ಮನೆಗೆಲಸ ಎನ್ನುವುದು ಥ್ಯಾಂಕ್ ಲೆಸ್ ಜಾಬ್ ಆಗಿದೆಯೇ? ಹೌದು. ಇದು ವಾಸ್ತವ. ಒಂದು ವೇಳೆ ಪರಿಸ್ಥಿತಿ ಹೀಗಿರದಿದ್ದಲ್ಲಿ ಭಾರತದಲ್ಲಿ ಕೆಲಸಗಾರರಾಗಿರುವ ನಿಟ್ಟಿನಲ್ಲಿ ಮಹಿಳೆಯರ ಗೌರವ ಪುರುಷರಿಗಿಂತ ಹೆಚ್ಚಾಗಿರುತ್ತಿತ್ತು. ಏಕೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅದೆಷ್ಟೋ ಹೆಚ್ಚು ಕೆಲಸ ಮಾಡುತ್ತಾರೆ. ಅವರ ಕೆಲಸ ಸದಾ ಜಾರಿಯಲ್ಲಿರುತ್ತದೆ. ಮಲಗುವ ಸಮಯವನ್ನು ಹೊರತುಪಡಿಸಿ ಅವರು ಎನ್‌ಎಸ್‌ಎಸ್‌ಓ ಅಂದರೆ ನ್ಯಾಷನ್ ಸ್ಯಾಂಪಲ್ ಸರ್ವೆ ಆರ್ಗನೈಜೇಶನ್‌ನ ವಾರ್ಷಿಕ ವರದಿಯ ಪ್ರಕಾರ ಮಹಿಳೆಯರು ನಗರದಲ್ಲಿಯೇ ಇರಲಿ, ಹಳ್ಳಿಯಲ್ಲಿಯೇ ಇರಲಿ ಪುರುಷರಿಗಿಂತ ಅದೆಷ್ಟೊ ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ 6ನೇ ರೌಂಡಿನ ಅಂಕಿಅಂಶಗಳು ಮತ್ತೊಂದು ತಪ್ಪುಕಲ್ಪನೆಯನ್ನು ನಿವಾರಿಸುತ್ತವೆ. ನಗರ ಪ್ರದೇಶದ ಮಹಿಳೆಯರು ಸಾಕ್ಷರರಾಗುವ ಮೂಲಕ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದಾರೆ. ಅಂಕಿಅಂಶಗಳಿಂದ ತಿಳಿದುಬರುವ ಸಂಗತಿಯೆಂದರೆ, ಗ್ರಾಮೀಣ ಕ್ಷೇತ್ರದ ಮಹಿಳೆಯರಿಗೆ ಹೋಲಿಸಿದರೆ, ನಗರಪ್ರದೇಶದ ಮಹಿಳೆಯರು ಹೆಚ್ಚು ಶ್ರಮದಾಯಕವಲ್ಲದ ಮನೆಗೆಲಸಗಳಲ್ಲಿ ವ್ಯಸ್ತರಾಗಿದ್ದಾರೆ.
ಎನ್‌ಎಸ್‌ಎಸ್‌ಓ ಅಂಕಿಅಂಶಗಳ ಪ್ರಕಾರ, ಶೇ.64ರಷ್ಟು ಮಹಿಳೆಯರು 15ಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದು, ಮನೆಗೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ಗ್ರಾಮೀಣ ಕ್ಷೇತ್ರದ ಮಹಿಳೆಯರ ಪ್ರಮಾಣ ಶೇ.60ರಷ್ಟಾಗಿದೆ.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರ ಕುರಿತಾದ ಅಂಕಿಅಂಶಗಳನ್ನು ಗಮನಿಸಿದರೆ, ಹೆಚ್ಚಿನ ಪ್ರತಿಶತ ಮಹಿಳೆಯರು ಮನೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಅದರಿಂದಾಗಿ ಅವರಿಗೆ ಯಾವುದೇ ಆರ್ಥಿಕ ಲಾಭ ಇಲ್ಲ. ಈ ಅಂಕಿಅಂಶಗಳಿಂದ ಮಹಿಳೆಯರ ಮನೆಗೆಲಸವನ್ನು ಶ್ರಮ ಎಂದು ಭಾವಿಸಿ ಅದಕ್ಕೂ ತಮಗೆ ಸಂಭಾವನೆ ದೊರೆಯಬೇಕೆಂಬ ಬೇಡಿಕೆಗೆ ಬಲ ಬಂದಿದೆ. ಗಮನಿಸಬೇಕಾದ ಒಂದು ಸಂಗತಿಯೆಂದರೆ, ಶೇ.92ರಷ್ಟು ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ಮನೆಗೆಲಸಗಳಲ್ಲಿಯೇ ಕಳೆಯುತ್ತಾರೆ.
ಅಂದಹಾಗೆ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 1 ಲಕ್ಷ ಮನೆಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು. ಇದರಲ್ಲಿನ ಅಚ್ಚರಿದಾಯಕ ವಿಷಯವೆಂದರೆ, ಹೆಚ್ಚಿನ ಮಹಿಳೆಯರು ತಾವು ಮನೆಗೆಲಸನ್ನು ಸ್ವಇಚ್ಛೆಯಿಂದ ಮಾಡುತ್ತಿರುವುದಾಗಿ ಹೇಳಿದರು. ಗ್ರಾಮೀಣ ಮಹಿಳೆಯರು ಈ ಕುರಿತಂತೆ ಹೇಳಿದ್ದೇನೆಂದರೆ, ತಮ್ಮ ಮನೆಗೆಲಸ ಮಾಡಲು ಬೇರೆ ಯಾರೂ ಇಲ್ಲ. ಹಾಗಾಗಿ ತಾವು ಈ ಕೆಲಸ ಮಾಡುತ್ತಿದ್ದುದಾಗಿ ಹೇಳಿದರು.
ಜುಲೈ 2011ರಿಂದ ಜೂನ್ 2012ರ ತನಕದ 68ನೇ ರೌಂಡಿನ ಸಮೀಕ್ಷೆಯಿಂದ ಸ್ಪಷ್ಟವಾಗುವುದೇನೆಂದರೆ, ನಗರ ಪ್ರದೇಶಗಳಲ್ಲಿ ಸಣ್ಣ ಕುಟುಂಬಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.
ಮತ್ತೊಂದು ಆಸಕ್ತಿದಾಯಕ ಸಂಗತಿ ಎಂದರೆ ಶೇ.34ರಷ್ಟು ಗ್ರಾಮೀಣ ಮಹಿಳೆಯರು ತಮಗೆ ಮನೆಯಲ್ಲಿಯೇ ಯಾವುದಾದರೂ ಕೆಲಸ ಮಾಡುವ ಅಕಾಶ ಸಿಕ್ಕರೆ ಅದನ್ನು ಖುಷಿಯಿಂದ ಪೂರೈಸುವುದಾಗಿ ಹೇಳುತ್ತಾರೆ. ನಗರ ಪ್ರದೇಶದ ಶೇ.28ರಷ್ಟು ಮಹಿಳೆಯರು ಕೂಡ ತಮಗೂ ಬೇರೆ ಕೆಲಸ ಸಿಕ್ಕರೆ ಮಾಡುವ ಇಚ್ಛೆ ವ್ಯಕ್ತಪಡಿಸಿದರು.
ಎರಡೂ ಕಡೆ ಶೇ.8ರಷ್ಟು ಮಹಿಳೆಯರಿಗೆ ಹೆಚ್ಚಿನ ಸಮಯ ಅಡುಗೆಮನೆಯಲ್ಲಿ ಕಳೆಯಬೇಕಾಗಿ ಬರುವುದಿಲ್ಲ.
ಮನೆಗೆಲಸದ ಹೊರತಾಗಿ ಮಹಿಳೆಯರು ಮನೆಯಲ್ಲಿದ್ದುಕೊಂಡು ಯಾವ ಯಾವ ಬಗೆಯ ಕೆಲಸಗಳನ್ನು ಮಾಡಲು ಪ್ರಾಮುಖ್ಯತೆ ಕೊಡುತ್ತಾರೆ? ಸಮೀಕ್ಷೆಯಿಂದ ಹೊರಬಿದ್ದ ಸಂಗತಿಯೆಂದರೆ, ಹೊಲಿಗೆ ಕೆಲಸ ಮಹಿಳೆಯರಿಗೆ ಹೆಚ್ಚು ಪ್ರೀತಿಯ ಕೆಲಸ. ಎರಡೂ ಕ್ಷೇತ್ರಗಳಲ್ಲಿ ಶೇ.95ರಷ್ಟು ಮಹಿಳೆಯರು ನಿಯಮಿತವಾಗಿ ಕೆಲಸ ಮಾಡುವುದಕ್ಕೆ ಆದ್ಯತೆ ಕೊಡುತ್ತಾರೆ. ಮಹಿಳೆಯರ ಆಸಕ್ತಿ ಸ್ವಯಂ ಉದ್ಯೋಗದಲ್ಲೂ ಇದೆ. ವ್ಯಾಪಾರ ಮಾಡಲು ಸಾಲ ಸೌಲಭ್ಯ ರಿಯಾಯಿತಿ ಹಾಗೂ ಸೌಲಭ್ಯ ಕಲ್ಪಿಸಬೇಕೆನ್ನುವುದು ಅವರ ಮಹದಾಸೆಯಾಗಿರುತ್ತದೆ.
ಆಸಕ್ತಿದಾಯಕ ವಿಚಾರವೆಂದರೆ, ಈ ನಿಟ್ಟಿನಲ್ಲಿ ಗ್ರಾಮೀಣ ಮಹಿಳೆಯರ ಶೇಕಡಾವಾರು ಪ್ರಮಾಣ (41%) ನಗರಪ್ರದೇಶದ ಮಹಿಳೆಯರಿಗಿಂತ (ಶೇ.29) ಹೆಚ್ಚಾಗಿದೆ. ಇದರ ಹೊರತಾಗಿ ಶೇ.21 ರಷ್ಟು ಗ್ರಾಮೀಣ ಮಹಿಳೆಯರು ಹಾಗೂ ಶೇ.29ರಷ್ಟು ಮಹಿಳೆಯರು ತಮ್ಮ ಆಸಕ್ತಿದಾಯಕ ಕೆಲಸದಲ್ಲಿ ತರಬೇತಿ ಪಡೆಯಲು ಇಚ್ಛಿಸುತ್ತಾರೆ.
2011-12ರ ಅಂಕಿಅಂಶಗಳಿಂದ ಬೆಳಕಿಗೆ ಬಂದ ಒಂದು ಸತ್ಯವೆಂದರೆ, ಕಳೆದ ಕೆಲವು ವರ್ಷಗಳಿಂದ ನಗರಪ್ರದೇಶಗಳಲ್ಲಿ ಮನೆಗೆಲಸಗಳಲ್ಲಿ ತೊಡಗಿಕೊಂಡ ಮಹಿಳೆಯರ ಪ್ರಮಾಣ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಹೋಲಿಸಿದಲ್ಲಿ ಹೆಚ್ಚು ಕಡಿಮೆ ಸಮನಾಗಿಯೇ ಇತ್ತು.
2004-05ರಲ್ಲಿ ಮನೆಗೆಲಸದಲ್ಲಿ ತೊಡಗಿದ್ದ ಮಹಿಳೆಯರ ಸಂಖ್ಯೆ 45.6ರಷ್ಟಿತ್ತು. 2009-10ರಲ್ಲಿ ಇದರ ಪ್ರಮಾಣ 48.2 ಇದ್ದದ್ದು, 2009-10 ಮತ್ತು 2011-12ರ ನಡುವೆ ಈ ಪ್ರಮಾಣ ಸಮಾನವಾಗಿಯೇ ಇತ್ತು.
ಇನ್ನೊಂದೆಡೆ ಗ್ರಾಮೀಣ ಕ್ಷೇತ್ರದಲ್ಲಿ ಮನೆಗೆಲಸದಲ್ಲಿ ತೊಡಗಿಕೊಂಡ ಮಹಿಳೆಯರ ಶೇಕಡಾವಾರು ಪ್ರಮಾಣ ಹೆಚ್ಚುತ್ತಲೇ ಸಾಗಿದೆ. 61ನೇ ರೌಂಡ್‌ನಲ್ಲಿ ಅದು 35.3% ಇದ್ದದ್ದು 66ನೇ ರೌಂಡಿಗ್ ತಲುಪುವಷ್ಟೊತ್ತಿಗೆ 40.1%ರಷ್ಟಾಗಿದೆ. ಪ್ರಸ್ತುತ ರೌಂಡಿಂಗ್‌ನಲ್ಲಿ ಇದು 42.2% ಇದೆ. ರಾಜ್ಯಗಳ ಪ್ರಕಾರ ಗಮನಹರಿಸಿದಾಗ ಹರಿಯಾಣ ಹಾಗೂ ಉತ್ತರ ಪ್ರದೇಶದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮನಗೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ದಕ್ಷಿಣದ ರಾಜ್ಯಗಳಲ್ಲಿ ಮತ್ತು ಈಶಾನ್ಯ ರಾಜ್ಯಗಳಲ್ಲಿ ಇದರ ಪ್ರಮಾಣ ಕಡಿಮೆ ಇದೆ.
ಆರ್ಥಿಕ ಸ್ವಾತಂತ್ರ್ಯ ಅಗತ್ಯ
ಮನೆಗೆಲಸವನ್ನು ಉತ್ಪಾದನಾ ಶ್ರಮದ ಶ್ರೇಣಿಯಲ್ಲಿ ಸೇರ್ಪಡೆಗೊಳಿಸಬೇಕೆಂಬ ಬೇಡಿಕೆ ಹೆಚ್ಚುತ್ತಲೇ ಇದೆ. ಎನ್‌ಎಸ್‌ಎಸ್‌ಓಗೆ ಮಾಡುತ್ತಿರುವ ಆಗ್ರಹವೆಂದರೆ, ಸಮೀಕ್ಷೆಯ ವರದಿ ಅನುಷ್ಠಾನಕ್ಕೆ ತರಬೇಕು. ಅದರಿಂದಾಗುವ ಲಾಭವೆಂದರೆ, ಮನೆಯಲ್ಲಿರುವ ಮಹಿಳೆಯರು ಎಷ್ಟು ಸಮಯವನ್ನು ಆರ್ಥಿಕ ದೃಷ್ಟಿಯಿಂದ ಉತ್ಪಾದನೆಯ ಆಗುಹೋಗುಗಳಲ್ಲಿ ವಿನಿಯೋಗಿಸುತ್ತಾರೆ ಎಂಬುದು ತಿಳಿಯಬೇಕು.
ಮಹಿಳೆಯರು ಆರ್ಥಿಕವಾಗಿ ಸಬಲೀಕರಣಗೊಂಡಾಗಲೇ ಅವರ ಸ್ಥಿತಿ ಇನ್ನಷ್ಟು ಸುಧಾರಣೆಗೊಳ್ಳುತ್ತದೆ. ಈ ಕಾರಣದಿಂದ ಮಹಿಳೆಯರ ಮನೆಗೆಲಸವನ್ನು ಶ್ರಮ ಎಂದು ಭಾವಿಸಿ ಅದಕ್ಕೆ ತಕ್ಕ ಸಂಬಳ ದೊರೆಯಬೇಕು. ಇದರ ಹೊರತಾಗಿ ಮಹಿಳೆಯರ ಸಂಪೂರ್ಣ ಸ್ಥಿತಿಗತಿಯನ್ನು ಅರಿಯಲು ಎನ್‌ಎಸ್‌ಎಸ್‌ಓ ಅವರಿಗೆ ಆಧುನಿಕ ಸನ್ನಿವೇಶಗಳ ಸಂದರ್ಭದಲ್ಲಿ ಕೆಲವು ಹೊಸ ಪ್ರಶ್ನೆಗಳನ್ನು ಕೇಳಬೇಕು. ಉದಾಹರಣೆಗಾಗಿ ಮನೆಯಿಂದ ಹೊರಗೆ ಯಾವುದಾದರೂ ವೇತನ ದೊರಕುವಂತಹ ಕೆಲಸ ಮಾಡಬೇಕು ಅನಿಸುತ್ತದಾ? ಮನೆಯ ಕೆಲಸ ಕಾರ್ಯಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಇಷ್ಟಪಡುತ್ತೀರಾ? ಇತ್ಯಾದಿ.
ಯಾದಾದರೂ ಅಭಿೃದ್ಧಿಶೀಲ ದೇಶಗಳಲ್ಲಿ ಬೇರೆ ಬೇರೆ ವ್ಯಾಖ್ಯೆ ಅಥವಾ ಒಂದು ಮಹತ್ವದ ವ್ಯಾಖ್ಯೆ ಅಥವಾ ಅದರಿಂದ ವಿಕಸಿತಗೊಳ್ಳುವ ಸ್ಥಿತಿ ಎಂದರೆ, ಆ ದೇಶದ ಸಮಸ್ತ ಮಹಿಳೆಯರು ದೇಶದ ಪುರುಷರಿಗೆ ಸರಿಸಮಾನ ಮಹತ್ವವಿರುವ ಮನೆ ಹೊರಗಿನ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಹಾಗೂ ಅವರಿಗೆ ಸರಿಸಮಾನವಾಗಿ ವೇತನ ಪಡೆಯುವುದಾಗಿದೆ. ಯಾವ ದೇಶಗಳಲ್ಲಿ ಈ ಸ್ಥಿತಿ ಇರುವುದಿಲ್ಲವೋ, ಅವು ಅಭಿವೃದ್ಧಿಶೀಲ ದೇಶಗಳ ಪಟ್ಟಿಗೆ ಸೇರ್ಪಡೆಗೊಳ್ಳುವುದಿಲ್ಲ. ಹೀಗಾಗಿ ಭಾರತ ಕೂಡ ಇನ್ನೂ ಅನೇಕ ವರ್ಷಗಳ ಕಾಲ ಹಾಗೆಯೇ ಮುಂದುವರಿಯಬೇಕಾಗುತ್ತದೆ. ಏಕೆಂದರೆ ನಮ್ಮಲ್ಲಿ ಮಹಿಳೆಯರು ಪುರುಷರಿಗಿಂತ ಅದೆಷ್ಟೋ ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಪುರುಷರಿಗೆ ದೊರೆಯುವಷ್ಟು ಸಂಬಳ ಅವರಿಗೆ ದೊರಕುವುದಿಲ್ಲ.
ಒಂದು ವೇಳೆ 2020ರ ತನಕ ಭಾರತವನ್ನು ಬಹುದೊಡ್ಡ ಆರ್ಥಿಕ ಶಕ್ತಿ ಎಂಬಂತೆ ಬಿಂಬಿಸಬೇಕೆಂದರೆ, ನಾವು ನಮ್ಮ ದೇಶದ ಮಹಿಳೆಯರ ಶ್ರಮದ ಮಹತ್ವವನ್ನು ಅರಿಯಬೇಕಾಗಿದೆ. ಇದನ್ನು ತಿಳಿದುಕೊಳ್ಳುವುದರ ಅರ್ಥ ಅವಳ ಕೆಲಸಕ್ಕೆ ಶಹಭಾಷ್‌ಗಿರಿ ಕೊಡುದಾಗಲಿ, ಮನೆಯಲ್ಲಿ ಇರುವುದೆಲ್ಲ ನಿನ್ನದೇ ಎಂದು ಹೇಳುವುದಕ್ಕಲ್ಲ. ಇದರ ಅರ್ಥ ಮಹಿಳೆಯರ ಶ್ರಮಕ್ಕೆ ಆರ್ಥಿಕ ದೃಷ್ಟಿಯಿಂದ ಸಮಾನ ಗೌರವ ಕೊಡುವುದಾಗಿದೆ. ಅಷ್ಟೇ ಅಲ್ಲ, ಸಮಸ್ತ ಆರ್ಥಿಕ ಆಗುಹೋಗುಗಳು ಅನಿವಾರ್ಯ ಎಂದು ಭಾವಿಸಿ ಸಮಾನ ಶಕ್ತಿಯ ಮಹತ್ವ ಕೊಡುವುದಾಗಿದೆ.
ಸಮೀಕ್ಷೆಯಲ್ಲಿ ಕೇಳದೇ ಇರುವ ಪ್ರಶ್ನೆಗಳು
ನ್ಯಾಷನಲ್ ಸ್ಯಾಂಪಲ್ ಸರ್ವೆಯ ಅಂಕಿಅಂಶಗಳಿಂದ ಬಹಳಷ್ಟು ಸಂಗತಿಗಳು ತಿಳಿದುಬರುತ್ತವೆ. ಆದರೆ ಮತ್ತೊಂದು ವಾಸ್ತವ ಸಂಗತಿಯೆಂದರೆ, ಈ ಸಮೀಕ್ಷೆಯನ್ನು ಸಾಮಾಜಿಕ, ಆರ್ಥಿಕ ದೃಷ್ಟಿಯಿಂದ ಹೆಚ್ಚು ಮಹತ್ವದ್ದಾಗಿಸಬೇಕೆಂದರೆ, ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಕಾಯ್ದುಕೊಂಡು ಹೋಗಲು ಏನು ಮಾಡಬೇಕು ಎಂಬ ಬಗ್ಗೆ ಯೋಚಿಸಬೇಕು. ಏಕೆಂದರೆ ಈ ಸಮೀಕ್ಷೆ ಮಹತ್ವದ್ದಾಗಿಯೂ ಹಲವಾರು ಕೊರತೆಗಳನ್ನು ಹೊಂದಿದೆ. ಅವು ಸಾಮಾನ್ಯನಾಗಿ ಕೇಳದೇ ಇರುವ ಪ್ರಶ್ನೆಗಳಿಗೆ ಸಂಬಂಧಪಟ್ಟಂತೆ ಎನ್ನುವುದನ್ನು ಬಿಡಿಸಿ ಹೇಳಬೇಕಾದ ಅಗತ್ಯವಿಲ್ಲ.
ಅಂದಹಾಗೆ ಮಹಿಳೆಯರಿಗೆ ಕೇಳಬೇಕಾಗಿದ್ದ ಒಂದು ಮುಖ್ಯ ಪ್ರಶ್ನೆಯನ್ನೇ ಕೇಳಲಾಗಿರಲಿಲ್ಲ. ಆ ಪ್ರಶ್ನೆ ಏನೆಂದರೆ, ಹೊರಗಿನ ಕೆಲಸ ಕಾರ್ಯಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಇಷ್ಟಪಡುವಿರಾ? ಈ ಪ್ರಶ್ನೆ ಏಕೆ ಮಹತ್ವದೆಂದರೆ, ಮನೆಯಲ್ಲಿದ್ದುಕೊಂಡು ಮನೆಗೆಲಸ ಮಾಡುವ ಬಹಳಷ್ಟು ಮಹಿಳೆಯರು ಹೇಗಿರಬಹುದೆಂದರೆ ಅವರು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಿ ವೇತನ ಪಡೆಯುವ ಅಪೇಕ್ಷೆ ಹೊಂದಿರಲಿಕ್ಕಿಲ್ಲ. ತಾವು ಪುರುಷರಿಗಿಂತ ಅದೆಷ್ಟೋ ಹೆಚ್ಚು ಕೆಲಸ ಮಾಡಿದರೂ ತಮಗೆ ಅವರಿಗಿಂತ ಕಡಿಮೆ ಸಂಬಳ ಪಾವತಿ ಮಾಡುತ್ತಿರುವ ಬಗ್ಗೆ ಖೇದವಂತೂ ಇದ್ದೇ ಇದೆ.
ತಮ್ಮ ಶ್ರಮಕ್ಕೆ ಕೇವಲ ಕಡಿಮೆ ಸಂಬಳ ಕೊಡುವುದಷ್ಟೇ ಅಲ್ಲ, ಅದಕ್ಕೆ ದೊರೆಯುವ ಸಾಮಾಜಿಕ ಮಾನ್ಯತೆ ಕೂಡ ಕಡಿಮೆ ಎಂಬ ಬಗ್ಗೆ ಸಮೀಕ್ಷೆ ಎಲ್ಲೂ ಬೆಳಕು ಚೆಲ್ಲುವುದಿಲ್ಲ. ಹೀಗಾಗಿ ಇದು ಸಮೀಕ್ಷೆಯ ಬಹು ದೊಡ್ಡ ಕೊರತೆ ಎನಿಸುತ್ತದೆ.
ಅಪೂರ್ಣ ಚಿತ್ರಣ
ಈ ಸಮೀಕ್ಷೆಯಿಂದ ಮತ್ತೊಂದು ಮಹತ್ವದ ಸಂಗತಿಯ ಬಗ್ಗೆ ಬೆಳಕು ಚೆಲ್ಲಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಒಂದು ಪ್ರಶ್ನೆ ಕೇಳಲಾಯಿತು. ವೇತನಸಹಿತ ಕೆಲಸಕ್ಕೆ ಸಂಬಂಧಪಟ್ಟಂತೆ ಅವರಿಗೆ ಯಾವುದರ ಅತಿಯಾದ ಅಗತ್ಯವಿದೆ? ಒಳ್ಳೆಯ ಕ್ವಾಲಿಫಿಕೇಶನ್, ಆರಂಭದಿಂದಲೇ ಮನೆಯಿಂದ ಹೊರಗೆ ಇದ್ದು ಕೆಲಸ ಮಾಡುವವರ ಮಾನಸಿಕತೆಗೆ ತಕ್ಕಂತೆ ಮಾಡಲ್ಪಡುವ ಆರೈಕೆ, ಕೆಲಸ ಶುರು ಮಾಡಲು ಬೇಕಾಗುವ ಹಣಕಾಸು ಸಹಾಯ, ಕುಟುಂಬದ ಸದಸ್ಯರ ಪ್ರೋತ್ಸಾಹಕ್ಕೆ ಅಥವಾ ಮಹಿಳೆಯರು ಮನೆಯ ಹೊರಗಿನ ಕೆಲಸಗಳಿಗೆ ಪ್ರೋತ್ಸಾಹ ನೀಡುವ ಸಂಸ್ಕೃತಿಯ ಬಗ್ಗೆ? ಈ ವಿಷಯವನ್ನು ತಿಳಿದುಕೊಳ್ಳುವ ಅಶ್ಯಕತೆ ಏಕೆ ಇದೆ ಎಂದರೆ, ಸಾಮೂಹಿಕವಾಗಿ ವಿಸ್ತೃತ ಅಭಿಪ್ರಾಯದ ಕೊರತೆಯಿಂದ ತಮ್ಮನ್ನು ತಾವು ಕೋಲೆಬಸವ ಎಂಬಂತೆ ಭಾವಿಸುತ್ತಾರೆ.
ಮಹಿಳೆಯರು ಮನೆಗೆಲಸ ಮಾಡುದಿಲ್ಲವೆಂದರೆ ಆ ಕೆಲಸವನ್ನು ಯಾರು ಮಾಡುತ್ತಾರೆ ಎಂದು ನಾವು ತರ್ಕ ಮಾಡಲು ಸಾಧ್ಯವಾಗುವುದಿಲ್ಲ. ಅವರು ಈ ಕೆಲಸಗಳನ್ನು ಪುರುಷರಿಗೆ ಒಪ್ಪಿಸಲು ಇಷ್ಟುಪಡುತ್ತಾರೆಯೇ? ಪುರುಷರು ತಮ್ಮೊಂದಿಗೆ ಸಮಾನ ರೀತಿಯಲ್ಲಿ ನಡೆದುಕೊಳ್ಳದಿದ್ದಲ್ಲಿ ಅಥವಾ ಮನೆಗೆಲಸಗಳನ್ನು ಸಮಾನವಾಗಿ ಹಂಚಿಕೊಳ್ಳಲು ಇಷ್ಟಪಡುತ್ತಾರೆಯೇ? ಈ ರೀತಿಯ ಪ್ರಶ್ನೆಗಳಿಗೆ ಉತ್ತರಗಳು ಮಾತ್ರ ದೊರಕುವುದಿಲ್ಲ.
ಮಹಿಳೆಯರು ನೌಕರಿ ಮಾಡಲು ಇಷ್ಟಪಡುತ್ತಾರೆಯೇ ಅಥವಾ ಮನೆಗೆಲಸ ಎಂಬುದನ್ನು ಕೂಡ ತಿಳಿದುಕೊಳ್ಳುವ ಅಗತ್ಯವಿದೆ. ಒಂದುವೇಳೆ ಅವರು ತಮ್ಮದೇ ಕೆಲಸ ಮಾಡಿಕೊಳ್ಳಲು ಇಷ್ಟಪಡುತ್ತಾರೆಂದರೆ, ಸದ್ಯದ ಪರಿಸ್ಥಿತಿಯಲ್ಲಿ ಅವರಿಗೆ ಈ ನಿಟ್ಟಿನಲ್ಲಿ ಯಾವ ಅಡ್ಡಿ ಆತಂಕಗಳು ಉಂಟಾಗುತ್ತವೆ? ಈ ಅಗತ್ಯ ಪ್ರಶ್ನೆಗಳ ಕೊರತೆಯಿಂದ ಈ ಸಮೀಕ್ಷೆ ಮಹಿಳೆಯರ ಕೆಲಸದ ಸ್ಥಿತಿಗತಿ ಮತ್ತು ಅವರ ಆರ್ಥಿಕ ಸಂಕಲನದ ಚಿತ್ರಣವನ್ನೇನೊ ದೊರಕಿಸಿಕೊಡುತ್ತದೆ. ಆದರೆ ಇದು ಒಟ್ಟಾರೆ ಅಪೂರ್ಣ ಸಮೀಕ್ಷೆ ಎನಿಸಿಕೊಳ್ಳುತ್ತದೆ.
– ಬಿ. ಶ್ಯಾಮಲಾ