ಸಹಜ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟ ನಾನಾ ಪಾಟೇಕರ್ (76) ಗುರುವಾರ (ಅ.8) ಮುಂಜಾನೆ ತೀವ್ರ ಹೃದಯಾಘಾತದಿಂದ ಗೋವಾದ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ಪಣಜಿಯ ಸಮೀಪದ ಡೊನಾ ಪೌಲಾದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ನಾನಾ ಪಾಟೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಬೆಳಗಿನ ಜಾವ 5.10ರ ಸುಮಾರಿಗೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಹಿರಿಯ ವೈದ್ಯ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.

ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ನೀಡಿದರೂ ಪಾಟೇಕರ್ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಸಾವಿನ ನಿಖರ ಕಾರಣ ತಿಳಿಯಲು ಮೆಡಿಕೋ-ಲೀಗಲ್ ಪ್ರಕರಣ ದಾಖಲಿಸಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಪಾಟೇಕರ್ ಅವರ ಸ್ನೇಹಿತರೊಬ್ಬರು ಆಸ್ಪತ್ರೆಯ ವೈದ್ಯರಿಗೆ ನೀಡಿದ ಮಾಹಿತಿ ಪ್ರಕಾರ, ನಟ ನಸುಕಿನ ಜಾವ 3.30ರ ಸುಮಾರಿಗೆ ತೀವ್ರ ಅಸ್ವಸ್ಥನಾಗಿದ್ದೇನೆ ಎಂದು ಸ್ನೇಹಿತರಿಗೆ ಸಂದೇಶ ಕಳುಹಿಸಿದ್ದರು. ಸುಮಾರು ಬೆಳಗಿನ ಜಾವ 4 ಗಂಟೆಗೆ ಸ್ನೇಹಿತರು ಆ ಸಂದೇಶವನ್ನು ನೋಡಿದ್ದು, ತಕ್ಷಣ ಪಾಟೇಕರ್ ಅವರು ಕೇರ್‌ಟೇಕರ್‌ನೊಂದಿಗೆ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಧಾವಿಸಿದ್ದರು.

ಕೇರ್‌ಟೇಕರ್ ಆಸ್ಪತ್ರೆಗೆ ಮಾಹಿತಿ ನೀಡಿದ ಬಳಿಕ, ನಿವಾಸಕ್ಕೆ ಆಂಬ್ಯುಲೆನ್ಸ್ ಕಳುಹಿಸಲಾಗಿತ್ತು. ಆಂಬ್ಯುಲೆನ್ಸ್‌ನಲ್ಲೇ ಚಿಕಿತ್ಸೆ ಆರಂಭಿಸಲಾಗಿತ್ತು ಎಂದು ಸಾಲ್ಕರ್ ತಿಳಿಸಿದ್ದಾರೆ.

ಪಾಟೇಕರ್ ಅವರ ನಿವಾಸ ಆಸ್ಪತ್ರೆಯಿಂದ ಕೇವಲ ಐದು ನಿಮಿಷಗಳ ದೂರದಲ್ಲಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ವೈದ್ಯರು ಹೃದಯ ಮತ್ತು ಶ್ವಾಸಕ್ಕೆ ಪುನಶ್ಚೇತನ ತುಂಬಲ ಪ್ರಯತ್ನಿಸಿದರು. ಆದರೆ ಬೆಳಗಿನ ಜಾವ 5.10ಕ್ಕೆ ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಮರಣೋತ್ತರ ಪರೀಕ್ಷೆಗಾಗಿ ಅವರ ಪಾರ್ಥಿವ ಶರೀರವನ್ನು ಬಾಂಬೋಲಿಂನಲ್ಲಿರುವ ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

ಬಾಲಿವುಡ್​, ಮಾಲಿವುಡ್​ ಚಿತ್ರರಂಗದ ಪ್ರಮುಖ ನಟರಲ್ಲಿ ನಾನಾ ಪಾಟೇಕರ್ ಕೂಡ ಒಬ್ಬರು. 1978ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ‘ಪರಿಂಧಾ’, ‘ಪ್ರಹಾರ್’, ‘ಅಂಗಾರ್’, ‘ಕ್ರಾಂತಿವೀರ್’, ‘ತಿರಂಗಾ’, ‘ಖಾಮೋಶಿ’ ಮತ್ತು ‘ಅಬ್ ತಕ್ ಛಪ್ಪನ್’ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸುವ ಮೂಲಕ ಜನಪ್ರಿಯ ನಟರಾಗಿದ್ದರು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ