ಹೆಂಗಸರನ್ನು ದುರ್ಬಲ ಆಗಿಸುವ ಹುನ್ನಾರದ ಪರಂಪರೆ

ಇಂದಿಗೂ ಭಾರತದ ಬಹುತೇಕ ಮನೆ, ಅಂಗಡಿ, ಕಛೇರಿಗಳಲ್ಲಿ ಹೊರಗಿ ಚಪ್ಪಲಿ ಬಿಟ್ಟು ಒಳಗೆ ಹೋಗುವ ಪರಂಪರೆ ಇದೆ. ಹೊರಗಿನ ಕೊಳೆ ಒಳಗೆ ಬರಬಾರದು ಎಂಬುದು ಇಲ್ಲಿನ ವಾದ. ಅಮೆರಿಕಾದಲ್ಲಿ ಗುಜರಾತಿ ಬಿಸ್‌ ನೆಸ್‌ ವುಮೆನ್‌ ಹಾಗೂ ಟೆಕ್ ಎಕ್ಸ್ ಪರ್ಟ್ಸ್ ಸಹ, ತಮ್ಮ ಕಛೇರಿ, ವರ್ಕ್‌ ಶಾಪ್‌ ಗಳಲ್ಲಿ, ಗ್ರಾಹಕರಿಗೆ ಚಪ್ಪಲಿ ಹೊರಗೆ ಬಿಟ್ಟು ಬನ್ನಿ ಅಂತಾರೆ. ಅಮೆರಿಕಾದ ಸೋಶಿಯಲ್ ಮೀಡಿಯಾ ಇದನ್ನು ಭಾರಿ ಖಂಡಿಸಿದೆ.

ಎಲ್ಲಿಯವರೆಗೆ ಜನ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರೋ, ನೆಲದ ಮೇಲೆಯೇ ಊಟ ಬಡಿಸಲಾಗುತ್ತಿತೋ, ನೆಲದ ಮೇಲೆ ಚಾಪೆ ಹಾಕಿ ಮಲಗುತ್ತಿದ್ದರೋ.... ಅಲ್ಲಿಯವರೆಗೂ ಇದನ್ನು ಸರಿ ಎನ್ನಬಹುದಿತ್ತು. ಆದರೆ ಇಂದಿನ ದಿನಗಳಲ್ಲಿ ಯಾರು ಹೀಗೆ ಮಾಡುತ್ತಾರೆ? ಕಿಚನ್‌ ಸ್ಲಾಬ್‌ ಗಳು ಮೇಲಿವೆ, ಡೈನಿಂಗ್‌ ಟೇಬಲ್ ಎತ್ತರಕ್ಕಿವೆ, ಮಂಚ ನೆಲದ ಮಟ್ಟದಲ್ಲಿಲ್ಲ, ಸೋಫಾ ಸಹ.... ಹೀಗಿರುವಾಗ ಚಪ್ಪಲಿ ಮನೆಯ ಹೊರಗಿರಲಿ ಎನ್ನುವುದು ಮೂಢನಂಬಿಕೆ ಅಲ್ಲದೆ ಬೇರೇನಲ್ಲ. ನಮ್ಮ ಮನೆ, ಅಂಗಡಿ, ಕಛೇರಿ, ಕಾರ್ಖಾನೆಗಳೆಲ್ಲ ಮಂದಿರಕ್ಕೆ ಸಮ ಎಂದು ತೋರಿಸಿಕೊಳ್ಳುವ ಢೋಂಗಿತನವಿದು. ಇಲ್ಲಿಗೆ ಬರುವ ಭಕ್ತರು, ಯಾಚಕರು, ದರಿದ್ರರೇ ಸರಿ ಎಂಬುದರ ಸಂಕೇತ. ಚಪ್ಪಲಿ ಕಳಚಿಟ್ಟು ಬರುವವರನ್ನು ದೀನದರಿದ್ರರು ಎಂದೇ ಭಾವಿಸಲಾಗುತ್ತದೆ. ದೇವಾಲಯಗಳಿಗೆ ಹೋಗುವ ಭಕ್ತರ ಗೋಳೂ ಇದೇ ತಾನೇ?

ಈ ರೀತಿ ಮಾಡಿ ಅನಾದಿ ಕಾಲದಿಂದಲೂ ಹೆಂಗಸರನ್ನು ಪಾತಾಳಕ್ಕೆ ತುಳಿಯುವ ಪ್ರಾಚೀನ ಪರಂಪರೆ ಇದು. ಅನಾದಿ ಕಾಲದಿಂದಲೂ ಮನೆಗಳಲ್ಲಿ ಹೆಂಗಸರನ್ನು ಸಾಮಾನ್ಯವಾಗಿ ಸದಾ ಚಪ್ಪಲಿ ಇಲ್ಲದೆ ಬರಿಗಾಲಲ್ಲೇ ಕೆಲಸ ಮಾಡಬೇಕೆಂದು ಸಂಪ್ರದಾಯ ಮಾಡಿಟ್ಟಿದ್ದಾರೆ. ಇದರಿಂದ ಅವರ ಹಿಮ್ಮಡಿ ಒಡೆದು, ರಕ್ತ ಒಸರಿ, ನೋವಾದರೂ ಸರಿ. ಹಿಂದೆಲ್ಲ ಹೆಂಗಸರಿಗೆ ಒಡೆದ ಹಿಮ್ಮಡಿ, ಅದರಿಂದ ನೋವು ಮಾಮೂಲಿ ಸಂಗತಿಯೇ ಆಗಿತ್ತು. ಅವರುಗಳಿಗೆ ಬೇಕೆಂದೇ ಚಪ್ಪಲಿ ಕೊಡಿಸುತ್ತಿರಲಿಲ್ಲ. ಅಬಲೆ, ದುರ್ಬಲ ಹೆಣ್ಣು ಹೋರಾಡಲಾಗದೆ ಮೌನವಾಗಿ ಹಿಂಸೆ ಅನುಭವಿಸುತ್ತಿದ್ದಳು. ಗಂಡಸರ ಆಕ್ರಮಣದ ಸಂದರ್ಭದಲ್ಲೂ ತಪ್ಪಿಸಿಕೊಂಡು ಓಡಲಾಗುತ್ತಿರಲಿಲ್ಲ. ವರ್ಕರ್ಸ್‌ ಜೊತೆಯೂ ಹೀಗೇ ಆಗುತ್ತದೆ. ಅವರುಗಳು ಹೊರಗೇ ಚಪ್ಪಲಿ ಬಿಟ್ಟು, ಮಾನಸಿಕವಾಗಿ ಎಷ್ಟೇ ಕುಗ್ಗಿ ಹೋಗಿದ್ದರೂ, ಹಾಗೆಯೇ ಕೆಲಸ ಮಾಡಬೇಕು. ಹಿಂದೆಲ್ಲ ಹಳ್ಳಿಗಳಲ್ಲ ಶ್ರೀಮಂತರ ಡೌಲಿನೆದುರು, ಅವರ ಮನೆ ಮುಂದೆ ಹಾದುಹೋಗುವಾಗ, ಬಡವರು ಚಪ್ಪಲಿ ಕೈಲಿ ಹಿಡಿದೇ ನಡೆದು ಹೋಗುತ್ತಿದ್ದರು.

ಅನಾದಿ ಕಾಲದಿಂದ, ಮಾನವರು ಚಪ್ಪಲಿ ಧರಿಸ ತೊಡಗಿದಾಗಿನಿಂದ, ಅವರ ಕಾಲು ಎಷ್ಟೋ ಮೇಲಾಯಿತು. ಸಶಕ್ತ ಕಾಲು ಇವರಿಂದಲೇ ಮಾನವ ಪ್ರಕೃತಿಗೆ ವಿರುದ್ಧವಾಗಿ ಚಪ್ಪಲಿ ಧರಿಸ ತೊಡಗಿದ. ಬಟ್ಟೆಗಳ ತರಹವೇ ಚಪ್ಪಲಿ ಸಹ ಅಪ್ರಾಕೃತಿಕ. ಚಪ್ಪಲಿ ಶೂ ದೆಸೆಯಿಂದ ಮಾನವ ಮರುಭೂಮಿಯಲ್ಲೂ ನಡೆದಾಡುವಂತಾದ, ಕೆಸರುಗದ್ದೆಯಲ್ಲಿ ಕೆಲಸ ಮಾಡಬಲ್ಲವನಾದ, ಬಿಸಿ ಬಂಡೆಗಳನ್ನು ಏರಬಲ್ಲವನಾದ.

ಚಪ್ಪಲಿ ಶೂ ಇತ್ಯಾದಿ ಆಧುನಿಕತೆಯ ಸಂಕೇತವಲ್ಲ, ಇದು ಅಧಿಕಾರದ ಸಂಕೇತ. ಇವನ್ನು ಕಳಚಿಸುವುದು ಒಂದು ದೊಡ್ಡ ಕಾನ್ಸಪಿರೆಸಿ. ವಿಶ್ವದ ಬಹುತೇಕ ಸಮಾಜಗಳಲ್ಲಿ ಹೆಣ್ಣು ಇದನ್ನು ಇನ್ನೂ ಸಹಿಸುತ್ತಲೇ ಇದ್ದಾಳೆ. ಮುಸ್ಮಾನರಲ್ಲಿ ಬುರ್ಖಾ ಹಾಕಿಸಿ ಹೆಣ್ಣನ್ನು ದುರ್ಬಲ ಆಗಿರಿಸಿರುವಂತೆ, ಅನಾದಿ ಕಾಲದಿಂದ ಭಾರತದಲ್ಲಿ ಹೆಣ್ಣಿಗೆ ಚಪ್ಪಲಿ ಇಲ್ಲದಂತೆ ಮಾಡಿ ಇದೇ ಹಠ ಸಾಧಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ