ಹೆಂಗಸರನ್ನು ದುರ್ಬಲ ಆಗಿಸುವ ಹುನ್ನಾರದ ಪರಂಪರೆ

ಇಂದಿಗೂ ಭಾರತದ ಬಹುತೇಕ ಮನೆ, ಅಂಗಡಿ, ಕಛೇರಿಗಳಲ್ಲಿ ಹೊರಗಿ ಚಪ್ಪಲಿ ಬಿಟ್ಟು ಒಳಗೆ ಹೋಗುವ ಪರಂಪರೆ ಇದೆ. ಹೊರಗಿನ ಕೊಳೆ ಒಳಗೆ ಬರಬಾರದು ಎಂಬುದು ಇಲ್ಲಿನ ವಾದ. ಅಮೆರಿಕಾದಲ್ಲಿ ಗುಜರಾತಿ ಬಿಸ್‌ ನೆಸ್‌ ವುಮೆನ್‌ ಹಾಗೂ ಟೆಕ್ ಎಕ್ಸ್ ಪರ್ಟ್ಸ್ ಸಹ, ತಮ್ಮ ಕಛೇರಿ, ವರ್ಕ್‌ ಶಾಪ್‌ ಗಳಲ್ಲಿ, ಗ್ರಾಹಕರಿಗೆ ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಅಂತಾರೆ. ಅಮೆರಿಕಾದ ಸೋಶಿಯಲ್ ಮೀಡಿಯಾ ಇದನ್ನು ಭಾರಿ ಖಂಡಿಸಿದೆ.

ಎಲ್ಲಿಯವರೆಗೆ ಜನ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರೋ, ನೆಲದ ಮೇಲೆಯೇ ಊಟ ಬಡಿಸಲಾಗುತ್ತಿತೋ, ನೆಲದ ಮೇಲೆ ಚಾಪೆ ಹಾಕಿ ಮಲಗುತ್ತಿದ್ದರೋ…. ಅಲ್ಲಿಯವರೆಗೂ ಇದನ್ನು ಸರಿ ಎನ್ನಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಯಾರು ಹೀಗೆ ಮಾಡುತ್ತಾರೆ? ಕಿಚನ್‌ ಸ್ಲಾಬ್‌ ಗಳು ಮೇಲಿವೆ, ಡೈನಿಂಗ್‌ ಟೇಬಲ್ ಎತ್ತರಕ್ಕಿವೆ, ಮಂಚ ನೆಲದ ಮಟ್ಟದಲ್ಲಿಲ್ಲ, ಸೋಫಾ ಸಹ…. ಹೀಗಿರುವಾಗ ಚಪ್ಪಲಿ ಮನೆಯ ಹೊರಗಿರಲಿ ಎನ್ನುವುದು ಮೂಢನಂಬಿಕೆ ಅಲ್ಲದೆ ಬೇರೇನಲ್ಲ. ನಮ್ಮ ಮನೆ, ಅಂಗಡಿ, ಕಛೇರಿ, ಕಾರ್ಖಾನೆಗಳೆಲ್ಲ ಮಂದಿರಕ್ಕೆ ಸಮ ಎಂದು ತೋರಿಸಿಕೊಳ್ಳುವ ಢೋಂಗಿತನವಿದು. ಇಲ್ಲಿಗೆ ಬರುವ ಭಕ್ತರು, ಯಾಚಕರು, ದರಿದ್ರರೇ ಸರಿ ಎಂಬುದರ ಸಂಕೇತ. ಚಪ್ಪಲಿ ಕಳಚಿಟ್ಟು ಬರುವವರನ್ನು ದೀನದರಿದ್ರರು ಎಂದೇ ಭಾವಿಸಲಾಗುತ್ತದೆ. ದೇವಾಲಯಗಳಿಗೆ ಹೋಗುವ ಭಕ್ತರ ಗೋಳೂ ಇದೇ ತಾನೇ?

ಈ ರೀತಿ ಮಾಡಿ ಅನಾದಿ ಕಾಲದಿಂದಲೂ ಹೆಂಗಸರನ್ನು ಪಾತಾಳಕ್ಕೆ ತುಳಿಯುವ ಪ್ರಾಚೀನ ಪರಂಪರೆ ಇದು. ಅನಾದಿ ಕಾಲದಿಂದಲೂ ಮನೆಗಳಲ್ಲಿ ಹೆಂಗಸರನ್ನು ಸಾಮಾನ್ಯವಾಗಿ ಸದಾ ಚಪ್ಪಲಿ ಇಲ್ಲದೆ ಬರಿಗಾಲಲ್ಲೇ ಕೆಲಸ ಮಾಡಬೇಕೆಂದು ಸಂಪ್ರದಾಯ ಮಾಡಿಟ್ಟಿದ್ದಾರೆ. ಇದರಿಂದ ಅವರ ಹಿಮ್ಮಡಿ ಒಡೆದು, ರಕ್ತ ಒಸರಿ, ನೋವಾದರೂ ಸರಿ. ಹಿಂದೆಲ್ಲ ಹೆಂಗಸರಿಗೆ ಒಡೆದ ಹಿಮ್ಮಡಿ, ಅದರಿಂದ ನೋವು ಮಾಮೂಲಿ ಸಂಗತಿಯೇ ಆಗಿತ್ತು. ಅವರುಗಳಿಗೆ ಬೇಕೆಂದೇ ಚಪ್ಪಲಿ ಕೊಡಿಸುತ್ತಿರಲಿಲ್ಲ. ಅಬಲೆ, ದುರ್ಬಲ ಹೆಣ್ಣು ಹೋರಾಡಲಾಗದೆ ಮೌನವಾಗಿ ಹಿಂಸೆ ಅನುಭವಿಸುತ್ತಿದ್ದಳು. ಗಂಡಸರ ಆಕ್ರಮಣದ ಸಂದರ್ಭದಲ್ಲೂ ತಪ್ಪಿಸಿಕೊಂಡು ಓಡಲಾಗುತ್ತಿರಲಿಲ್ಲ. ವರ್ಕರ್ಸ್‌ ಜೊತೆಯೂ ಹೀಗೇ ಆಗುತ್ತದೆ. ಅವರುಗಳು ಹೊರಗೇ ಚಪ್ಪಲಿ ಬಿಟ್ಟು, ಮಾನಸಿಕವಾಗಿ ಎಷ್ಟೇ ಕುಗ್ಗಿ ಹೋಗಿದ್ದರೂ, ಹಾಗೆಯೇ ಕೆಲಸ ಮಾಡಬೇಕು. ಹಿಂದೆಲ್ಲ ಹಳ್ಳಿಗಳಲ್ಲ ಶ್ರೀಮಂತರ ಡೌಲಿನೆದುರು, ಅವರ ಮನೆ ಮುಂದೆ ಹಾದುಹೋಗುವಾಗ, ಬಡವರು ಚಪ್ಪಲಿ ಕೈಲಿ ಹಿಡಿದೇ ನಡೆದು ಹೋಗುತ್ತಿದ್ದರು.

ಅನಾದಿ ಕಾಲದಿಂದ, ಮಾನವರು ಚಪ್ಪಲಿ ಧರಿಸ ತೊಡಗಿದಾಗಿನಿಂದ, ಅವರ ಕಾಲು ಎಷ್ಟೋ ಮೇಲಾಯಿತು. ಸಶಕ್ತ ಕಾಲು ಇವರಿಂದಲೇ ಮಾನವ ಪ್ರಕೃತಿಗೆ ವಿರುದ್ಧವಾಗಿ ಚಪ್ಪಲಿ ಧರಿಸ ತೊಡಗಿದ. ಬಟ್ಟೆಗಳ ತರಹವೇ ಚಪ್ಪಲಿ ಸಹ ಅಪ್ರಾಕೃತಿಕ. ಚಪ್ಪಲಿ ಶೂ ದೆಸೆಯಿಂದ ಮಾನವ ಮರುಭೂಮಿಯಲ್ಲೂ ನಡೆದಾಡುವಂತಾದ, ಕೆಸರುಗದ್ದೆಯಲ್ಲಿ ಕೆಲಸ ಮಾಡಬಲ್ಲವನಾದ, ಬಿಸಿ ಬಂಡೆಗಳನ್ನು ಏರಬಲ್ಲವನಾದ.

ಚಪ್ಪಲಿ ಶೂ ಇತ್ಯಾದಿ ಆಧುನಿಕತೆಯ ಸಂಕೇತವಲ್ಲ, ಇದು ಅಧಿಕಾರದ ಸಂಕೇತ. ಇವನ್ನು ಕಳಚಿಸುವುದು ಒಂದು ದೊಡ್ಡ ಕಾನ್ಸಪಿರೆಸಿ. ವಿಶ್ವದ ಬಹುತೇಕ ಸಮಾಜಗಳಲ್ಲಿ ಹೆಣ್ಣು ಇದನ್ನು ಇನ್ನೂ ಸಹಿಸುತ್ತಲೇ ಇದ್ದಾಳೆ. ಮುಸ್ಮಾನರಲ್ಲಿ ಬುರ್ಖಾ ಹಾಕಿಸಿ ಹೆಣ್ಣನ್ನು ದುರ್ಬಲ ಆಗಿರಿಸಿರುವಂತೆ, ಅನಾದಿ ಕಾಲದಿಂದ ಭಾರತದಲ್ಲಿ ಹೆಣ್ಣಿಗೆ ಚಪ್ಪಲಿ ಇಲ್ಲದಂತೆ ಮಾಡಿ ಇದೇ ಹಠ ಸಾಧಿಸಿದ್ದಾರೆ.

ಹೆಣ್ಣು ಸದಾ ಮನೆಯಲ್ಲೇ ಇರುತ್ತಿದ್ದರಿಂದ, ಆಕೆ ಹೊರಗೆ ಹೊರಟಾಗಲೂ ಚಪ್ಪಲಿ ಬೇಡ ಎನ್ನುತ್ತಾರೆ. ದಾರಿ ಮಧ್ಯೆ ಕಲ್ಲುಮುಳ್ಳು ಏನೇ ಇದ್ದರೂ, ಬರಿಗಾಲಲ್ಲೇ ಅವಳು ಓಡಾಡಬೇಕೆಂದು ತಾಕೀತು ಮಾಡುತ್ತಾರೆ. ಮಂದಿರಗಳಲ್ಲಿ ಈ ಪರಂಪರೆ ಹೆಚ್ಚು. ಹೀಗೆ ಚಪ್ಪಲಿ ಇಲ್ಲದಂತೆ ಮಾಡುವುದು ನಿಜಕ್ಕೂ ತಪ್ಪು. ಇದನ್ನು ಖಂಡಿತಾ ವಿರೋಧಿಸಬೇಕು. ಮಂದಿರ, ಮಸೀದಿಗಳಲ್ಲಿ ಚಪ್ಪಲಿ ಕಳಚಿಸುವುದರಿಂದ ಆಯಾ ಧರ್ಮದ ದೇವರುಗಳು ಹೆಚ್ಚು ಪ್ರಸನ್ನನಾಗುವನೇ? ಕ್ರೈಸ್ತರು ಶೂ ಚಪ್ಪಲಿ ಧರಿಸಿ ಚರ್ಚಿಗೆ ಹೋದ ಮಾತ್ರಕ್ಕೆ ಅವರ ದೇವರು ಶಪಿಸುವನೇ? ವಿದೇಶಗಳಿಗೂ ಇಂಥ ಸ್ಟುಪಿಡಿಟಿಯನ್ನು ಕೊಂಡೊಯ್ಯುವ ನಮ್ಮ ದೇಶದವರ ಪರಿಗೆ ಏನೆಂದು ಹೇಳುವುದು? ಒಂದೆಡೆ ಚಪ್ಪಲಿ ಕಳಚಿ ಆಸ್ತಿಕತೆ ಮೆರೆದರೆ, ಮತ್ತೊಂದೆಡೆ ಎಲ್ಲೆಂದರಲ್ಲಿ ಎಲೆ ಅಡಿಕೆ ಜಗಿದು ಉಗಿದಿರುತ್ತಾರೆ. ರಸ್ತೆ ಬೀದಿ ಬದಿ ಗಂಡಸರು ಎಗ್ಗಿಲ್ಲದೆ ಮೂತ್ರ ವಿಸರ್ಜನೆಗೆ ತೊಡಗುತ್ತಾರೆ. ಕೈಗೆ ಸಿಕ್ಕಿದ ಕಲ್ಲಿನಿಂದ ಶಿಲ್ಪ ಕಡೆದು ದೇವರ ವಿಗ್ರಹ ಎಂದು ಪೂಜೆ ಸಲ್ಲಿಸುತ್ತಾರೆ. ಇದೆಲ್ಲಾ ಎಷ್ಟು ಸರಿ?

EMI ಎಂಬ ಮಾಯಾಜಾಲ

ಹೊರಗಿನ ಜಂಕ್‌ ಫುಡ್‌ ತರಿಸಿ ಸೇವಿಸುವುದು ಯಾ ಹೊರಗಿನ ಹೊಸ ಹೊಸ ರೆಸ್ಟೋರೆಂಟ್‌ ಗಳಿಗೆ ನುಗ್ಗಿ ಸದಾ ಅಲ್ಲೇ ಊಟ ಮಾಡುವುದು ಇಂದಿನ ಜೆನ್‌ Z ಮಂದಿಯ ಫ್ಯಾಷನ್‌. ಹೀಗಾಗಿ ಇವರು ತಮ್ಮ 30-40 ಸಾವಿರದ ಸಂಬಳದಲ್ಲಿ ಏನನ್ನೂ ಉಳಿತಾಯ ಮಾಡದೆ, ಕೈಗೆ ಸಿಕ್ಕಿದ ಪರ್ಸನಲ್ ಲೋನ್‌ ಬಾಚಿಕೊಳ್ಳುತ್ತಿದ್ದಾರೆ. ದುಬಾರಿ ಬ್ರಾಂಡೆಡ್‌ ಡ್ರೆಸೆಸ್‌, ಸದಾ ಪಾರ್ಟಿ, ಲಾಂಗ್‌ ಡ್ರೈವ್‌, ಮೋಜುಮಸ್ತಿ ಇದೇ ಇವರ ಜಪವಾಗಿದೆ. ಎಲ್ಲಿ ನೋಡಿದರೂ ಬಾರ್‌ ಪಬ್‌ ತುಂಬಿ ತುಳುಕುತ್ತಿರುವುದು ಈ ಜೆನ್‌  Z ಮಂದಿಯಿಂದಲ್ಲದೇ ಮತ್ತಾರಿಂದ? ಇವರಿಗೆ ನಾಳಿನ ಚಿಂತೆ ಇಲ್ಲ, ಇಂದು ಮಜಾ ಉಡಾಯಿಸಿದರೆ ಆಯ್ತು.

ಇದರ ಮೂಲ ದೋಷ ಇವರ ತಾಯಿ ತಂದೆಯರಿಗೆ ಅನ್ವಯಿಸುತ್ತದೆ ಎಂದರೆ ತಪ್ಪಲ್ಲ. ಅವರುಗಳು ತಾವು ಕಷ್ಟಪಟ್ಟು ಗಳಿಸಿದ  ಅಲ್ಪಾದಾಯದಲ್ಲಿ ಏನನ್ನೂ ಉಳಿಸಿಕೊಳ್ಳದೆ, ಕೇಳಿದ್ದನ್ನೆಲ್ಲ ಮಕ್ಕಳಿಗೆ ಕೊಡಿಸಿ, ಮುದ್ದು ಹತ್ತಿಸಿ ಜೆನ್‌ Z ಈ ಪರಿ ದಾರಿ ತಪ್ಪುವಂತೆ ಮಾಡಿದ್ದಾರೆ. ಇಂದಿನವರು ಕೈಗೆ ಸಿಕ್ಕಿದ ಲೋನ್‌ ಪಡೆದು ಅದನ್ನೇ ಉಳಿತಾಯ ಎಂದು ಭ್ರಮಿಸುತ್ತಾರೆ. EMI ಎಂಬ ಮಾಯಾಜಾಲಕ್ಕೆ ಸಿಲುಕಿ ಅದರ ಕಬಂಧ ಬಾಹುವಿನಿಂದ ಹೊರಬರಲಾಗದೆ ತತ್ತರಿಸುತ್ತಿದ್ದಾರೆ. ಕ್ರೆಡಿಟ್‌ ಕಾರ್ಡ್ ಕಂಪನಿಗಳು ರೂ. 2 ಸಾವಿರದ ರೆಸ್ಟೋರೆಂಟ್‌ ಬಿಲ್ ‌ಗಳಿಗೆ ನೀಡುವ ಮೂಲಕ ದಿನೇದಿನೇ ಆಫರ್‌ ನೀಡುತ್ತಿದ್ದರೆ, ಯಾವ ಚಿಂತೆಯೂ ಇಲ್ಲದೆ ಜೆನ್‌Z ಅದನ್ನು ಉಡಾಯಿಸುತ್ತಿದ್ದಾರೆ, ಆ ಕಂಪನಿಗಳವರು ತಮ್ಮ ಬಲೆಗೆ ಬಿದ್ದ ಈ ಮಿಕಗಳನ್ನು ಕಂಡು ಮೀಸೆ ತಿರುತ್ತಿದ್ದಾರೆ!

ಈ ತರಹದ ಟ್ರಾಪ್‌ ಹಿಂದೆ ಇರುತ್ತಿರಲಿಲ್ಲ, ಅಂತೇನಲ್ಲ. ಇಷ್ಟು ಹೀನಾಯವಾಗಿರಲಿಲ್ಲ ಅನ್ನೋದು ನಿಜ. ಆ ಕಾಲದವರು ಈ ಜನ್ಮದ್ದಲ್ಲ, ಮುಂದಿನ ಜನ್ಮದಲ್ಲಿ ನೆಮ್ಮದಿ ಕಾಣಬೇಕೆಂದು ಪೂಜಾರಿಗಳ ಮಾತು ನಂಬಿ, ಮಂದಿರಕ್ಕೆ ಕಾಣಿಕೆ ಸಲ್ಲಿಸುತ್ತಿದ್ದರು, ಹರಕೆ ತೀರಿಸುತ್ತಿದ್ದರು. ಹರಿದ ಬಟ್ಟೆ, ಅರೆಹೊಟ್ಟೆ ಉಂಡಾದರೂ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು. ಕೆಲವೇ ಮಂದಿ ಮಾತ್ರ ಇಂಥ ಜಾಲಕ್ಕೆ ಸಿಲುಕುತ್ತಿರಲಿಲ್ಲ, ಅವರಿಗೆ ನಾಸ್ತಿಕರು ಎಂಬ ಹಣೆಪಟ್ಟಿ ಕಟ್ಟಾಯ್ತು. ಆದರೂ ಅವರೂ ಸಹ ಮದುವೆಯಂಥ ಶುಭ ಸಮಾರಂಭಗಳಲ್ಲಿ, ಹುಟ್ಟುಸಾವಿನ ಸಂದರ್ಭಗಳಲ್ಲಿ ಆಸ್ತಿಕರಿಗೆ ಬೆದರಿ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದರು.

ಅದೇ ಇಂದು ಸೀನ್‌ ಬದಾಗಿದೆ. ವ್ಯಾಲೆಂಟೈನ್ಸ್ ಡೇ, ಬರ್ತ್‌ ಡೇ ಪಾರ್ಟಿ, ಆ್ಯನಿವರ್ಸರಿ, ಮದುವೆ ಸಮಾರಂಭ, ಫ್ಯಾಷನ್‌, ಗ್ಲಾಮರ್‌, ಹೊಸ ಮೊಬೈಲ್‌, ಲ್ಯಾಪ್‌ ಟಾಪ್‌, ಗಾಡಿ ಇತ್ಯಾದಿಗಳ ಹೆಸರಲ್ಲಿ ಮಾರುಕಟ್ಟೆಗೆ ಬಂದಿದ್ದನ್ನೆಲ್ಲ ಕೊಳ್ಳಲೇಬೇಕೆಂದು `ಕೊಳ್ಳುಬಾಕ’ ಸಂಸ್ಕೃತಿಗೆ ಬಲಿಯಾಗುತ್ತಿದ್ದಾರೆ. ಧಾರ್ಮಿಕ/ಕಮರ್ಷಿಯಲ್ ಎರಡೂ ಬಗೆಯವುಗಳಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡರಲ್ಲೂ ಹಣದ ಲೂಟಿ ಆಗುತ್ತಿದೆ. ಕಷ್ಟಪಟ್ಟು ಗಳಿಸುತ್ತಿರುವವರು ಹಣ ಪೋಲು ಮಾಡಿಕೊಳ್ಳುತ್ತಿದ್ದಾರೆ.

ಅಸಲಿಗೆ ಪೇರೆಂಟ್ಸ್ ಈ ಜೆನ್‌ Z ಮಂದಿಗೆ ಮೊದಲಿನಿಂದಲೇ ಉಳಿತಾಯದ ಮಹತ್ವ ಕಲಿಸಬೇಕಿತ್ತು. ಅದರಲ್ಲೂ ಭಾರಿ ಉಳಿತಾಯದ ಬಗ್ಗೆ! 1990ರ ನಂತರ ಮದುವೆಯಾದ ಯುವಜನತೆ, ತಮ್ಮ ಮುಂದಿನ ಪೀಳಿಗೆಯನ್ನು ಅತಿಯಾದ ಮುದ್ದಿನಿಂದ ಬೆಳೆಸಿ, ಅವರು ಕೇಳಿದ್ದನ್ನೆಲ್ಲಾ ಕೊಡಿಸತೊಡಗಿದರು. 1 ಯಾ 2 ಮಕ್ಕಳಿದ್ದ ಮನೆಯಾದ್ದರಿಂದ ಆ ಮಕ್ಕಳು ಒಂದಿಷ್ಟೂ ಕಷ್ಟಪಡದೆ ಅತಿ ಸುಖವಾಗಿ ಬೆಳೆದು ನಿಂತರು. ಇದರ ಪರಿಣಾಮ…. ಇದೀಗ 25-30ರ ತರುಣ ಪೀಳಿಗೆ, ಇಂದು ಡೇಟ್‌ ಟ್ರಾಪ್‌ ನಲ್ಲಿ ಸಿಲುಕಿಕೊಂಡಿದೆ. ಇದೇ ತರಹ ಹಿಂದಿನ ತಲೆಮಾರಿನವರು ಧರ್ಮದ ಹೆಸರಿನಲ್ಲಿ ಭಾರಿ ಸಾಲ ಮಾಡಿ, ಅದನ್ನು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾದ ಎಷ್ಟೋ ಸಂಗತಿಗಳಿವೆ.

ಇಂದಿನ ಅತಿಯಾದ ಖರ್ಚು, ಮುಂದಿನ ಬವಣೆಗಳಿಗೆ ನಾಂದಿ. ಇಂದಿನ ನಾಳಿನ ಕಂಟಕಕ್ಕೆ ದಾರಿ. ಇಂದು ಮಜಾ ಉಡಾಯಿಸಲೇಬೇಕು ಎಂಬ ಮನೋಭಾವ ನಾಳಿನ ದೊಡ್ಡ ಸಂಕಟಕ್ಕೆ ದಾರಿಯಾಗಿದೆ. ಇದನ್ನು ಇಂದಿನ ಪೀಳಿಗೆಯವರು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ರಾಜಕೀಯ ನೇತಾರರು ದೇಶ ಮುಂದುವರಿದಿದೆ ಎಂದು ಎಷ್ಟೇ ಬೊಬ್ಬಿಡಲಿ, EMI ಎಂಬ ಕೂಪಕ್ಕೆ ಸಿಲುಕಿದ ಪ್ರಜೆ, ಅದರಿಂದ ಹೊರಬರಲು ಹರಸಾಹಸ ಪಡಬೇಕು. ಇದೊಂದು ಭಯಂಕರ ಕೂಪ, ಹೊರಗಿನಿಂದ ಬೆಡಗು ಬಿನ್ನಾಣದ ಆಕರ್ಷಣೆ ಉಂಟು, ಒಳಗೆಲ್ಲ ಕೆಸರು, ಕೊಳಕು, ಅಸಹ್ಯಗಳೇ ತುಂಬಿವೆ. ಬದುಕಲು ಕಲಿತು ಸೂಕ್ತವಾದದ್ದನ್ನು ಆರಿಸಿಕೊಳ್ಳಿ.

ಪುಸ್ತಕಗಳು ಮಾತ್ರ ಪರಿಹಾರ

ಪಾರ್ಟನರ್‌ ಜೊತೆ ಏನೇ ಟ್ರಬಲ್ ಎದುರಾದರೂ ಅದಕ್ಕೆ ಏನು ಮಾಡಬೇಕು? ಇಂದು ಜೆನ್‌ Z ಜೋಡಿಗೆ ಇದರ ಅರಿವಿದೆಯೇ? ಹಿಂದಿನ ಕಾಲದಲ್ಲಾದರೆ ಪಾರ್ಟನರ್‌ ಶಿಪ್‌ ಜೀವಮಾನವಿಡೀ ನಡೆಯುತ್ತಿತ್ತು. ಕಷ್ಟ, ಸುಖ ಏನೇ ಇದ್ದರೂ ನಡೆದು ಹೋಗುತ್ತಿತ್ತು. ಆದರೆ ಇಂದು ಸಣ್ಣ ಸಮಸ್ಯೆ ಸಹ ಭೂತಾಕಾರವಾಗಿ ಕಾಡತೊಡಗುತ್ತದೆ. ಸಂಗಾತಿ ಹುಡುಗ, ಹುಡುಗಿ ಯಾ ಸಲಿಂಗಿ ಆಗಿರಲಿ, ದೈನಂದಿನ ಸಣ್ಣಪುಟ್ಟ  ಸಮಸ್ಯೆಗಳೂ ಸಹ ಘೋರವಾಗಿ ಕಾಡುತ್ತಲೇ ಇರುತ್ತವೆ.

ಹಿಂದೆಲ್ಲ ಕುಟುಂಬ ಅಂದ್ರೆ ಫ್ಲೈ ವೀಲ್ ‌ತರಹ ನಡೆದುಕೊಂಡು ಹೋಗುತ್ತಿತ್ತು. ಹಿಂದಿನ ಕಾಲದಲ್ಲಿ ಸ್ಟೀಂ ಎಂಜಿನ್‌ ಗಳಿಗೆ ಭಾರೀ ಸಪೋರ್ಟ್‌ ಇದ್ದು, ಅದರ ಕೆಲಸ ಮುಖ್ಯವಾಗಿ ಪಿಸ್ಟನ್‌ ಇನ್‌ ಔಟ್‌ ಆಗುವಾಗ, ಅಪಾಯ ಆಗದಂತೆ ರಕ್ಷಿಸುತ್ತಿತ್ತು. ಅದುವೇ ಫ್ಲೈ ವೀಲ್ ‌ಎನಿಸಿತ್ತು. ಒಟ್ಟು ಕುಟುಂಬಗಳು ಈ ಜವಾಬ್ದಾರಿ ನಿರ್ವಹಿಸುತ್ತಿತ್ತು, ಹೊಸ ಜೋಡಿಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಬುದ್ಧಿವಾದ ಹೇಳಿ, ಹೇಗೋ ಹೆದರಿಸಿ ಬೆದರಿಸಿ ಇಡೀ ಸಪೋರ್ಟ್‌ ಸಿಸ್ಟಂ ನಿರ್ವಹಿಸುತ್ತಿತ್ತು. ಆದರೆ ಇಂದು ನವ ಜೋಡಿಗಳಿಗೆ ಹೀಗೆ ಮಾರ್ಗದರ್ಶನ, ಸಪೋರ್ಟ್‌ ನೀಡುವವರೇ ಇಲ್ಲ!

ಇಂದು ಫ್ಲೈ ವೀಲ್ ‌ಕೆಲಸ ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಕೆಲವು ಮಂದಿ ಕೌನ್ಸಿಲರ್ಸ್‌ ಬಳಿ ಹೋಗಿ ಸಲಹೆ ಪಡೆಯುವುದುಂಟು, ಅವರು ಸಮಸ್ಯೆ ಕೇಳಿಸಿಕೊಂಡು ಏನೋ ಒಂದಿಷ್ಟು ಹೇಳಿ ಫೀಸ್‌ ಕೀಳುತ್ತಾರೆ, ಪರಿಹಾರ ದೊರಕದು. ಹಿಂದಿನ ಕಾಲದ ಪೂಜಾರಿ, ಪಾದ್ರಿ, ಮೌಲ್ವಿಗಳಂತೆ ಇವರು ಸಮಾಧಾನ ಹೇಳುವರೇ ಹೊರತು ಬೇರೇನೂ ಮಾಡರು.

ಇದಕ್ಕೆ ಪರಿಹಾರವೇನು? ಅದುವೇ ಪುಸ್ತಕಗಳು! ಪ್ರತಿಯೊಂದು ವಿಧದ ಪುಸ್ತಕಗಳೂ ಒಂದಲ್ಲ ಒಂದು ಪರಿಹಾರ ಸೂಚಿಸುತ್ತವೆ. ಏಕೆಂದರೆ ಇದು ಅನುಭವೀ ಲೇಖಕರಿಂದ ಬರೆಯಲ್ಪಟ್ಟಿರುತ್ತವೆ. ದೊಡ್ಡ ಕಾದಂಬರಿಗಳನ್ನು ಓದುವಷ್ಟು ಸಹನೆ ಇಲ್ಲದಿದ್ದರೆ, ಪತ್ರಿಕೆಗಳ ಕಥೆ, ಲೇಖನಗಳಿಂದ ಬೇಕಾದ್ದನ್ನು ಕಲಿಯಿರಿ. ನಿಮಗೆ ಬೇಕಾದ ಪರಿಹಾರ ಖಂಡಿತಾ ಸಿಗುತ್ತದೆ. ಚ್ಯಾಟ್‌ ಜಿಪಿಟಿ, ಪೇರೆಂಟ್ಸ್, ಫ್ರೆಂಡ್ಸ್ ಬಳಿ ಪರಿಹಾರ ಸಿಗದು. ಯಾವುದೇ ವಿವಾದಕ್ಕೆ ಅಂತ್ಯ ಹಾಡುವುದು ಹೇಗೆ ಎಂಬುದು ಇಂದಿನ ಜೆನ್‌ Z ಮಂದಿಗೆ ಗೊತ್ತಿಲ್ಲ, ಸಂಗಾತಿಗಳಿಬ್ಬರೂ ಪರಸ್ಪರ ನನ್ನ ಮಾತು ಕೇಳಿ ಅದರಂತೆ ನಡೆಯಬಾರದೇಕೆ ಎಂದೇ ದಬಾಯಿಸುತ್ತಾರೆ.

ಪ್ರತಿಯೊಬ್ಬರ ವ್ಯಕ್ತಿತ್ವ ಬೇರೆ ಬೇರೆಯೇ ಆಗಿರುತ್ತದೆ. ಇಂಥ ವ್ಯಕ್ತಿತ್ವದ ಕುರಿತೇ ಹಿಂದೆಲ್ಲ ಪ್ರೇಮಾಲಾಪನೆಗೆ ತೊಡಗಿ, ಹೆತ್ತವರನ್ನು ಎದುರು ಹಾಕಿಕೊಂಡು ಮನೆಮಠ ತೊರೆದು ಬಂದದ್ದು ಮರೆತುಹೋಯಿತೇ? ಆದರೆ ಇಂದಿನ ಪರಿಸ್ಥಿತಿ ಸರಿದೂಗಿಸಲಾಗದೇ ಅದೇ ಸಂಗಾತಿಯನ್ನು ಕೊಲ್ಲುವ ಯಾ ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿ ಬಂದಿದ್ದಾದರೂ ಏಕೆ? ವಾದ ವಿವಾದ ಇಲ್ಲದ ಪ್ರಪಂಚವೇ ಇಲ್ಲ. ಅದಕ್ಕೆ ಪರಿಹಾರ ಸಹ ಅಸಾಧ್ಯವೇನಲ್ಲ. ಯಾರು ಮೊದಲು ಸೋಲುವುದು ಎಂಬುದರಲ್ಲೇ ವೈವಾಹಿಕ ಜೀವನ ವಿಚ್ಛೇದನದವರೆಗೂ ಎಳೆತಂದಿರುತ್ತದೆ. ಹೀಗಾಗಿ ಸಾಸುವೆಯಂಥ ಸಮಸ್ಯೆ ಹಿಮಾಲಯ ಪರ್ವತವಾಗಿ ಬೆಳೆದು ನಿಂತಿರುತ್ತದೆ. ಜೊತೆಗೊಂದು ಗೈಡ್‌ ಬುಕ್‌ ಇರದಿದ್ದರೆ, ಹಿಮಾಲಯಕ್ಕೆ ಚಾರಣ ಹೊರಡುವುದಿರಲಿ, ದೂರದ ಊರಿಗೆ ದಾರಿ ಹುಡುಕಿ ಹೋಗುವುದೂ ದುಸ್ತರವಾದೀತು.

ದಾರಿ ತಪ್ಪಿದ ಸಂಗಾತಿಯನ್ನು ಹಾಳಾಗಿ ಹೋಗಲಿ ಎಂದು ಬಿಟ್ಟುಬಿಡುವುದು ಸಮಸ್ಯೆಗೆ ಪರಿಹಾರವಲ್ಲ. ಇದು ಕಾಡಿನಲ್ಲಿ ದಾರಿ ತಪ್ಪಿದ ಮಗುವಿನ ಕಥೆ ಆದೀತು. ಆಳವಾದ ಕೆಸರಿನಲ್ಲಿ ಕಾಲು ಸಿಕ್ಕಿಹಾಕಿಕೊಂಡ ಹಾಗಾದೀತು. ಸಂಗಾತಿ ಸುಲಭವಾಗಿ ಸಿಗುವುದಿಲ್ಲ. ಸಿಕ್ಕಿರುವವರನ್ನು ಕೊನೆಯವರೆಗೂ ಕಾಪಾಡಿಕೊಳ್ಳಿ. ತುಸು ಸೊಟ್ಟಂಪಟ್ಟ, ಸೋಮಾರಿ, ಹುಚ್ಚು ಸಂಗಾತಿ ಸಹ ದಾರಿ ತಪ್ಪಿ ಬೇರೆ ಸಂಗಾತಿಯತ್ತ ವಾಲುವ ಪಾರ್ಟ್‌ ನರ್‌ ಗಿಂತ ಎಷ್ಟೋ ಮೇಲು. ಧಾರ್ಮಿಕ ಜಂಜಾಟದಲ್ಲಿ ಸಿಲುಕುವವರಿಗಿಂತ ಇದು ಮೇಲು. ಇಂಥವರ ವ್ಯಾಮೋಹಕ್ಕೆ ಸಿಲುಕದೆ, ಇರುವ ಸಂಗಾತಿ ಜೊತೆ ಮುಂದೆ ಬಾಳುವೆ ಹೇಗೆ ಎಂದು ಯೋಚಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ