ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಬಿಲ್ ‌ಗೇಟ್ಸ್ ಹಾಗೂ ಅವರ ಪತ್ನಿ ಮೆಲಿಂಡಾ ನಡುವೆ ಅಂತಹ ಅನಿವಾರ್ಯತೆ ಏನಿತ್ತು?

27 ವರ್ಷಗಳ ಬಲಿಷ್ಠ ಸಂಬಂಧವೊಂದನ್ನು ಕಡಿದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಯಿತು. ಅದೇನು ವಿಷಯ ಅಂತ ಕೇಳಿ ನೀವು ದಂಗಾಗಿ ಹೋಗುತ್ತೀರಿ……

ಮೈಕ್ರೋಸಾಫ್ಟ್ ನ ಸಂಸ್ಥಾಪಕ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬಿಲ್ ಗೇಟ್ಸ್ ತಮ್ಮ ಹೆಂಡತಿ ಮೆಲಿಂಡಾ ಜೊತೆಗಿನ 27 ವರ್ಷದ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಹೇಳುವುದರ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಅವರು ತಮ್ಮ ನಿರ್ಧಾರದ ಮಾಹಿತಿಯನ್ನು ಟ್ವಿಟರ್‌ ನಲ್ಲಿ ಈ ರೀತಿ ಹಾಕಿದ್ದರು.

“ಬಹಳಷ್ಟು ಯೋಚನೆ ಮಾಡುವುದರ ಮೂಲಕ ನಾವು ನಮ್ಮ ಸಂಬಂಧವನ್ನು ಕಡಿದುಕೊಳ್ಳುವ ನಿರ್ಧಾರ ಮಾಡಿದ್ದೇವೆ. ನಾವು ನಮ್ಮ ಹೊಸ ಜೀವನ ಆರಂಭಿಸಲಿದ್ದೇವೆ. ಹೀಗಾಗಿ ಜನರಿಂದ ನಮ್ಮ ಕುಟುಂಬಕ್ಕೆ ಸ್ಪೇಸ್‌ ಹಾಗೂ ಪ್ರೈವೆಸಿ ಕಾಯ್ದುಕೊಳ್ಳುವ ಅಪೇಕ್ಷೆ ಇದೆ.”

ಜೀವನದ ಸುಮಾರು 3 ದಶಕಗಳನ್ನು ಜೊತೆ ಜೊತೆಗೆ ಕಳೆದ ಬಳಿಕ ಅವರು ಕೈಗೊಂಡ ಈ ನಿರ್ಧಾರ ಹಲವರನ್ನು ಚಕಿತಗೊಳಿಸಿದೆ. ಬಿಲ್ ‌ಹಾಗೂ ಮೆಲಿಂಡಾ ಅವರದ್ದು ಅಪ್ಪಟ ಸುಖೀ ದಾಂಪತ್ಯ ಎಂದು ಹೇಳಲಾಗುತ್ತಿತ್ತು. ಅವರ ವೈವಾಹಿಕ ಜೀವನದ ಬಗ್ಗೆ ಅದೆಷ್ಟೋ ಜೋಡಿಗಳು ಪ್ರೇರಣೆ ಪಡೆದುಕೊಳ್ಳುತ್ತಿದ್ದವು. ಅವರ ಸುಂದರ ವೈವಾಹಿಕ ಜೀವನದಲ್ಲಿ ಇಂತಹದೊಂದು ತಿರುವು ಬರಬಹುದು ಎಂದು ಯಾರೊಬ್ಬರೂ ಕಲ್ಪನೆ ಕೂಡ ಮಾಡಿಕೊಂಡಿರಲಿಲ್ಲ.

ನಂಬರ್‌ ಒನ್‌ ಕಿರೀಟ

ಅಕ್ಟೋಬರ್‌ 28, 1955ರಲ್ಲಿ ಸಿಯಾಟಲ್ ನಲ್ಲಿ  ಜನಿಸಿದ ಬಿಲ್ ‌ಗೇಟ್ಸ್. ಅವರ ಪೂರ್ಣ ಹೆಸರು ವಿಲಿಯಂ ಹೆನ್ರಿ ಗೇಟ್ಸ್. ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಅಧ್ಯಯನ ಮಾಡುತ್ತಿದ್ದಾಗ, ಪೌಲ್ ‌ಹೆಲನ್‌ ಜೊತೆಗೆ ಸ್ನೇಹವಾಗುತ್ತದೆ. ಅವರಿಬ್ಬರ ವಿಚಾರಗಳ ಪ್ರತಿಫಲವೇ ಮೈಕ್ರೊಸಾಫ್ಟ್ ಜನ್ಮತಳೆಯಲು ಕಾರಣವಾಗುತ್ತದೆ. 1990ರ ದಶಕದಲ್ಲಿ ಮೈಕ್ರೋಸಾಫ್ಟ್ ಜಗತ್ತಿನಾದ್ಯಂತ ಪಿಸಿ ಇಂಡಸ್ಟ್ರಿಯಲ್ಲಿ ನಂಬರ್‌ ಒನ್‌ ಕಿರೀಟಕ್ಕೆ ಭಾಜನವಾಯಿತು.

1987ರಲ್ಲಿ ಕೆಲಸದ ಬಾಬತ್ತಿನಲ್ಲಿ ಬಿಲ್ ‌ಗೇಟ್ಸ್ ಹಾಗೂ ಮೆಲಿಂಡಾ ಮೊದಲ ಬಾರಿಗೆ ಭೇಟಿಯಾಗುತ್ತಾರೆ. ಆ ಸಂದರ್ಭದಲ್ಲಿ ಮೆಲಿಂಡಾಗೆ ಅನೇಕ ಬಾಯ್‌ ಫ್ರೆಂಡ್‌ ಗಳಿದ್ದರು. ಅದೊಂದು ದಿನ ಆಕಸ್ಮಿಕವಾಗಿ ತಮಾಷೆಗೆ ಎಂಬಂತೆ ಬಿಲ್ ಮೆಲಿಂಡಾಗೆ `ಐ ಲವ್ ಯೂ’ ಎಂದು ಹೇಳುತ್ತಾರೆ. ಕ್ರಮೇಣ ಅವರ ನಡುವೆ ನಿಕಟತೆ ಹೆಚ್ಚುತ್ತಾ ಹೋಯಿತು. ಆ ಸಮಯದಲ್ಲಿ ಬಿಲ್ ‌ಗೆ 39 ವರ್ಷ ಹಾಗೂ ಮೆಲಿಂಡಾಗೆ 29 ವರ್ಷ. 1994ರಲ್ಲಿ ಅವರು ಮದುವೆಯಾದರು.

ಬಿಲ್ ಹಾಗೂ ಮೆಲಿಂಡಾ ದಂಪತಿಗಳಿಗೆ ಮೂರು ಮಕ್ಕಳು. 1996ರಲ್ಲಿ ಮಗಳು ಜೆನಿಫರ್‌, 1999ರಲ್ಲಿ ಮಗ ರೋರಿ ಹಾಗೂ 2002ರಲ್ಲಿ ಮಗಳು ಪೆಯೆಬಾ ಜನಿಸಿದರು. ಮಗ ಹುಟ್ಟಿದ 9 ವರ್ಷದ ಬಳಿಕ ಮೆಲಿಂಡಾ ಮೈಕ್ರೋಸಾಫ್ಟ್ ನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದರು.

ಪ್ರೊಫೆಶನಲ್ ವೈವಾಹಿಕ ಜೀವನದ ಜೊತೆ ಜೊತೆಗೆ ಬಿಲ್ ‌ಗೇಟ್ಸ್ ಹಾಗೂ ಮೆಲಿಂಡಾ ಸಮಾಜಕ್ಕಾಗಿಯೂ ಬಹಳಷ್ಟನ್ನು ಮಾಡಿದರು. ಆರೋಗ್ಯ, ಶಿಕ್ಷಣ ಹಾಗೂ ಅಭಿವೃದ್ಧಿಗಾಗಿ ಅವರು ತಮ್ಮದೇ ಆದ ಕಾಣಿಕೆ ನೀಡಲು 1994ರಲ್ಲಿ ಇಬ್ಬರೂ ಸೇರಿ `ಬಿಲ್‌ಮೆಲಿಂಡಾ ಗೇಟ್ಸ್ ಫೌಂಡೇಶನ್‌’ ಆರಂಭಿಸಿದರು. 2008ರಲ್ಲಿ ಬಿಲ್ ‌ಗೇಟ್ಸ್ ಮೈಕ್ರೋಸಾಫ್ಟ್ ನಿಂದ ಪ್ರತ್ಯೇಕಗೊಂಡು ಇದೇ ಫೌಂಡೇಶನ್‌ ಗಾಗಿ ಸಂಪೂರ್ಣ ಸಮಯವನ್ನು ನೀಡತೊಡಗಿದರು. ಕೊರೋನಾ ಅವಧಿಯಲ್ಲೂ ಅವರು ಸಮಾಜಕ್ಕಾಗಿ ಸಾಕಷ್ಟು ಕೆಲಸ ಮಾಡಿದರು.

ಅತಿ ಶ್ರೀಮಂತ ವ್ಯಕ್ತಿ

ಬಿಲ್ ‌ಗೇಟ್ಸ್ ಈ ಮುಂಚೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಅವರ ಆಸ್ತಿ ಮೌಲ್ಯ 124 ಬಿಲಿಯನ್‌ ಡಾಲರ್ ಅಂದರೆ 10.87 ಲಕ್ಷ ಕೋಟಿ ರೂ. ಹೆಚ್ಚು ಇವರು ಅಂದಾಜು ಇದೆ. ಒಂದೂವರೆ ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಅವರ ಬಂಗ್ಲೆಯಲ್ಲಿ 7 ಬೆಡ್‌ ರೂಮ್ ಗಳು, ಜಿಮ್, ಸ್ವಿಮಿಂಗ್‌ ಪೂಲ್‌, ಥಿಯೇಟರ್‌ ಈ ಎಲ್ಲ ಸೌಲಭ್ಯಗಳು ಇವೆ.

ಕಳೆದ ವರ್ಷದ ಒಂದು ವರದಿಯ ಪ್ರಕಾರ, ಅವರ ಒಂದು ಸೆಕೆಂಡ್‌ ಆದಾಯ 12,054 ರೂ. ಇತ್ತು. ಅಂದರೆ ಒಂದು ದಿನದ ಆದಾಯ 102 ಕೋಟಿಗಳಷ್ಟಿತ್ತು. ಅವರು ಪ್ರತಿದಿನ 6 ಕೋಟಿ ರೂ. ಖರ್ಚು ಮಾಡಿದರೂ ಅವರು ತಮ್ಮ ಬಳಿ ಇವರು ಹಣವನ್ನೆಲ್ಲ ಖರ್ಚು ಮಾಡಲು 218 ವರ್ಷ ಬೇಕಾಗುತ್ತದೆ.

ಪ್ರಸ್ತುತ ಮೆಲಿಂಡಾರ ಆಸ್ತಿ ಮೌಲ್ಯ

ವಿಚ್ಛೇದನದ ಬಳಿಕ 2 ದಶಲಕ್ಷ ಡಾಲರ್‌ ಗಿಂತಲೂ ಹೆಚ್ಚಾಗಿದೆ. ಮೆಲಿಂಡಾ ಗೇಟ್ಸ್ ಈವರೆಗೆ ಗೇಟ್ಸ್ ಜೊತೆಗೆ ಕಂಬೈಡ್‌ ನೆಟ್‌ವರ್ಕ್‌ ನಲ್ಲಿ ಶತ ಕೋಟ್ಯಧೀಶೆ ಆಗಿದ್ದರು. ಆದರೆ ಈಗ ಅವರ ಬಳಿ ಏಕಾಂಗಿಯಾಗಿಯೇ 2 ಶತಕೋಟಿಗಿಂತಲೂ ಹೆಚ್ಚು ಆಸ್ತಿ ಇದೆ. ಬಿಲ್ ಗೇಟ್ಸ್ ಮುಖಾಂತರ ಕ್ರಿಯೇಟ್‌ ಮಾಡಲ್ಪಟ್ಟ ಕಂಪನಿ `ಕ್ಯಾಸ್ಕರ್‌ ಇನ್‌ ವೆಸ್ಟ್ ಮೆಂಟ್‌’ ಮೆಕ್ಸಿಕೋದಲ್ಲಿ ಅತಿ ದೊಡ್ಡ 2 ಕಂಪನಿಗಳಲ್ಲಿ ಒಂದಾಗಿದ್ದು, ಅವುಗಳ ಶೇರುಗಳನ್ನು ಮೆಲಿಂಡಾ ಹೆಸರಿಗೆ ಟ್ರಾನ್ಸ್ ಫರ್‌ ಮಾಡಲಾಗಿದೆ.

ಅಂದಹಾಗೆ ಇಬ್ಬರೂ ಈವರೆಗೂ ಸ್ಪಷ್ಟವಾಗಿ ವಿಚ್ಛೇದನದ ಕಾರಣಗಳನ್ನು ತಿಳಿಸಿಲ್ಲ. ಆದರೆ ಸುದ್ದಿಗಳ ಪ್ರಕಾರ, ಬಿಲ್ ‌ಗೇಟ್ಸ್ ರ ಮಾಜಿ ಗರ್ಲ್ ಫ್ರೆಂಡ್‌ ಈ ವಿಚ್ಛೇದನಕ್ಕೆ ಕಾರಣ ಎಂದು ಹೇಳಲಾಗುತ್ತದೆ. ಮಾಜಿ ಗರ್ಲ್ ಫ್ರೆಂಡ್‌ ಗಾಗಿಯೇ ಬಿಲ್ ‌ಗೇಟ್ಸ್ ಮೆಲಿಂಡಾ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಾರೆ ಎನ್ನಲಾಗುತ್ತದೆ.

ಯಾವಾಗ ಸುದ್ದಿಗೆ ಬಂತು?

ಬಿಲ್ ‌ಗೇಟ್ಸ್ ತಮ್ಮ ಮಾಜಿ ಗರ್ಲ್ ಫ್ರೆಂಡ್‌ ಎನ್‌ ವಿನ್‌ ಬ್ಲೆಡ್‌ ಗೆ ಸಂಬಂಧಪಟ್ಟಂತೆ ಮೆಲಿಂಡಾ ಜೊತೆಗೆ ಒಂದು ಹೊಂದಾಣಿಕೆ ಮಾಡಿಕೊಂಡಿದ್ದರಂತೆ. ಅದರ ಪ್ರಕಾರ ಪ್ರತಿವರ್ಷ ಬಿಲ್ ‌ಗೇಟ್ಸ್ ಗೆ ತನ್ನ ಮಾಜಿ ಪ್ರಿಯತಮೆ ಜೊತೆಗೆ ಒಂದು ವೀಕೆಂಡ್‌ ಕಳೆಯುವ ಅವಕಾಶಕ್ಕೆ ಒಪ್ಪಿಗೆ ಸಿಕ್ಕಿತು. ಅಷ್ಟೇ ಅಲ್ಲ, ಮೆಲಿಂಡಾ ಜೊತೆ ಮದುವೆ ಮಾಡಿಕೊಳ್ಳುವ ಮುಂಚೆಯೇ ಬಿಲ್ ‌ಗೇಟ್ಸ್ ಇಬ್ಬರಿಂದಲೂ ಇದಕ್ಕೆ ಒಪ್ಪಿಗೆ ಪಡೆದಿದ್ದರು.

ಬಿಲ್ ‌ಗೇಟ್ಸ್ 1997ರಲ್ಲಿ ಟೈಮ್ ಮ್ಯಾಗಝೀನ್‌ ಗೆ ಕೊಟ್ಟ ಒಂದು ಸಂದರ್ಶನದಲ್ಲಿ ಇದರ ಬಗ್ಗೆ ಉಲ್ಲೇಖ ಮಾಡಿದ್ದರು. ಬೇರೆ ಬೇರೆ ನಗರಗಳಲ್ಲಿ ಇವರು ಕಾರಣದಿಂದ ಬಿಲ್ ಹಾಗೂ ವಿನ್‌ ಬ್ಲೆಡ್‌ ವರ್ಚುವಲ್ ‌ನಲ್ಲಿ ಮಾತುಕತೆ ನಡೆಸುತ್ತಿದ್ದರು. ಇಬ್ಬರೂ ವರ್ಚ್‌ ಡೇಟ್‌ ಕೂಡ ಅರೇಂಜ್‌ ಮಾಡಿಕೊಳ್ಳುತ್ತಿದ್ದರು.

ಇಂತಹದೇ ಇನ್ನೊಂದು ಹೈ ಪ್ರೊಫೈಲ್ ವಿಚ್ಛೇದನ ಸುದ್ದಿಯಾಯಿತು. ಜನವರಿ 2019ರಲ್ಲಿ ಅಮೆಝಾನ್‌ ನ ಸಂಸ್ಥಾಪಕ, ಸಿಇಒ ಹಾಗೂ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಜೆಫ್‌ ಬೆಲೆಜೋಸ್‌ ತಮ್ಮ ಪತ್ನಿ ಮೆಕೆಂಜಿ ಬೆಜೋಸ್‌ ಜೊತೆಗಿನ 25 ವರ್ಷಗಳ ವೈವಾಹಿಕ ಜೀವನ ಕೊನೆಗೊಳಿಸಿ ವಿಚ್ಛೇದನ ಪಡೆದಿದ್ದರು. ದಂಪತಿಗಳು ಟ್ವಿಟರ್‌ ನಲ್ಲಿ ಇದರ ಮಾಹಿತಿ ನೀಡಿದ್ದರು.

54 ವರ್ಷದ ಜೆಫ್‌ ಬೆಜೋಸ್‌ ಹಾಗೂ ಅವರ ಹೆಂಡತಿ ಟ್ವಿಟರ್‌ ನಲ್ಲಿ ಹೀಗೆ ಬರೆದುಕೊಂಡಿದ್ದರು, “ನಾವು ನಮ್ಮ ಜೀವನದಲ್ಲಾಗುವ ಬದಲಾವಣೆಗಳ ಬಗ್ಗೆ ಜನರಿಗೆ ಹೇಳಲು ಅಪೇಕ್ಷಿಸುತ್ತೇವೆ. ನಮ್ಮ ಕುಟುಂಬದವರು ಹಾಗೂ ನಮ್ಮ ನಿಕಟ ಸ್ನೇಹಿತರಿಗೆ ಈ ಬಗ್ಗೆ ಗೊತ್ತು. ಒಂದು ದೀರ್ಘ ಟ್ರಯಲ್ ನ ಬಳಿಕ ನಾವು ವಿಚ್ಛೇದನ ಪಡೆಯುವ ನಿರ್ಧಾರಕ್ಕೆ ಬಂದವೆ.

“ಆದರೆ ನಾವು ಜೀವನದಲ್ಲಿ ಸ್ನೇಹಿತರಾಗಿ ಮುಂದುವರಿಯುತ್ತೇವೆ. ನಾವು ಜೀವನವನ್ನು ಅತ್ಯಂತ ಒಳ್ಳೆಯ ರೀತಿಯಲ್ಲಿ ಕಳೆದೆವು ಹಾಗೂ ನಾವು ನಮ್ಮ ಉಜ್ವಲ ಭವಿಷ್ಯದ ಬಗ್ಗೆ ಬಹಳ ನೀರಿಕ್ಷೆ ಇಟ್ಟುಕೊಂಡಿದ್ದೇವೆ. ಮುಂದೆಯೂ ಕೂಡ ನಾವು ಕುಟುಂಬ ಹಾಗೂ ಸ್ನೇಹಿತರಂತೆ ಇರುತ್ತೇವೆ.”

ಮೆಕೆಂಜಿ ಬೆಜೋಸ್‌ ಅಮೆಝಾನ್‌ ನ ಮೊದಲ ಉದ್ಯೋಗಿಯಾಗಿದ್ದರು. ಜೆಫ್‌ ಮತ್ತು ಮೆಕೆಂಜಿ ಅವರ ಭೇಟಿ ಡಿ.ಇ. ಶೋನಲ್ಲಿ ಆಗಿತ್ತು. ಈ ಭೇಟಿ ಅಮೆಝಾನ್‌ ನ ಸ್ಥಾಪನೆಗೂ ಮೊದಲೇ ಆಗಿತ್ತು. ಮದುವೆಯ ಮರುವರ್ಷ ಅಂದರೆ 1994ರಲ್ಲಿ ಜೆಫ್‌ ಬೆಜೋಸ್‌ ಅಮೆಝಾನ್‌ ನ ಸ್ಥಾಪನೆ ಮಾಡಿದ್ದರು. ಅಮೆಝಾನ್‌ ನ ಮೊದಲ ಕಾಂಟ್ರಾಕ್ಟ್ ಗೆ ಮೆಕೆಂಜಿಯೇ ಡೀಲ್‌ಮಾಡಿದ್ದರು.

ಗ್ಯಾರೇಜ್‌ ನಿಂದ ಆರಂಭವಾದ ಅಮೆಝಾನ್‌ ಈಗ ಜಗತ್ತಿನ ಟಾಪ್‌ 3 ಕಂಪನಿಗಳಲ್ಲಿ ಒಂದಾಗಿದೆ. 2018ರಲ್ಲಿ ಜೆಫ್‌ ಬೆಜೋಸ್ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಆಗ ಅವರ ಆಸ್ತಿ ಮೌಲ್ಯ 141.9 ಶತಕೋಟಿ ಡಾಲರ್‌ ಆಗಿತ್ತು.

ವಿಚ್ಛೇದನಕ್ಕೆ ಕಾರಣ

ಜೆಫ್‌ ಬೆಜೋಸ್‌ ಮಾಜಿ ಟಿ.ವಿ ಆ್ಯಂಕರ್‌ ಲಾರೆನ್‌ ಸಾಂಜೆಸ್‌ ಜೊತೆಗೆ ಸಂಬಂಧ ಹೊಂದಿದ್ದರು. ವರದಿಗಳ ಪ್ರಕಾರ ಲಾರೆನ್‌ ಗೆ  ಬರೆದ ಒಂದು ಪತ್ರ ಈ ವಿಚ್ಛೇದನಕ್ಕೆ ಕಾರಣವಾಗಿತ್ತು. ಅದರಲ್ಲಿ ಜೆಫ್‌ ಹೀಗೆ ಬರೆದಿದ್ದರು. `ನಾನು ನಿನ್ನನ್ನು ಸಂಗಾತಿ ಆಗಿಸಿಕೊಳ್ಳಲು ಬಯಸುವೆ. ನಾನು ನಿನ್ನನ್ನು ಹೃದಯದ ಮಿಡಿತವಾಗಿಸಿಕೊಳ್ಳಲು ಬಯಸುವೆ. ನಾನು ನಿನ್ನನ್ನು ಪ್ರೀತಿಸುವೆ…..’ ಆ ಬಳಿಕವೇ ಮೆಕೆಂಜಿ ಹಾಗೂ ಬೆಜೋಸ್‌ ಪ್ರತ್ಯೇಕಗೊಂಡರು.

ಜೆಫ್‌ ಹಾಗೂ ಮೆಕೆಂಜಿ ಜೋಡಿಯ ವಿಚ್ಛೇದನ ಜಗತ್ತಿನ ಅತ್ಯಂತ ದುಬಾರಿ ವಿಚ್ಛೇದನ ಎನಿಸಿತು. ಮೆಕೆಂಜಿಗೆ 2.52 ಲಕ್ಷ ಕೋಟಿಯ ಶೇರುಗಳು ದೊರೆತ. ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮೆಕೆಂಜಿ ವಿಶ್ವದ ನಾಲ್ಕನೇ ಅತ್ಯಂತ ಶ್ರೀಮಂತ ಮಹಿಳೆಯಾದರು. ಮೆಕೆಂಜಿ ಮರುವಿವಾಹವಾದರು. ಅವರು ಅಮೆಝಾನ್‌ ನಲ್ಲಿ 4% ಪಾಲುದಾರಿಕೆ (ಸುಮಾರು 36 ಶತಕೋಟಿ ಡಾಲರ್‌ ಗೂ ಹೆಚ್ಚು) ದೊರೆತ ಬಳಿಕ ಸಮಾಜ ಸೇವೆಯ ಬಗ್ಗೆ ಹೆಚ್ಚು ಗಮನಹರಿಸಿದರು.

ವರ್ಷಗಳ ಬಳಿಕ ವಿಚ್ಛೇದನ ಯೋಚಿಸಲೇಬೇಕಾದ ಸಂಗತಿಯೆಂದರೆ, ಯಾವ ಹೆಂಡತಿ 23 ವರ್ಷಗಳ ಹಿಂದಿನ ತನಕ ಬಿಲ್ ‌ಗೇಟ್ಸ್ ಗೆ ಎಲ್ಲ ಆಗಿದ್ದಳೋ ಈಗ ಅವರಿಗೂ ತನ್ನನ್ನು ತಾನು ಪ್ರತ್ಯೇಕಿಸಿಕೊಳ್ಳುವುದು ಎಷ್ಟು ಕಠಿಣವಾಗಿರಬಹುದು? ಮೆಲಿಂಡಾಗೂ ಕೂಡ ಅಷ್ಟೊಂದು ಶ್ರೀಮಂತ ಪ್ರತಿಭಾವಂತ ಹಾಗೂ ಪ್ರಖ್ಯಾತ ವ್ಯಕ್ತಿ ಜೊತೆ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಕಳೆದರು. ಜೀವನದ ಖುಷಿ ಹಾಗೂ ಜವಾಬ್ದಾರಿಗಳನ್ನು ಪರಸ್ಪರ ಹಂಚಿಕೊಂಡು ಅದರಿಂದ ಜೀವನದ ಅರ್ಧ ದಾರಿಯಲ್ಲಿ ಪ್ರತ್ಯೇಕಗೊಳ್ಳುವ ನಿರ್ಧಾರ ಕೈಗೊಳ್ಳುವುದು ಸಹಜವಾಗಿರಬಹುದಾ?

ಅಂದಹಾಗೆ, ಮದುವೆಯ ಹಲವು ವರ್ಷಗಳ ಬಳಿಕ ಪ್ರೌಢಾವಸ್ಥೆ ಅಥವಾ ವೃದ್ಧಾವಸ್ಥೆಯಲ್ಲಿ ವಿಚ್ಛೇದನ ಪಡೆಯುವುದು ನಿಜಕ್ಕೂ ದುಃಖದ ಸಂಗತಿ. ಮದುವೆಯಾದ 23 ವರ್ಷಗಳ ಒಳಗೆ ವಿಚ್ಛೇದನವಾದರೆ ಅದೇಕೆ ಎಂದು ಗೊತ್ತಾಗುತ್ತದೆ. ಇಬ್ಬರು ವ್ಯಕ್ತಿಗಳು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳಲಾಗದೆ ವಿಚ್ಛೇದನದ ನಿರ್ಧಾರಕ್ಕೆ ಬರುತ್ತಾರೆ. ಆದರೆ ಮದುವೆಯಾದ 25-30 ವರ್ಷಗಳ ಬಳಿಕ ವಿಚ್ಛೇದನವಾದರೆ, ಅವರ ಮಧ್ಯೆ ಒಳ್ಳೆಯ ಹೊಂದಾಣಿಕೆ ಇತ್ತು ಎನ್ನುವುದು ಗೊತ್ತಾಗುತ್ತದೆ.

ಇಷ್ಟೊಂದು ವರ್ಷಗಳಲ್ಲಿ ಅವರು ಎರಡು ದೇಹ ಒಂದೇ ಪ್ರಾಣ ಎಂಬಂತಾಗಿಬಿಟ್ಟಿರುತ್ತಾರೆ. ಪರಸ್ಪರರ ಅಭ್ಯಾಸ ಹೇಗಾಗಿಬಿಟ್ಟಿರುತ್ತದೆಂದರೆ, ಹೃದಯ ಉಸಿರಿನೊಂದಿಗೆ ಸಂಬಂಧದಂತೆ. ಈ ವಯಸ್ಸಿನಲ್ಲಿ ವಿಚ್ಛೇದನ ಆಗುವ ಕಾರಣವಾದರೂ ಏನಿರಬಹುದು?

ಅಂದಹಾಗೆ, ವ್ಯಕ್ತಿಯೊಬ್ಬನ ಜೀವನದಲ್ಲಿ ಅತಿ ಹೆಚ್ಚು ಮಹತ್ವ ಪಡೆದುಕೊಳ್ಳುವ ಸಂಗತಿಗಳೆಂದರೆ ಹಣ, ನಂಬಿಕೆ ಹಾಗೂ ನೆಮ್ಮದಿ. ಮದುವೆಯಾದ ಅನೇಕ ವರ್ಷಗಳ ಬಳಿಕ ವಿಚ್ಛೇದನ ಆಗಲು ಮುಖ್ಯ ಕಾರಣ ಹಣವಂತೂ ಆಗಿರಲು ಸಾಧ್ಯವಿಲ್ಲ. ಏಕೆಂದರೆ ಜಗತ್ತಿನ ಅತಿ ಶ್ರೀಮಂತ ವ್ಯಕ್ತಿಗೆ ಮದುವೆಯಾದ 23 ದಶಕಗಳ ಬಳಿಕ ವಿಚ್ಛೇದನದ ಸಮಸ್ಯೆಯ ಮೂಲಕ ಸಾಗುತ್ತಿದ್ದಾರೆಂದರೆ ಅದಕ್ಕೆ ಹಣವೇ ಕಾರಣ ಎಂದು ಹೇಳಲಾಗದು.

ವಿಚ್ಛೇದನದ ಪಯಣ…..

ವಿಷಯ ನಂಬಿಕೆಯದ್ದಾಗಿದ್ದರೆ, ಅದು ಅತ್ಯಂತ ಮಹತ್ವದ್ದು. ಬಹಳಷ್ಟು ಪ್ರಕರಣಗಳಲ್ಲಿ ಕಂಡುಬಂದ ಸಂಗತಿಯೆಂದರೆ, ಮದುವೆಯಾದ ಹಲವು ವರ್ಷಗಳ ಬಳಿಕ ಒಂದು ವೇಳೆ ಸಂಗಾತಿಗೆ ತನ್ನ ಗಂಡ ಅಥವಾ ಹೆಂಡತಿಯ ಜೀವನದಲ್ಲಿ ಮತ್ಯಾರೋ ಪ್ರವೇಶಿಸಿದ್ದಾರೆ ಅಥವಾ ಮೊದಲೇ ಇದ್ದರು ಎಂಬ ಸಂಗತಿಯನ್ನು ಸ್ವೀಕರಿಸಲು ಆಗುವುದಿಲ್ಲ. ಪರಸ್ಪರ ಜಗಳ ಹಾಗೂ ಭಿನ್ನಾಭಿಪ್ರಾಯ ಹೆಚ್ಚುತ್ತಾ ಹೋಗುತ್ತದೆ. ಬಳಿಕ ವಿಷಯ ವಿಚ್ಛೇದನದವರೆಗೂ ತಲುಪುತ್ತದೆ.

ಎಷ್ಟೋ ಸಲ ವ್ಯಕ್ತಿ ಇದೇ ಕಾರಣದಿಂದ ತನ್ನ ಸಂಗಾತಿಯಿಂದ ಬೇರ್ಪಡುವ ನಿರ್ಧಾರಕ್ಕೆ ಬರುತ್ತಾನೆ/ಳೆ. ಏಕೆಂದರೆ ಆಕೆ/ಅವನು ಇಟ್ಟಿರುವ ಅಪೇಕ್ಷೆಗೆ ಮಹತ್ವ ದೊರಕಿರುವುದಿಲ್ಲ. ಅಂದಹಾಗೆ, ನೀವು ಯಾರದ್ದಾದರೂ ಅನುಕಂಪದಲ್ಲಿ ಇದ್ದರೆ ಅಥವಾ ಯಾರಾದರೂ ನಿಮ್ಮ ಹೊಣೆಗಾರಿಕೆ ನಿಭಾಯಿಸುತ್ತಾ ಬಂದಿದ್ದಲ್ಲಿ, ನಿಮ್ಮ ಅಪೇಕ್ಷೆಗಳು ಹೆಚ್ಚುತ್ತಾ ಹೋಗುತ್ತವೆ. ಆಗ ನಿಮ್ಮ ನಡುವೆ ಯಾವುದೇ ಅಡ್ಡಗೋಡೆ ಇರುವುದಿಲ್ಲ.

ನೀವು ಪ್ರತಿಯೊಂದು ಕೆಲಸವನ್ನು ಪರಸ್ಪರರ ಸಲಹೆಯ ಮೇರೆಗೆ ಮಾಡಲು ಅಪೇಕ್ಷಿಸುತ್ತೀರಿ. ಒಂದು ವೇಳೆ ನಿಮ್ಮ ಸಂಗಾತಿ ನಿಮಗೆ ತಿಳಿಸದೆಯೇ ನಿಮ್ಮ ಜೀವನಕ್ಕೆ ಸಂಬಂಧಪಟ್ಟ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಲ್ಲಿ, ನಿಮ್ಮಿಂದ ಹಲವು ಸಂಗತಿಗಳನ್ನು ಬಚ್ಚಿಡುತ್ತಿದ್ದಲ್ಲಿ ನಿಮ್ಮ ನಂಬಿಕೆ ಹಾಗೂ ನೆಮ್ಮದಿ ಎರಡೂ ಹೊರಟುಹೋಗುತ್ತದೆ. ಕೊನೆಗೊಮ್ಮೆ ನೀವು ಸಂಗಾತಿಯಿಂದ ಬೇರ್ಪಡುವ ನಿರ್ಧಾರಕ್ಕೆ ಬರುತ್ತೀರಿ. ಏಕೆಂದರೆ ಕಳೆದುಹೋದ ನೆಮ್ಮದಿ ವಾಪಸ್‌ ಸಿಗಲಿ ಎನ್ನುವುದಾಗಿರುತ್ತದೆ.

ಸುಮಾರು ಅರ್ಧ ಜೀವನ ಜೊತೆ ಜೊತೆಗೆ ಕಳೆದ ಬಳಿಕ ಸಂಗಾತಿಯಿಂದ ಅಪೇಕ್ಷೆಗಳು ಹೆಚ್ಚುತ್ತಾ ಹೋಗುತ್ತವೆ. ಅಂದಹಾಗೆ ಗಂಡ ಹೆಂಡತಿಯ ಸಂಬಂಧ ಬಹಳ ಸೂಕ್ಮವಾಗಿರುತ್ತದೆ. ಪರಸ್ಪರರಿಗಾಗಿ ಯಾರನ್ನು ಲೆಕ್ಕಿಸದೆ ಪ್ರಾಣ ಕೊಡಲು ತಯಾರಿರುವ ಗಂಡ ಹೆಂಡತಿ ಒಮ್ಮೊಮ್ಮೆ ಅಷ್ಟಿಷ್ಟು ನಂಬಿಕೆದ್ರೋಹ ಅಥವಾ ಅವಮಾನವನ್ನು ಸಹಿಸಿಕೊಳ್ಳಲು ಆಗುವುದಿಲ್ಲ ಹಾಗೂ ಪರಸ್ಪರ ಬೇರ್ಪಡುತ್ತಾರೆ.

ನೋವು ತರುವ ವಿಚ್ಛೇದನ

ಯಾವುದಾದರೂ ಜೋಡಿ ಬೇರ್ಪಟ್ಟಾಗ ಜನರು ಅದರ ಕಾರಣ ತಿಳಿಯಲು ಆಸಕ್ತಿ ತೋರಿಸುತ್ತಾರೆ. ಆದರೆ ಆ ಹಂತದಿಂದ ದಾಟಿ ಹೋಗುವ ಜೋಡಿಗೆ ಹೇಗೆ ಅನಿಸಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸುವುದಿಲ್ಲ. ವಿಚ್ಛೇದನ ಕೇವಲ ಭಾವನಾತ್ಮಕವಾಗಿ ಅಷ್ಟೇ ಅಲ್ಲ, ದೈಹಿಕವಾಗಿಯೂ ಜರ್ಝರಿತವಾಗುವಂತೆ ಮಾಡುತ್ತದೆ. ನಿರ್ಧಾರ ಕೈಗೊಳ್ಳುವ ದಿನದಿಂದ ಹಿಡಿದು ಕೊನೆಯ ತನಕ ಎಷ್ಟೊಂದು ಘಟನೆಗಳು ನಡೆಯುತ್ತದೆಂದರೆ, ವ್ಯಕ್ತಿ ತನ್ನನ್ನು ತಾನು `ಡ್ರೇನ್‌ ಔಟ್‌’ ಎಂದು ಭಾವಿಸುತ್ತಾನೆ/ಳೆ.

ವಕೀಲರು, ಕೋರ್ಟ್‌ ಕಲಾಪ, ಕುಟುಂಬ ಹಾಗೂ ಮಾಜಿಯ ಜೊತೆ ಈ ಬಗ್ಗೆ ನಿರಂತರ ಚರ್ಚೆ, ಆಸ್ತಿ ಹಾಗೂ ಇತರೆ ವಸ್ತುಗಳ ಹಂಚಿಕೆ ತಮ್ಮ ತಮ್ಮ ಸುಪರ್ದಿಗೆ ತೆಗೆದುಕೊಳ್ಳುವ ಹಣಾಹಣಿ ಈ ಎಲ್ಲದರ ನಡುವೆ ಆ ಸಂಗಾತಿಯನ್ನು ತನ್ನೆದುರಿನಲ್ಲಿಯೇ ನೋಡಬೇಕಾಗಿ ಬರುತ್ತದೆ. ಹಿಂದೆ ಆತ ನಿಮ್ಮೊಂದಿಗೆ ಎಲ್ಲ ಹಂತದಲ್ಲೂ ನಿಮ್ಮ ಜೊತೆಗೆ ಇರುತ್ತಿದ್ದ. ಈ ಎಲ್ಲದಕ್ಕೂ ಮಿಗಿಲೆಂಬಂತೆ ಸಂಗಾತಿಯಿಂದ ಪ್ರತ್ಯೇಕಗೊಂಡ ದುಃಖವಂತೂ ಇದ್ದೇ ಇರುತ್ತದೆ. ಈ ಎಲ್ಲ ಸಂಗತಿಗಳು ವ್ಯಕ್ತಿಯೊಬ್ಬನಿಗೆ ಗಾಢವಾಗಿ ಭಾವನಾತ್ಮಕ ನೋವು ತಂದೊಡ್ತುತ್ತವೆ.

– ಗೀತಾ

ದುಬಾರಿ ವಿಚ್ಛೇದನಗಳು

ಗಂಡ ಹೆಂಡತಿಯ ನಡುವೆ ವಿಚ್ಛೇದನದ ಬಳಿಕ ಹೆಂಡತಿ ಕಾನೂನು ರೀತ್ಯಾ ಜೀವನಾಂಶಕ್ಕೆ ಹಕ್ಕುದಾರಳಾಗುತ್ತಾಳೆ. ಜಗತ್ತಿನಲ್ಲಿ ವಿಚ್ಛೇದನದ ಎಂತೆಂತಹ ಪ್ರಕರಣಗಳಿವೆಯೆಂದರೆ ಅವುಗಳಲ್ಲಿ ಹೆಂಡತಿಯರಿಗೆ ಭಾರಿ ಮೊತ್ತ ದೊರಕಿರುವುದು ಸುದ್ದಿಗಳಿಗೆ ಗ್ರಾಸವಾಗಿದ್ದವು.

ಮರ್ಡೊಕ್‌ ಎನ್ನಾ ತೊರ್ವೆ

ಮೀಡಿಯಾ ಕಿಂಗ್‌ ರೂಪರ್ಟ್‌ ಮರ್ಡೊಕ್‌ ತಮ್ಮ ಎರಡನೇ ಹೆಂಡತಿ ಎನ್ನಾ ತೊರ್ವೆಗೆ 1999ರಲ್ಲಿ ವಿಚ್ಛೇದನ ನೀಡಿದ್ದಕ್ಕಾಗಿ 8,670 ಕೋಟಿ ರೂ.ಗಳಷ್ಟು ಜೀವನಾಂಶ ನೀಡಬೇಕಾಗಿ ಬಂತು.

ಅರ್ನಾಲ್ಡ್ ಮಾರಿಯಾ

ಹಾಲಿವುಡ್‌ ನ ಪ್ರಸಿದ್ಧ ನಟ ಅರ್ನಾಲ್ಡ್ ಶಾರ್ಜನೆಗರ್‌ 2011ರಲ್ಲಿ ತನ್ನ ಹೆಂಡತಿ ಮಾರಿಯಾ ಶ್ರೀರ್‌ಗೆ ವಿಚ್ಛೇದನ ನೀಡಿದ್ದಾರೆ. ಅದಕ್ಕೆ ಕಾರಣ ಮನೆಗೆಲಸದವಳ ಜೊತೆಗಿನ ಪ್ರೀತಿಯಾಗಿತ್ತು. ಅದಕ್ಕಾಗಿ ಅವರು 900 ಮಿಲಿಯನ್‌ ಅಮೆರಿಕನ್‌ ಡಾಲರ್ ಪರಿಹಾರ ರೂಪದಲ್ಲಿ ಕೊಡಬೇಕಾಗಿ ಬಂದಿತು.

ಟೈಗರ್‌ ಡಲ್ಸ್ ಎಲಿನ್‌

ಹೆಸರಾಂತ ಗಾಲ್ಫ್ ಆಟಗಾರ ಟೈಗರ್‌ ಡಲ್ಸ್ ತನ್ನ ಹೆಂಡತಿಗೆ 6 ವರ್ಷಗಳ ವೈವಾಹಿಕ ಜೀವನ ನಡೆಸಿದ ಬಳಿಕ ವಿಚ್ಛೇದನ ನೀಡಿದ್ದರು. ವಿಚ್ಛೇದನಕ್ಕೆ ಕಾರಣ ಟೈಗರ್‌ ನ ಖಯಾಲಿ ಪ್ರವೃತ್ತಿ. ಹೆಂಡತಿಗೆ ನೀಡಿದ ವಿಚ್ಛೇದನಕ್ಕಾಗಿ ಟೈಗರ್‌ ಕೊಟ್ಟ ಜೀವನಾಂಶ ಮೊತ್ತ ಎಷ್ಟು ಗೊತ್ತೇ? 637 ಕೋಟಿ ರೂ.ಬಾಲಿವುಡ್‌ ನ ದುಬಾರಿ ವಿಚ್ಛೇದನಗಳು ಬಾಲಿವುಡ್‌ ನ ಕೆಲವು ವಿಚ್ಛೇದನಗಳು ಕೇವಲ ಚರ್ಚೆಗಷ್ಟೇ ಗ್ರಾಸವಾಗಲಿಲ್ಲ. ದುಬಾರಿ ವಿಚ್ಛೇದನಗಳೆಂದು ಕರೆಯಲ್ಪಟ್ಟ.

ಹೃತಿಕ್‌ ಸುಜೈನಾ ಖಾನ್‌

ನಟ ಹೃತ್ವಿಕ್‌ ರೋಶನ್‌ ಹಾಗೂ ಸುಜೈನಾ ಖಾನ್‌ ಬೇರೆ ಬೇರೆ ಆಗಲು ನಿರ್ಧರಿಸಿದಾಗ, ಪ್ರತಿಯೊಬ್ಬರೂ ಚಕಿತರಾಗಿದ್ದರು. ಅವರ ಮದುವೆಯಾದದ್ದು 2000ದಲ್ಲಿ. ಇಬ್ಬರ ಅಫೇರ್‌ ನ ಸುದ್ದಿ ಹರಿದಾಡಿದ್ದವು. ಆದರೆ ಕೊನೆಯವರೆಗೂ ಇಬ್ಬರ ವಿಚ್ಛೇದನಕ್ಕೆ ಏನು ಕಾರಣ ಎಂಬುದು ಮಾತ್ರ ಸ್ಪಷ್ಟವಾಗಲಿಲ್ಲ. ಜೀವನಾಂಶದ ರೂಪದಲ್ಲಿ ಸುಜೈನಾ 400 ಕೋಟಿ ರೂ. ಬೇಡಿಕೆ ಇಟ್ಟಿದ್ದರು. ಅದಕ್ಕೆ ಸಿಕ್ಕಿದ್ದು ಮಾತ್ರ 380 ಕೋಟಿ ರೂ.

ಸೈಫ್‌ ಅಲಿಖಾನ್‌ ಅಮೃತಾಸಿಂಗ್‌

ನಟ ಸೈಫ್‌ ಅಲಿಖಾನ್‌ ಹಾಗೂ ಅಮೃತಾ ಸಿಂಗ್‌ ಜೋಡಿಯ ವಿಚ್ಛೇದನ ಬಾಲಿವುಡ್‌ ನ ಅತ್ಯಂತ ದುಬಾರಿ ವಿಚ್ಛೇದನಗಳಲ್ಲಿ ಒಂದಾಗಿದೆ. ಇಬ್ಬರೂ 1991ರಲ್ಲಿ ಮದುವೆಯಾಗಿದ್ದರು. ವಯಸ್ಸಿನಲ್ಲಿ ಅಮೃತಾ ಸೈಫ್‌ ಗಿಂತ 13 ವರ್ಷ ದೊಡ್ಡವಳು. ಮದುವೆಯಾದ 13 ವರ್ಷಗಳ ಬಳಿಕ ಇಬ್ಬರೂ ಪ್ರತ್ಯೇಕಗೊಂಡರು. ಸೈಫ್‌ ಅಮೃತಾಗೆ ಸಾಕಷ್ಟು ಆಸ್ತಿಪಾಸ್ತಿ ನೀಡಿದ್ದರು.

ಮಲೈಕಾ ಅರ್ಬಾಜ್‌

ಇಂತಹ ಕೆಲವು ಪ್ರೀತಿ ಹಾಗೂ ಸ್ನೇಹದಿಂದ ಕೂಡಿದ ಸಂಬಂಧ ಬೇರೆ ಕೆಲವು ಸೆಲೆಬ್ರೆಟಿ ಕಪಲ್ಸ್ ಗಳ ಉದಾಹರಣೆಗಳಿದ್ದು, ಅವರು ವಿಚ್ಛೇದನದ ಬಳಿಕ ಸಾಕಷ್ಟು ಹೊತ್ತು ಜೊತೆ ಜೊತೆಗೆ ಕಳೆಯುತ್ತಾರೆ. ಇದರ ಹೊರತಾಗಿ ಅವರು ಪಾರ್ಟಿಗಳಲ್ಲೂ ಕಂಡುಬರುತ್ತಾರೆ. ವಿಚ್ಛೇದನದ ಬಳಿಕ ಅವರ ಸಂಬಂಧದಲ್ಲಿ ಹೆಚ್ಚೇನೂ ವ್ಯತ್ಯಾಸವಾಗದು. ಅದೇ ರೀತಿ ಆಮೀರ್‌ ಖಾನ್‌ ಹಾಗೂ ರೀನಾ ಕೂಡ ಜೊತೆ ಜೊತೆಗೆ ಕಾಲ ಕಳೆಯುತ್ತಾರೆ.

ಪರ್ಹಾನ್‌ ಅಖ್ತರ್‌ ಹಾಗೂ ಅದುನಾ ಭಂಬಾನಿ

16 ವರ್ಷಗಳ ವೈವಾಹಿಕ ಜೀವನದ ಬಳಿಕ ಪ್ರತ್ಯೇಕಗೊಂಡಿದ್ದರು. ಈಗಲೂ ಅವರು ಪರಸ್ಪರರಿಗೆ ಗೌರವ ಕೊಡುತ್ತಾರೆ.

ವಿಚ್ಛೇದನದ ಬಳಿಕ ಸಂಬಂಧ ಕೊನೆಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಾಗಲ್ಲ ವಿಚ್ಛೇದನದ ಬಳಿಕ ಎಷ್ಟೋ ಜನರು ತಮ್ಮ ಮಾಜಿ ಸಂಗಾತಿಯ ಬಗ್ಗೆ ಅದೆಷ್ಟೋ ಆರೋಪ ಹೊರಿಸುತ್ತಾರೆ. ತಾವು ಯಾರೊಂದಿಗೆ ಅಮೂಲ್ಯ ಸಮಯ ಕಳೆದಿದ್ದೆ ಎನ್ನುವುದನ್ನು ಅವರು ಮರೆತೇಬಿಡುತ್ತಾರೆ. ಆದರೆ ಹೃತಿಕ್‌ ಹಾಗೂ ಸುಜೈನಾ ನಡುವೆ ಹೀಗಾಗಲಿಲ್ಲ. ಅವರು ವಿಚ್ಛೇದನವನ್ನೇನೊ ಪಡೆದರು. ಆದರೆ ಒಂದು ಸಂಗತಿ ಮಾತ್ರ ಬದಲಾಗಲಿಲ್ಲ. ಅದೇನೆಂದರೆ ಇಬ್ಬರ ನಡುವಿನ ಸ್ನೇಹ ಹಾಗೂ ಪರಸ್ಪರರಿಗೆ ಕೊಡುವ ಗೌರವ ಕಡಿಮೆಯಾಗಲಿಲ್ಲ.

2020ರಲ್ಲಿ ಲಾಕ್‌ ಡೌನ್‌ ಸಮಯದಲ್ಲಿ ಸುಜೈನಾ ತನ್ನ ಮಕ್ಕಳೊಂದಿಗೆ ಹೃತಿಕ್‌ ಮನೆಗೆ ಹೋಗಿದ್ದಳು. ತನ್ನ ಮಕ್ಕಳ ಕಾರಣದಿಂದ ಸುಜೈನಾ ಈ ನಿರ್ಧಾರ ಕೈಗೊಂಡಿದ್ದಳು. ಇಬ್ಬರೂ ಮಕ್ಕಳ ಕುರಿತಂತೆ `ಜಾಯಿಂಟ್‌ ಕಸ್ಟಡಿ’ ಇದೆ. ಕೊರೋನಾ ಸಮಯದಲ್ಲಿ ಮಕ್ಕಳನ್ನು ಭೇಟಿಯಾಗುವುದು ಕೂಡ. ಹೃತಿಕ್‌ ಕೋರಿಕೆಯ ಮೇರೆಗೆ ಸುಜೈನಾ ಮಕ್ಕಳನ್ನು ಕರೆದುಕೊಂಡು ಹೃತಿಕ್‌ ಮನೆಗೆ ಹೋಗಿದ್ದಳು. ಅವರಿಬ್ಬರೂ ಪರಸ್ಪರರ ಭಾವನೆಗಳನ್ನು ಗೌರವಿಸುತ್ತಾರೆ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ