ಪ್ರ : ನನ್ನ ಕುಂಕುಳದಿಂದ ಸದಾ ದುರ್ವಾಸನೆ ಬರುತ್ತಿರುತ್ತದೆ. ಇದರಿಂದ ಎಲ್ಲರ ಮಧ್ಯೆ ಮುಜುಗರಕ್ಕೆ ಒಳಗಾಗ ಬೇಕಾಗುತ್ತದೆ. ಇದು ಹೆಚ್ಚು ಬೆರುವುದರ ಪರಿಣಾಮವೇ? ದಯವಿಟ್ಟು ಇದರಿಂದ ಪಾರಾಗುವ ದಾರಿ ತೋರಿಸಿ.
ಉ : ಹೌದು, ಇದು ಎಲ್ಲರನ್ನೂ ಕಾಡುವ ಒಂದು ಸಾಮಾನ್ಯ ಸಮಸ್ಯೆ. ಇದರಿಂದ ನೀವು ಆತ್ಮವಿಶ್ವಾಸ ಕಳೆದುಕೊಂಡು ಕುಗ್ಗಬಹುದು. ಬೇಸಿಗೆಯಲ್ಲಿ ಇದಕ್ಕಾಗಿ ಡಿಯೋಡರೆಂಟ್ ಯಾ ರೋಲ್ ಆನ್ ಪರ್ಸ್ಪಿರೆಂಟ್ ಒಂದು ತಾತ್ಕಾಲಿಕ ಪರಿಹಾರ ಆಗಬಹುದಷ್ಟೆ. ಆದರೆ ಅದರ ಪ್ರಭಾವ ಮುಗಿಯುತ್ತಿದ್ದಂತೆ ಈ ಸಮಸ್ಯೆ ಮತ್ತೆ ಆರಂಭವಾಗುತ್ತದೆ. ದೇಹದಿಂದ ಬೆವರು ಬಂದಾಗ, ನಮ್ಮ ಚರ್ಮದ ಮೇಲ್ಮೈನಲ್ಲಿನ ಬ್ಯಾಕ್ಟೀರಿಯಾ, ಪ್ರೋಟೀನ್ ನ್ನು ಮುರಿಯುವುದರಿಂದ ಹಾಗೂ ಕೆಲವು ಬಗೆಯ ಆ್ಯಸಿಡ್ ಅಂಶ ಸ್ರವಿಸುತ್ತವೆ. ಇದರಿಂದಾಗಿ ದೇಹದ ಸಂದುಗಳ ಭಾಗದಲ್ಲಿ ಇಂಥ ತೀಕ್ಷ್ಣ ದುರ್ವಾಸನೆ ತಲೆದೋರುತ್ತದೆ. ಇದನ್ನು ಮನೆಮದ್ದಿನಿಂದಲೂ ದೂರ ಮಾಡಬಹುದು.
ಹಲವಾರು ದಿನಗಳಿಂದ ನಿಮ್ಮನ್ನು ಈ ಸಮಸ್ಯೆ ಕಾಡುತ್ತಿದ್ದರೂ ಸಹ, ಈ ಸಲಹೆಗಳು ಅದನ್ನು ಪರಿಹಾರ ಮಾಡಬಲ್ಲದು. ಇದಕ್ಕಾಗಿ ಬೇಕಿಂಗ್ ಸೋಡ ಹೆಚ್ಚು ಪ್ರಭಾವಶಾಲಿ ಎನಿಸಿದೆ. ಇದಕ್ಕಾಗಿ ಒಂದು ಸಣ್ಣ ಬಟ್ಟಲಿಗೆ 1 ದೊಡ್ಡ ಚಮಚ ಬೇಕಿಂಗ್‌ಸೋಡಾ ಹಾಕಿಕೊಂಡು, ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ಈ ಪೇಸ್ಟ್ ನ್ನು ನಿಮ್ಮ ಕಂಕುಳ ಭಾಗಕ್ಕೆ ಸವರುತ್ತಾ ಮಸಾಜ್ ಮಾಡಿ. ಚೆನ್ನಾಗಿ ಒಣಗಿದ ಮೇಲೆ ತಣ್ಣೀರಿನಿಂದ ತೊಳೆಯಿರಿ. ಇದರ ಹೊರತಾಗಿ, ಒಂದು ಸಣ್ಣ ಬಟ್ಟಲಿಗೆ ತುಸು ಆ್ಯಪಲ್ ಸೈಡರ್ ವಿನಿಗರ್ ಹಾಕಿ, ಅದಕ್ಕೆ ತುಸು ನೀರು ಬೆರೆಸಿರಿ. ಇದನ್ನು ಒಂದು ಸ್ಪ್ರೇ ಬಾಟಲ್ ಗೆ ತುಂಬಿಸಿ, ಮಲಗುವ ಮುನ್ನ ರಾತ್ರಿ ನಿಮ್ಮ ಕಂಕುಳಕ್ಕೆ ಇದನ್ನು ಸ್ಪ್ರೇ ಮಾಡಿಕೊಳ್ಳಿ. ಮಾರನೇ ಬೆಳಗ್ಗೆ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯರಿ. ಇದನ್ನು 15 ದಿನಗಳ ಕಾಲ ನಿಯಮಿತವಾಗಿ ಬಳಸಿರಿ. ಹೀಗೆ ಮಾಡುವುದರಿಂದ ಕಂಕುಳದ ದುರ್ವಾಸನೆ ಎಷ್ಟೋ ಪಾಲು ತಗ್ಗುತ್ತದೆ.
ಪ್ರ. ನನಗೀಗ 26ರ ವಯಸ್ಸು. ಡೆಲಿವರಿ ನಂತರ ನನ್ನ ಸ್ತನಗಳ ಗಾತ್ರ ಹಿಗ್ಗಿದೆ. ಇದೀಗ ನಾನು ಮಗುವಿಗೆ ಮೊಲೆಯೂಡಿಸುವುದನ್ನು ನಿಲ್ಲಿಸಿದ್ದೇನೆ. ಆದರೆ ಅದು ಈಗ ಜೋತು ಬಿದ್ದಂತೆ ಆಗಿದೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.
ಉ : ಪ್ರಸವದ ನಂತರ ಸ್ತನಗಳ ಆಕಾರದಲ್ಲಿ ಹಿಗ್ಗುವಿಕೆ ಮಾಮೂಲಿ. ನೀವು ಮೊಲೆಯೂಡಿಸುವವರೆಗೂ ಸ್ತನ ಸಹಜ ರೂಪದಲ್ಲಿಯೇ ಇರುತ್ತದೆ. ಅದನು ನಿಲ್ಲಿಸಿದಾಗ, ಅದು ಕ್ರಮೇಣ ಜೋತು ಬೀಳುತ್ತದೆ. ನಿಮ್ಮ ಮಸಲ್ಸ್ ಬಹಳ ಸಡಿಲ ಆಗಿವೆ. ಇವು ಕಸುವು ಗಳಿಸಲು ವಿಶೇಷ ವ್ಯಾಯಾಮ ಮಾಡಬೇಕು. ತೋಳುಗಳನ್ನು ಮುಂಭಾಗದಿಂದ ಹಿಂಭಾಗಕ್ಕೆ ತಿರುಗಿಸು ಕ್ರಮ ಹೆಚ್ಚು ಲಾಭಕರ. ಬೋರಲು ಮಲಗಿ, ಉಸಿರನ್ನು ಒಳಗೆ ಎಳೆದುಕೊಂಡು, ಸ್ವಲ್ಪ ಹೊತ್ತು ಹಾಗೇ ಇರಿ. ಇದರಿಂದ ಮಸಲ್ಸ್ ಎಷ್ಟೋ ಟೈಟ್ ಆಗುತ್ತವೆ.
ಇಷ್ಟು ಮಾತ್ರವಲ್ಲದೆ, ನೀವು ಸೂಕ್ತ ಸೈಜಿನ ಬ್ರಾ ಧರಿಸಬೇಕು. ಅದು ಬ್ರೆಸ್ಟ್ ಗೆ ಕೆಳಭಾಗದಿಂದ ಸಪೋರ್ಟ್ ನೀಡುವಂತಿರಬೇಕು. ಉತ್ತಮ ಕಾಸ್ಮೆಟಿಕ್ ಕ್ಲಿನಿಕ್ ಗೆ ಹೋಗಿ ಬ್ರೆಸ್ಟ್ ಫಾರ್ಮಿಂಗ್ ನ ಸಿಟ್ಟಿಂಗ್ಸ್ ತೆಗೆದುಕೊಳ್ಳಿ. ಮನೆಯಲ್ಲಿ ವಿಟಮಿನ್ ಬಳಸುತ್ತಾ, ಆ ಭಾಗವನ್ನು ಕೆಳಗಿನಿಂದ ಮೇಲುಗಡೆಗೆ ಒಂದೇ ದಿಕ್ಕಿನಲ್ಲಿ ಮಸಾಜ್ ಮಾಡಿ. 1 ಕಪ್‌ಕಸೂರಿಮೇಥಿಯನ್ನು ರಾತ್ರಿ ನೆನೆಹಾಕಿಡಿ. ಮಾರನೇ ಬೆಳಗ್ಗೆ ಅದನ್ನು ಪೇಸ್ಟ್ ಮಾಡಿಕೊಂಡು, 1 ಚಮಚ ಆಲಿವ್ ಆಯಿಲ್ ಬೆರೆಸಿಕೊಳ್ಳಿ. ಇದನ್ನು ಸ್ತನಗಳಿಗೆ ಸವರಿಕೊಂಡು, 2 ಗಂಟೆ ಕಾಲ ಬಿಟ್ಟು ತೊಳೆಯಿರಿ. ಇದು ಟೈಟ್ ನಿಂಗ್ ಪ್ಯಾಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ನಿಮ್ಮ ಬ್ರೆಸ್ಟ್ ಎಷ್ಟೋ ಫರ್ಮ್ ಆಗುತ್ತದೆ.





