ಲ್ಯಾಬ್ ಗ್ರೋನ್ ಡೈಮಂಡ್ ಎಂದಿನ ಮಾಮೂಲಿ ಒಡವೆಗಳು ಇದ್ದದ್ದೇ, ಈ ಸಲದ ಹಬ್ಬಕ್ಕಾಗಿ ನೀವೇಕೆ ಲ್ಯಾಬ್ ಗ್ರೋನ್ ಡೈಮಂಡ್ ನ ಜ್ಯೂವೆಲರಿ ಟ್ರೈ ಮಾಡಬಾರದು? ಅಸಲಿ ವಜ್ರಕ್ಕಿಂತ ಇವು ಹೇಗೆ ವಿಭಿನ್ನ……?
ವಜ್ರ ಎಂಬುದು ಒಂದು ಅತಿ ದುರ್ಲಭ ಹಾಗೂ ಪ್ರಾಕೃತಿಕ ಮಿನರಲ್ ಆಗಿದ್ದು, ನವರತ್ನಗಳಲ್ಲಿ ತನ್ನದೇ ಅಮೂಲ್ಯ ಸ್ಥಾನ ಹೊಂದಿದೆ. ವಿಶ್ವದ ಅತಿ ಕಠಿಣತಮ ಖನಿಜಗಳಲ್ಲಿ ಒಂದಾಗಿದ್ದು, ಅತಿ ಶುದ್ಧ ಇಂಗಾಲದ ರೂಪವಾಗಿದೆ. ಗಣಿಗಾರಿಕೆಯಿಂದ ಇದನ್ನು ನೆಲಮಟ್ಟದಿಂದ ಹೊರತೆಗೆದು ಶುದ್ಧೀಕರಿಸಲಾಗುತ್ತದೆ. ವಜ್ರಗಳ ನಿರ್ಮಾಣ ನಮ್ಮ ಭೂಮಿಯಲ್ಲಿ ಸುಮಾರು 3 ಮಿಲಿಯನ್ ವರ್ಷಗಳ ಮೊದಲೇ, ಭೂಭಾಗದ ಪದರಗಳ ಅಡಿಯಲ್ಲಿ ಅತಿ ಶಾಖದ, ಒತ್ತಡದ ಪರಿಣಾಮವಾಗಿ ರೂಪುಗೊಂಡಿತು. ಇದರ ಇಂಗಾಲದ ಪರಮಾಣುಗಳು, ಸ್ವಚ್ಛ ಹರಳಾಗಿ (ಕ್ರಿಸ್ಟಲ್) ರೂಪತಳೆದು, ವಜ್ರಗಳಾಗಿ ಹೊರಹೊಮ್ಮಿದ. ಭೂಮಿಯನ್ನು ಸುಮಾರು 150-200 ಕಿ.ಮೀ. ಆಳಕ್ಕೆ ಕೊರೆದಾಗ ಮಾತ್ರ ಇವು ಸಿಗಲು ಸಾಧ್ಯ. ಇದರ ಹೊಳಪು, ಕಟ್ ಅತ್ಯಂತ ಜನಪ್ರಿಯ! ಹೀಗಾಗಿ ಎಲ್ಲಾ ಶುಭ ಸಮಾರಂಭಗಳು, ಹಬ್ಬಹರಿದಿನಗಳಲ್ಲಿ ವಜ್ರದ ಒಡವೆಗಳು ಅಲಂಕಾರಪ್ರಿಯ ಯುವತಿಯರ ಅಚ್ಚುಮೆಚ್ಚಿನ ಆಯ್ಕೆ ಎನಿಸಿದೆ.
ನೈಸರ್ಗಿಕ ವಜ್ರ ರೂಪುಗೊಳ್ಳಲು ಎಷ್ಟೋ ದಶಕಗಳೇ ಬೇಕು. ಇದರ ಗಣಿಗಾರಿಕೆ ನಡೆಸಿ, ಶುದ್ಧೀಕರಿಸಲು ಹಲವು ಲಕ್ಷ ಕೋಟ್ಯಂತರ ಹಣ ಬೇಕು! ಜೊತೆಗೆ ಇದು ಮುಗಿದುಹೋಗುವ ಸಂಪನ್ಮೂಲ ಎಂಬುದನ್ನು ಮರೆಯಬಾರದು. ಹೀಗಾಗಿ ಆಧುನಿಕ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಕೃತಕ ವಜ್ರ ತಯಾರಿಸಿ ಅದರಲ್ಲಿ ಯಶಸ್ವೀ ಎನಿಸಿದ್ದಾರೆ. ಇದು ಅಸಲಿ ವಜ್ರದಷ್ಟೇ ಪರಿಶುದ್ಧವಾಗಿದ್ದು, ನೋಡಲಿಕ್ಕೂ ತದ್ರೂಪಿ ಆಗಿರುತ್ತದೆ. ಈ ಕಾರಣದಿಂದಲೇ ಇಂದು ದೊಡ್ಡ ದೊಡ್ಡ ಕಂಪನಿಗಳು ಅತ್ಯಧಿಕ LGD ಜ್ಯೂವೆಲರಿ ರೂಪದಲ್ಲಿ ಲ್ಯಾಬ್ ಡೈಮಂಡ್ ಗಳನ್ನೇ ಮಾರಾಟ ಮಾಡತೊಡಗಿವೆ. ಇದರಿಂದ ತಯಾರಾದ ಒಡವೆಗಳು ರಿಯಲ್ ಡೈಮಂಡ್ ನ ಲುಕ್ ಹೊಂದಿರುವುದೇ ಇಲ್ಲಿನ ದೊಡ್ಡ ಪ್ಲಸ್ ಪಾಯಿಂಟ್! ಜೊತೆಗೆ ಅದಕ್ಕಿಂತ ಎಷ್ಟೋ ಅಗ್ಗ ಸಹ. ಒಂದು ಹಂತದವರೆಗೆ ಇದರ ರೀಸೇಲ್ ವ್ಯಾಲ್ಯೂ ಸಹ ಓಕೆ.
ಪ್ರಯೋಗಾಲಯದಲ್ಲಿ ಕೃತಕ ವಜ್ರ ತಯಾರಾಗುವುದು ಹೇಗೆ? : ನೈಸರ್ಗಿಕ ವಜ್ರ ವಸುಂಧರೆಯ ಗರ್ಭದಲ್ಲಿ ಲಕ್ಷಾಂತರ ವರ್ಷಗಳ ಭೌಗೋಳಿಕ ಪರಿಣಾಮಗಳಿಂದಾಗಿ ರೂಪುಗೊಳ್ಳುತ್ತದೆ, ಗಣಿಗಾರಿಕೆಯಿಂದ ಶುದ್ಧೀಕರಿಸಲ್ಪಟ್ಟ ನಂತರವೇ ಇವು ಒಡವೆಗಳಾಗಿ ಅಂಗಡಿಗೆ ಬರುವುದು. ಆದರೆ ಕೃತಕ ವಜ್ರಗಳು ಲ್ಯಾಬ್ ನಲ್ಲಿ ತಯಾರಾಗುತ್ತವೆ. ನೋಡಲಿಕ್ಕಂತೂ ಇವು ಅಸಲಿ ವಜ್ರಗಳಂತೆಯೇ ಇರುತ್ತವೆ. ಎರಡರ ರಾಸಾಯನಿಕ ರೂಪುರೇಷೆ (ಅಂದ್ರೆ ಯಾವ ಕಣಗಳಿಂದ ರೂಪುಗೊಂಡಿವೆ?) ಸಹ ಒಂದೇ! ಎರಡರ ಪ್ರಮುಖ ವ್ಯತ್ಯಾಸ ಅಂದ್ರೆ, ಕೃತಕ ವಜ್ರವನ್ನು 4-5 ವಾರಗಳಲ್ಲೇ ಸಿದ್ಧಪಡಿಸಬಹುದು! ಇದನ್ನು ಸಹ ಸರ್ಟಿಫಿಕೇಟ್ ಗಳ ಜೊತೆಯೇ ಮಾರಲಾಗುತ್ತದೆ. ಅಸಲಿ ವಜ್ರದ ಸೀಡ್ ನೆರವಿನಿಂದಲೇ LGD ತಯಾರಾಗುತ್ತದೆ. 1 ಕ್ಯಾರೆಟ್ ಅಸಲಿ ವಜ್ರ, 4 ಲಕ್ಷ ಬೆಲೆಯಾದರೆ, ಅದೇ ಪ್ರಮಾಣದ LGD 1.50 ಲಕ್ಷ ಬೆಲೆಯಲ್ಲಿ ಸಿಗುತ್ತದೆ! ಅಸಲಿಗೆ ಹೋಲಿಸಿದಾಗ ಖಂಡಿತಾ ಅಗ್ಗ ಎನಿಸುತ್ತದೆ. ಈ ಕಾರಣದಿಂದಾಗಿಯೇ LGD ಗಳಿಗೆ ವಿಶ್ವಾದ್ಯಂತ ಇಂದು ಬೇಡಿಕೆ ಹೆಚ್ಚುತ್ತಿದೆ, ಆದರೆ ಇದನ್ನು ಅಮೆರಿಕನ್ ಡೈಮಂಡ್ ಎಂದು ಭಾವಿಸಬಾರದು, ಅದೇ ಬೇರೆ! ಬೆಲೆಯ ದೃಷ್ಟಿಯಿಂದಲೂ ಮೂವರೂ ಬೇರೆ ಆಗುತ್ತದೆ. ಎಲ್ಲಕ್ಕಿಂತಲೂ LGD ಅಗ್ಗ, ನಂತರ ಅಮೆರಿಕನ್ ಡೈಮಂಡ್, ಅತಿ ದುಬಾರಿ ಅಸಲಿ ವಜ್ರ! ಆದರೆ ಗಮನಿಸಬೇಕಾದ ಅಂಶವೆಂದರೆ, ಮೂರರಲ್ಲಿ LGD ಅತಿ ಅಗ್ಗವಾದರೂ ಅದರ ಲುಕ್, ಹೊಳಪು, ಕಲರ್, ಕಟಿಂಗ್, ಡಿಸೈನ್ ಎಲ್ಲ ಅಸಲಿ ವಜ್ರದಂತೆಯೇ ಇರುತ್ತದೆ!
ಇದನ್ನು ಕೆಮಿಕಲ್ ಬಾಷ್ಪ ಡೆಪಾಸಿಟ್ ಗಳಿಂದಲೂ ತಯಾರಿಸಬಹುದು. ಈ ಪ್ರಕ್ರಿಯೆಯಲ್ಲಿ ಬಾಷ್ಪದ ಅಣುಗಳನ್ನು ಆವಿ ಆಗಿಸಲಾಗುತ್ತದೆ. ಆ ಆವಿಯನ್ನು ನಳಿಕೆಗಳ ಸಹಾಯದಿಂದ ಸಂಗ್ರಹಿಸುತ್ತಾರೆ. ಇದಕ್ಕೆ ಅಮೂಲ್ಯ ರಾಸಾಯನಿಕಗಳನ್ನು ಬೆರೆಸಿ, ಸಶಕ್ತ ರೀತಿಯಲ್ಲಿ ಜಮೆಗೊಳಿಸಲಾಗುತ್ತದೆ. ಈ ರೀತಿ ಇಂಗಾಲದ ಅಣುಗಳು ವಜ್ರದಂಥ ರೂಪುರೇಷೆ ಪಡೆಯುತ್ತವೆ. ಇದಕ್ಕೆ ಕಟಿಂಗ್‌ಪಾಲಿಶಿಂಗ್ ಮೂಲಕ, ಜ್ಯೂವೆಲರ್ಸ್ ಅಸಲಿ ವಜ್ರದಂಥ ಹೊಳಪನ್ನು ಒದಗಿಸುತ್ತಾರೆ.
LGD ಖರೀದಿಸುವ ಮುನ್ನ ಗಮನಿಸಬೇಕಾದುದು : ಅಸಲಿ ವಜ್ರ ಹಾಗೂ LGDಗೆ ಕೆಮಿಕಲಿ ವ್ಯತ್ಯಾಸವಿಲ್ಲ! ಏಕೆಂದರೆ LGD ಯನ್ನೂ ಸಹ ಅದೇ ಪ್ರಕ್ರಿಯೆಯಿಂದ ತಯಾರಿಸಲಾಗಿರುತ್ತದೆ, ಅಂದ್ರೆ ಅಸಲಿ ವಜ್ರಗಳಂತೆಯೇ! ಹೀಗಾಗಿಯೇ ಎರಡರ ಲುಕ್ ಒಂದೇ ತರಹ ಇರುತ್ತದೆ. ಇದಕ್ಕೆ ಬೇಕಿರುವುದೆಲ್ಲ ಇಂಗಾಲದ ಮೂಲ ಸೀಡ್ ಒಂದೇ. ಇದನ್ನು ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತೇವೆ. ಅದನ್ನು ಮೈಕ್ರೋವೇವ್ ಚೇಂಬರ್ ನಲ್ಲಿರಿಸಿ, ಡೆವಲಪ್ ಮಾಡುತ್ತಾರೆ. ವಿಪರೀತ ಹೆಚ್ಚು ಶಾಖದಲ್ಲಿ ಇದನ್ನು ಬಿಸಿ ಮಾಡಿ, ಅದರಿಂದ ಹೊಳೆಹೊಳೆಯು ಪ್ಲಾಸ್ಮಾ ಕೂದಲೆಳೆಯನ್ನು ತಯಾರಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ ತಯಾರಾಗುವ ಕಣಗಳೇ 1 ವಾರದ ನಂತರ LGD ಆಗಿ ರೂಪುಗೊಳ್ಳುತ್ತವೆ. ನಂತರ ಅದರಿಂದ ಅಸಲಿ ವಜ್ರದಂತೆಯೇ ಕಟಿಂಗ್‌ಪಾಲಿಶಿಂಗ್‌ಮಾಡುತ್ತಾರೆ.
ಇಲ್ಲಿ ಪ್ರಚಲಿತವಿರುವ ಸಂಗತಿ ಎಂದರೆ, ಬೇಕೆಂದೇ ಕೆಲವರು ಅಸಲಿ ವಜ್ರ ಎಂದು ನಂಬಿಸಿ LGD ಮಾರಾಟ ಮಾಡಿ, ಕೋಟ್ಯಂತರ ಗಳಿಸುತ್ತಾರೆ ಎಂಬುದು. ಹೀಗಾಗಿ ಅಸಲಿ ವಜ್ರ ಕೊಳ್ಳುವಾಗ ಬ್ರಾಂಡೆಡ್ ಕಂಪನಿಯಿಂದಲೇ ಕೊಳ್ಳಬೇಕೇ ಹೊರತು ಲೋಕಲ್ ಮಾಲಿಗೆ ಮಾರುಹೋಗಬೇಡಿ. ಆಗ ಮಾತ್ರ ನಿಮಗೆ ಇದರ ಅಸಲಿ ಸರ್ಟಿಫಿಕೇಟ್ ಸಿಕ್ಕಿ, ಇದೇ ದರದಲ್ಲಿ ಮುಂದೆ ನೀವು ರೀಸೇಲ್ ಮಾಡಬಹುದು, ಇಲ್ಲದಿದ್ದರೆ ಮೋಸಹೋದೀರಿ!
ವಿದೇಶಗಳಲ್ಲಿ ಹೆಚ್ಚು ಪ್ರಚಲಿತ : ವಿದೇಶಗಳಲ್ಲಿ LGD ರೀಸೇಲ್ ವ್ಯಾಲ್ಯೂ 60-70%ರವರೆಗೂ ಇದೆ, ಏಕೆಂದರೆ ಅಲ್ಲಿ ಅದಕ್ಕೆ ಬೇಡಿಕೆ ಹೆಚ್ಚು. ನಮ್ಮ ದೇಶದಲ್ಲಿ ಅಷ್ಟೊಂದು ಇಲ್ಲ, ಆದರೆ ಮುಂದೆ ಇದು ಹೆಚ್ಚಬಹುದು ಎಂದು ಜ್ಯೂವೆಲರ್ಸ್ ಹೇಳುತ್ತಾರೆ. ಆಗ ಮಾತ್ರ ಇದರ ಮಾರ್ಕೆಟ್ ಹಿಗ್ಗುತ್ತದೆ, ಜೊತೆಗೆ ರೀಸೇಲ್ ವ್ಯಾಲ್ಯೂ ಸಹ. ಅಸಲಿ ವಜ್ರ ಹಾಗೂ LGD ನಡುವೆ ವ್ಯತ್ಯಾಸ ಗುರುತಿಸುವುದು ಕಷ್ಟಸಾಧ್ಯವೇ ಸರಿ. ಎರಡಕ್ಕೂ ಒಂದೇ ವ್ಯತ್ಯಾಸ ಅಂದ್ರೆ LGD ನಲ್ಲಿ ಸಾರಜನಕ ಇರುವುದಿಲ್ಲ. ಆದರೆ ಅಸಲಿ ವಜ್ರದಲ್ಲಿ ಟೈನಿ ನೈಟ್ರೋಜನ್ ಇದ್ದೇ ಇರುತ್ತದೆ. LGD ಖರೀದಿಸುವಾಗ ಸರ್ಟಿಫಿಕೇಟ್‌ಕೊಳ್ಳಲೇಬೇಕು, ಆಗ ಮಾತ್ರ ನಿಮಗೆ ಅದರ ಗುಣಮಟ್ಟ ರೀಸೇಲ್ ವ್ಯಾಲ್ಯೂ ಗ್ಯಾರಂಟಿ
LGD ತಯಾರಿಸುವ ಯಂತ್ರ ಅತಿ ದುಬಾರಿ : ಹೈ ಪ್ರೆಶರ್, ಹೈ ಟೆಂಪರೇಚರ್ ಕ್ಯೂಬಿಕ್ ಹೈಡ್ರಾಲಿಕ್ ಪ್ರೆಸ್ ಇಂಥ LGD ತಯಾರಿಸುವ ಯಂತ್ರವಾಗಿದ್ದು, ಅತಿ ದುಬಾರಿ ಎನಿಸಿದೆ. ಇದು ಕಾರ್ಬನ್ ಸೋರ್ಸ್ ಮೆಟೀರಿಯಲ್ ಅಂದ್ರೆ, ಗ್ರಾಫೈಟ್ ನ್ನು ಅತ್ಯಧಿಕ ಉಚ್ಚ ಪ್ರೆಶರ್‌ಟೆಂಪರೇಚರ್ ನಲ್ಲಿ, ತನ್ನ ಅಧೀನ ಮಾಡಿಕೊಂಡು ಕೆಲಸ ನಿರ್ವಹಿಸುತ್ತದೆ. ಇದು ಭೂಗ್ರಹದ ತಳಭಾಗದ ಪದರಗಳಲ್ಲಿ ನೈಸರ್ಗಿಕ ವಜ್ರದ ತಯಾರಿಯ ಪ್ರಕ್ರಿಯೆಯನ್ನೇ ಅವಲಂಬಿಸಿದೆ. ಲ್ಯಾಬ್ ನಲ್ಲಿ LGD ತಯಾರಿಸುವ ಯಂತ್ರದ ಬೆಲೆ, ಅದರ ಮೇಕ್, ಯಾವ ವಿಧ, ಅದರ ಸಾಮರ್ಥ್ಯದ ಮೇಲೆ ಅವಲಂಬಿಸಿದೆ.
LGD ನ ಮಾರುಕಟ್ಟೆ ವಿದೇಶಗಳಲ್ಲ ಅಧಿಕ ಪ್ರಚಲಿತ, ಭಾರತದಲ್ಲಿ ಇದನ್ನು 50% ಜ್ಯೂವೆಲರಿಗಳಲ್ಲಿ ಕಡ್ಡಾಯ ಬಳಸುತ್ತಾರೆ. ಇದು ಗ್ರಾಹಕರಲ್ಲಿ ಈಗ ಹೆಚ್ಚು ಜನಪ್ರಿಯ. ಆದರೆ ಇದನ್ನು ಕೊಳ್ಳುವಾಗ ಮಾತ್ರ, ಗ್ರಾಹಕರು ಇದರ ಗುಣಮಟ್ಟದ ಅರಿವು ಪಡೆಯಲು ಸಂಬಂಧಿಸಿದ ಸರ್ಟಿಫಿಕೇಟ್ ಪಡೆಯಬೇಕಾದುದು ಅತ್ಯವಶ್ಯಕ.
– ಜಿ. ಸುಮಾ




