಿಂಗ್‌ಡಮ್), ಕೃಷಯ್ ಗುಟ್ಟೆ (ಭಾರತ), ಆರ್ಯನ್ ನರೋಲಾ (ಅಮೆರಿಕ/ಭಾರತ), ಮಹ್ಲೋರಿ ಮಬುಂಡಾ (ದಕ್ಷಿಣ ಆಫ್ರಿಕಾ), ಎಂಜೊ ರುಜುಗಿರೊ (ದಕ್ಷಿಣ ಆಫ್ರಿಕಾ), ಲುವಿವೆ ಸಾಂಬುದ್ಲಾ (ದಕ್ಷಿಣ ಆಫ್ರಿಕಾ), ಎನ್‌ತಿಸಿಯೋ ಮಬುಂಡಾ (ದಕ್ಷಿಣ ಆಫ್ರಿಕಾ), ಮಥಿಯಾಸ್ ಅಲೆಕ್ಸಾಂಡರ್ ಫೋರ್ಲಾಂಡ್ (ನಾರ್ವೆ) ಮತ್ತು ಅರಿಸ್ ಕಿರಿಯಾಕೌ (ಆಸ್ಟ್ರೇಲಿಯಾ) ಸೇರಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ