ಈ ಬೇಸಿಗೆಯಲ್ಲಿ ಯಾ ರೀತಿ ಹೆಣ್ಣುಮಕ್ಕಳು ತಮ್ಮ ದೇಹಾರೋಗ್ಯದ ಕಡೆ ಗಮನ ಕೊಡಬೇಕು ಎಂದು ವಿವರವಾಗಿ ತಿಳಿಯೋಣವೇ….?
ಬೇಸಿಗೆಯಲ್ಲಿ ನಾವು ನಮ್ಮ ಆರೋಗ್ಯದ ಕುರಿತಾಗಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಇದರಲ್ಲಿ ಪೌಷ್ಟಿಕ ಆಹಾರದ ಡಯೆಟ್, ವ್ಯಾಯಾಮ, ಯೋಗ ಎಲ್ಲವನ್ನೂ ಸರಿಯಾಗಿ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಇದರಿಂದ ಮಾತ್ರ ನಾವು ನಮ್ಮ ದೇಹವನ್ನು ಫಿಟ್ & ಫೈನ್ ಆಗಿ ಇರಿಸಿಕೊಳ್ಳಬಹುದು. ಇದಕ್ಕಾಗಿ ನಿಯಮಿತ ರೂಪದಲ್ಲಿ ಒಂದು ಹೆಲ್ದಿ ಡಯೆಟ್ ಪ್ಲಾನ್, ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ನಮ್ಮ ದೈಹಿಕ ಸ್ವಾಸ್ಥ್ಯ ಮಾತ್ರವಲ್ಲದೆ, ಮಾನಸಿಕ ಆರೋಗ್ಯ ಎಷ್ಟೋ ಪಟ್ಟು ಸುಧಾರಿಸುತ್ತದೆ, ಟೆನ್ಶನ್ ದೂರವಾಗಿ ನೆಮ್ಮದಿ ಎನಿಸುತ್ತದೆ.
ಪರ್ಫೆಕ್ಟ್ ಲೈಫ್ ಸ್ಟೈಲ್, ಹೆಲ್ದಿ ಡಯೆಟ್, ನಿಯಮಿತ ಸಮಯಕ್ಕೆ ಮಲಗುವುದು, ಏಳುವುದು, ದುರಭ್ಯಾಸಗಳಿಂದ ದೂರ ಉಳಿಯುವುದು, ಲಾಂಗ್ ಲಾಕ್, ಬ್ರಿಸ್ಕ್ ವಾಕ್, ಜಾಗಿಂಗ್, ಯೋಗ, ಸೈಕ್ಲಿಂಗ್, ಮೆಡಿಟೇಶನ್, ಸಕಾಲಕ್ಕೆ ಸರಿಯಾಗಿ ಧಾರಾಳ ನೀರು ಕುಡಿಯುವುದು ಇತ್ಯಾದಿ ಎಲ್ಲವನ್ನೂ ಸಮರ್ಪಕವಾಗಿ ಗಮನಿಸಿಕೊಂಡಾಗ ಈ ಬೇಸಿಗೆಯಲ್ಲಿ ನಾವು ಸದಾ ಆರೋಗ್ಯ ಸೌಂದರ್ಯ ಹೊಂದಿ ನಳನಳಿಸುತ್ತಾ ಇರಬಹುದು.
ದೇಹವನ್ನು ಸದಾ ಫಿಟ್ & ಫೈನ್ ಆಗಿರಿಸುವಲ್ಲಿ ವ್ಯಾಯಾಮದ ಮಹತ್ವ : ನಿಯಮಿತ ವ್ಯಾಯಾಮಗಳು ನಮ್ಮ ಹೆಚ್ಚುತ್ತಿರುವ ವಯಸ್ಸಿನ ವೇಗಕ್ಕೆ ತುಸು ಕಡಿವಾಣ ಹಾಕಿ ನಾವು ಸದಾ ಯೌವನ ಉಳಿಸಿಕೊಳ್ಳುವಂತೆ ಮಾಡುತ್ತದೆ. ಇದರಿಂದ ನಾವು ಹೆಚ್ಚು ಚುರುಕಾಗಿ, ಸದಾ ಆರೋಗ್ಯಕರವಾಗಿ ಇರಬಹುದು. ದೇಹವನ್ನು ಸದಾ ಫಿಟ್& ಫೈನ್ ಆಗಿರಿಸಿಕೊಳ್ಳಲು, ನಾವು ಪ್ರತಿದಿನ ಬೆಳಗ್ಗೆ ಕನಿಷ್ಠ 1 ಗಂಟೆ ಕಾಲ ವ್ಯಾಯಾಮ ಮಾಡಲೇಬೇಕು. ಇದಕ್ಕಾಗಿ ನೀವು ಯೋಗ, ಏರೋಬಿಕ್ಸ್, ಕಾರ್ಡಿಯೋ, ಸ್ಟ್ರೆಂಥ್ ಟ್ರೇನಿಂಗ್, ಬ್ಯಾಲೆನ್ಸಿಂಗ್‌ಫ್ಲೆಕ್ಸಿಬಿಲಿಟಿ, ಬ್ರಿಸ್ಕ್ ವಾಕಿಂಗ್, ಜಾಗಿಂಗ್, ಸ್ಕಿಪ್ಪಿಂಗ್, ಈಜು ಇತ್ಯಾದಿ ರೂಢಿಸಿಕೊಳ್ಳಿ. ಇದಕ್ಕಾಗಿ ವಾರದಲ್ಲಿ ಇಂತಿಂಥ ದಿನ ಇದಿರಲಿ ಎಂದು ಟೈಂಟೇಬಲ್ ಹಾಕಿಕೊಳ್ಳಿ. ಉದಾ: ಏರೋಬಿಕ್ಸ್ 2 ದಿನ, ಸ್ಟ್ರೆಂಥ್ ಟ್ರೇನಿಂಗ್ 2 ದಿನ, ಜಾಗಿಂಗ್ ಈಜು 2 ದಿನ….. ಹೀಗೆ ಬ್ಯಾಲೆನ್ಸ್ ಮಾಡಿ. ನೀವು ಈ ವ್ಯಾಯಾಮಗಳಲ್ಲಿ ಜುಂಬಾ ಯಾ ಡ್ಯಾನ್ಸ್ ಸಹ ಸೇರಿಸಿಕೊಳ್ಳಬಹುದು. ಕೆಲವು ಕಾರಣಗಳಿಂದ ನಿಯಮಿತವಾಗಿ ಮನೆಯಲ್ಲಿ ವ್ಯಾಯಾಮ ಮಾಡಲಾಗದಿದ್ದರೆ, ಅಗತ್ಯವಾಗಿ ಹೊರಗಿನ ಜಿಮ್ ಯಾ ಯೋಗ ಅಟೆಂಡ್ ಮಾಡಿ. ಒಟ್ಟಾರೆ ಯಾವುದಾದರೂ ಫಿಟ್ ನೆಸ್ ಕ್ಲಾಸ್ ಆಗಿರಬೇಕು, ಅಷ್ಟೆ.

ವ್ಯಾಯಾಮದಿಂದ ಆಗುವ ಲಾಭ : ಇದರಿಂದ ನಮ್ಮ ದೇಹದ ಮೆಟಬಾಲಿಸಂ ರೇಟ್ ಹೆಚ್ಚುತ್ತದೆ. ಆ ಕಾರಣದಿಂದ ನಮ್ಮ ಪಚನಕ್ರಿಯೆ, ರಕ್ತ ಸಂಚಾರ, ಮಲಮೂತ್ರ ವಿಸರ್ಜನೆ, ಉಸಿರಾಟ ಇತ್ಯಾದಿ ಎಲ್ಲವೂ ಚುರುಕಾಗುತ್ತದೆ. ಸುಸ್ತುಸಂಕಟ ನಿವಾರಣೆಗೊಂಡು ದೇಹದಲ್ಲಿ ಹೆಚ್ಚಿನ ಲವಲವಿಕೆ ಮೂಡುತ್ತದೆ. ಆಟೋಮೆಟಿಕಲಿ ದೇಹ ತೂಕ ನಿಯಂತ್ರಣ ಕಂಟ್ರೋಲಿಗೆ ಬರುತ್ತದೆ.
ನಮ್ಮ ಮಾಂಸಖಂಡಗಳನ್ನು ಸದಾ ಸ್ವಸ್ಥವಾಗಿಟ್ಟುಕೊಳ್ಳಬೇಕು. ಇದರಿಂದ ನಮಗೆ ಮೈಕೈ ನೋವು ತಗ್ಗಿ ಸುಸ್ತುಸಂಕಟ ದೂರವಾಗಿ, ರಕ್ತ ಸಂಚಾರ ವರ್ಧಿಸುತ್ತದೆ. ಇದರಿಂದ ಮೆದುಳಿಗೆ ರಕ್ತ ಸಂಚಾರ ಹೆಚ್ಚುವುದರಿಂದ, ಬುದ್ಧಿ ಸಹ ಎಷ್ಟೋ ಚುರುಕಾಗುತ್ತದೆ, ಸಕಾರಾತ್ಮಕ ಆಲೋಚನ ಮೂಡುತ್ತದೆ. ಹೊಸ ಬ್ರೇನ್ ಸೆಲ್ಸ್ ಡೆವಲಪ್ ಆಗಲು ನೆರವಾಗುತ್ತದೆ.
ವ್ಯಾಯಾಮ ನಮ್ಮ ಟೆನ್ಶನ್ ತಗ್ಗಿಸುತ್ತದೆ. ಶುಗರ್, ಬಿ.ಪಿ ಚಿಂತೆಗಳು ಎಷ್ಟೋ ತಗ್ಗುತ್ತವೆ. ನಿಯಮಿತ ವ್ಯಾಯಾಮದಿಂದ ದೇಹದಲ್ಲಿ ಹಾನಿಕಾರಕ ಕೊಲೆಸ್ಟ್ರಾಲ್ ಎಷ್ಟೋ ತಗ್ಗುತ್ತದೆ. ಉತ್ತಮ ಕೊಲೆಸ್ಟ್ರಾಲ್ ಮಟ್ಟ ಕ್ರಮೇಣ ಹೆಚ್ಚುತ್ತದೆ. ಇದರಿಂದ ಹೃದ್ರೋಗದ ಟೆನ್ಶನ್ಸ್ ದೂರವಾಗಿ, ಹೃದಯದ ಆರೋಗ್ಯ ಸುಧಾರಿಸುತ್ತದೆ. ನಮ್ಮ ಲಂಗ್ಸ್ ಗೆ ಹೇರಳ ಆಮ್ಲಜನಕ ತಲುಪಿ, ಎಲ್ಲಾ ಚಟುವಟಿಕೆಗಳೂ ಸಕ್ರಿಯಗೊಳ್ಳುತ್ತವೆ. ಹೀಗಾಗಿ ನಾವು ಕಾರ್ಡಿಯಾಕ್ ಅರೆಸ್ಟ್, ಹಾರ್ಟ್ ಆಟ್ಯಾಕ್, ಸ್ಟ್ರೋಕ್, ಹೃದ್ರೋಗಗಳು ಇತ್ಯಾದಿ ಎಲ್ಲಾ ಮೇಜರ್ ರೋಗಗಳಿಂದಲೂ ಪಾರಾಗುತ್ತೇವೆ.
ಏರೋಬಿಕ್ಸ್ ನಿಂದಾಗಿ ಒಂದು ಬಗೆಯ ಕಾರ್ಡಿಯೋ ವ್ಯಾಸ್ಕ್ಯುಲಾರ್ ಕಂಡೀಶನಿಂಗ್ ಯಾ ಕಾರ್ಡಿಯೋ ಪ್ರಕಾರವೇ ಆಗಿದೆ. ಇದರಲ್ಲಿ ಬ್ರಿಸ್ಕ್ ವಾಕಿಂಗ್, ಜಾಗಿಂಗ್, ಈಜು, ಸೈಕ್ಲಿಂಗ್ ಇತ್ಯಾದಿ ಚಟುವಟಿಕೆಗಳೂ ಶಾಮೀಲಾಗಿರುತ್ತವೆ. ಒಬ್ಬ ಯುವತಿ ಪ್ರತಿದಿನ 45-60 ನಿಮಿಷಗಳವರೆಗೂ ಇಂಥ ವ್ಯಾಯಾಮಗಳನ್ನು ಮಾಡಲೇಬೇಕು. ಇಷ್ಟು ಮಾತ್ರ ಅಲ್ಲದೆ, ನೀವು ಎಂಥ ವ್ಯಾಯಾಮ ಮಾಡುತ್ತಿದ್ದೀರಿ ಎಂಬುದು ನಿಮ್ಮ ವ್ಯಾಯಾಮದ ಟೈಮಿಂಗ್ ನ್ನು ಅವಲಂಬಿಸಿದೆ. ಹೈಇಂಟೆನ್ಸಿಟಿ ಎಕ್ಸರ್ ಸೈಜ್ ಗಳನ್ನು ಹೆಚ್ಚು ಹೊತ್ತು ಅಭ್ಯಾಸ ಮಾಡಿಕೊಳ್ಳಬಾರದು. ಇದರ ಹೊರತಾಗಿ ಪೌಷ್ಟಿಕ ಆಹಾರ ಸೇವನೆಯೂ ಅಷ್ಟೇ ಮುಖ್ಯ, ಬಾಯಿ ಚಪಲಕ್ಕೆ ಜಂಕ್ ಫುಡ್, ಫಾಸ್ಟ್ ಫುಡ್ ಸೇವಿಸುತ್ತಾ ಇರಬೇಡಿ.

ಸ್ಟ್ರೆಂಥ್ ಟ್ರೇನಿಂಗ್ ಎಕ್ಸರ್ ಸೈಜ್ : ಈ ವ್ಯಾಯಾಮ ಮಾಂಸಖಂಡಗಳನ್ನು ಸಶಕ್ತಗೊಳಿಸಲು ಹೆಚ್ಚು ನೆರವಾಗುತ್ತದೆ. ಇದರಿಂದ ದೇಹದಲ್ಲಿ ಬಳಕುವಿಕೆ ಹೆಚ್ಚುತ್ತದೆ, ಮೆಟಬಾಲಿಸಂ ಸುಧಾರಿಸುತ್ತದೆ. ಜೊತೆಗೆ ಟೈಪ್ ಡಯಾಬಿಟೀಸ್‌ಕಾರ್ಡಿಯೋ ವ್ಯಾಸ್ಕ್ಯುಲಾರ್ ರೋಗಗಳ ಅಪಾಯವನ್ನೂ ತಗ್ಗಿಸುತ್ತದೆ.
ಸ್ಟ್ರೆಂಥ್ ಟ್ರೇನಿಂಗ್ ಗಾಗಿ ನೀವು ಪುಶ್ ಅಪ್ಸ್, ಸ್ಕ್ವಾಟ್ಸ್ (ಬಸ್ಕಿ), ವೇಟ್ ಲಿಫ್ಟಿಂಗ್ ಇತ್ಯಾದಿ ಸೇರಿಸಿಕೊಳ್ಳಬಹುದು. ಬ್ಯಾಲೆನ್ಸಿಂಗ್ ಫ್ಲೆಕ್ಸಿಬಿಲಿಟಿ, ಇಂಥ ವ್ಯಾಯಾಮದ ಅತಿ ಮುಖ್ಯ ಘಟ್ಟ. ಇಲ್ಲಿ ಫೆಕ್ಸಿಪಬಿಲಿಟಿ ಅಂದ್ರೆ ನಮ್ಮ ದೇಹದ ಜಾಯಿಂಟ್ಸ್ ಮಸಲ್ಸ್ ಗೆ ಪೂರಕ ಶಕ್ತಿ ತುಂಬಿಸುವುದಾಗಿದೆ. ಇದು ಓಪನ್ ಆಗಿದ್ದು, ಸಕ್ರಿಯ ಚಟುವಟಿಕೆಗೆ ಪೂರಕವಾಗಬೇಕು. ದೇಹದ ಎಲಾಸ್ಟಿಸಿಟಿಗೆ ಇವೆಲ್ಲ ಪೂರಕ.
ನಿಮ್ಮ ಡಯೆಟ್ ಹೇಗಿರಬೇಕು? : ನಮ್ಮ ದೇಹಕ್ಕೆ ಸತತ ಎನರ್ಜಿಯ ಅಗತ್ಯವಿರುತ್ತದೆ, ಆಗ ಮಾತ್ರ ದೇಹ ಸಕ್ರಿಯವಾಗಿ ಎಲ್ಲಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯ. ಇದಕ್ಕಾಗಿ ಹೆಲ್ದಿ ಪೌಷ್ಟಿಕ ಆಹಾರ ಸೇವನೆ ಅತಿ ಅವಶ್ಯಕ. ಇದರಿಂದಾಗಿ ಮಾತ್ರ ದೇಹ ಹೊಸ ಹೊಸ ಜೀವಕೋಶಗಳನ್ನು ರೂಪಿಸಲು ಸಾಧ್ಯ. ಆ ನೆಪದಲ್ಲಿ ಹಳೆಯ ಜೀವಕೋಶಗಳು ಮೃತಪಟ್ಟು ಮುಕ್ತಾಗುತ್ತವೆ. ಹೊಸ ಜೀವಕೋಶಗಳ ನಿರ್ಮಾಣಕ್ಕಾಗಿ ಆವಶ್ಯಕ ಪೌಷ್ಟಿಕಾಂಶಗಳು ಅಧಿಕ ಪ್ರಮಾಣದಲ್ಲಿ ದೊರೆತಾಗ ಮಾತ್ರ, ಇದೆಲ್ಲ ಸಲೀಸಾಗಿ ನಡೆಯುತ್ತದೆ, ದೇಹ ಬ್ಯಾಲೆನ್ಸ್ಡ್ ಆಗಿರುತ್ತದೆ.
ಯಾವ ಆಹಾರ ಬೇಕು? ಯಾವುದು ಬೇಡ? : ನೀವು ನಿಮ್ಮ ದೇಹವನ್ನು ಸದಾ ಸ್ವಚ್ಛವಾಗಿ ಇರಿಸಿಕೊಳ್ಳಲು ಬಯಸಿದರೆ, ಬ್ಯಾಲೆನ್ಸ್ಡ್ ಡಯೆಟ್ ತೆಗೆದುಕೊಳ್ಳಬೇಕಾದುದು ಅತ್ಯಗತ್ಯ. ನಾವು ಸೇವಿಸುವ ಆಹಾರದಲ್ಲಿ ಎಲ್ಲಾ ಬಗೆಯ ಪೌಷ್ಟಿಕಾಂಶಗಳೂ ಪ್ರಮಾಣಬದ್ಧವಾಗಿ ಬೆರೆತಿರಬೇಕು. ಅಂದ್ರೆ ಕಾರ್ಬೋಹೈಡ್ರೇಟ್, ಲಿಪಿಡ್, ಪ್ರೋಟೀನ್, ವಿಟಮಿನ್, ಮಿನರಲ್ಸ್ ಇತ್ಯಾದಿ. ಅದಕ್ಕೆ ಪೂರಕವಾಗಿ ನೀರು ಕುಡಿಯುತ್ತಿರಬೇಕು. ಹಾಗೆಯೇ ತಾಜಾ ಹಸಿರು ತರಕಾರಿ, ಹಣ್ಣುಹಂಪಲು ಸೇವನೆಯೂ ಅತ್ಯಗತ್ಯ. ಹಸಿ ತರಕಾರಿ ಸಲಾಡ್, ಬೇಳೆಕಾಳುಗಳ ಕೋಸಂಬರಿ, ಮೊಳಕೆ ಕಟ್ಟಿದ ಕಾಳು, ಹಾಲು, ಮೊಸರು, ತುಪ್ಪ, ಮೊಟ್ಟೆ, ನಟ್ಸ್, ಬಗೆ ಬಗೆಯ ಬೀನ್ಸ್, ಫೈಬರ್ ತುಂಬಿದ ಪದಾರ್ಥ, ವೈಟ್ ಮೀಟ್ ಇತ್ಯಾದಿ ಇರಲಿ.
ನಿಮ್ಮ ದೈನಂದಿನ ಆಹಾರವಾದ ಬೆಳಗಿನ ತಿಂಡಿ, ಮಧ್ಯಾಹ್ನದ ಲಂಚ್, ರಾತ್ರಿ ಊಟ ಇತ್ಯಾದಿಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಸೂಕ್ತ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿ ಸಲದ ಆಹಾರವನ್ನೂ ನಿಗದಿತ ಸಮಯಕ್ಕೇ ತೆಗೆದುಕೊಳ್ಳಬೇಕು. ಆಗ ಮಾತ್ರ ದೇಹ ಸದಾ ಆರೋಗ್ಯಕರ ಆಗಿರುತ್ತದೆ. ಇದರ ಜೊತೆ ಇಮ್ಯುನಿಟಿ ಹೆಚ್ಚಿಸಿಕೊಳ್ಳಲು, ನಿಮ್ಮ ಆಹಾರದಲ್ಲಿ ಅರಿಶಿನ, ಬೆಳ್ಳುಳ್ಳಿ, ನಿಂಬೆ, ಬೆಟ್ಟದನೆಲ್ಲಿ, ಅಮೃತಬಳ್ಳಿ, ತುಳಸಿ, ಪುದೀನಾ, ಕೊ.ಸೊಪ್ಪು, ವಿಟಮಿನ್‌ತುಂಬಿದ ಹಣ್ಣು ತರಕಾರಿ ಇತ್ಯಾದಿಗಳು ಶಾಮೀಲಾಗಿರಬೇಕು.
ಇಂಥವು ಖಂಡಿತಾಬೇಡ : ಹೆಚ್ಚು ಹೆಚ್ಚು ಹುರಿದ ಕರಿದ, ಮಸಾಲೆ ಬೆರೆತ ಪದಾರ್ಥ ಬೇಡ. ಅತಿಯಾದ ಸಿಹಿ ಸೇವನೆ ಬೇಡ. ಜಂಕ್ ಫುಡ್, ಫಾಸ್ಟ್ ಫುಡ್, ಅಲ್ಟ್ರಾ ಪ್ರೋಸೆಸ್ಡ್ ಫುಡ್ ಅಂದ್ರೆ ಚಿಪ್ಸ್, ಬರ್ಗರ್, ಪಿಜ್ಜಾ, ಪಾಸ್ತಾ ಇತ್ಯಾದಿಗಳನ್ನು ದಿನ ತಿನ್ನಲೇಬೇಕೆಂಬ ಹಠ ಬೇಡ. ಏನೇ ಆಗಲಿ, ಆದಷ್ಟೂ ಮನೆಯಲ್ಲೇ ತಯಾರಿಸಿದ ಆಹಾರ ಸೇವಿಸಿ.
ಉತ್ತಮ ಡಯೆಟ್ ನ ಲಾಭಗಳು : ಬ್ಯಾಲೆನ್ಸ್ಡ್ ಫುಡ್ ರೋಗನಿರೋಧಕ ಸಾಮರ್ಥ್ಯ (ಇಮ್ಯುನಿಟಿ)ವನ್ನು ಹೆಚ್ಚಿಸುತ್ತದೆ. ಪಚನ ಕ್ರಿಯೆಯನ್ನು ಸಶಕ್ತಗೊಳಿಸಿ, ಗಟ್ ಹೆಲ್ತ್ ಸುಧಾರಿಸುತ್ತದೆ. ಮಾಂಸಖಂಡ, ಹಲ್ಲು, ಮೂಳೆ, ಕೀಲುಗಳನ್ನು ಆದಷ್ಟು ಸಶಕ್ತಗೊಳಿಸಿ ಚುರುಕಾಗಿಸುತ್ತದೆ. ಇದು ನಮ್ಮ ಕಾರ್ಯಕ್ಷಮತೆಯನ್ನು ಕಾಪಾಡುವುದಲ್ಲದೆ, ನಮ್ಮ ಮೂಡ್ ನ್ನು ಸಹ ಸದಾ ಪಾಸಿಟಿವ್ ಆಗಿಡುತ್ತದೆ. ಇದರಿಂದ ಸಹಜವಾಗಿ ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ದೇಹ ತೂಕ ನಿಯಂತ್ರಣಕ್ಕೆ ಸಹಕಾರಿ. ಹೊಸ ಹೊಸ ಜೀವಕೋಶಗಳ ರಚನೆಗೆ ಪೂರಕ.
ಉತ್ತಮ ಡಯೆಟ್ ಹಾಗೂ ವ್ಯಾಯಾಮದ ಬ್ಯಾಲೆನ್ಸ್ ನಿಂದ ದೇಹಕ್ಕೆ ಸಿಗುವ ಲಾಭಗಳು : ದೇಹ ತೂಕ ಸದಾ ಕಂಟ್ರೋಲ್ ನಲ್ಲಿ ಇರುತ್ತದೆ. ಯಾವುದೇ ರೋಗದ ಭಯ ಕಾಡುವುದಿಲ್ಲ. ಇದರಿಂದ ದೇಹದ ಎಲ್ಲಾ ಚಟುವಟಿಕೆಗಳೂ ಚುರುಕಾಗುತ್ತವೆ. ಮನಸ್ಸಿನಲ್ಲಿ ಸದಾ ಪಾಸಿಟಿವ್ ವೈಬ್ಸ್ ತುಂಬಿಕೊಳ್ಳುತ್ತದೆ. ಶುಗರ್, ಬಿ.ಪಿ ಮುಂತಾದವು ನಿಯಂತ್ರಣದಲ್ಲಿ ಇದ್ದು, ಟೆನ್ಶನ್ಸ್ ಕಡಿಮೆ ಆಗುತ್ತವೆ. ಕೊಲೆಸ್ಟ್ರಾಲ್ ಲೆವೆಲ್ ಎಷ್ಟೋ ಮೇಂಟೇನ್ಡ್ ಆಗಿರುತ್ತದೆ. ಊಟ ತಿಂಡಿಯ ಆರೋಗ್ಯಕರ ಅಭ್ಯಾಸ ಹಾಗೂ ನಿಯಮಿತ ವ್ಯಾಯಾಮಗಳಿಂದ, ನಿಮ್ಮ ದೇಹತೂಕ, ಕೊಲೆಸ್ಟ್ರಾಲ್ ಲೆವೆಲ್ ಪರ್ಫೆಕ್ಟ್ ಆಗುತ್ತದೆ. ಫೈಬರ್ ಯುಕ್ತ ಆಹಾರ ಸೇವನೆ ಗುಡ್ ಕೊಸ್ಟ್ರಾಲ್ ಹೆಚ್ಚಿಸಿ, ಬ್ಯಾಡ್ ಕೊಲೆಸ್ಟ್ರಾಲ್ ತಗ್ಗಿಸುತ್ತದೆ. ಇದರಿಂದ ಹೃದಯದ ಆರೋಗ್ಯ ಸುಧಾರಿಸಿ, ಮಾನಸಿಕ ಸ್ವಾಸ್ಥ್ಯ ಉತ್ತಮಗೊಳ್ಳುತ್ತದೆ.
– ಪ್ರಭಾ ಮಾಧವ್





