ಆರೋಗ್ಯಕರ ಜೀವನದ ಆನಂದ ಪಡೆಯಬೇಕಿದ್ದರೆ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳುವ ಈ ವಿಧಾನಗಳು ನಿಮಗೆ ಉಪಯುಕ್ತ ಆಗಬಹುದು.
ಚೀನಾ ದೇಶದ ಹವಾನ್ ನಗರದಿಂದ ಹಬ್ಬಿದ ಕೊರೋನಾ ಎಂಬ ರೋಗ ಈಗ ಭಾರತದ ಜೊತೆ ಜೊತೆಗೆ ಬೇರೆ ದೇಶಗಳಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಇದು ಎಂತಹ ಒಂದು ಭಯಾನಕ ರೋಗವೆಂದರೆ, ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಸುಲಭವಾಗಿ ಪಸರಿಸುತ್ತದೆ. ಕೊರೋನಾ ಸೋಂಕಿನಿಂದ ರಕ್ಷಿಸಿಕೊಳ್ಳುವ ಎಲ್ಲಕ್ಕೂ ಮುಖ್ಯವಾದುದೆಂದರೆ, ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಅಂದಹಾಗೆ ಜನರು ಕೈಗಳ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ಬಹಳಷ್ಟು ಜನರ ಅಭಿಪ್ರಾಯದಲ್ಲಿ ಕೈ ತೊಳೆದುಕೊಳ್ಳುವುದೆಂದರೆ ಸೋಪು ಹಾಗೂ ನೀರಿನ ವ್ಯರ್ಥ ಬಳಕೆ ಮಾಡಿದಂತೆ. ಅನೇಕ ಜನರಿಗೆ ಕೈತೊಳೆದುಕೊಳ್ಳುವ ಸರಿಯಾದ ವಿಧಾನ ಕೂಡ ಗೊತ್ತಿಲ್ಲ. ಆ ಕಾರಣದಿಂದ ಜನರಲ್ಲಿ ಸೋಂಕು ಹಾಗೂ ಬಗೆಬಗೆಯ ರೋಗಗಳು ಬಹು ಬೇಗ ಪಸರಿಸುತ್ತಿವೆ.
ವೈದ್ಯಕೀಯ ಕ್ಷೇತ್ರದ ತಜ್ಞರು ಕಳೆದ ಅನೇಕ ವರ್ಷಗಳಿಂದಲೇ ಎಂಥದೇ ರೋಗಗಳಿಂದ ರಕ್ಷಿಸಿಕೊಳ್ಳಲು ಕೈ ತೊಳೆದುಕೊಳ್ಳುವುದು ಸೂಕ್ತ ಉಪಾಯ ಎಂದು ಹೇಳುತ್ತ ಬಂದಿದ್ದಾರೆ.
ಒಂದು ಸಂಶೋಧನೆಯ ಪ್ರಕಾರ ನಮ್ಮ ದೇಶದ ಶೇ.40ರಷ್ಟು ಜನರು ಊಟಕ್ಕಿಂತ ಮುಂಚೆ ಕೈ ತೊಳೆದುಕೊಳ್ಳುವುದಿಲ್ಲ. ಒಂದು ವೇಳೆ ನಾವು ಕೈ ತೊಳೆದುಕೊಳ್ಳುವ ಪ್ರಕ್ರಿಯೆಯನ್ನು ಪರಿಪೂರ್ಣ ಪ್ರಾಮಾಣಿಕತೆಯಿಂದ ನರೆವೇರಿಸಿದರೆ ನಮ್ಮನ್ನು ನಾವು ಹಲವು ರೋಗಗಳಿಂದ ರಕ್ಷಿಸಿಕೊಳ್ಳಬಹುದು.
ಕೈ ತೊಳೆದುಕೊಳ್ಳುವುದು ಏಕೆ ಅತ್ಯವಶ್ಯ?
ನಾವು ದಿನವಿಡೀ ಏನೇನು ಕೆಲಸ ಮಾಡುತ್ತೇವೆ, ಅದರಲ್ಲಿ ನಮ್ಮ ಕೈಗಳಲ್ಲಿ ರೋಗಾಣು ಇರುವುದು ಸಾಮಾನ್ಯ. ನಾವು ಸಾರ್ವಜನಿಕ ಸ್ಥಳಗಳಿಗೆ ಹೋದಾಗ ಅಲ್ಲಿ ಲಿಫ್ಟ್ಗಳನ್ನು ಬಳಸುತ್ತೇವೆ, ಮೆಟ್ರೋದಲ್ಲಿ ಹ್ಯಾಂಡಲ್ ಹಿಡಿಯುತ್ತೇವೆ. ಆಫೀಸಿನಲ್ಲಿ ಬಾಗಿಲುಗಳು, ನಲ್ಲಿಗಳು, ರೇಲಿಂಗ್‌ಗಳನ್ನು ಮುಟ್ಟುತ್ತೇವೆ. ಅದರಿಂದಾಗಿ ನಮ್ಮ ಕೈಗಳು ಸೋಂಕಿಗೀಡಾಗುತ್ತವೆ. ಒಂದು ವೇಳೆ ನಾವು ಸೋಂಕಿತ ಕೈಗಳಿಂದ ಏನಾದರೂ ತಿಂದರೆ, ಯಾರದ್ದಾದರೂ ಕೈಗಳನ್ನು ಕುಲುಕಿದರೆ ಆಗ ರೋಗಾಣುಗಳು ಇತರರ ಕೈಗಳನ್ನು ತಲುಪುತ್ತದೆ.
ಕೊರೋನಾದಿಂದ ರಕ್ಷಿಸಿಕೊಳ್ಳಲು ಅಮೆರಿಕ ವೈದ್ಯರು `ಡೋಂಟ್ ಟಚ್ ಯುವರ್ ಫೇಸ್’ ಎಂಬ ಅಭಿಯಾನ ನಡೆಸಿದ್ದರು. ಕೊರೋನಾದಿಂದ ರಕ್ಷಿಸಿಕೊಳ್ಳಲು ಇದು ಅತ್ಯಂತ ಸುಲಭ ಉಪಾಯ ಎನ್ನುವುದು ಅವರ ಹೇಳಿಕೆಯಾಗಿತ್ತು. ಮುಖವನ್ನು ಸಾಧ್ಯವಿದ್ದಷ್ಟು ಕಡಿಮೆ ಮುಟ್ಟಿ. ಅದರಿಂದ ಕೊರೋನಾ ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ. ನಾವು ಸಾಮಾನ್ಯವಾಗಿ ಒಂದು ಗಂಟೆಗೆ 2-3 ಸಲ ಮುಖವನ್ನು ಮುಟ್ಟಿಕೊಳ್ಳುತ್ತೇವೆ.
ಅದಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಸಿ.ಡಿ.ಸಿ. ಹಲವು ಮಾರ್ಗದರ್ಶಿ ಸೂತ್ರಗಳನ್ನು ಜಾರಿಗೊಳಿಸಿ ಅವಶ್ಯಕ ಎಚ್ಚರಿಕೆಗಳನ್ನು ಪಾಲಿಸುವಂತೆ ಸಲಹೆ ನೀಡಿದೆ. ಅದರಲ್ಲಿ ಕೈಗಳನ್ನು ತೊಳೆದುಕೊಳ್ಳುವುದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮುಖ್ಯವಾಗಿವೆ.
ಹಿರಿಯ ಫಿಸಿಯೋಥೆರಪಿಸ್ಟ್ ಡಾ. ಸತ್ಯಂ ಭಾಸ್ಕರ್ ನಾವು ಹೇಗೆ ಕೈ ತೊಳೆದುಕೊಳ್ಳಬೇಕು ಎಷ್ಟ ಹೊತ್ತು ಕೈ ತೊಳೆದುಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದರು.
ಸ್ಯಾನಿಟೈಸರ್‌ಗಿಂತ ಸೋಪ್‌ನಿಂದ ಕೈ ತೊಳೆದುಕೊಳ್ಳುವುದು ಸೂಕ್ತ. ಏಕೆಂದರೆ ಮಾರ್ಕೆಟ್‌ನಲ್ಲಿ ಇರುವ ಸ್ಯಾನಿಟೈಸರ್‌ಗಳಲ್ಲಿ ಆಲ್ಕೋಹಾಲ್ ಅಂಶ ಇದ್ದೇ ಇರುತ್ತದೆ ಎಂದು ಹೇಳಲಾಗದು. ನೀವು ಕೈ ತೊಳೆದುಕೊಳ್ಳುವ ಸರಿಯಾದ ವಿಧಾನವನ್ನು ಅನುಸರಿಸಿದರೆ ನಿಮ್ಮ ಕೈಗಳು ಸ್ವಚ್ಛವಾಗುತ್ತವೆ. ಅದಕ್ಕಾಗಿ ನೀವು 20 ಸೆಕೆಂಡುಗಳ ಕಾಲ ಎಣಿಕೆ ಮಾಡುವ ಅವಶ್ಯಕತೆಯೂ ಉಂಟಾಗುವುದಿಲ್ಲ.
ಕೈ ತೊಳೆದುಕೊಳ್ಳುವ ಸರಿಯಾದ ಹೆಜ್ಜೆಗಳು ಕೈಗಳನ್ನು ರೋಗಾಣುಗಳಿಂದ ದೂರ ಇಡಲು ಈ ಏಳು ಸ್ಟೆಪ್ಸ್ ಅವಶ್ಯ ಅನುಸರಿಸಿ.
ಸ್ಟೆಪ್ 1 : ಕೈ ತೊಳೆಯಲು ಜೀವಾಣು ನಿರೋಧಕ ಸೋಪ್‌ನ್ನು ಬಳಸಿ. ಎಲ್ಲಕ್ಕೂ ಮೊದಲು ಕೈಗಳನ್ನು ನೀರಿನಿಂದ ಒದ್ದೆ ಮಾಡಿಕೊಳ್ಳಿ. ಬಳಿಕ ಸೋಪನ್ನು ಉಪಯೋಗಿಸಿ.
ಸ್ಟೆಪ್ 2 : ಎರಡೂ ಕೈಗಳನ್ನು ಪರಸ್ಪರ ಚೆನ್ನಾಗಿ ಉಜ್ಜಿಕೊಳ್ಳಿ.
ಸ್ಟೆಪ್ 3 : ಈಗ ಕೈಗಳನ್ನು ತದ್ವಿರುದ್ಧ ಕಡೆಯಿಂದಲೂ ಸ್ವಚ್ಛಗೊಳಿಸಿ.
ಸ್ಟೆಪ್ 4 : ನಿಮ್ಮ ಬೆರಳುಗಳನ್ನು ಇನ್ನೊಂದು ಕೈನ ಬೆರಳಿನೊಂದಿಗೆ ಸೇರಿಸಿ ಸ್ವಚ್ಛಗೊಳಿಸಿಕೊಳ್ಳಿ.
ಸ್ಟೆಪ್ 5 : ಈಗ ನಿಮ್ಮ ಉಗುರುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ.
ಸ್ಟೆಪ್ 6 : ನಿಮ್ಮ ಉಂಗುಷ್ಟ ಹಾಗೂ ಮಣಿಕಟ್ಟನ್ನು ಚೆನ್ನಾಗಿ ಉಜ್ಜಿಕೊಳ್ಳಿ.
ಸ್ಟೆಪ್ 7 : ಈಗ ನೀರಿನಿಂದ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿಕೊಳ್ಳಿ.
ಒಂದು ವೇಳೆ ನೀವು ಹೊರಗೆ ಇದ್ದರೆ, ಕೈ ತೊಳೆದುಕೊಳ್ಳಲು ಸೋಪ್ ಅಥವಾ ನೀರನ್ನು ಬಳಸಲು ಆಗದಿದ್ದರೆ, ಆಗ ನೀವು ಆಲ್ಕೋಹಾಲ್ ಬೇಸ್ಡ್ ಸ್ಯಾನಿಟೈಸರ್‌ನ್ನು ಉಪಯೋಗಿಸಬಹುದು. ಹ್ಯಾಂಡ್ ಸ್ಯಾನಿಟೈಸರ್ ಬಳಸುವಾಗ ಅದರಲ್ಲಿ ಶೇ.60ರಷ್ಟು ಆಲ್ಕೋಹಾಲ್ ಇದೆಯೇ ಎನ್ನುವುದನ್ನು ಖಾತ್ರಿಪಡಿಸಿಕೊಳ್ಳಿ. ಆಗಲೇ ಅದು ನಿಮಗೆ ಉಪಯುಕ್ತವಾಗಿ ಪರಿಣಮಿಸುತ್ತದೆ.
ಮಕ್ಕಳಿಗೂ ಕಲಿಸಿ
ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹಾಗಾಗಿ ಅವರಲ್ಲಿ ಸೋಂಕು ಬಹುಬೇಗ ತಗುಲುತ್ತದೆ. ಮಕ್ಕಳು ಮೇಲಿಂದ ಮೇಲೆ ಏಕೆ ರೋಗಗಳಿಗೆ ತುತ್ತಾಗುತ್ತಾರೆ ಎಂಬುದು ನಿಮಗೆ ಗೊತ್ತಾ? ಅಂದಹಾಗೆ ಅವರ ಕೊಳಕು ಕೈ ಅವರಲ್ಲಿ ರೋಗಾಣು ಪಸರಿಸಲು ಕಾರಣವಾಗುತ್ತದೆ. ಮಕ್ಕಳ ಕೈಗಳು ಸ್ವಚ್ಛವಾಗಿರದಿದ್ದರೆ ಅವರು ಅದೇ ಕೈಗಳಿಂದ ಆಹಾರ ಸೇವನೆ ಮಾಡುತ್ತಾರೆ ಹಾಗೂ ಮುಖ ಮತ್ತು ಕಣ್ಣುಗಳನ್ನು ಯಾವಾಗ ಸ್ವಚ್ಛಗೊಳಿಸಬೇಕು ಎನ್ನುವ ಮಾಹಿತಿ ಪಾಲಕರಿಗೆ ಇರಬೇಕು. ಅದರ ಬಗ್ಗೆ ಮಕ್ಕಳಿಗೆ ತಿಳಿಸಿಹೇಳುವುದು ಕೂಡ ಅಷ್ಟೇ ಅತ್ಯವಶ್ಯ. ಯಾವ ವಸ್ತುಗಳು ಕೊಳಕಾಗಿರುತ್ತವೆ, ಅನ್ನುವುದನ್ನು ಮುಟ್ಟಿ
ಬಳಿಕ ಕೈ ತೊಳೆದುಕೊಳ್ಳುವುದು ಎಷ್ಟು ಅತ್ಯವಶ್ಯ ಎನ್ನುವುದನ್ನು ಮನರಿಕೆ ಮಾಡಿಕೊಡಬೇಕು. ಆಗಲೇ ಮಗು ವೈರಲ್ ಇನ್ಫೆಂಕ್ಶನ್‌ನಿಂದ ಬಚಾವಾಗಲು ಸಾಧ್ಯವಾಗುತ್ತದೆ.
ಸಿ.ಡಿ.ಸಿಯ ಒಂದು ವರದಿಯ ಪ್ರಕಾರ, 5 ರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಪ್ರತಿವರ್ಷ ಡಯೇರಿಯಾ ಹಾಗೂ ನಿಮೋನಿಯಾಗೆ ತುತ್ತಾಗುತ್ತಾರೆ. ಡಯೇರಿಯಾ ಇದು ಕೊಳಕಿನಿಂದ ಹರಡುವ ರೋಗವಾಗಿದೆ. ಇಂತಹ ಸ್ಥಿತಿಯಲ್ಲಿ ಮನೆಯ ಸ್ವಚ್ಛತೆಯ ಜೊತೆಗೆ ನಮ್ಮನ್ನು ನಾವು ಸ್ವಚ್ಛವಾಗಿಟ್ಟುಕೊಳ್ಳುವುದು ಅತ್ಯವಶ್ಯ.
ಮಕ್ಕಳು ಯಾವಾಗ ಕೈ ಸ್ವಚ್ಛಗೊಳಿಸಬೇಕು?
ಬಾಥ್‌ರೂಮ್ಗೆ ಹೋಗಿಬಂದ ಬಳಿಕ.
ಸೀನಿದ ಬಳಿಕ, ಕೆಮ್ಮಿದ ಬಳಿಕ, ಮೂಗಿನಲ್ಲಿ ಬೆರಳು ಹಾಕಿದ ಬಳಿಕ.
ಊಟ ಮಾಡುವ ಮುಂಚೆ ಹಾಗೂ ಬಳಿಕ ಕೈ ತೊಳೆದುಕೊಳ್ಳುವುದು ಅತ್ಯವಶ್ಯ.
ಬೇರೆಯವರ ಕೈ ಕುಲುಕಿದ ಬಳಿಕ.
ನೋಟುಗಳನ್ನು ಮುಟ್ಟಿದ ಬಳಿಕ,
ಚಪ್ಪಲಿಶೂ ಮುಟ್ಟಿದ ಬಳಿಕ.
ಕ್ಲಾಸಿನಲ್ಲಿ ಬೇರೆ ಯಾರದ್ದಾದರೂ ಸಾಮಾನುಗಳನ್ನು ಉಪಯೋಗಿಸಿದ ಬಳಿಕ.
ಯಾವುದೇ ತೆರನಾದ ಗಾಯಗಳನ್ನು ಮುಟ್ಟಿದ ಬಳಿಕ.
ಹೀಗೆ ಕಲಿಸಿ
ಮಕ್ಕಳಿಗೆ ಕೈ ತೊಳೆದುಕೊಳ್ಳುವುದನ್ನು ಕಲಿಸುವ ಮೊದಲು ಆಂಗ್ಲ ವರ್ಣಮಾಲೆಯ ಆರು ಅಕ್ಷರಗಳನ್ನು ನೆನಪಿಡಲು ಹೇಳಿ.
ಎಲ್ : ಇದರ ಅರ್ಥ ಅಂಗೈ. ಮೊದಲು ಹಸ್ತಗಳನ್ನು ಉಜ್ಜಿ ಸ್ವಚ್ಛಗೊಳಿಸಿ.
ಟಿ : ಇದರರ್ಥ ತದ್ವಿರುದ್ಧ. ಕೈಗಳ ಹಿಂಭಾಗವನ್ನು ಸ್ವಚ್ಛಗೊಳಿಸಬೇಕು.
ಎಂ : ಇದರರ್ಥ ಮುಷ್ಟಿ. ಎರಡೂ ಕೈಗಳನ್ನು ಸ್ವಚ್ಛಗೊಳಿಸಿಕೊಂಡು ಉಜ್ಜಿಕೊಳ್ಳಿ.
ಎ : ಇದರರ್ಥ ಅಂಗುಷ್ಟ. ನಂತರ ಅಂಗುಷ್ಟವನ್ನು ಸ್ವಚ್ಛಗೊಳಿಸಿಕೊಳ್ಳಿ.
ಯು: ಇದರರ್ಥ ಉಗುರು. ಈಗ ಎರಡು ಕೈಗಳ ಉಗುರುಗಳನ್ನು ಸ್ವಚ್ಛ ಮಾಡಿಕೊಳ್ಳಿ.
ಎಂ : ಇದರರ್ಥ ಮುಂಗೈ. ಉಗುರುಗಳ ಬಳಿಕ ಮುಂಗೈ ಸ್ವಚ್ಛ ಮಾಡಿಕೊಳ್ಳಿ.ಈ ಆಂಗ್ಲ ಅಕ್ಷರಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದರ ಮೂಲಕ ಅವರಿಗೆ ಕೈ ತೊಳೆದುಕೊಳ್ಳುವುದರ ಬಗ್ಗೆ ವಿವರಿಸಬಹುದು. ಇದನ್ನು ಅವರು ಎಂದೂ ಮರೆಯರು.
– ಮನಸ್ವಿನಿ