ನಿಮ್ಮ ಚರ್ಮದ ಡ್ರೈನೆಸ್‌ ತೊಲಗಿಸಬೇಕೇ? ಇದಕ್ಕಾಗಿ ಬಾಡಿ ಬಟರ್‌ಆಯಿಲ್ ‌ಹೇಗೆ ಲಾಭಕರ ಎಂದು ವಿವರವಾಗಿ ತಿಳಿದುಕೊಳ್ಳಿ…..!

ಚರ್ಮವನ್ನು ಅತಿ ಮೃದು, ಕೋಮಲ ಆಗಿರಿಸಲು ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಮಾಯಿಶ್ಚರೈಸರ್‌ ಗಳು ಲಭ್ಯವಿವೆ. ಆದರೆ ನೀವು ನೈಸರ್ಗಿಕ ಹಾಗೂ ಪ್ರಭಾವೀ ಪರಿಣಾಮ ಬಯಸುವಿರಾದರೆ, ಬಾಡಿ ಬಟರ್‌ಆಯಿಲ್ ‌ಎಲ್ಲಕ್ಕಿಂತಲೂ ದಿ ಬೆಸ್ಟ್ ಆಯ್ಕೆ ಎನ್ನಬಹುದು. ನೈಸರ್ಗಿಕ ಬಾಡಿ ಬಟರ್‌ಆಯಿಲ್ ‌ಚರ್ಮದ ಆಳಕ್ಕಿಳಿದು, ಆರ್ದ್ರತೆಯನ್ನು ಕಾಪಿಡುವ ಕೆಲಸ ಮಾಡುತ್ತದೆ. ಇದರಿಂದ ಚರ್ಮ ಬಲು ಕೋಮಲ ಹಾಗೂ ಮೃದು ಆಗುತ್ತದೆ. ಹೀಗಾಗಿ ಇದು ನಮ್ಮ ಚರ್ಮಕ್ಕೆ ಹೇಗೆ ಪೋಷಕಾಂಶ ಒದಗಿಸಿ, ಸೌಂದರ್ಯ ಸಂವರ್ಧನೆಯಲ್ಲಿ ಹಿರಿಯ ಪಾತ್ರ ವಹಿಸಲಿದೆ ಎಂಬುದನ್ನು ವಿವರವಾಗಿ ತಿಳಿಯೋಣ.

ಆ್ಯರೋಮಾ ಮ್ಯಾಜಿಕ್‌

ಕೋಕೋ ಬಟರ್‌ ವೆನಿಲಾ ಬಾಡಿ ಬಟರ್‌ : ಈ ಕ್ರೀಂ ಕೋಕೋ, ಬಟರ್‌, ವೆನಿಲಾಗಳಿಂದ ಸಮೃದ್ಧ. ಈ ಅಲ್ಟ್ರಾ ನರಿಶಿಂಗ್ ಫಾರ್ಮುಲಾ, ಚರ್ಮದ ಎಲಾಸ್ಟಿಸಿಟಿ ಹಾಗೂ ಸಾಫ್ಟ್ ನೆಸ್‌ ನ್ನು ಸುದೀರ್ಘ ಕಾಲ ರಕ್ಷಿಸುತ್ತದೆ. ಇದು ಸ್ಟ್ರೆಚ್‌ ಮಾರ್ಕ್ಸ್ ನ್ನು ಪೂರ್ಣ ತೊಲಗಿಸುತ್ತದೆ. ಇದರಲ್ಲಿ ಕ್ಯಾರೆಟ್‌ ಸೀಡ್‌, ವೀಟ್‌ ಜರ್ಮ್, ಕೊಬ್ಬರಿ ಎಣ್ಣೆಗಳನ್ನು ಬೆರೆಸಿರುತ್ತಾರೆ. ಇವು ಚರ್ಮದ ಆಳಕ್ಕೆ ಇಳಿದು ಅತ್ಯುತ್ತಮ ಪೋಷಣೆ ನೀಡುತ್ತವೆ. ಇದರಲ್ಲಿ ವೆನಿಲಾ ಒಂದು ಆ್ಯಂಟಿಆಕ್ಸಿಡೆಂಟ್‌ ಇಮೋಲಿಯೆಂಟ್‌ ತರಹ ಕೆಲಸ ಮಾಡುತ್ತದೆ, ಇದರಿಂದ ಸುಮಧುರ ಸುಗಂಧ ಹೊರಸೂಸುವುದು.

ಲಾಭಗಳು : ಇದು ಚರ್ಮದ ಆಳಕ್ಕಿಳಿದು ಅತ್ಯುತ್ತಮ ಪೋಷಣೆ ಒದಗಿಸುತ್ತದೆ. ಚರ್ಮದ ಎಲಾಸ್ಟಿಸಿಟಿಯಲ್ಲಿ ಉತ್ತಮ ಸುಧಾರಣೆ ತರುತ್ತದೆ. ಸ್ಟ್ರೆಚ್‌ ಮಾರ್ಕ್ಸ್ ಕಲೆಗುರುತುಗಳನ್ನು ಇನ್ನಿಲ್ಲದಂತೆ ಮಾಡುತ್ತದೆ. ಆರೋಗ್ಯಕರ ಚರ್ಮವನ್ನು ಪುನರುಜ್ಜೀನಗೊಳಿಸುತ್ತದೆ. ಇದು ನಾನ್‌ ಗ್ರೀಸೀ SPF 15ಯುಕ್ತ ಕ್ರೀಂ ಆಗಿದ್ದು, ಸನ್‌ ಸ್ಕ್ರೀನ್‌ ಜವಾಬ್ದಾರಿಯನ್ನೂ ವಹಿಸುತ್ತದೆ. ಪ್ರೆಗ್ನೆನ್ಸಿ ಹಾಗೂ ಬಾಣಂತಿ ಆರೈಕೆಯಲ್ಲಿ ಇದರ ಬಳಕೆ ಸುರಕ್ಷಿತ ಎನಿಸಿದೆ, ಯಾವುದೇ ಸೈಟ್‌ ಎಫೆಕ್ಟ್ಸ್ ಇಲ್ಲ.

ಆ್ಯರೋಮಾ ಮ್ಯಾಜಿಕ್‌ ಕೋಲ್ಡ್ ಕ್ರೀಂ ಚರ್ಮದ ಆಳಕ್ಕಿಳಿದು ಮಾಯಿಶ್ಚರೈಸಿಂಗ್‌ ಹೈಡ್ರೇಟಿಂಗ್‌ ನಿಭಾಯಿಸುತ್ತದೆ : ಈ ಬೇಸಿಗೆಯಲ್ಲಿ ಚರ್ಮವನ್ನು ಸದಾ ನಳನಳಿಸುವಂತೆ ಮಾಡಲು ಕೋಲ್ಡ್ ಕ್ರೀಂ ಎಲ್ಲಕ್ಕಿಂತಲೂ ಉತ್ತಮ ಆಯ್ಕೆ. ಇದು ಡ್ರೈನೆಸ್‌, ತುರಿಕೆ, ಕಡಿತ ಸಮಸ್ಯೆಗಳಿರುವ ಚರ್ಮಕ್ಕೂ ಬಹಳ ಒಳ್ಳೆಯದು. ಇದರ ಬಳಕೆಯಿಂದ ಅಂಥ ಸಮಸ್ಯೆ ನಿವಾರಣೆಗೊಂಡು, ಚರ್ಮ ಮತ್ತಷ್ಟು ಯಂಗ್‌ ಕೋಮಲ ಆಗುತ್ತದೆ. ಇದರಲ್ಲಿ ಚರ್ಮಕ್ಕೆ ಪೂರಕಾದ ಕೋಕೋ  ಶಿಯಾ ಬಟರ್‌, ಆ್ಯಲೋವೇರಾ, ಗ್ಲಿಸರಿನ್‌, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ, ಲ್ಯಾವೆಂಡರ್‌ನ್ಯಾರೋಲಿ ಎಸೆನ್ಶಿಯ್‌ ಆಯಿಲ್ಸ್ ಬೆರೆತಿವೆ.

ಲಾಭಗಳು : ಇದು ಚರ್ಮದ ಆಳಕ್ಕೆ ಇಳಿದು, ಅತ್ಯುತ್ತಮವಾಗಿ ಮಾಯಿಶ್ಚರೈಸಿಂಗ್‌ ಮಾಡುತ್ತದೆ. ಚರ್ಮದ ಪ್ರಮುಖ ಸಮಸ್ಯೆಗಳಾದ ತುರಿಕೆ, ಕಡಿತ, ಡ್ರೈನೆಸ್‌ ಇತ್ಯಾದಿ ಸಮಸ್ಯೆಗಳಿಗೆ ಇದು ರಾಮಬಾಣ. ಚರ್ಮವನ್ನು ಸದಾ ಯಂಗ್‌ಕೋಮಲ ಆಗಿರಿಸುತ್ತದೆ.

ಆ್ಯರೋಮಾ ಮ್ಯಾಜಿಕ್‌ ಆಲ್ಮಂಡ್‌ ನರಿಶಿಂಗ್‌ ಕ್ರೀಂ : ಬೇಸಿಗೆಯಲ್ಲಿ ಚರ್ಮಕ್ಕೆ ತೊಂದರೆ ಆಗದಂತೆ, ಅದಕ್ಕೆ ಅತ್ಯುತ್ತಮ ಪೋಷಣೆ ನೀಡುತ್ತದೆ. ಇದರ ಆ್ಯಂಟಿ ಏಜಿಂಗ್‌ ಫಾರ್ಮುಲಾನಿಂದಾಗಿ ಈ ಕ್ರೀಂ ಆ್ಯಂಟಿ ಏಜಿಂಗ್‌ ಗುಣಗಳಿಂದ ಸಮೃದ್ಧ. ಇದು ಚರ್ಮವನ್ನು ಹೆಲ್ದಿ  ಸೂಪರ್‌ ಸಾಫ್ಟ್ ಆಗಿರಿಸುತ್ತದೆ. ಇದರಲ್ಲಿ ಅಡಗಿರುವ ಘಟಕಗಳಾದ ಕ್ಯಾರೆಟ್‌ ಸೀಡ್‌ ಆಯಿಲ್‌ಬಾದಾಮಿ ತೈಲ ಚರ್ಮದ ಆಳಕ್ಕಿಳಿದು ಅತ್ಯುತ್ತಮ ಪೋಷಣೆ ನೀಡುತ್ತದೆ, ಇದರಿಂದ ಬೇಸಿಗೆಯಲ್ಲೂ ಚರ್ಮದ ಆರ್ದ್ರತೆ ಹಾಗೇ ಉಳಿದುಕೊಳ್ಳುತ್ತದೆ. ಇಷ್ಟು ಮಾತ್ರವಲ್ಲದೆ, ಇದರಲ್ಲಿ ನ್ಯಾರೋಲಿ ಜ್ಯಾಸ್ಮಿನ್‌ ಎಸೆನ್ಶಿಯಲ್ ಆಯಿಲ್ಸ್ ಸಹ ಅಡಗಿವೆ. ಹೀಗಾಗಿ ಚರ್ಮದ ಹೊಳಪು ಹೆಚ್ಚಿ ಬೇಸಿಗೆಯ ದಿನಗಳಲ್ಲೂ ನಳನಳಿಸುತ್ತಾ ಇರಬಹುದು.

ಲಾಭಗಳು : ಚರ್ಮಕ್ಕೆ ಅತ್ಯುತ್ತಮ ಪೋಷಣೆ ಹಾಗೂ ಆರ್ದ್ರತೆ ಒದಗಿಸುತ್ತದೆ. ಫೈನ್‌ ಲೈನ್ಸ್ ಸುಕ್ಕುಗಳು ಮೂಡದಂತೆ ತಡೆಯುತ್ತದೆ. ವಯಸ್ಸು ಹೆಚ್ಚಾದಂತೆ ಮುಖ ಮೈಕೈನಲ್ಲಿ ಎಲ್ಲಿಯೂ ಸುಕ್ಕು ಬಾರದಂತೆ ತನ್ನ ಆ್ಯಂಟಿ ಏಜಿಂಗ್‌ ಚಮತ್ಕಾರ ತೋರಿಸುತ್ತದೆ.

ಚರ್ಮ ಹಾಗೂ ಕೂದಲಿಗೆ ಬಹೂಪಯೋಗಿ ತೈಲ ಅಂದರೆ ಜೋಜೋಬಾ ಆಯಿಲ್ ‌: ಜೋಜೋಬಾ ಆಯಿಲ್ ‌ಅಂದ್ರೆ ಒಂದು ಬಗೆಯ ಲೈಟ್‌, ಸ್ವೀಟಿಶ್‌ನಟ್ಟೀ ಸುಗಂಧ ಸೂಸುವ ತೈಲವಾಗಿದೆ. ಇದನ್ನು ಜೋಜೋಬಾ ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಇದು ಎಸೆನ್ಶಿಯಲ್ ಆಯಿಲ್ಸ್ ಜೊತೆ ಬೆರೆತು, ಒಂದು ಬೆಸ್ಟ್ ಮಸಾಜ್‌ ಆಯಿಲ್ ‌ಆಗಿ ರೂಪುಗೊಂಡಿದೆ. ಇದು ಚರ್ಮದ ಆರ್ದ್ರತೆಯನ್ನು ಕಾಪಾಡುತ್ತದೆ, ಅದನ್ನು ಆದಷ್ಟೂ ಮೃದು, ಕೋಮಲವಾಗಿ ಇರಿಸುತ್ತದೆ. ಇದರ ಆ್ಯಂಟಿ ಇನ್ ಫ್ಲಮೇಟರಿ ಆ್ಯಂಟಿ ಆಕ್ಸಿಡೆಂಟ್‌ ಗುಣಗಳು ಆ್ಯಕ್ನೆ, ಮೊಡವೆ, ದದ್ದುಗಳ ನಿವಾರಣೆಗೆ ಬಲು ಸಹಾಯಕವಾಗಿದೆ.

ಲಾಭಗಳು : ಚರ್ಮ ಹಾಗೂ ಕೂದಲಿನ ಆರ್ದ್ರತೆಯನ್ನು ಸುದೀರ್ಘ ಕಾಲ ರಕ್ಷಿಸುತ್ತದೆ. ಚರ್ಮ, ತಲೆಯಲ್ಲಿನ ತೈಲಾಂಶಗಳನ್ನು ಬ್ಯಾಲೆನ್ಸ್ ಆಗಿ ಇಡುತ್ತದೆ. ಸ್ಟ್ರೆಚ್ ಮಾರ್ಕ್ಸ್ ಸುಕ್ಕುಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ, ಬೇಸಿಗೆ ಪೂರ್ತಿ ಚರ್ಮ ನಳನಳಿಸುವೆತೆ ಮಾಡುತ್ತದೆ.

ಚರ್ಮದ ಟೋನಿಂಗ್‌ ಬ್ರೈಟ್‌ ನಿಂಗ್‌ ಗಾಗಿ ಅತ್ಯುತ್ತಮ ಆಯ್ಕೆಯೇ ಗ್ರೇಪ್‌ ಸೀಡ್‌ ಆಯಿಲ್ ‌: ದ್ರಾಕ್ಷಿಯ ಬೀಜದಿಂದ ತಯಾರಾಗುವ ಕೋಲ್ಡ್ ಸ್ಪ್ರೆಡ್‌ ನೈಸರ್ಗಿಕ ಎಣ್ಣೆಯೇ ಕಾಸ್ಮೆಟಿಕ್ಸ್ ಗೆ ಬಳಸಲ್ಪಡುವ ಈ ಗ್ರೇಪ್‌ ಸೀಡ್‌ ಆಯಿಲ್‌. ಇದು ಚರ್ಮವನ್ನು ಸಾಕಷ್ಟು ಲೈಟ್‌ಟೋನ್ಡ್ ಮಾಡುವಲ್ಲಿ ಸಹಾಯಕ. ಇದನ್ನು ಆ್ಯರೋಮಾ ಥೆರಪಿ ಎಸೆನ್ಶಿಯಲ್ ಆಯಿಲ್ಸ್ ಜೊತೆ ಬೆರೆಸಿ, ಒಂದು ಆದರ್ಶ ಮಸಾಜ್‌ ಆಯಿಲ್ ‌ಆಗಿ ರೂಪಿಸಲಾಗುತ್ತದೆ. ಇದರಿಂದ ಆ್ಯಕ್ನೆ, ಮೊಡವೆಗಳ ರಗಳೆ ತಪ್ಪಿ ಅತ್ಯುತ್ತಮ ಆ್ಯಂಟಿ ಏಜಿಂಗ್‌ ತೈಲವಾಗಿ ಕಾರ್ಯ ನಿರ್ವಹಿಸುತ್ತದೆ, ಚರ್ಮಕ್ಕೆ ಉತ್ಕೃಷ್ಟ ಪೋಷಣೆ ಸಹ ನೀಡುತ್ತದೆ.

ಲಾಭಗಳು : ಚರ್ಮವನ್ನು ಟೈಟ್‌ ಟೋನ್ಡ್ ಹಾಗೂ ಬ್ರೈಟ್‌ ಮಾಡುತ್ತದೆ. ಮೊಡವೆ, ಆ್ಯಕ್ನೆ ನಿವಾರಿಸುವಲ್ಲಿ ಸಹಕಾರಿ. ಆ್ಯಂಟಿ ಏಜಿಂಗ್‌ ಆಯಿಲ್ ‌ಆಗಿ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತದೆ. ಇದು ಮಸಾಜ್‌ ಗಾಗಿ ಅತ್ಯುತ್ತಮ ಆಯ್ಕೆಯಾಗಿದೆ.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ