ವರ್ಷದ ಮೊದಲ ಹಬ್ಬ, ಚೈತ್ರದ ಆಗಮನ ಸೂಚಿಸುವ ಯುಗಾದಿಯ ಬಗ್ಗೆ ವರ್ಣಿಸದ ಕನ್ನಡ ಕವಿಗಳೇ ಇಲ್ಲ. ಕವಿಗಳು ಕಂಡ ಯುಗಾದಿಯ ಕುರಿತಾಗಿ ಇಲ್ಲಿದೆ ಒಂದು ಪಕ್ಷಿನೋಟ......!

ಚೈತ್ರ ಮಾಸ ಬಂತೆಂದರೆ ಇಡೀ ವಾತಾವರಣವೇ ಬದಲಾಗಿ ಹೊಸತನದಿಂದ ತುಂಬಿ ತುಳುಕುತ್ತದೆ. ಬಿಸಿಲಿನ ತಾಪ ಹೆಚ್ಚಾದರೂ, ಬೀಸುವ ತಂಗಾಳಿ ಹಾಯ್‌ ಎನಿಸುವಂತೆ ಮಾಡುತ್ತದೆ.

ಚ್ರೈತ್ರ ಬರುವ ಹೊತ್ತು ಕವಿಗಳಿಗಂತೂ ಚೈತ್ರಾಗಮನವನ್ನು ಕವನಗಳ ಮೂಲಕವೇ ಸಂಭ್ರಮಿಸಿದ್ದಾರೆ. ಕವಿ ಮನಕ್ಕೆ ವಸಂತ ತರುವ ಸಂಭ್ರಮ ಹೇಳತೀರದು. ಕವಿಗಳು ಕಂಡ ಚೈತ್ರದ ಸೊಬಗೇ ಸೊಗಸು!

ಈ ಚೈತ್ರ ಮಾಸದ ಮೊದಲ ಹಬ್ಬವೇ ಯುಗಾದಿ ಹಬ್ಬ. ಈ ಯುಗಾದಿಯನ್ನು ಸಂತೋಷ ಸಂಭ್ರಮದಿಂದ ಸ್ವಾಗತಿಸಲು ಇಡೀ ಪ್ರಕೃತಿ ಸಜ್ಜಾಗಿರುತ್ತದೆ. ಎಲ್ಲೆಡೆ ಕಂಗೊಳಿಸುತ್ತಿರುವ ಚಿಗುರುವ ಹೊಸ ಚೈತನ್ಯವನ್ನು ಪ್ರತಿಬಿಂಬಿಸುವ ಹೊತ್ತಿನಲ್ಲಿಯೇ ಬಣ್ಣ ಬಣ್ಣದ ಹೂಗಳಿಂದ ಅಲಂಕಾರಗೊಂಡು ಮರಗಿಡಗಳು ಕಣ್ಣಿಗೆ ಸೊಬಗನ್ನು ಮನಸ್ಸಿಗೆ ಉಲ್ಲಾಸವನ್ನು ನೀಡುತ್ತವೆ. ಮುಖ್ಯವಾಗಿ ಯುಗಾದಿ ಆಚರಣೆಯೊಂದಿಗೆ ಅವಿಭಾಜ್ಯಾ ಅಂಗವಾಗಿ ಹೆಣೆದುಕೊಂಡಿದೆ ಬೇಂದ್ರೆಯವರ ಕವಿತೆ. ಮಾಬೇ ಚಿಗುರಿ, ಈ ಚಿಗುರಿಗೆ ಮನಸೋತ ಕೋಗಿಲೆ ಹಾಡಲು ವಸಂತ ನಲಿಯಲೇಬೇಕು. ಇದು ಪ್ರಕೃತಿಯ ಸಹಜ ಧರ್ಮ.

ಯುಗಾದಿ ಹಿಂದೂಗಳಿಗೆ ಅಮೃತಘಳಿಗೆ ಹೌದು. ಹೊಸ ಚೈತನ್ಯವನ್ನು ಮನಮನಗಳಲ್ಲಿ ಮೂಡಿಸುವ, ನೋವುನಲಿವುಗಳಿಗೆ ವಿರಾಮ ಹೇಳುವ ಈ ಹಬ್ಬದ ಆಗಮನದಿಂದ ಪ್ರಕೃತಿಯೇ ಅಲಂಕೃತಳಾಗುತ್ತಾಳೆ. ಈ ಪ್ರಕೃತಿಯ ಸೊಬಗನ್ನು ವರ್ಣಿಸಲು ಕವಿಗಳಿಗೆ ಎಲ್ಲಿಲ್ಲದ ಹಿಗ್ಗು. ಕನ್ನಡದ ಮಹಾನ್‌ ಕವಿಗಳು ಯುಗಾದಿ ಹಬ್ಬದ ಸೊಬಗವನ್ನು ಪ್ರಕೃತಿಯ ಬದಲಾವಣೆಯನ್ನು ಮತ್ತು ಬದುಕಿನ ತತ್ವವನ್ನು ತಮ್ಮ ಕವಿತೆಗಳ ಮೂಲಕ ಅದ್ಭುತವಾಗಿ ವರ್ಣಿಸಿದ್ದಾರೆ.

ಯುಗಾದಿಯ ಒಬ್ಬಟ್ಟಿನ ಸವಿಯತೆ ಈ ಕಾವ್ಯದ ಸಂಭ್ರಮವನ್ನು ಸವಿಯೋಣ ಬನ್ನಿ. ಕವಿ ಜಿ.ಎಸ್‌. ಶಿವರುದ್ರಪ್ಪನವರು ಮರಗಳ ತುಂಬಾ ಹೂಗಳು ಶೋಭಿಸುವುದನ್ನು ಕಂಡಾಗ, `ಮೈ ತುಂಬಾ ಹೂ ಮುಡಿದು ಹುಚ್ಚಾದ ಮರ ಚೈತ್ರದಲ್ಲಿ ಬೇಸರವೇ ಇಲ್ಲ ಈ ನಿಸರ್ಗಕ್ಕೆ, ಸದಾ ಹೊಸ ಹೊಸದಾಗಿ ಹೊಮ್ಮುವುದಕ್ಕೆ,' ಎಂದು ಬಣ್ಣಿಸಿದ್ದಾರೆ.

ಇವರು ಬದುಕಿನ ಸಂಕೀರ್ಣತೆಯನ್ನು ಯುಗಾದಿ ಬೇವು ಬೆಲ್ಲದ ಮೂಲಕ ಕಂಡಿದ್ದಾರೆ. ಜೀವನದಲ್ಲಿ ಕಷ್ಟ ಮತ್ತು ಸುಖ ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂಬ ಸತ್ಯವನ್ನು ಯುಗಾದಿ ನಮಗೆ ಬೋಧಿಸುತ್ತದೆ ಎಂದು ಅವರು ತಮ್ಮ ಕವಿತೆಗಳಲ್ಲಿ ಹೇಳಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ  ಹಬ್ಬಗಳ ಪರಂಪರೆಯೇ ಇದೆ. ಈ ಹಬ್ಬಗಳಲ್ಲಿ ಮೊದಲನೆಯದೇ ಈ ಯುಗಾದಿ. ಮೂರೂವರೆ ಮುಹೂರ್ತದ ಪೈಕಿ ಯುಗಾದಿ ಒಂದು ಶುಭ ಮುಹೂರ್ತವಾಗಿದೆ. ಈ ಹಬ್ಬ ಹಳೆಯ ಹೊಸತನ್ನು ಸೇರಿಸುವ ಕೊಂಡಿ. ಫಾಲ್ಗುಣ ಬಹುಳ ಅಮಾವಾಸ್ಯೆಯ ದಿನ ಹಳೆಯ ವರ್ಷಕ್ಕೆ ವಿದಾಯ ಹೇಳಿ, ಮಾರನೇ ದಿನ ಚೈತ್ರ ಮಾಸದ ಶುಕ್ಲ ಪ್ರತಿಪದೆಯಂದು ಯುಗಾದಿಯ ಹೊಸ ವರ್ಷದ ಸಂತಸದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಾ, ಭವಿಷ್ಯದ ಸುಖಕ್ಕಾಗಿ ಆಚರಿಸುತ್ತಾರೆ.

ಕಷ್ಟಸುಖದ ಸಂಕೇತ

ಈ ಹಿನ್ನೆಲೆಯಲ್ಲಿಯೇ ಪ್ರೇಮಕವಿ ಕೆ.ಎಸ್‌. ನರಸಿಂಹಸ್ವಾಮಿಯವರು ತಾವು ಕಂಡ ಯುಗಾದಿಯ ಸಂಭ್ರಮವನ್ನು ತಮ್ಮ ಕಾವ್ಯವೊಂದರಲ್ಲಿ `ಬನಬನದಲ್ಲಿ ಅಚ್ಚಾಗಿದೆ ಹೊಸ ವರ್ಷದ ಹೆಸರು ಪಲ್ಲವಿಯು ಗರಿಗೆದರಿದೆ ಗೀತ' ಹಾಗೆ ಮತ್ತೊಂದು ಕವನ  `ಹೆಜ್ಜೆಗೊಂದು ಹೊಸ ಯುಗಾದಿ ಚೆಲುವು ನಮ್ಮ ಜೀವನ ಪಯಣವೆಲ್ಲ ಪಾವನ,' ಎಂದು ಯುಗಾದಿ ಮಹಿಮೆಯನ್ನು ಹೊಗಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ