ಲಾಕ್‌ಡೌನ್‌ ಶುರುವಾದ 2 ತಿಂಗಳ ನಂತರ ಅಂದು ಮೊದಲ ಬಾರಿಗೆ ಭಾವನಾ ಆಫೀಸಿಗೆ ಹೊರಟಿದ್ದಳು. ನಿಯಮದ ಪ್ರಕಾರ ಅಳು ಮಾಸ್ಕ್ ಧರಿಸಿದಳು, ಆದರೆ ಕನ್ನಡಿಯಲ್ಲಿ ಅವಳಿಗೆ ತನ್ನ ಮುಖವೇ ಕಾರ್ಟೂನ್‌ ತರಹ ಕಾಣಿಸುತ್ತಿತ್ತು. ಹೀಗೆ ಮಾಸ್ಕ್ ಹಾಕಿಕೊಂಡೇ ಆಫೀಸಿಗೆ ಹೊರಡಬೇಕಿದ್ದರೆ, ಮೇಕಪ್‌ ಏಕೆ ಬೇಕು ಎನಿಸಿತು.

ಹೀಗೆ ಅಂದುಕೊಳ್ಳುತ್ತಾ ಅವಳು ತಲೆ ಬಾಚಿಕೊಂಡು, ಮೇಕಪ್‌ ಇಲ್ಲದೆ, ಮಾಸ್ಕ್ ಧರಿಸಿ ಹೊರಟುಬಿಟ್ಟಳು. ಆಫೀಸಿನಲ್ಲಿ ಭಾವನಾಳನ್ನು ಕಂಡವರೆಲ್ಲ ಒಂದೇ ಪ್ರಶ್ನೆ ಕೇಳುತ್ತಿದ್ದರು, ``ಇದೇಕೆ ಹೀಗಿದ್ದಿ? ಹುಷಾರಿಲ್ಲವೇ? ಮುಖವೇಕೆ ಬಾಡಿಹೋಗಿದೆ?''

ಎಲ್ಲರೂ ತನ್ನನ್ನು ಹೀಗೇಕೆ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಭಾವನಾಳಿಗೆ ಅರ್ಥವಾಗಲಿಲ್ಲ. ಅವಳು ಮನೆಗೆ ಬಂದು ಮಾಸ್ಕ್ ತೆಗೆದು ನೋಡಿದಾಗ, ಹೌದು..... ಅವರು ಹೇಳುತ್ತಿದ್ದುದು ಸರಿ ಎನಿಸಿತು. ತನ್ನ ಮುಖ ಬಹಳ ಡಲ್ ಆಗಿದೆ ಎನಿಸಿತು. ಈ ಹಾಳು ಮಾಸ್ಕ್ ಹಾಕಿಕೊಂಡು ತಾನು ಸುಂದರಾಗಿ ಕಾಣುವುದಾದರೂ ಹೇಗೆ? ಎನಿಸಿತು.

ಕವಿತಾಳ ಕಥೆ ತುಸು ಭಿನ್ನ. ಲಾಕ್‌ಡೌನ್‌ ಜೊತೆ ಸಂಬಳಕ್ಕೂ ಕತ್ತರಿ ಬಿದ್ದಿತ್ತು. ಅವಳಿಗಂತೂ ತಲೆ ಪೂರ್ತಿ ಕೆಟ್ಟು ಹೋಗಿತ್ತು. ಯಾವ ರೀತಿ ಇರುವ ಸಂಬಳದಲ್ಲಿ ಸುಧಾರಿಸುವುದು? ಹೇಗೆ ಇದರಲ್ಲಿ ಉಳಿತಾಯ ಮಾಡುವುದು? ಹೀಗಾಗಿ ಅವಳು ಅಗ್ಗದ ಮಾಸ್ಕ್ ಕೊಂಡು ಹಣ ಉಳಿಸಿದ್ದಳು.

ದಿನವಿಡೀ ಮಾಸ್ಕ್ ಧರಿಸಿಯೇ ಇರಬೇಕು ಅಂದ್ರೆ ಆ ಲಕ್ಷಣಕ್ಕೆ ಲಿಪ್‌ಸ್ಟಿಕ್‌, ಸನ್‌ಸ್ಕ್ರೀನ್‌ ಅಥವಾ ಬೇರೆ ಕಾಸ್ಮೆಟಿಕ್ಸ್ಗೆ ಏಕೆ ಖರ್ಚು ಮಾಡಬೇಕು? 1-2 ವಾರದಲ್ಲಿ ಅಗ್ಗದ ಮಾಸ್ಕ್ನಿಂದ ಕವಿತಾಳ ಮುಖದಲ್ಲಿ ಅಲ್ಲಲ್ಲಿ ಅಲರ್ಜಿ, ಚರ್ಮದ ಕಪ್ಪು ಸಿಪ್ಪೆ ಸುಲಿತ ಕಂಡುಬಂತು. ಅಳು ವೈದ್ಯರ ಬಳಿ ಹೋದಾಗ, ಅಗ್ಗದ ಮಾಸ್ಕ್ ಮೆಟೀರಿಯಲ್ ಕಾರಣ ಹೀಗಾಯಿತೆಂದು ತಿಳಿಯಿತು. ಸನ್‌ಸ್ಕ್ರೀನ್‌ ಹಚ್ಚದ ಕಾರಣ ಚರ್ಮ ಕಪ್ಪಾಗಿತ್ತು.

ಕವಿತಾ ಆತುರಕ್ಕೆ ಬಿದ್ದು ಯಾವುದೋ ಅಗ್ಗದ ಮಾಸ್ಕ್ ಕೊಂಡು, ಸನ್‌ಸ್ಕ್ರೀನ್‌ ಬಳಸದೆ ಉಳಿಸಿದ ಹಣ, ಅದನ್ನು ಸರಿಪಡಿಸಲು 2 ಪಟ್ಟು ಹೆಚ್ಚಾಗಿ ಖರ್ಚು ಮಾಡಬೇಕಾಯಿತು.

ಲಾಕ್‌ಡೌನ್‌ ಏನೋ ಸಡಿಲಗೊಂಡಿತು, ಆಫೀಸ್‌ಗಳೂ ಸಹ. ಹೀಗಾಗಿ ಹೊರಗೆ ಓಡಾಡುವಾಗ ಮುಖಕ್ಕೆ ಮಾಸ್ಕ್ ಬಸ್‌ ಮುಂತಾದ ಸಾವ೯ಜನಿಕ ಭಾಗಗಳನ್ನು ಬಳಸಬೇಕಾದಾಗ ಕೈಗೆ ಗ್ಲೌಸ್‌ ಅನಿವಾರ್ಯ ಧರಿಸಬೇಕು. ಆದರೆ ಇದರರ್ಥ, ಮಾಸ್ಕ್ ನಿಮ್ಮ ಸೌಂದರ್ಯ ಮುಕ್ಕಾಗಿಸಬಾರದು. ನೀವು ಇಂಥ ಸಣ್ಣ ಪುಟ್ಟ ಸಂಗತಿಗಳತ್ತ ಗಮನಹರಿಸಿದರೆ, ನೀವು ಮಾಸ್ಕ್ ಬ್ಯೂಟಿಯ ಒಂದು ಹೊಸ ಟ್ರೆಂಡ್‌ ಶುರು ಮಾಡಬಹುದು.

ಬಣ್ಣ ಬಣ್ಣದ ಮಾಸ್ಕ್

ಇಂದು ಮಾರುಕಟ್ಟೆಯಲ್ಲಿ 45-450ರರೆಗಿನ ಬೆಲೆಯ ಮಾಸ್ಕ್ ಲಭ್ಯವಿದೆ. ಆದರೆ ಪ್ರತಿದಿನ ಒಂದೇ ಬಗೆಯ ಮಾಸ್ಕ್ ಧರಿಸಿ ಹೊರಟರೆ ಹೆಂಗಸರಿಗೆ ಬೋರಿಂಗ್‌  ಮೂಡ್‌ ಎನಿಸುತ್ತದೆ. ನೀವು ಮನೆಲ್ಲಿ ತುಸು ಶ್ರಮವಹಿಸಿ, ಬಗೆಬಗೆಯ ಬಣ್ಣದ ಮಾಸ್ಕ್ ತಯಾರಿಸಿಕೊಳ್ಳಬಹುದು. ಪ್ರತಿ ದಿನ 1-1 ಬಗೆಯ ಬಣ್ಣದ ಮಾಸ್ಕ್ ಧರಿಸಬಹುದು. ಮನೆಯಲ್ಲಿನ ನಿಮ್ಮ ಹಳೆಯ ಟೀ ಶರ್ಟ್‌ನ ಬಾಹುಗಳನ್ನು ಬಳಸಿ ಆರಾಮಾಗಿ ಮಾಸ್ಕ್ ತಯಾರಿಸಬಹುದು.

ಬಣ್ಣ ಬಣ್ಣದ ಕಾಟನ್‌ ದುಪಟ್ಟಾಗಳಿಂದಲೂ ಹೀಗೇ ಮಾಸ್ಕ್ ತಯಾರಿಸಬಹುದು.

ಆದರೆ ಮಾಸ್ಕ್ ತಯಾರಿಸುವಾಗ ಬಟ್ಟೆಯ ಗುಣಮಟ್ಟ ಸಾಫ್ಟ್ ಆಗಿರಬೇಕು, ಬಣ್ಣ ಗ್ಯಾರಂಟಿಯದ್ದಾಗಿರಬೇಕು. ಈ ಮಾಸ್ಕ್ ನಿಮ್ಮ ಮುಖಕ್ಕೆ ಹೊಸ ಕಳೆ ನೀಡಬಲ್ಲದು.

ಆ್ಯಕ್ಸೆಸರೀಸ್‌ಗಳನ್ನು ನಿರ್ಲಕ್ಷಿಸದಿರಿ : ಕೂದಲನ್ನು ಓಪನ್‌ ಆಗಿ ಹಾಗೇ ಇಳಿಬಿಟ್ಟು, ಮಾಸ್ಕ್ ಧರಿಸಿ ಓಡಾಡಿದರೆ ಅಷ್ಟು ಚೆನ್ನಾಗಿರದು. ಏನೇ ಲಾಕ್‌ಡೌನ್‌ ಸಡಿಲಗೊಂಡಿದ್ದರೂ, ನೀವು ಸ್ಪಾ ಅಥವಾ ಕೆರಾಟಿನ್‌ ಮಾಡಿಸಲು ಈಗ ಹೊರಡಲಾರಿರಿ. ಹೀಗಾಗಿ ಕೂದಲನ್ನು ಪೋನಿಟೇಲ್‌ನಲ್ಲಿ ಕಟ್ಟಿ ನಂತರ ಮಾಸ್ಕ್ ಧರಿಸಿರಿ. ಮಾಸ್ಕ್ ಬಣ್ಣಕ್ಕೆ ಹೊಂದುವಂಥ ಹೇರ್‌ ಆ್ಯಕ್ಸೆಸರೀಸ್‌ ನಿಮಗೆ ವಿಶಿಷ್ಟ ಲುಕ್ಸ್ ನೀಡಬಲ್ಲದು.

ಕಂಗಳಿಗೊಂದು ಹೊಸ ವ್ಯಾಖ್ಯಾನ : ಈಗ ಮುಖದ ಮೇಲೆ ಮಾಸ್ಕ್ ಇರುವವರೆಗೂ ಕಂಗಳಂತೂ ತಮ್ಮ ಕೆಲಸ ಮಾಡುತ್ತಲೇ ಇರಬೇಕು. ಒಂದು ಉತ್ತಮ ಕಂಪನಿಯ ವಾಟರ್‌ಪ್ರೂಫ್‌ ಐ ಲೈನರ್‌ನಿಂದ ನಿಮ್ಮ ಕಂಗಳ ಸೌಂದರ್ಯನ್ನು ದ್ವಿಗುಣಗೊಳಿಸಿ. ಎಲ್ಲೆಲ್ಲೂ ಹ್ಯುಮಿಡಿಟಿ ತುಂಬಿರುವ ವಾತಾರಣ ಇರುವುದರಿಂದ ಕಾಡಿಗೆಯಿಂದ ದೂರವಿರಿ. ಐ ಬ್ರೋಗಳನ್ನು ಮನೆಯಲ್ಲೇ ಕತ್ತರಿ, ಪ್ಲಕರ್‌ ನೆರವಿನಿಂದ ಶೇಪ್‌ ಮಾಡಿ. ಕಂಗಳ ಸುತ್ತಲು ದಟ್ಟಾಗಿ ಹರಡಿರುವ ಈ ಹುಬ್ಬು, ಯಾರಿಗೂ ಆಕರ್ಷಕ ಎನಿಸುವುದಿಲ್ಲ.

ತುಟಿಗಳನ್ನೂ ಗಮನಿಸಿಕೊಳ್ಳಿ : ಮಾಸ್ಕ್ ಧರಿಸುವ ಕಾರಣ ಲಿಪ್‌ಸ್ಟಿಕ್‌ ಬೇಡ ಎನಿಸಿದರೆ ಸರಿ, ಆದರೆ ಅದರ ಆರೈಕೆಯಂತೂ ಮಾಡಬೇಕಲ್ಲವೇ? ರಾತ್ರಿ ಮಲಗುವ ಮುನ್ನ ತಪ್ಪದೆ ತುಟಿಗಳಿಗೆ ಗ್ಲಿಸರಿನ್‌ ಹಚ್ಚಿರಿ, ಅದು ಸಿಗಲಿಲ್ಲವೇ ಕನಿಷ್ಠ ವ್ಯಾಸಲೀನ್‌ ಆದರೂ ಹಚ್ಚಿಕೊಳ್ಳಿ. ಮಾಸ್ಕ್ ಧರಿಸು ಮುನ್ನ ಪ್ರತಿ

ಸಲ ನ್ಯೂಡ್‌ ಲಿವ್‌ ಬಾಮ್ ಅಗತ್ಯ ಹಚ್ಚಿಕೊಳ್ಳಿ. ಇದು ತುಟಿಗಳನ್ನು ಸದಾ ನಳನಳಿಸುಂತೆ ಮಾಡುತ್ತದೆ.

ಸನ್‌ಸ್ಕ್ರೀನ್‌ ಸಹವಾಸ ಬಿಡಬೇಡಿ : ನಿಮ್ಮ ಮೈಕೈಗೆ ಸನ್‌ಸ್ಕ್ರೀನ್‌  ಎಸ್ ಪಿಎಚ್ 30-40 ಹಚ್ಚಿಕೊಳ್ಳದೆ ಮನೆಯಿಂದ ಹೊರಗೆ ಹೊರಡಬೇಡಿ. ಮಾಸ್ಕ್ ನಿಮಗೆ ಕೇವಲ ಕೊರೋನಾದಿಂದ ರಕ್ಷಣೆ ನೀಡುತ್ತದೆ, ಸೂರ್ಯನ ಕಿರಣಗಳಿಂದ ಅಲ್ಲ. ನೀವು ಹೀಗೆ ಸಣ್ಣಪುಟ್ಟ ಟಿಪ್ಸ್ ಅನುಸರಿಸುತ್ತಾ, ಇತರರಿಗೆ ಹೇಳುತ್ತಾ, ಮಾಸ್ಕ್ ಸಮೇತ ಒಂದು ಹೊಸ ಟ್ರೆಂಡ್‌ ಸೆಟ್‌ ಮಾಡಿ!

-  ಋತ್ವಿಕಾ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ