ಮಣಿಪಾಲ್ ಆಸ್ಪತ್ರೆ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ‘SHE RISES’ ಕಾರ್ಯಕ್ರಮಕ್ಕೆ ಚಾಲನೆ

*ಬೆಂಗಳೂರು, ಅಕ್ಟೋಬರ್ 29, 2026:

ಸ್ತನ ಕ್ಯಾನ್ಸರ್ ಮಹಿಳೆಯರ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಚಿಕಿತ್ಸೆಯ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳು, ಆತ್ಮವಿಶ್ವಾಸದ ಕೊರತೆ ಮತ್ತು ಭವಿಷ್ಯದ ಬಗ್ಗೆ ಆತಂಕ ಸೇರಿದಂತೆ ಹಲವು ಸವಾಲುಗಳನ್ನು ಮಹಿಳೆಯರು ಎದುರಿಸುತ್ತಾರೆ. ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಮಣಿಪಾಲ್ ಆಸ್ಪತ್ರೆ, ಹಳೆಯ ವಿಮಾನ ನಿಲ್ದಾಣ ರಸ್ತೆ, ಸ್ತನ ಕ್ಯಾನ್ಸರ್ ಜಾಗೃತಿ ವಾರದ ಅಂಗವಾಗಿ ಕ್ಯಾನ್ಸರ್‌ನಿಂದ ಗುಣಮುಖರಾದ ಮಹಿಳೆಯರು ಮತ್ತು ವೈದ್ಯಕೀಯ ತಜ್ಞರ ವಿಶೇಷ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಕಾರ್ಯಕ್ರಮದಲ್ಲಿ ಸ್ತನ ಕ್ಯಾನ್ಸರ್‌ನಿಂದ ಗುಣಮುಖರಾದ ಮಹಿಳೆಯರು ತಮ್ಮ ಚಿಕಿತ್ಸೆಯ ಅನುಭವಗಳನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ, ಕ್ಯಾನ್ಸರ್‌ನಿಂದ ಬಳಲುತ್ತಿರುವ ಇತರ ಮಹಿಳೆಯರಿಗೆ ಧೈರ್ಯ ತುಂಬಲು ಮತ್ತು ಬೆಂಬಲ ನೀಡಲು ಗುಣಮುಖರಾದ ಮಹಿಳೆಯರಿಗೆ ತರಬೇತಿ ನೀಡುವ ‘SHE RISES’ ಎಂಬ ಹೊಸ ಕಾರ್ಯಕ್ರಮವನ್ನು ಆರಂಭಿಸಲಾಯಿತು.

ಕಾರ್ಯಕ್ರಮದಲ್ಲಿ ವಲಯ ನಿರ್ದೇಶಕ ಡಾ. ಮನೀಶ್ ರೈ ಮತ್ತು ಆಸ್ಪತ್ರೆಯ ನಿರ್ದೇಶಕಿ ಶ್ರೀಮತಿ ನಯನಾ ಪೈ ಮಾತನಾಡಿದರು.

ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವೈದ್ಯಕೀಯ ಆರೈಕೆಯ ಜೊತೆಗೆ ರೋಗಿಗಳಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ಮತ್ತು ಕುಟುಂಬದ ಬೆಂಬಲವೂ ಮುಖ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ‘She Hears’, ‘She Chooses’, ‘She Prevails’ ಮತ್ತು ‘She Navigates’ ಎಂಬ ನಾಲ್ಕು ವಿಭಾಗಗಳಲ್ಲಿ ಗೋಷ್ಠಿ ಆಯೋಜಿಸಲಾಗಿತ್ತು. ಈ ನಾಲ್ಕು ವಿಭಾಗಗಳಲ್ಲಿ ಸ್ತನ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ, ಔಷಧೋಪಚಾರ, ವಿಕಿರಣ ಚಿಕಿತ್ಸೆ, ಚೇತರಿಕೆ ಮತ್ತು ಚಿಕಿತ್ಸೆಯ ನಂತರದ ಜೀವನದ ಕುರಿತು ವೈದ್ಯರು ಹಾಗೂ ಗುಣಮುಖರಾದವರು ಚರ್ಚಿಸಿದರು.

IMG-20261030-WA0114

*ಆರಂಭಿಕ ಪತ್ತೆ ಮತ್ತು ಆಧುನಿಕ ಶಸ್ತ್ರಚಿಕಿತ್ಸೆ*

‘She Hears’ ವಿಭಾಗದಲ್ಲಿ ಶಸ್ತ್ರಚಿಕಿತ್ಸಾ ತಜ್ಞರು ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ, ವಂಶವಾಹಿ ಪರೀಕ್ಷೆ ಮತ್ತು ದುಗ್ಧರಸ ಗ್ರಂಥಿಗಳ ಪರೀಕ್ಷೆಯ ಬಗ್ಗೆ ವಿವರಿಸಿದರು.

2023ರಲ್ಲಿ BRCA  ( ಸ್ತನ ಕ್ಯಾನ್ಸರ್ ಜೀನ್ ) ಜೀನ್ ಬದಲಾವಣೆಯಿಂದ ಉಂಟಾಗುವ ಸ್ತನ ಕ್ಯಾನ್ಸರ್ ಪತ್ತೆಯಾದ 46 ವರ್ಷದ ಶ್ರೀಮತಿ ಸುಮನ್ ಮಾಲೂ ಅವರು ಕಿಮೊಥೆರಪಿ, ಎರಡೂ ಸ್ತನಗಳ ಶಸ್ತ್ರಚಿಕಿತ್ಸೆ ಮತ್ತು ವಿಕಿರಣ ಚಿಕಿತ್ಸೆಗೆ ಒಳಗಾದರು. ಇವರಿಗೆ, ಸರ್ಜಿಕಲ್ ಆಂಕೊಲಾಜಿ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರು – ಡಾ. ಶಬ್ಬೆರ್ ಜವೇರಿ ಮತ್ತು ವೈದ್ಯಕೀಯ ಆಂಕೊಲಾಜಿ, ಇಮ್ಯುನೊಥೆರಪಿ ಮತ್ತು ನಿಖರ (Precision Medicine ) ಥೆರಪಿಯ ಪ್ರಧಾನ ಸಲಹೆಗಾರ್ತಿ – ಡಾ. ಪೂನಂ ಪಾಟೀಲ್  ಅವರು ಚಿಕಿತ್ಸೆ ನೀಡಿದರು.

ಅದೇ ರೀತಿ, ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಪತ್ತೆಯಾಗಿ ನಂತರ BRCA ಜೀನ್ ಬದಲಾವಣೆ ಇರುವುದು ತಿಳಿದುಬಂದ 63 ವರ್ಷದ ಶ್ರೀಮತಿ ಹೆಲೆನ್ ನೊರೊನ್ಹಾ ಅವರು ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗೆ ಒಳಗಾದರು. ಇವರಿಗೆ, ಶಸ್ತ್ರಚಿಕಿತ್ಸಾ ಮತ್ತು ರೊಬೊಟಿಕ್ ಸರ್ಜರಿ ತಜ್ಞ ಡಾ. ಹೇಮಂತ್ ಜಿ.ಎನ್. ಅವರು ಚಿಕಿತ್ಸೆ ನೀಡಿದರು.

ಸರ್ಜಿಕಲ್ ಆಂಕಾಲಜಿ ಮತ್ತು ರೋಬೋಟಿಕ್ ಸರ್ಜರಿ ವಿಭಾಗದ ಸಲಹೆಗಾರರಾದ ಡಾ. ದೇವೇಶ್ ಎಸ್. ಬಲ್ಲಾಳ್ ಅವರು, ಸ್ತನ ಕ್ಯಾನ್ಸರ್ ಅಪಾಯಗಳ ವಿರುದ್ಧ ಪುರುಷರು ಮತ್ತು ಮಹಿಳೆಯರು ಕೈಗೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಗಳು ಹಾಗೂ ತಪಾಸಣಾ ಕ್ರಮಗಳ ಕುರಿತು ವಿವರಿಸಿದರು. ಮಣಿಪಾಲ್ ಆಸ್ಪತ್ರೆ, ವೈಟ್‌ಫೀಲ್ಡ್‌ನ ಸರ್ಜಿಕಲ್ ಆಂಕಾಲಜಿ ಮತ್ತು ರೋಬೋಟಿಕ್ ಸರ್ಜರಿ ವಿಭಾಗದ ಸಲಹೆಗಾರರಾದ ಡಾ. ರಾಜಶೇಖರ್ ಸಿ. ಜಾಕಾ ಅವರು ‘ಸೆಂಟಿನೆಲ್ ಲಿಂಫ್ ನೋಡ್ ಬಯಾಪ್ಸಿ’ (sentinel lymph node biopsy) ಮತ್ತು ಚೇತರಿಕೆಯ ಪ್ರಕ್ರಿಯೆಯ ಬಗ್ಗೆ ಚರ್ಚಿಸಿದರು. ಅದೇ ರೀತಿ, ಮಣಿಪಾಲ್ ಆಸ್ಪತ್ರೆ, ವರ್ತೂರು ರಸ್ತೆಯ ಸರ್ಜಿಕಲ್ ಆಂಕಾಲಜಿ ವಿಭಾಗದ ಸಲಹೆಗಾರರಾದ ಡಾ. ಮಾಧವಿ ನಾಯರ್ ಅವರು, ‘BRCA ಮ್ಯುಟೇಶನ್’ (BRCA mutation) ಮತ್ತು ಇದರಿಂದ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯಗಳ ಕುರಿತು ಮಾಹಿತಿ ನೀಡಿದರು.

IMG-20261030-WA0113

59 ವರ್ಷದ ಶ್ರೀಮತಿ ರಜನಿ ಬಾಲಸುಬ್ರಹ್ಮಣ್ಯಂ ಅವರು ಕೈಯಲ್ಲಿ ಊತ ಉಂಟಾಗುವ ಅಪಾಯವನ್ನು ಕಡಿಮೆ ಮಾಡುವ ವಿಶೇಷ ಚಿಕಿತ್ಸಾ ವಿಧಾನದೊಂದಿಗೆ ಸ್ತನ ರಕ್ಷಣಾ ಶಸ್ತ್ರಚಿಕಿತ್ಸೆಗೆ ಒಳಗಾದರು. 47 ವರ್ಷದ ಶ್ರೀಮತಿ ರೂಪಾ ಪರಶುರಾಮ್ ಅವರು ಸ್ತನ ರಕ್ಷಣೆ ಮತ್ತು ವಿಶೇಷ ಶಸ್ತ್ರಚಿಕಿತ್ಸೆಗೆ ಒಳಗಾದರು. ಇವರ ಪರೀಕ್ಷೆಯಲ್ಲಿ ಕ್ಯಾನ್ಸರ್ ಮತ್ತೆ ಬರುವ ಅಪಾಯ ಕಡಿಮೆ ಇರುವುದು ತಿಳಿದುಬಂದ ಕಾರಣ ಕಿಮೊಥೆರಪಿ ಅಗತ್ಯವಿರಲಿಲ್ಲ. ಅವರು ಹಾರ್ಮೋನ್ ಚಿಕಿತ್ಸೆಯನ್ನು ಮುಂದುವರಿಸಿದರು.

ಪ್ಲಾಸ್ಟಿಕ್, ರೀಕನ್‌ಸ್ಟ್ರಕ್ಟಿವ್ ಮತ್ತು ಕಾಸ್ಮೆಟಿಕ್ ಸರ್ಜರಿ ವಿಭಾಗದ ರೀಕನ್‌ಸ್ಟ್ರಕ್ಟಿವ್ ಆಂಕೊಲಾಜಿ ಮತ್ತು ಮೈಕ್ರೋಸರ್ಜರಿ ವಿಭಾಗದ ಪ್ರಮುಖ ಸಲಹೆಗಾರರಾದ ಡಾ. ಪ್ರಶಾಂತ್ ಪುರಾಣಿಕ್ ಅವರು, ಲಿಂಫೆಡೆಮಾ (lymphedema) ಚಿಕಿತ್ಸೆ ಮತ್ತು ಸ್ತನ ಪುನರ್ನಿರ್ಮಾಣದ (breast reconstruction) ಕುರಿತು ಚರ್ಚಿಸಿದರು.

ಈ ಮಹಿಳೆಯರ ಅನುಭವಗಳು, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆಹಚ್ಚುವುದು ಮತ್ತು ರೋಗಿಯ ಆರೋಗ್ಯಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟಿತು.

IMG-20261030-WA0112

*ವೈಯಕ್ತಿಕ ಆರೋಗ್ಯಕ್ಕೆ ತಕ್ಕಂತೆ ಚಿಕಿತ್ಸೆ*

‘ಶೀ ಚೂಸಸ್’ ವಿಭಾಗದಲ್ಲಿ ಸ್ತನ ಕ್ಯಾನ್ಸರ್‌ಗೆ ಲಭ್ಯವಿರುವ ಆಧುನಿಕ ಚಿಕಿತ್ಸೆಗಳಾದ ಗುರಿ ಆಧಾರಿತ ಚಿಕಿತ್ಸೆ, ರೋಗನಿರೋಧಕ ಶಕ್ತಿ ಹೆಚ್ಚಿಸುವ ಚಿಕಿತ್ಸೆ ಮತ್ತು ಹಾರ್ಮೋನ್ ಚಿಕಿತ್ಸೆಗಳ ಬಗ್ಗೆ ವೈದ್ಯರು ಹಾಗೂ ಕ್ಯಾನ್ಸರ್‌ನಿಂದ ಗುಣಮುಖರಾದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.

53 ವರ್ಷದ ಶ್ರೀಮತಿ ನಳಿನಿ ದೇವಿ ಅವರಿಗೆ HER2 ಪಾಸಿಟಿವ್ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಇವರಿಗೆ, ಮುಖ್ಯಸ್ಥರು ಮತ್ತು ಸಲಹೆಗಾರರು – ವೈದ್ಯಕೀಯ ಆಂಕೊಲಾಜಿ ಹಾಗೂ  ಸಲಹೆಗಾರರು – ಇಮ್ಯುನೊಥೆರಪಿ ಮತ್ತು ನಿಖರ (Precision) ಔಷಧದ ಡಾ. ಅಮಿತ್ ರೌತನ್ ಅವರ ಮಾರ್ಗದರ್ಶನದಲ್ಲಿ ಕಿಮೊಥೆರಪಿ ಮತ್ತು ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸಿಕೊಂಡು ನಾಶಪಡಿಸುವ ವಿಶೇಷ ಚಿಕಿತ್ಸೆ ನೀಡಲಾಯಿತು. ನಂತರ ಶಸ್ತ್ರಚಿಕಿತ್ಸೆ ಹಾಗೂ ಒಂದು ವರ್ಷದವರೆಗೆ ವಿಶೇಷ ಚಿಕಿತ್ಸೆ ಮುಂದುವರಿಸಲಾಯಿತು. ಸದ್ಯ ಅವರಲ್ಲಿ ಕ್ಯಾನ್ಸರ್ ಲಕ್ಷಣಗಳು ಇಲ್ಲ, ಅವರು ಮತ್ತೆ ತಮ್ಮ ಕೆಲಸಕ್ಕೆ ಮರಳಿದ್ದಾರೆ.

58 ವರ್ಷದ ಶ್ರೀಮತಿ ಶಾರದಾ ಜ್ಯೋತಿ ಕುಮಾರ್ ಅವರಿಗೂ HER2 ಪಾಸಿಟಿವ್ ಸ್ತನ ಕ್ಯಾನ್ಸರ್ ಪತ್ತೆಯಾಗಿತ್ತು. ಡಾ. ಪೂನಂ ಅವರ ಮಾರ್ಗದರ್ಶನದಲ್ಲಿ ಕಿಮೊಥೆರಪಿ ಜೊತೆಗೆ ಕ್ಯಾನ್ಸರ್ ಕೋಶಗಳನ್ನು ಗುರಿಯಾಗಿಸುವ ಔಷಧಗಳನ್ನು ನೀಡಲಾಯಿತು.

54 ವರ್ಷದ ಶ್ರೀಮತಿ ಶೀಲಾ ರಮೇಶ್ ಅವರಿಗೆ ಸ್ತನ ಕ್ಯಾನ್ಸರ್‌ಗಾಗಿ ಸ್ತನವನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆ ಹಾಗೂ ದುಗ್ಧರಸ ಗ್ರಂಥಿಗಳ ಪರೀಕ್ಷೆ ನಡೆಸಲಾಯಿತು. ನಂತರ ಡಾ. ಪೂನಂ ಅವರ ಮಾರ್ಗದರ್ಶನದಲ್ಲಿ ಹಾರ್ಮೋನ್ ಚಿಕಿತ್ಸೆ ನೀಡಲಾಯಿತು. ಮುಂದಿನ ದಿನಗಳಲ್ಲಿ ಕ್ಯಾನ್ಸರ್ ಮರುಕಳಿಸುವ ಸಾಧ್ಯತೆ ಕಡಿಮೆ ಇದೆ ಎಂಬುದನ್ನು ವಿಶೇಷ ಜೀನ್ ಪರೀಕ್ಷೆ ಗೊತ್ತಾಗಿದೆ.

‘ಶೀ ಪ್ರಿವೈಲ್ಸ್’ – ಆಧುನಿಕ ಚಿಕಿತ್ಸೆಯಿಂದ ಹೊಸ ಭರವಸೆ

‘ಶೀ ಪ್ರಿವೈಲ್ಸ್’ ವಿಭಾಗದಲ್ಲಿ ವಿಕಿರಣ ಚಿಕಿತ್ಸೆ (ರೇಡಿಯೋಥೆರಪಿ)ಯಲ್ಲಿನ ಹೊಸ ತಂತ್ರಜ್ಞಾನಗಳು ಮತ್ತು ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆ ನೀಡುವ ವಿಧಾನಗಳ ಬಗ್ಗೆ ವಿವರಿಸಲಾಯಿತು.

70 ವರ್ಷದ ಶ್ರೀಮತಿ ಪ್ರೇಮಲತಾ ಚೆಂತಮರೈ ಅವರಿಗೆ ಕ್ಯಾನ್ಸರ್ ಬೆನ್ನಿನ ಕೆಳಭಾಗದ ಎರಡು ಸ್ಥಳಗಳಿಗೆ ಹರಡಿತ್ತು. ಡಾ. ಪೂನಂ ಅವರ ಮಾರ್ಗದರ್ಶನದಲ್ಲಿ ಕಿಮೊಥೆರಪಿ ನೀಡಿದ ಬಳಿಕ, ಡಾ. ಶಬ್ಬೆರ್ ಅವರು ಸ್ತನವನ್ನು ಉಳಿಸುವ ಶಸ್ತ್ರಚಿಕಿತ್ಸೆ ನಡೆಸಿದರು. ನಂತರ  ವಿಕಿರಣ ಆಂಕೊಲಾಜಿ ಸಲಹೆಗಾರ್ತಿ ಡಾ. ಸಿಂಧು ಪಾಲ್ ಕವಲಕ್ಕಟ್ ಅವರ ಮಾರ್ಗದರ್ಶನದಲ್ಲಿ ವಿಕಿರಣ ಚಿಕಿತ್ಸೆ ನೀಡಲಾಯಿತು.

ಇದೇವೇಳೆ, ರೇಡಿಯೇಶನ್ ಆಂಕೊಲಾಜಿ ಸಲಹೆಗಾರರಾದ ಡಾ. ಸಂಜೀವ್ ಶರ್ಮಾ ಅವರು, ರೇಡಿಯೇಶನ್ ಹಾಗೂ ರೇಡಿಯೋಥೆರಪಿ ಡೋಸ್ ವಿತರಣೆಯ ಮಹತ್ವ ಮತ್ತು ಪರಿಣಾಮಕಾರಿತ್ವದ ಕುರಿತು ವಿವರಿಸಿದರು.

 

54 ವರ್ಷದ ಶ್ರೀಮತಿ ಆಶಿತಾ ದಾಸ್ ಅವರಿಗೆ ಮೊದಲು ಕಿಮೊಥೆರಪಿ ನೀಡಿ, ನಂತರ ಸ್ತನವನ್ನು ಸಂಪೂರ್ಣವಾಗಿ ತೆಗೆದುಹಾಕದೆ ಕ್ಯಾನ್ಸರ್ ಪೀಡಿತ ಭಾಗವನ್ನು ಮಾತ್ರ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಬಳಿಕ ಡಾ. ಸಿಂಧು ಅವರ ಮಾರ್ಗದರ್ಶನದಲ್ಲಿ ಆಧುನಿಕ ವಿಕಿರಣ ಚಿಕಿತ್ಸೆಯ ಮೂಲಕ ಕೇವಲ ಐದು ದಿನಗಳಲ್ಲಿ ಐದು ಹಂತಗಳ ಚಿಕಿತ್ಸೆಯನ್ನು ಪೂರ್ಣಗೊಳಿಸಲಾಯಿತು.

ಇದೇವೇಳೆ, ಗರ್ಭಾವಸ್ಥೆಯಲ್ಲಿ ಸ್ತನ ಕ್ಯಾನ್ಸರ್ ಪತ್ತೆಯಾದ ಮಹಿಳೆಯರ ಸವಾಲಿನ ಅನುಭವಗಳನ್ನೂ ಹಂಚಿಕೊಳ್ಳಲಾಯಿತು.

59 ವರ್ಷದ ಶ್ರೀಮತಿ ರತಿ ಮಾಥುರ್ ಭಟ್ ಅವರು ಎರಡು ಬಾರಿ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡಿದವರು. ಇವರು, ಕ್ಯಾನ್ಸರ್ ಕಾಣಿಸಿಕೊಂಡಾಗ ಡಾ. ಶಬ್ಬೆರ್, ಡಾ. ಪೂನಂ ಹಾಗೂ ಮುಖ್ಯಸ್ಥರು ಮತ್ತು ಸಲಹೆಗಾರರು ವಿಕಿರಣ ಆಂಕೊಲಾಜಿಯ ಡಾ. ವಾಧಿರಾಜ ಬಿ.ಎಂ. ಅವರ ಮಾರ್ಗದರ್ಶನದಲ್ಲಿ ಚಿಕಿತ್ಸೆ ಪಡೆದರು.

ಗರ್ಭಾವಸ್ಥೆಯಲ್ಲಿದ್ದಾಗಲೇ ಶ್ರೀಮತಿ ವೃಂದಾ ಬನ್ಸಾಲ್ ಅವರಿಗೆ ಟ್ರಿಪಲ್ ನೆಗೆಟಿವ್ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ವೈದ್ಯರ ತಂಡದ ಮಾರ್ಗದರ್ಶನದಲ್ಲಿ ಕಿಮೊಥೆರಪಿ, ರೋಗನಿರೋಧಕ ಶಕ್ತಿಗೆ ಸಂಬಂಧಿಸಿದ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆನುವಂಶಿಕ ಪರೀಕ್ಷೆಯಲ್ಲಿ BRCA1 ಎಂಬ ಜೀನ್‌ನಲ್ಲಿ ಬದಲಾವಣೆ ಇರುವುದು ಪತ್ತೆಯಾಯಿತು. ಇದರಿಂದ ಭವಿಷ್ಯದಲ್ಲಿ ಕ್ಯಾನ್ಸರ್ ಬರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಅವರು ಎರಡೂ ಸ್ತನಗಳನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಗೆ ನಿರ್ಧರಿಸಿದರು.

‘ಶಿ ನ್ಯಾವಿಗೇಟ್ಸ್’ ಅಧಿವೇಶನದಲ್ಲಿ (ಗೋಷ್ಠಿ) ಶಸ್ತ್ರಚಿಕಿತ್ಸೆಯ ನಂತರದ ವ್ಯಾಯಾಮ, ಉತ್ತಮ ಆಹಾರ, ಕುಟುಂಬದವರ ಆರೈಕೆ ಮತ್ತು ಕ್ಯಾನ್ಸರ್‌ಗೆ ಸಂಬಂಧಿಸಿದ ಆಹಾರದ ತಪ್ಪು ನಂಬಿಕೆಗಳ ಬಗ್ಗೆ ಸರಳವಾಗಿ ಮಾಹಿತಿ ನೀಡಲಾಯಿತು. ರೋಗಿಗಳು ಮತ್ತು ಕುಟುಂಬದವರು ಸರಿಯಾದ ಮಾಹಿತಿ ತಿಳಿದುಕೊಳ್ಳುವ ಮಹತ್ವವನ್ನು ವಿವರಿಸಲಾಯಿತು.

*’SHE RISES’ ಮೂಲಕ ಗುಣಮುಖರಾದ ಮಹಿಳೆಯರಿಂದ ಇತರರಿಗೆ ಬೆಂಬಲ*

ಸೈಕೋ ಆಂಕೊಲಾಜಿ ಸಲಹೆಗಾರ್ತಿ ಶ್ರೀಮತಿ ಬಿನ್ಸಿ ಮ್ಯಾಥ್ಯೂ ಅವರು ಆರಂಭಿಸಿದ SHE RISES ಕಾರ್ಯಕ್ರಮವು ಕ್ಯಾನ್ಸರ್‌ನಿಂದ ಗುಣಮುಖರಾದ ಮಹಿಳೆಯರಿಗೆ ತರಬೇತಿ ನೀಡುತ್ತದೆ. ಈ ಮಹಿಳೆಯರು ಇತರ ರೋಗಿಗಳಿಗೆ ಮಾಹಿತಿ, ಧೈರ್ಯ ಮತ್ತು ಭಾವನಾತ್ಮಕ ಬೆಂಬಲ ನೀಡುವ ಮೂಲಕ ಚಿಕಿತ್ಸೆಯ ಜೊತೆಗೆ ಆತ್ಮವಿಶ್ವಾಸದಿಂದ ಎದುರಿಸಲು ಸಹಾಯ ಮಾಡುತ್ತಾರೆ.

ಅವರಿಗೆ ಅಗತ್ಯ ಮಾಹಿತಿ ನೀಡುವುದು, ಮಾನಸಿಕವಾಗಿ ಬೆಂಬಲಿಸುವುದು ಮತ್ತು ಚಿಕಿತ್ಸೆಯ ಹಾದಿಯಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಸಹಾಯ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ವೈದ್ಯಕೀಯ ಚಿಕಿತ್ಸೆಯ ಜೊತೆಗೆ ರೋಗಿಗಳ ಭಾವನಾತ್ಮಕ ಆರೋಗ್ಯ, ಆತ್ಮವಿಶ್ವಾಸ ಮತ್ತು ಜೀವನದ ಗುಣಮಟ್ಟಕ್ಕೂ ಆದ್ಯತೆ ನೀಡುವ ಮೂಲಕ ಸ್ತನ ಕ್ಯಾನ್ಸರ್ ಆರೈಕೆಯನ್ನು ಇನ್ನಷ್ಟು ಸಮಗ್ರಗೊಳಿಸಲು ಹಳೆ ವಿಮಾನ ನಿಲ್ದಾಣ ರಸ್ತೆ ಮಣಿಪಾಲ್ ಆಸ್ಪತ್ರೆ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ