ಆಂಧ್ರಪ್ರದೇಶದ ಎನ್‌ಟಿಆರ್ ಜಿಲ್ಲೆಯ ಇಬ್ರಾಹಿಂಪಟ್ನಂ ಸಮೀಪ ನಡೆದ ಮಹಿಳೆಯೊಬ್ಬರ ಬ-ರ್ಬರ ಹ-ತ್ಯೆ ಪ್ರಕರಣ ಸ್ಥಳೀಯವಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮಟನ್ ಅಂಗಡಿ ಮಾಲೀಕ ಮೊಹಮ್ಮದ್ ಶಫಿ ಎಂಬಾತ ತನ್ನೊಂದಿಗೆ ಸಂಪರ್ಕದಲ್ಲಿದ್ದ ಕಲ್ಯಾಣಿ ಎಂಬ ಮಹಿಳೆಯನ್ನು ಹ-ತ್ಯೆ ಮಾಡಿ, ದೇ-ಹವನ್ನು 9 ತುಂ-ಡುಗಳಾಗಿ ಕತ್ತ-ರಿಸಿ ಎಸೆದಿದ್ದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

​ಪ್ರಕರಣದ ಹಿನ್ನೆಲೆ:

ಮಂಗಳಗಿರಿಯ ನಿವಾಸಿಯಾದ ಕಲ್ಯಾಣಿ ಬಿರಿಯಾನಿ ಸೆಂಟರ್‌ವೊಂದರಲ್ಲಿ ಮಾಣಿಯಾಗಿ (ವೇಟರ್) ಕೆಲಸ ಮಾಡುತ್ತಿದ್ದರು. ಪತಿಯಿಂದ ದೂರವಾಗಿದ್ದ ಆಕೆ ವಿಜಯವಾಡದ ವ್ಯಕ್ತಿಯೊಬ್ಬರ ಜತೆ ವಾಸವಾಗಿದ್ದರು. ಇದೇ ವೇಳೆ ಆಕೆಗೆ ಭವಾನಿಪುರಂನ ಮಟನ್ ಅಂಗಡಿ ವ್ಯಾಪಾರಿ ಮೊಹಮ್ಮದ್ ಶಫಿ ಜತೆ ಪರಿಚಯವಾಗಿ, ಇಬ್ಬರ ನಡುವೆ ಸಂಬಂಧ ಮುಂದುವರಿದಿತ್ತು ಎನ್ನಲಾಗಿದೆ.

​ಈ ತಿಂಗಳ 17 ರಿಂದ ಕಲ್ಯಾಣಿ ನಾಪತ್ತೆಯಾಗಿದ್ದರು. ಇತ್ತೀಚೆಗೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ತಲೆದೋರಿ ತೀವ್ರ ಗಲಾಟೆ ನಡೆದಿದ್ದು, ಈ ವೇಳೆ ಶಫಿ ಆಕೆಯನ್ನು ಕೊ-ಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

​ದೇ-ಹ 9 ತುಂ-ಡು, ಕಾಲುವೆಗೆ ಎಸೆದಿದ್ದ ಆರೋಪಿ:

ಕೊ-ಲೆಯ ಬಳಿಕ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಶಫಿ ಆಕೆಯ ಮೃ-ತದೇಹವನ್ನು 9 ತುಂ-ಡುಗಳಾಗಿ ಕ-ತ್ತರಿಸಿ ಚೀಲಗಳಲ್ಲಿ ತುಂಬಿದ್ದನು. ಬಳಿಕ ಎನ್‌ಟಿಟಿಪಿಎಸ್ ಥರ್ಮಲ್ ಪ್ಲಾಂಟ್‌ಗೆ ಸೇರಿದ ಗೊಲ್ಲಪುಡಿ ಕೂಲಿಂಗ್ ಕಾಲುವೆಯಲ್ಲಿ ಆ ಚೀಲಗಳನ್ನು ಎಸೆ-ದಿದ್ದನು. ಕಾಲುವೆಯಲ್ಲಿ ಮಹಿಳೆಯ ದೇ-ಹದ ತುಂ-ಡುಗಳು ಪತ್ತೆಯಾಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದರು.

​ಗುರುತು ಪತ್ತೆಗೆ ನೆರವಾದ ಟ್ಯಾಟೂ:

ಮೃ-ತದೇಹವನ್ನು ಗುರುತಿಸಲು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇನ್‌ಸ್ಟಾಗ್ರಾಮ್‌ನಲ್ಲಿ ಪೊಲೀಸರು ಹಂಚಿಕೊಂಡಿದ್ದ ಪೋಸ್ಟ್ ಗಮನಿಸಿದ ಕಲ್ಯಾಣಿಯ ಸಹೋದರ, ಮೃ-ತದೇಹದ ಕೈಮೇಲಿದ್ದ ಹಚ್ಚೆ (ಟ್ಯಾಟೂ) ನೋಡಿ ಅದು ತನ್ನ ಸಹೋದರಿಯೇ ಎಂದು ಗುರುತಿಸಿದ್ದಾರೆ.

​ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮೊಹಮ್ಮದ್ ಶಫಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ