ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ‘ಫ್ಲೈದುಬೈ’ ವಿಮಾನವನ್ನು ಪತನಗೊಳಿಸಲು ಸಹ ಪೈಲಟ್ ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದ ರಿಯಲ್ ಹಿರೋ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿದ್ದಾರೆ.
ಈ ವೇಳೆ ದುರಂತ ನಡೆಯಬೇಕಿದ್ದ ಆ ಭೀಕರ ಕ್ಷಣದ ಕುರಿತು ಹಂಚಿಕೊಂಡು ಆ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾನು ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ ಎಂದು ಹೇಳಿದ್ದಾರೆ.
ಮತ್ತೊಂದೆಡೆ ಈ ವಿಮಾನ ದುರಂತದ ಕುರಿತು ಭಯೋತ್ಪಾದನೆ ಹಲವು ಆರೋಪಗಳು ಕೇಳಿಬರುತ್ತಿದ್ದು, ಇದೀಗ ಈ ವಿಮಾನ ಹೈಜಾಕ್ ಪ್ರಯತ್ನದ ಹಿಂದೆ ಇರಾನ್ ಕೈವಾಡವಿರಬಹುದು ಎಂದು ಸಂಶಯ ವ್ಯಕ್ತಪಡಿಸಿ ಗಂಭೀರ ಆರೋಪ ಮಾಡಿದ್ದಾರೆ.
ಫ್ಲೈದುಬೈ ವಿಮಾನ ದುರಂತ ತಪ್ಪಿಸುವಾಗ ಚಾಕು ಇರಿತಕ್ಕೊಳಗಾಗಿ ಗಂಭಿರವಾಗಿ ಗಾಯಗೊಂಡಿದ್ದ ಕ್ಯಾ.ಸ್ಮಿತ್ ಮಚ್ಚಾರ್ ಸದ್ಯ ಚೇತರಿಸಿಕೊಂಡಿದ್ದು, ಶುಕ್ರವಾರ (ಅ.2ರಂದು) ಪ್ರಧಾನಿ ಮೋದಿ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ಆ ಸಂಕಷ್ಟ ಸಮಯದಲ್ಲಿ ನಾನು ಹನುಮಾನ್ ಚಾಲಿಸ ಪಠಿಸುತ್ತಿದ್ದೆ ಎಂದಿದ್ದಾರೆ.
ಈ ಭೀಕರ ಕ್ಷಣವನ್ನು ಸ್ಮರಿಸಿಕೊಂಡಿರುವ ಸ್ಮಿತ್ ” ಆ ಕ್ಷಣದಲ್ಲಿ ನಾನು ಗಂಭೀರವಾಗಿ ಗಾಯಗೊಂಡಿದ್ದೆ.ನಾನು ನನ್ನ ಜೀವಕ್ಕಾಗಿ ಹೋರಾಡುತ್ತಿದ್ದೆ. ಆದಾಗ್ಯೂ, ನನಗೆ ಆ ಕ್ಷಣದಲ್ಲಿ ನಾನು ಧೈರ್ಯ ತೋರಿಸದಿದ್ದರೆ 174 ಪ್ರಯಾಣಿಕರು ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ನನಗೆ ಅರಿವಾಯಿತು ಹಾಗಾಗಿ ಕಾಕ್‌ಪಿಟ್ ಬಾಗಿಲು ತೆರೆದು ಹೋರಾಡಿದ್ದೇನೆ. ಅಲ್ಲದೆ, ತಾನು ಯಾವುದೇ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಹನುಮಾನ್ ಚಾಲಿಸ ಪಠಿಸುತ್ತೇನೆ. ಅದರಂತೆಯೇ ನಾನು ಆ ಸಮಯದಲ್ಲೂ ಹನುಮಾನ್ ಚಾಲೀಸಾ ಪಠಿಸುತ್ತಿದ್ದೆ. ಭಗವಾನ್ ಹನುಮಂತ ನನಗೆ ಧೈರ್ಯ ಕೊಟ್ಟಿದ್ದಾನೆ ” ಎಂದು ತಿಳಿಸಿದ್ದಾರೆ.
“ನೀವು ನನ್ನ ಅತಿದೊಡ್ಡ ರೋಲ್ ಮಾಡೆಲ್ ಆಗಿದ್ದು, ನೀವು ನನಗೆ ಕರೆ ಮಾಡಿ ನನ್ನನ್ನು ಪ್ರೋತ್ಸಾಹಿಸುತ್ತಿರುವುದಕ್ಕೆ ನನಗೆ ತುಂಬಾ ಹೆಮ್ಮೆ ಅನಿಸುತ್ತದೆ. ನಾನು 17 ವರ್ಷಗಳಿಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದು ಕಳೆದ 11 ವರ್ಷಗಳಿಂದ ಕ್ಯಾಪ್ಟನ್ ಆಗಿದ್ದೇನೆ, ಆದ್ದರಿಂದ ಕಣ್ಣು ಮುಚ್ಚಿದರೂ ವಿಮಾನದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಕೊನೆಗೆ ಕಾಕ್‌ಪಿಟ್ ಬಾಗಿಲು ತೆರೆದು ಹೋರಾಡಿದ್ದೇನೆ” ಎಂದು ತಿಳಿಸಿದ್ದಾರೆ.
ಧೈರ್ಯ ತುಂಬಿದ ಪ್ರಧಾನಿ: ಸ್ಮಿತ್ ಅವರಿಗೆ ಧೈರ್ಯ ತುಂಬಿದ ಪ್ರಧಾನಿ ಮೋದಿ ನಿಮ್ಮ ಧೈರ್ಯದ ಕುರಿತು ದೇಶ ಗರ್ವವನ್ನು ಹೊಂದಿದ್ದು, ನಾನು ಈಗಾಗಲೇ ಪತ್ನಿ ಮತ್ತು ಪೋಷಕರೊಂದಿಗೆ ಮಾತನಾಡಿದ್ದೇನೆ. ನೀವು ಆದಷ್ಟು ಬೇಗ ಚೇತರಿಸಿಕೊಂಡು ಮನೆಗೆ ಮರಳುವುದನ್ನು ನೋಡಲು ಭಾರತ ಕಾಯುತ್ತಿದೆ ಎಂದು ತಿಳಿಸಿದ್ದಾರೆ.





