– ಎನ್. ಸುಮಲತಾ
ಪತಿಪತ್ನಿಯರ ಸಂಬಂಧ ಇಂದು ಸ್ನೇಹ, ಪ್ರೀತಿ ಮತ್ತು ಸಹಭಾಗಿತ್ವವಾಗಿದೆ. ಅದರಲ್ಲಿ ಪರಸ್ಪರರಿಗೆ ತಿಳಿಹೇಳುವ ಬದಲಾಗಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಆಗಲೇ ಒಂದು ಸುಖೀ ದಾಂಪತ್ಯ ಜೀವನವನ್ನು ಕಲ್ಪಿಸಿಕೊಳ್ಳಬಹುದು.
ಪತಿಪತ್ನಿಯರು ಯಾವ ವಯಸ್ಸಿನಲ್ಲಿ ಮದುವೆಯ ಹೊಸ್ತಿಲಿಗೆ ಅಡಿಯಿಡುತ್ತಾರೋ ಅದು ಮಹತ್ವದ ಹಂತವಾಗುತ್ತದೆ. ಆರಂಭದ ಕೆಲವು ವರ್ಷಗಳು ಅವರು ತಮ್ಮಲ್ಲಿ ಬದಲಾವಣೆ ತಂದುಕೊಳ್ಳಬೇಕು. ವೈವಾಹಿಕ ಸಂಬಂಧಗಳ ಕೆಲವು ವಿಶೇಷತೆಗಳನ್ನು ಕೆಳಗೆ ಕೊಡಲಾಗಿದೆ. ಅನ್ನುವ ಅಲ್ಲಗಳೆಯಲಾಗುವುದಿಲ್ಲ.
– ಇಬ್ಬರು ವಿಭಿನ್ನ ವ್ಯಕ್ತಿತ್ವದವರು ದಾಂಪತ್ಯ ಸೂತ್ರದಲ್ಲಿ ಬಂಧಿಸಲ್ಪಡುತ್ತಾರೆ. ಇಬ್ಬರೂ ತಮ್ಮ ಹಿಂದಿನದನ್ನು ಮರೆತು ಪರಸ್ಪರ ಹೊಂದಿಕೊಳ್ಳಬೇಕು. ಕೆಲವನ್ನು ಬಿಡಬೇಕಾಗುತ್ತದೆ, ಕೆಲವನ್ನು ತಮ್ಮದಾಗಿಸಿಕೊಳ್ಳಬೇಕು.
– ಪತಿ ಪತ್ನಿ ಇಬ್ಬರೂ ವಿಲಕ್ಷಣ ಹಾಗೂ ಅದ್ಭುತ ವ್ಯಕ್ತಿತ್ವ ಉಳ್ಳವರು. ಅವರಲ್ಲಿ ಅಗತ್ಯವಾದ ಬದಲಾವಣೆಗಳು ಮಂದಗತಿಯಲ್ಲಿ ನಡೆಯುತ್ತವೆ. ಇಬ್ಬರಲ್ಲೂ ತೀವ್ರಗತಿಯಲ್ಲಿ ಬದಲಾವಣೆ ಅಪೇಕ್ಷಿಸುವುದು ತಪ್ಪು.
– ಇಬ್ಬರಲ್ಲೂ ಕೆಲಸ ಮಾಡುವ ವಿಧಾನ ಹಾಗೂ ದಿನಚರಿ ಭಿನ್ನವಾಗಿರುವುದರಿಂದ ಅವರಿಗೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಕೊಡಬೇಕು. ಅದು ಅತ್ತೆ ಮನೆಯವರಿಗೆ ಪರೀಕ್ಷೆಯ ಸಮಯ. ಧೈರ್ಯವಾಗಿ ಈ ಒರೆಗಲ್ಲಿಗೆ ತಕ್ಕಂತೆ ನಡೆದುಕೊಂಡರೆ ಸಂಬಂಧ ಸಹಜರೂಪದಲ್ಲಿ ವಿಕಸಿತವಾಗುತ್ತದೆ ಮತ್ತು ಎಲ್ಲರಿಗೂ ಸಂಬಂಧಗಳಲ್ಲಿ ಸಂತೋಷ ಮತ್ತು ನೆಮ್ಮದಿ ಸಿಗುತ್ತದೆ.
– ನೂತನ ದಾಂಪತ್ಯದಲ್ಲಿ ಬೇರೆ ಬೇರೆ ಕೌಟುಂಬಿಕ ವಾತಾರಣ, ಸಂಸ್ಕಾರಗಳು ಮತ್ತು ಪರಂಪರೆಗಳ ಸಂಸ್ಕೃತಿಯಲ್ಲಿ ಬೆಳೆದಿರುತ್ತಾರೆ. ಆಗ ಪತಿಪತ್ನಿಯರಿಗೆ ಅಗತ್ಯವಾದ ಬದಲಾವಣೆಗಳನ್ನು ಸ್ವೀಕರಿಸುವುದು ಕಷ್ಟವಾಗುತ್ತದೆ. ಜವಾಬ್ದಾರಿ ಮತ್ತು ತಿಳಿವಳಿಕೆಯಿಂದ ನಿಮ್ಮ ವ್ಯಕ್ತಿತ್ವದಲ್ಲಿ ಈ ಬದಲಾವಣೆ ತಂದುಕೊಳ್ಳಿ.
ತಿಳಿವಳಿಕೆ ಅಗತ್ಯ
ನವ ವಧು ಅತ್ತೆ ಮನೆಗೆ ವ್ರವೇಶಿಸುತ್ತಿದ್ದಂತೆ ಎಲ್ಲರೂ ಅವಳಿಗೆ ಅವಳ ಜಾಬ್ದಾರಿಯ ಬಗ್ಗೆ ಹೇಳತೊಡಗುತ್ತಾರೆ. ಆದರೆ ಅವರು ಹೊಸ ಸೊಸೆಯ ಹಕ್ಕುಗಳ ಬಗ್ಗೆ ಜಾಗೃತರಾಗುವ ಅಗತ್ಯವಿದೆ. ಪತಿಪತ್ನಿಯರ ಹಕ್ಕುಗಳ ಸಂರಕ್ಷಣೆಯಂತೂ ಆಗಲೇಬೇಕು. ಏಕೆಂದರೆ ಅವರಿಗೆ ಸ್ಪೇಸ್ ಮತ್ತು ಸ್ವಾತಂತ್ರ್ಯ ಸಿಗಬೇಕು. ಪತ್ನಿಯನ್ನು ದಾಸಿ ಅಥವಾ ಗುಲಾಮಳೆಂದು ತಿಳಿಯುತ್ತಿದ್ದ ಕಾಲ ಹೋಯಿತು. ಇಂದಿನ ಪತ್ನಿಯರು ಶಿಕ್ಷಣ, ಪರಿಪಕ್ವತೆ ಮತ್ತು ಸಕಾರಾತ್ಮಕ ಗುಣಗಳಿಂದ ಪರಿಪೂರ್ಣರಾಗಿದ್ದಾರೆ. ಅವಳನ್ನು ಅತ್ತೆ ಮನೆಯವರು ಯಾವುದೇ ರೀತಿಯಲ್ಲೂ ಹಗುರವಾಗಿ ಕಾಣಲು ಸಾಧ್ಯವಿಲ್ಲ. ಇಂದಿನ ಆಧುನಿಕ ಸೊಸೆಯರು ಸುಶಿಕ್ಷಿತರೂ ಜಾಗರೂಕರೂ ಆಗಿದ್ದಾರೆ.
ಹಾವು ಸಾಯಬಾರದು, ಕೋಲೂ ಮುರಿಯಬಾರದು ಎನ್ನುವುದರಲ್ಲಿ ವ್ಯವಹಾರ ಕುಶಲತೆ ಇದೆ. ಯಾರ ಹಕ್ಕನ್ನು ಯಾರೂ ಕಿತ್ತುಕೊಳ್ಳಲಾಗುವುದಿಲ್ಲ. ಪತ್ನಿ ತನ್ನ ಹಕ್ಕುಗಳ ಸಂರಕ್ಷಣೆಯನ್ನು ತಿಳಿವಳಿಕೆಯಿಂದ ಮಾಡುತ್ತಾಳೆ. ಅವಳ ಕೆಲವು ಹಕ್ಕುಗಳು ಹೀಗಿವೆ :
– ಮದುವೆಯ ನಂತರ ಅವಳು ತನಗಿಷ್ಟಾದ ಉಡುಪನ್ನು ತೊಡಬಹುದು. ನೂತನ ಸೊಸೆಗೆ ಅದರ ಬಗ್ಗೆ ಸ್ವಾತಂತ್ರ್ಯ ಕೊಡುವ ಅತ್ತೆಯನ್ನು ಬಹಳ ಒಳ್ಳೆಯವರೆಂದು ಹೇಳಲಾಗುತ್ತದೆ.
– ಲತಾ ಸ್ಮಾರ್ಟ್ ಹುಡುಗಿ. ಅವಳ ಗಂಡನ ಬಳಿ ಅವಳಿಗೆ ಇಷ್ಟವಾಗುವ ಡ್ರೆಸ್ ಇರಲಿಲ್ಲ. ಹೀಗಾಗಿ ಲತಾ ಉಪಾಯದಿಂದ ಅದಕ್ಕೊಂದು ಪರಿಹಾರ ಹುಡುಕಿದಳು. ಒಂದು ದಿನ ಅವಳು ಶಾಪಿಂಗ್‌ಗೆ ಹೋದಾಗ, ಗಂಡನಿಗಾಗಿ ತನಗಿಷ್ಟವಾದ ಟೀ ಶರ್ಟ್ ಮತ್ತು ಜೀನ್ಸ್ ಪ್ಯಾಂಟ್ ಖರೀದಿಸಿದಳು. ಅತ್ತೆಗೂ ಸಹ ಒಂದು ಸೀರೆ ತಂದಳು. ಈ ವ್ಯವಹಾರ ಕುಶಲತೆಯ ಪರಿಣಾಮದಿಂದ ಅತ್ತೆಗೆ ಆ ಸೀರೆ ಬಹಳ ಇಷ್ಟವಾಯಿತು. ಗಂಡನಿಗೂ ಅವಳು ತಂದ ಶರ್ಟ್, ಪ್ಯಾಂಟ್ ಇಷ್ಟವಾಯಿತು. ಅತ್ತೆ ಒಳ್ಳೆಯ ಮೂಡ್‌ನಲ್ಲಿದ್ದರು. ಅವರು ಲತಾಗೆ, “ಮುಂದಿನ ಸಾರಿ ಶಾಪಿಂಗ್‌ಗೆ ಹೋದಾಗ ನಿನಗಿಷ್ಟವಾಗುವ ಡ್ರೆಸ್‌ಗಳು, ಸೀರೆಗಳನ್ನು ತಗೋ. ನಿನಗೆ ಎರಡೂ ರೀತಿಯ ಡ್ರೆಸ್‌ಗಳು ಒಪ್ಪುತ್ತವೆ. ದುಡ್ಡು ನಾನು ಕೊಡ್ತೀನಿ,” ಎಂದರು.
– ಮದುವೆಯ ನಂತರ ಗಂಡನಿಗೆ ಮೊದಲಿನಂತೆ ತನ್ನ ಗೆಳೆಯರೊಂದಿಗೆ ಓಡಾಡುವ ಹಕ್ಕು ಇದೆ. ಪತ್ನಿ ನಿರರ್ಥಕವಾಗಿ ತಡೆ ಉಂಟು ಮಾಡಬಾರದು. ಗಂಡ ತನ್ನ ಗೆಳೆಯರೊಂದಿಗೆ ಭೇಟಿಯಾಗುತ್ತಿರಲು ಹೆಂಡತಿ ಪ್ರೇರೇಪಿಸುತ್ತಿರಬೇಕು. ಗಂಡ ತನ್ನ ಕೌಟುಂಬಿಕ ಮಿತಿಯಲ್ಲಿ ಇದ್ದು ಕೊಂಚ ಹೊತ್ತು ಹೆಂಡತಿಯೊಂದಿಗೆ ಅಗತ್ಯವಾಗಿ ಕಳೆಯಬೇಕು.
– ಉದ್ಯೋಗಸ್ಥೆಯ ದಿನಚರಿ ಬಹಳ ವ್ಯಸ್ತವಾಗಿರುತ್ತದೆ. ಬೆಳಗ್ಗೆ ಮಕ್ಕಳನ್ನು ಸಿದ್ಧಗೊಳಿಸುವುದು, ತಿಂಡಿ ಮತ್ತು ಅಡುಗೆ ಮಾಡುವುದು, ಗಂಡನಿಗೆ ಟಿಫಿನ್ ಕಟ್ಟಿಕೊಡುವುದು, ನಂತರ ತಾನೂ ಸಿದ್ಧಳಾಗಿ ಆಫೀಸಿಗೆ ಹೋಗಬೇಕು. ಇಡೀ ದಿನದ ವ್ಯಸ್ತತೆಯ ನಂತರ ಮನೆಗೆ ಬಂದು ಮತ್ತೆ ಅಡುಗೆ ಮಾಡಬೇಕು. ಇವೆಲ್ಲ ಕೆಲಸಗಳನ್ನು ಚೆನ್ನಾಗಿ ಮಾಡಿದ ನಂತರ ಕುಟುಂಬದ ಗೌರವಕ್ಕೆ ಅರ್ಹಳಾಗುತ್ತಾಳೆ. ಅವಳು ವರ್ಕಿಂಗ್ ವುಮನ್ ಎಂದು ಗಂಡನಿಗೆ ಅನುಭವ ಉಂಟಾಗಬೇಕು. ತನ್ನ ಹಕ್ಕುಗಳ ರಕ್ಷಣೆ ಮಾಡಬೇಕಾದ ಮಹಿಳೆ ಡಿಸರ್ವಿಂಗ್ ಆಗಿರಬೇಕು. ಈಗ ನಮ್ಮೆದುರಿಗೆ 6 ರೀತಿಯ ದೋಷಗಳ ಬಗ್ಗೆ ಚರ್ಚೆಯಾಗುತ್ತಿದೆ. ಮದ್ಯಪಾನ ಮಾಡುವುದು, ದುಷ್ಟರ ಸಹವಾಸ, ಪತಿಯಿಂದ ಬೇರೆ ಇರುವುದು, ಒಬ್ಬಳೇ ಸುತ್ತಾಡುವುದು, ಹೆಚ್ಚು ನಿದ್ರಿಸುವುದು, ಬೇರೆಯವರ ಮನೆಯಲ್ಲಿ ವಾಸಿಸುವುದು ಪತ್ನಿಗೆ ದೋಷವಾಗಿದೆ. ಇವನ್ನು ಅವಳು ತನ್ನ ಜೀವನದಿಂದ ದೂರ ಮಾಡಬೇಕು. ಹೀಗಿರುವಾಗ ಪತ್ನಿ ಒಟ್ಟು ಕುಟುಂಬದ ಸೇವೆ ಮಾಡುತ್ತಾ ತಾನೂ ಸುರಕ್ಷಿತವಾಗಿರುತ್ತಾಳೆ ಹಾಗೂ ಪತ್ನಿಯ ಕರ್ತವ್ಯವನ್ನೂ ನಿಭಾಯಿಸುತ್ತಾಳೆ.
ಹೊಂದಾಣಿಕೆ ಹೀಗಿರಲಿ
ಗೀತಾ ಮದುವೆಯಾಗಿ ಅತ್ತೆ ಮನೆಗೆ ಹೋದ ನಂತರ ಹೊಸ ಸೊಸೆಯ ಒಡವೆಗಳನ್ನು ಸುರಕ್ಷಿತಾಗಿಡಬೇಕೆಂದು ಅತ್ತೆ ಇಸಿದುಕೊಳ್ಳುತ್ತಾರೆಂದು ಕೇಳಿದ್ದಳು. ಅತ್ತೆ ಅದರ ಬಗ್ಗೆ ಕೇಳುವ ಮೊದಲೇ ಗೀತಾ ಅವರಿಗೆ, “ಅಮ್ಮಾ, ನಾನು 2 ಸೆಟ್ ನನ್ನ ಬಳಿ ಇಟ್ಟುಕೊಳ್ಳುತ್ತೇನೆ. ಏಕೆಂದರೆ ಇವರ ಜೊತೆ ಡಿನ್ನರ್ ಪಾರ್ಟಿಗಳಿಗೆ ಹೋಗಬೇಕಾಗುತ್ತದೆ. ಮಿಕ್ಕಿದ ಒಡವೆಗಳನ್ನು ನಿಮ್ಮ ಬೀರುವಿನಲ್ಲಿ ಇಟ್ಕೊಳ್ಳಿ ಅಥವಾ ಬ್ಯಾಂಕ್ ಲಾಕರ್‌ನಲ್ಲಿ ಇಡಿಸಿ,” ಎಂದಳು. ಹೀಗೆ ಅವಳ ಹಕ್ಕಿನ ರಕ್ಷಣೆಯೂ ಆಯಿತು, ಅತ್ತೆಯೂ ಖುಷಿಯಿಂದ ಒಪ್ಪಿಕೊಂಡರು.
ಹನಿಮೂನ್ ವಿಷಯ ಬಂದಾಗ ಗೀತಾ ಅತ್ತೆಗೆ, “ಅಮ್ಮಾ, ನಮಗೆ ಅಷ್ಟು ದೂರ ಹೋಗಿ ಪರಸ್ಪರರನ್ನು ಅರ್ಥ ಮಾಡಿಕೊಳ್ಳೋದು ಅದೆಲ್ಲಾ ಇಷ್ಟವಿಲ್ಲ. ಇಲ್ಲೇ ನಿಮ್ಮೆಲ್ಲರ ಜೊತೆ ಇದ್ದು, ನಿಮ್ಮ ಜೊತೆ ಮಧುರ ಸಂಬಂಧ ಇಟ್ಟುಕೊಳ್ತೀವಿ,” ಎಂದಳು. ನಂತರ ಗೀತಾ ಎಂದಾದರೂ ಹೋಟೆಲ್‌ಗೆ ಗಂಡನ ಜೊತೆ ಹೊರಟರೆ ಬರುವಾಗ ಅತ್ತೆ ಮಾವನಿಗೂ ಊಟ ಪ್ಯಾಕ್ ಮಾಡಿಸಿಕೊಂಡು ಬರುತ್ತಿದ್ದಳು. ಅದು ಅತ್ತೆ ಮಾವನಿಗೂ ಬಹಳ ಇಷ್ಟವಾಗುತ್ತಿತ್ತು. ನವ ವಧುವಿಗೆ ಗಂಡನ ಪ್ರೇಮ ಮಾತ್ರವಲ್ಲದೆ ಅತ್ತೆ ಮಾವಂದಿರ ವ್ಯಾತ್ಸಲ್ಯ ದೊರೆಯಿತು. ಉದ್ಯೋಗಸ್ಥೆಯಾಗಿ ತನ್ನ ತಿಂಗಳ ಸಂಬಳದ ಮೇಲೆ ಪೂರ್ಣ ಹಕ್ಕಿದೆ. ಅವಳು ಇಡೀ ಸಂಬಳವನ್ನು ತಮ್ಮ ಕೈಗೆ ಕೊಡಬೇಕೆಂದು ಅತ್ತೆ ಮಾವ ನಿರೀಕ್ಷಿಸಬಾರದು. ಗಂಡನೂ ಸಂಪಾದಿಸುತ್ತಾನೆ, ಹೆಂಡತಿಯೂ ಪರಿಶ್ರಮದಿಂದ ಸಂಪಾದಿಸುತ್ತಾಳೆ. ಇಬ್ಬರೂ ಒಟ್ಟಿಗೆ ಸೇರಿ ಮನೆ ನಡೆಸಬೇಕು. ಇಬ್ಬರೂ ಸೇರಿ ಮನೆಯ ಸದಸ್ಯರೊಂದಿಗೆ ಮಧುರ ಸಂಬಂಧ ಇಟ್ಟುಕೊಳ್ಳಬೇಕು.
ಉತ್ತಮ ಪರಿಸರ ಬೆಳೆಸಿ
ಚೀನಾದ ಮಹಾನ್ ದಾರ್ಶನಿಕ ಕನ್‌ಫ್ಯೂಶಿಯಸ್ ಹೀಗೆ ಹೇಳುತ್ತಾರೆ, “ನಾವು ಹೆಚ್ಚು ಪ್ರೀತಿಸುವ ವಸ್ತುವನ್ನೇ ತಿರಸ್ಕಾರ ಮಾಡುತ್ತೇವೆ.”
ಅತ್ತೆ ತನ್ನ ಸೊಸೆಯ ಮೇಲೆ ದಬ್ಬಾಳಿಕೆ ಮಾಡುವುದನ್ನೇ ಚೆನ್ನಾಗಿ ತಿಳಿದಿರುತ್ತಾಳೆ. ಆದರೆ ಸೊಸೆ ಯಾವಾಗ ಅತ್ತೆಯ ಮೇಲೆ ಅಧಿಕಾರ ಮಾಡುತ್ತಾಳೋ, ಅದು ಆಕೆಗೆ ಇಷ್ಟವಾಗುವುದಿಲ್ಲ.
ಆದ್ದರಿಂದ ಪತಿ ಪತ್ನಿಯರ ಹಕ್ಕುಗಳ ರಕ್ಷಣೆಯನ್ನು ಅತ್ತೆ ಮಾವ ಮತ್ತು ಅತ್ತೆ ಮನೆಯ ಸಂಬಂಧಿಕರೊಂದಿಗೆ ಹೇಗೆ ಮಾಡಬೇಕೆಂದರೆ ಅವರು ಅಧಿಕಾರ ಕೇಳುವ ಅವಕಾಶವೇ ಬರಬಾರದು. ಎಂತಹ ಪರಿಸ್ಥಿತಿ ಉಂಟುಮಾಡಬೇಕೆಂದರೆ ಅದರಲ್ಲಿ ಪತಿ ಪತ್ನಿಯರಿಗೆ ಸಾಕಷ್ಟು ಸ್ಪೇಸ್ ಸಿಗಬೇಕು ಮತ್ತು ವೈವಾಹಿಕ ಸಂಬಂಧದಲ್ಲಿ ಸಂತೋಷವಾಗಿ ಬದುಕು ಸ್ವಾತಂತ್ರ್ಯ ಸಿಗುತ್ತಿರಬೇಕು.