ದೇಶದಾದ್ಯಂತ ಸೋಮವಾರದಿಂದ (ಸೆ.28) ನಡೆಯಬೇಕಿದ್ದ ಮೂರು ದಿನಗಳ ಬ್ಯಾಂಕ್ ಮುಷ್ಕರವನ್ನು ‘ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್’ (UFBU) ಮುಂದೂಡಿದೆ.

ವಾರಕ್ಕೆ ಐದು ದಿನ ಕೆಲಸದ ಅವಧಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಐಬಿಎ ಭರವಸೆ ನೀಡಿದೆ ಎಂದು ಯುನೈಟೆಡ್​ ಫೋರಂ ಆಫ್​ ಬ್ಯಾಂಕ್​ ಯೂನಿಯನ್ಸ್​ ತಿಳಿಸಿದೆ.

‘ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್’ (IBA) ಜತೆ ಭಾನುವಾರ ರಾತ್ರಿ ನಡೆದ ಸಭೆಯ ಬಳಿಕ ಮುಷ್ಕರ ಮುಂದೂಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಷಾಂತರ ಬ್ಯಾಂಕ್ ಗ್ರಾಹಕರು ಎದುರಿಸಬೇಕಿದ್ದ ಮೂರು ದಿನಗಳ ಸೇವೆ ವ್ಯತ್ತಯ ತಪ್ಪಿದಂತಾಗಿದೆ.

ಯುಎಫ್​ಬಿಯು ಪ್ರಕಾರ, ಭಾನುವಾರ ರಾತ್ರಿ 9.30ಕ್ಕೆ ಐಬಿಎ ಜತೆ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ವಿಷಗಳ ಕುರಿತು ಒಪ್ಪಂದಕ್ಕೆ ಬರಲಾಗಿದೆ.

ವಾರದ ಎಲ್ಲಾ ಶನಿವಾರಗಳನ್ನು ಬ್ಯಾಂಕ್​ ರಜಾದಿನಗಳನ್ನಾಗಿ ಮಾಡುವ ಬೇಡಿಕೆಯನ್ನು ಪರಿಶೀಲಿಸಲು ಐಬಿಎ ಮತ್ತು ಯುಎಫ್​ಬಿಯು ಜಂಟಿ ಸಮಿತಿಯನ್ನು ತಕ್ಷಣ ರಚಿಸಲಾಗುವುದು. ಸಮಿತಿಯು ಈ ಕುರಿತು ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಲಿದೆ. ಸಂಬಂಧಪಟ್ಟ ಎಲ್ಲರೊಂದಿಗೆ ಸಮಾಲೋಚನೆ ನಡೆಸಿ, ವಿಶೇಷವಾಗಿ ಗ್ರಾಹಕರಿಗೆ ಅನುಕೂಲವಾಗುವ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಿದೆ.

ಸ್ಕೇಲ್​ IV ಮತ್ತು ಅದಕ್ಕಿಂತ ಮೇಲಿನ ಶ್ರೇಣಿಯ ಅಧಿಕಾರಿಗಳಿಗೆ ಅನ್ವಯಿಸುವ ಕಾರ್ಯಕ್ರಮತೆ ಆಧಾರಿತ ಪ್ರೋತ್ಸಾಹಕ (IPLI) ಯೋಜನೆಯಲ್ಲಿ ಬದಲಾವಣೆ ಮಾಡುವ ಕುರಿತು IBA ಜತೆ ಮಾತುಕತೆ ಆರಂಭಿಸಲಾಗುವುದು. ಅಧಿಕಾರಿಗಳ ಆತಂಕಗಳು ಮತ್ತು ಬೇಡಿಕೆಗಳನ್ನು ಸರ್ಕಾರ ಮುಂದೆ ಮಂಡಿಸಲು ಈ ಮಾತುಕತೆ ನಡೆಸಲಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ