– ಪಿ. ಭಾರತಿ ಹೆಗಡೆ
ಐ ಮೇಕಪ್ ಎಕ್ಸೆರ್‌ಸೈಜ್ ಯುವರ್ ಐಸ್ : ಅತ್ಯಾಕರ್ಷಕ ವ್ಯಕ್ತಿತ್ವಕ್ಕಾಗಿ ಹೆಚ್ಚಿನ ಪಾಲು ಮಹಿಳೆಯರು ಕೇವಲ ಸ್ಟೈಲಿಶ್ ಡ್ರೆಸ್ ಹಾಗೂ ಬ್ಯೂಟಿಫುಲ್ ಮೇಕಪ್‌ನತ್ತ ಮಾತ್ರ ಗಮನಿಸುತ್ತಾರೆ. ಜೊತೆಗೆ ಕಂಗಳಿಗಾಗಿ ವಿಭಿನ್ನ ವಿಶಿಷ್ಟ ಆ್ಯಕ್ಸೆಸರೀಸ್ ಬಳಸುವುದೂ ಅತ್ಯಗತ್ಯ. ಲೇಟೆಸ್ಟ್ ಮೇಕಪ್ ಟ್ರೆಂಡ್ ಕುರಿತು ಹೇಳುವುದಾದರೆ, ಇತ್ತೀಚೆಗೆ ಕಂಗಳಿಗೆ ಆ್ಯಕ್ಸೆಸರೀಸ್ ಬಳಸಿ, ಅದನ್ನು ಡಿಫರೆಂಟ್ ಆಗಿ ತೋರ್ಪಡಿಸುವ ಸ್ಟೈಲ್ ಹೆಚ್ಚುತ್ತಿದೆ. ರೆಪ್ಪೆಗಳಿಗೆ ಕೃತಕ ಟ್ರಿಮ್ಡ್ ಲಾಂಗ್ ಲ್ಯಾಶೆಸ್, ಇನ್ನರ್ ಕಾರ್ನರ್‌ಗೆ ಸ್ವರೋಸ್ಕಿ ಸ್ಟಡ್ ಮತ್ತು ವಾಟರ್ ಲೈನ್ ಕೆಳಗೆ ಸ್ಟೋನ್ ಲೈನ್, ಇತ್ತೀಚೆಗೆ ಟ್ರೆಂಡ್ ಎನಿಸಿದೆ.
ಸ್ಟ್ರಾಂಗ್ ಐ ಬ್ರೋಸ್ : ಮುಖಕ್ಕೆ ಸ್ಟ್ರಾಂಗ್ ಫ್ರೇಂ ನೀಡಲು ಥಿಕ್ ಐ ಬ್ರೋಸ್‌ನ ಫ್ಯಾಷನ್ ಮತ್ತೆ ಮರಳಿದೆ. ಈಗ ಬ್ರಶ್ ಜೆಲ್‌ನಿಂದ ಬೋಲ್ಡ್ ಲುಕ್ ಕ್ರಿಯೇಟ್ ಮಾಡಿ ಹಾಗೂ ಪ್ಲಕರ್‌ಗೆ ಬೈ ಬೈ ಹೇಳಿ.
ಗ್ರಾಫಿಕ್ ಐಸ್ : ಈ ವಿಂಟರ್‌ನ ಮೇಕಪ್ ಟ್ರೆಂಡ್‌ನಲ್ಲಿ ಕಂಗಳ ಆಕಾರ ಜ್ಯಾಮಿತೀಯ ವಿನ್ಯಾಸದಲ್ಲಿ ವ್ಯಾಖ್ಯಾನಿಸಲ್ಪಡುತ್ತದೆ. ಡಬಲ್ ವಿಂಗ್ಡ್, ಫಿಶ್‌ಟೇಲ್, ಬೋಲ್ಡ್ ಬ್ಯಾಟ್‌ವಿಂಗ್, ಕ್ಯಾಟಿ ಸ್ಟೈಲ್ ಗಳಿಂದ ಕಂಗಳ ಅಕ್ಕಪಕ್ಕ ಅಬ್‌ಸ್ಟ್ರಾಕ್ಟ್ ಅಲ್ಟ್ರಾಡಿಜಿಟಲ್ ಲುಕ್ಸ್ ಕ್ರಿಯೇಟ್ ಮಾಡಬಹುದು. ಅಂದರೆ….. ನಿಮ್ಮ ಬಿಗ್ ಬೋಲ್ಡ್ ಲೈನರ್ ಎಷ್ಟು ದೊಡ್ಡದೋ ನೀವು ಅಷ್ಟೇ ಟ್ರೆಂಡಿ ಫ್ಯಾಷನೆಬಲ್ ಎಂದರ್ಥ.
ಕಮ್ಬ್ಯಾಕ್ ಆಫ್ ಆರೆಂಜ್ : ಕಳೆದ ವರ್ಷಗಳಲ್ಲಿ ತುಟಿಯ ಮೇಲೆ ಹರಡಿಕೊಳ್ಳುತ್ತಿದ್ದ ಈ ಕೋರಲ್ ಶೇಡ್‌ಗೆ ಕೆಲ ಕಾಲ ಹೆಂಗಸರು ಬಿಡುವು ನೀಡಿದ್ದರು. ಆದರೆ ವಿಂಟರ್ ಫ್ಯಾಷನ್ ವೀಕ್‌ನಿಂದಾಗಿ ಆರೆಂಜ್ ಶೇಡ್‌ಗೆ ಮತ್ತೆ ಕಮ್ಬ್ಯಾಕ್ ಆಗಿದೆ. ಏಪ್ರಿಕಾಟ್, ಕೋರ್, ಮ್ಯಾಂಡರಿನ್‌ನಂಥ ಎಗ್ಝಾಟಿಕ್ ಶೇಡ್ಸ್ ಕಂಗಳ ಮೇಲೆ ತಮ್ಮ ಮೋಡಿ ಬೀರಲಿವೆ.
ನ್ಯೂ ಸ್ಮೋಕ್ ಐಸ್ : ಸ್ಮೋಕಿ ಐಸ್ ಎವರ್ ಗ್ರೀನ್ ಎನಿಸಿದೆ. ನ್ಯೂಡ್ ಬೇಸ್ ಲಿಪ್ಸ್ ಜೊತೆ ನೀವು ಇದನ್ನು ಈಗಲೂ ಬಯಸಿದಾಗ ಕ್ಯಾರಿ ಮಾಡಬಹುದು. ಈ ಸೀಸನ್‌ನಲ್ಲಿ ಶಿಮರ್ಸ್ ಇನ್ ಅನಿಸಿವೆ. ಹೀಗಾಗಿ ಶಿಮರಿ ಸ್ಮೋಕಿ ಐಸ್‌ನ್ನೂ ಕ್ರಿಯೇಟ್ ಮಾಡಬಹುದು. ನೈಟ್ ಪಾರ್ಟಿಗಳಲ್ಲಿ ತುಸು ಹೆಚ್ಚು ಶಿಮರ್ ಆ್ಯಡ್ ಆನ್ ಮಾಡುವುದಕ್ಕಾಗಿ ಸ್ಟಡ್ ಸಹ ಬಳಸಬಹುದು.
ಜೆಟ್ ಬ್ಲ್ಯಾಕ್ : ಇದೀಗ ಜೆಟ್ ಬ್ಲ್ಯಾಕ್ ಸಮಯ. ಕಂಗಳಿಗೆ ಸೆನ್ಶುಯಲ್ ಸೆಕ್ಸೀ ಲುಕ್ಸ್ ನೀಡಲು ಜೆಟ್ ಬ್ಲ್ಯಾಕ್ ಶೇಡ್ ಬಳಸಲಾಗುತ್ತದೆ. ರಾತ್ರಿ ಹೊತ್ತು ಕಾಡಿಗೆ ಸ್ಮಜ್‌ಗೊಳಿಸಿ ಸಾಕಷ್ಟು ಟ್ರೆಂಡಿ ಲುಕ್ ಸಹ ಕೊಡಬಹುದು.
ಫೇಸ್ ಮೇಕಪ್ 2 ಡೀಪ್ ಟ್ಯಾನ್ : ಗೌರವರ್ಣ ಹೊಂದಬೇಕೆಂದು ಬಯಸುತ್ತಿದ್ದ ಮಹಿಳೆಯರು, ಈಗ ಟ್ಯಾನ್ಡ್ ಲುಕ್ ಬಯಸುತ್ತಿದ್ದಾರೆ. ಹೀಗಾಗಿ ಈಗ ಬ್ಲಶ್ ಆನ್‌ಗೆ ಬದಲಾಗಿ ಬ್ರಾಂಝರ್ ಬಳಸಬಹುದು. ಬ್ರಾಂಝರ್ ಬಳಕೆಯಿಂದ ಮುಖ ಕಳೆಕಳೆಯಾಗಿ ಹೊಳೆಯುತ್ತದೆ. ಜೊತೆಗೆ ಮುಖಕ್ಕೆ ಸನ್‌ಕಿಸ್ಡ್ ಲುಕ್ ಸಿಗುತ್ತದೆ.
ಬ್ರೈಟ್ ಶೈನಿ ಫೇಸ್ : ಇತ್ತೀಚಿನ ದಿನಗಳಲ್ಲಿ ತುಟಿಗಳಿಂದ ಶೈನಿ ಗ್ಲಾಸಿ ಲುಕ್ಸ್ ಹೋಗಿವೆ, ಆದರೆ ಮುಖದಲ್ಲಿ ಮಾತ್ರ ಗ್ಲೋ ಟಚ್ ಇನ್ ಆಗಿದೆ. ಟಿಂಟೆಡ್ ಮಾಯಿಶ್ಚರೈಸರ್, ಲಿಕ್ವಿಡ್ ಫೌಂಡೇಶನ್‌ನಂಥ ಬೇಸ್ ನಿಮ್ಮ ಗ್ಲಾಸಿ ಲುಕ್ಸ್ ಗೆ ನೆರವಾಗುತ್ತವೆ. ಇದು ನಿಮಗೆ ಫ್ಲಾಲೆಸ್ ಲುಕ್ ನೀಡುತ್ತದೆ, ಜೊತೆಗೆ ಸ್ಕಿನ್ ಹೈಡ್ರೇಟ್ ಕೂಡ ಆಗುತ್ತದೆ. ಇದರ ಜೊತೆಗೆ ಫೀಚರ್ಸ್ ಹೈಲೈಟ್‌ಗೊಳಿಸಲು ಗ್ಲಾಸ್ ಬಳಸುತ್ತಾರೆ. ಇದರ ಮೇಲೆ ಲೈಟ್ ಬಿದ್ದಾಗ ರಿಫ್ಲೆಕ್ಷನ್‌ನಿಂದಾಗಿ ಶೈನಿ ಬ್ಯೂಟಿಫುಲ್ ಎನಿಸುತ್ತದೆ. ಗ್ಲಾಸಿ ಟಚ್‌ಗಾಗಿ ಶಿಮರ್ಸ್‌ನ್ನು ಲಿಕ್ವಿಡ್ ಫೌಂಡೇಶನ್ ಜೊತೆ ಮಿಕ್ಸ್ ಮಾಡಿ ಅಥವಾ ಶಿಮರ್ ಬೇಸ್ಡ್ ಫೌಂಡೇಶನ್ ಅಥವಾ ಪೌಡರ್ ಶಿಮರ್ಸ್ ಬಳಸಿಕೊಳ್ಳಬಹುದು.
ಹೇರ್‌ಸ್ಟೈಲ್ 3 ಔಟ್ ಆಫ್ ಫೋರ್ ಹೇರ್ ಲುಕ್ : ಇದು ಕೇಳಲು ತುಸು ವಿಚಿತ್ರ ಎನಿಸಿದರೂ, ಹೇರ್‌ಸ್ಟೈಲಿನ ಈ ಟ್ರೆಂಡ್ ಈ ಸೀಸನ್‌ನಲ್ಲಿ ಹಿಟ್ ಎನಿಸಿದೆ. ಈ ಸ್ಟೈಲ್ ಕ್ಯಾರಿ ಮಾಡಲು ಜೆಲ್ ಬಳಸಬೇಕು. ವೆಟ್ ಲುಕ್ ಜೊತೆ ಯಾವುದೇ ಸ್ಟೈಲ್‌ನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು.
ಪಾಲಿಶ್ಡ್ ಅಪ್‌ಡೂ : ಮೆಸ್ಸಿ ಲುಕ್ಸ್ ಎಂಬುದು ಹಳೆಯ ದಿನಗಳ ಮಾತು. ಇದೀಗ ಸ್ಲೀಕ್ ಯುಗದ ಕಾಲ. ಈ ಸೀಸನ್‌ನಲ್ಲಿ ಕೂದಲನ್ನು ಸ್ಲೀಕ್ ಪೋನಿಟೇಲ್ ರೂಪದಲ್ಲಿ ಅಲಂಕರಿಸಬಹುದು. ಈಗೆಲ್ಲ ಬ್ರೆಡ್ಸ್ ಔಟ್ ಆಗಿ, ಫ್ರಂಟ್ ಸ್ಟೈಲಿಂಗ್‌ನಲ್ಲಿ ಮಲ್ಟಿಬ್ರೆಡೆಡ್ ಸ್ಟೈಲ್ ಇನ್ ಆಗಿದೆ. ಈ ಸ್ಟೈಲನ್ನು ಬ್ಯೂಟಿಫುಲ್ ಆಗಿ ಡೆಕೋರೇಟ್ ಮಾಡಲು ಓಮೇಟ್ ಹೆಡ್‌ಪೀಸ್ ಬಳಸಲಾಗುತ್ತದೆ.
ಲಿಪ್ ಮೇಕಪ್ 4 ಡಾರ್ಕ್ ಪೌಟ್ : ಆಕ್ಸ್ ಬ್ಲಡ್, ಬರ್ಬೆರಿ, ಪ್ಲಮ್, ಫ್ರಾಸ್ಟೆಡ್ ಕಾಫಿ, ಡೀಪೆಸ್ಟ್ ಬ್ಲ್ಯಾಕ್….. ಇತ್ಯಾದಿ ಡಾರ್ಕ್ ಬಟ್ ಮ್ಯಾಟ್ ಲಿಪ್ ಶೇಡ್ಸ್ ಈ ಸೀಸನ್‌ನಲ್ಲಿ ಲಿಪ್ಸ್ ಗೆ ಫೇವರಿಟ್ ಆಗಿರುತ್ತವೆ. ಹೀಗಾಗಿ ಬೇಡ ಎನಿಸಿದರೂ ನಾವು ಇದಕ್ಕೆ ಇಲ್ಲ ಎನ್ನಲಾಗುವುದಿಲ್ಲ.
ನೋ ಮೇಕಪ್ (ಟ್ರಾನ್ಸಿ ಲುಕ್) : ಕರೆಕ್ಟಿವ್ ಮೇಕಪ್‌ನ ಟೆಕ್ನಿಕ್ ಮತ್ತು ನ್ಯಾಚುರಲ್ ಶೇಡ್ಸ್ ನೆರವಿನಿಂದ ಮಾಡಲಾದ ಈ ಟ್ರಾನ್ಸ್ ಪರೆಂಟ್ ಮೇಕಪ್ ಸಹ ಈ ಸೀಸನ್‌ನಲ್ಲಿ ಹಿಟ್ ಎನಿಸಲಿದೆ. ಹಾಗಿದ್ದರೆ ಇನ್ನೇಕೆ ತಡ? ನ್ಯಾಚುರಲಿ ಬ್ಯೂಟಿಫುಲ್ ಎನಿಸಲು ಈ ಲುಕ್ಸ್ ನಿಮ್ಮದಾಗಿಸಿಕೊಳ್ಳಿ.
ಇತರ ಫೇಮಸ್ ಟ್ರೆಂಡಿ ಟೆಂಪರರಿ ಟ್ಯಾಟೂ : ಹಿಂದಿಯ `ಅಶೋಕ’ ಚಿತ್ರದಲ್ಲಿ ಕರೀನಾಳ ಐ ಕ್ಯಾಚಿಂಗ್ ಲುಕ್ಸ್ ನ್ನು ಯಾರು ತಾನೇ ಮರೆಯಲು ಸಾಧ್ಯ? ಔಟರ್ ಕಾರ್ನರ್‌ನಲ್ಲಿ ಕಂಟೆಂಪರರಿ ಆರ್ಟ್ ಮತ್ತೊಮ್ಮೆ ಟ್ರೆಂಡ್‌ಗೆ ಬಂದಿದೆ. ಆದರೆ ನೀವು ಇಷ್ಟು ಬೋಲ್ಡ್ ಲುಕ್ಸ್ ಬಯಸುವುದಿಲ್ಲ ಎಂದಾದರೆ, ಚಿನ್ ಮೇಲೆಯೂ ಸಹ ಈ ಆರ್ಟ್ ಮಾಡಿಸಬಹುದು.
ಬ್ರೈಡಲ್ ಟ್ರೆಂಡ್ : ಐ ಬ್ರೋಸ್ ಮೇಲೆ ಬಿಂದಿ ಇರಿಸುವ ಟ್ರೆಂಡ್ ಔಟ್‌ಡೇಟೆಡ್ ಆಗಿದೆ. ಮಧ್ಯದಲ್ಲಿ ಸಣ್ಣ ಗಾತ್ರದ ಬಿಂದಿ ಇನ್ ಆಗಿದೆ. ಇಷ್ಟು ಮಾತ್ರಲ್ಲದೆ ದೊಡ್ಡ ರಿಂಗ್ ತರಹದ ತೆಳು ಮೂಗುಬೊಟ್ಟು ಇಡೀ ಮುಖಕ್ಕೆ ಹೈಲೈಟ್ ಆಗುತ್ತದೆ. ಗ್ಲಾಸಿ ಲಿಪ್ಸ್ ಕೆಲವು ಕಾಲ ಔಟ್ ಆಗಲಿದೆ. ಇದು ವಧುವಿಗೆ ಗುಡ್ ನ್ಯೂಸ್, ಏಕೆಂದರೆ ಇದರಿಂದ ಮೂಗುಬೊಟ್ಟಿಗೆ ಗ್ಲಾಸ್ ಅಂಟಿಕೊಳ್ಳುವುದಿಲ್ಲ.