ಲ್ಯಾಬ್‌ ಗ್ರೋನ್‌ ಡೈಮಂಡ್‌ ಎಂದಿನ ಮಾಮೂಲಿ ಒಡವೆಗಳು ಇದ್ದದ್ದೇ, ಈ ಸಲದ ಹಬ್ಬಕ್ಕಾಗಿ ನೀವೇಕೆ ಲ್ಯಾಬ್‌ ಗ್ರೋನ್ ಡೈಮಂಡ್‌ ನ ಜ್ಯೂವೆಲರಿ ಟ್ರೈ ಮಾಡಬಾರದು? ಅಸಲಿ ವಜ್ರಕ್ಕಿಂತ ಇವು ಹೇಗೆ ವಿಭಿನ್ನ......?

ವಜ್ರ ಎಂಬುದು ಒಂದು ಅತಿ ದುರ್ಲಭ ಹಾಗೂ ಪ್ರಾಕೃತಿಕ ಮಿನರಲ್ ಆಗಿದ್ದು, ನವರತ್ನಗಳಲ್ಲಿ ತನ್ನದೇ ಅಮೂಲ್ಯ ಸ್ಥಾನ ಹೊಂದಿದೆ. ವಿಶ್ವದ ಅತಿ ಕಠಿಣತಮ ಖನಿಜಗಳಲ್ಲಿ ಒಂದಾಗಿದ್ದು, ಅತಿ ಶುದ್ಧ ಇಂಗಾಲದ ರೂಪವಾಗಿದೆ. ಗಣಿಗಾರಿಕೆಯಿಂದ ಇದನ್ನು ನೆಲಮಟ್ಟದಿಂದ ಹೊರತೆಗೆದು ಶುದ್ಧೀಕರಿಸಲಾಗುತ್ತದೆ. ವಜ್ರಗಳ ನಿರ್ಮಾಣ ನಮ್ಮ ಭೂಮಿಯಲ್ಲಿ ಸುಮಾರು 3 ಮಿಲಿಯನ್‌ ವರ್ಷಗಳ ಮೊದಲೇ, ಭೂಭಾಗದ ಪದರಗಳ ಅಡಿಯಲ್ಲಿ ಅತಿ ಶಾಖದ, ಒತ್ತಡದ ಪರಿಣಾಮವಾಗಿ ರೂಪುಗೊಂಡಿತು. ಇದರ ಇಂಗಾಲದ ಪರಮಾಣುಗಳು, ಸ್ವಚ್ಛ ಹರಳಾಗಿ (ಕ್ರಿಸ್ಟಲ್) ರೂಪತಳೆದು, ವಜ್ರಗಳಾಗಿ ಹೊರಹೊಮ್ಮಿದ. ಭೂಮಿಯನ್ನು ಸುಮಾರು 150-200 ಕಿ.ಮೀ. ಆಳಕ್ಕೆ ಕೊರೆದಾಗ ಮಾತ್ರ ಇವು ಸಿಗಲು ಸಾಧ್ಯ. ಇದರ ಹೊಳಪು, ಕಟ್‌ ಅತ್ಯಂತ ಜನಪ್ರಿಯ! ಹೀಗಾಗಿ ಎಲ್ಲಾ ಶುಭ ಸಮಾರಂಭಗಳು, ಹಬ್ಬಹರಿದಿನಗಳಲ್ಲಿ ವಜ್ರದ ಒಡವೆಗಳು ಅಲಂಕಾರಪ್ರಿಯ ಯುವತಿಯರ ಅಚ್ಚುಮೆಚ್ಚಿನ ಆಯ್ಕೆ ಎನಿಸಿದೆ.

ನೈಸರ್ಗಿಕ ವಜ್ರ ರೂಪುಗೊಳ್ಳಲು ಎಷ್ಟೋ ದಶಕಗಳೇ ಬೇಕು. ಇದರ ಗಣಿಗಾರಿಕೆ ನಡೆಸಿ, ಶುದ್ಧೀಕರಿಸಲು ಹಲವು ಲಕ್ಷ ಕೋಟ್ಯಂತರ ಹಣ ಬೇಕು! ಜೊತೆಗೆ ಇದು ಮುಗಿದುಹೋಗುವ ಸಂಪನ್ಮೂಲ ಎಂಬುದನ್ನು ಮರೆಯಬಾರದು. ಹೀಗಾಗಿ ಆಧುನಿಕ ವಿಜ್ಞಾನಿಗಳು ಪ್ರಯೋಗಾಲಯಗಳಲ್ಲಿ ಕೃತಕ ವಜ್ರ ತಯಾರಿಸಿ ಅದರಲ್ಲಿ ಯಶಸ್ವೀ ಎನಿಸಿದ್ದಾರೆ. ಇದು ಅಸಲಿ ವಜ್ರದಷ್ಟೇ ಪರಿಶುದ್ಧವಾಗಿದ್ದು, ನೋಡಲಿಕ್ಕೂ ತದ್ರೂಪಿ ಆಗಿರುತ್ತದೆ. ಈ ಕಾರಣದಿಂದಲೇ ಇಂದು ದೊಡ್ಡ ದೊಡ್ಡ ಕಂಪನಿಗಳು ಅತ್ಯಧಿಕ LGD ಜ್ಯೂವೆಲರಿ ರೂಪದಲ್ಲಿ ಲ್ಯಾಬ್‌ ಡೈಮಂಡ್‌ ಗಳನ್ನೇ ಮಾರಾಟ ಮಾಡತೊಡಗಿವೆ. ಇದರಿಂದ ತಯಾರಾದ ಒಡವೆಗಳು ರಿಯಲ್ ಡೈಮಂಡ್‌ ನ ಲುಕ್‌ ಹೊಂದಿರುವುದೇ ಇಲ್ಲಿನ ದೊಡ್ಡ ಪ್ಲಸ್‌ ಪಾಯಿಂಟ್‌! ಜೊತೆಗೆ ಅದಕ್ಕಿಂತ ಎಷ್ಟೋ ಅಗ್ಗ ಸಹ. ಒಂದು ಹಂತದವರೆಗೆ ಇದರ ರೀಸೇಲ್ ವ್ಯಾಲ್ಯೂ ಸಹ ಓಕೆ.

ಪ್ರಯೋಗಾಲಯದಲ್ಲಿ ಕೃತಕ ವಜ್ರ ತಯಾರಾಗುವುದು ಹೇಗೆ? : ನೈಸರ್ಗಿಕ ವಜ್ರ ವಸುಂಧರೆಯ ಗರ್ಭದಲ್ಲಿ ಲಕ್ಷಾಂತರ ವರ್ಷಗಳ  ಭೌಗೋಳಿಕ ಪರಿಣಾಮಗಳಿಂದಾಗಿ ರೂಪುಗೊಳ್ಳುತ್ತದೆ, ಗಣಿಗಾರಿಕೆಯಿಂದ ಶುದ್ಧೀಕರಿಸಲ್ಪಟ್ಟ ನಂತರವೇ ಇವು ಒಡವೆಗಳಾಗಿ ಅಂಗಡಿಗೆ ಬರುವುದು. ಆದರೆ ಕೃತಕ ವಜ್ರಗಳು ಲ್ಯಾಬ್‌ ನಲ್ಲಿ ತಯಾರಾಗುತ್ತವೆ. ನೋಡಲಿಕ್ಕಂತೂ ಇವು ಅಸಲಿ ವಜ್ರಗಳಂತೆಯೇ ಇರುತ್ತವೆ. ಎರಡರ ರಾಸಾಯನಿಕ ರೂಪುರೇಷೆ (ಅಂದ್ರೆ ಯಾವ ಕಣಗಳಿಂದ ರೂಪುಗೊಂಡಿವೆ?) ಸಹ ಒಂದೇ! ಎರಡರ ಪ್ರಮುಖ ವ್ಯತ್ಯಾಸ ಅಂದ್ರೆ, ಕೃತಕ ವಜ್ರವನ್ನು 4-5 ವಾರಗಳಲ್ಲೇ ಸಿದ್ಧಪಡಿಸಬಹುದು! ಇದನ್ನು ಸಹ ಸರ್ಟಿಫಿಕೇಟ್‌ ಗಳ ಜೊತೆಯೇ ಮಾರಲಾಗುತ್ತದೆ. ಅಸಲಿ ವಜ್ರದ ಸೀಡ್‌ ನೆರವಿನಿಂದಲೇ LGD ತಯಾರಾಗುತ್ತದೆ. 1 ಕ್ಯಾರೆಟ್‌ ಅಸಲಿ ವಜ್ರ, 4 ಲಕ್ಷ ಬೆಲೆಯಾದರೆ, ಅದೇ ಪ್ರಮಾಣದ LGD 1.50 ಲಕ್ಷ ಬೆಲೆಯಲ್ಲಿ ಸಿಗುತ್ತದೆ! ಅಸಲಿಗೆ ಹೋಲಿಸಿದಾಗ ಖಂಡಿತಾ ಅಗ್ಗ ಎನಿಸುತ್ತದೆ. ಈ ಕಾರಣದಿಂದಾಗಿಯೇ LGD ಗಳಿಗೆ ವಿಶ್ವಾದ್ಯಂತ ಇಂದು ಬೇಡಿಕೆ ಹೆಚ್ಚುತ್ತಿದೆ, ಆದರೆ ಇದನ್ನು ಅಮೆರಿಕನ್‌ ಡೈಮಂಡ್‌ ಎಂದು ಭಾವಿಸಬಾರದು, ಅದೇ ಬೇರೆ! ಬೆಲೆಯ ದೃಷ್ಟಿಯಿಂದಲೂ ಮೂವರೂ ಬೇರೆ ಆಗುತ್ತದೆ. ಎಲ್ಲಕ್ಕಿಂತಲೂ LGD ಅಗ್ಗ, ನಂತರ ಅಮೆರಿಕನ್‌ ಡೈಮಂಡ್‌, ಅತಿ ದುಬಾರಿ ಅಸಲಿ ವಜ್ರ! ಆದರೆ ಗಮನಿಸಬೇಕಾದ ಅಂಶವೆಂದರೆ, ಮೂರರಲ್ಲಿ LGD ಅತಿ ಅಗ್ಗವಾದರೂ ಅದರ ಲುಕ್‌, ಹೊಳಪು, ಕಲರ್‌, ಕಟಿಂಗ್‌, ಡಿಸೈನ್‌ ಎಲ್ಲ ಅಸಲಿ ವಜ್ರದಂತೆಯೇ ಇರುತ್ತದೆ!

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ