ಮನೆಗೆಲಸ ಎನ್ನುವುದು ಥ್ಯಾಂಕ್ ಲೆಸ್ ಜಾಬ್ ಆಗಿದೆಯೇ? ಹೌದು. ಇದು ವಾಸ್ತವ. ಒಂದು ವೇಳೆ ಪರಿಸ್ಥಿತಿ ಹೀಗಿರದಿದ್ದಲ್ಲಿ ಭಾರತದಲ್ಲಿ ಕೆಲಸಗಾರರಾಗಿರುವ ನಿಟ್ಟಿನಲ್ಲಿ ಮಹಿಳೆಯರ ಗೌರವ ಪುರುಷರಿಗಿಂತ ಹೆಚ್ಚಾಗಿರುತ್ತಿತ್ತು. ಏಕೆಂದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರು ಅದೆಷ್ಟೋ ಹೆಚ್ಚು ಕೆಲಸ ಮಾಡುತ್ತಾರೆ. ಅವರ ಕೆಲಸ ಸದಾ ಜಾರಿಯಲ್ಲಿರುತ್ತದೆ. ಮಲಗುವ ಸಮಯವನ್ನು ಹೊರತುಪಡಿಸಿ ಅವರು ಎನ್‌ಎಸ್‌ಎಸ್‌ಓ ಅಂದರೆ ನ್ಯಾಷನ್ ಸ್ಯಾಂಪಲ್ ಸರ್ವೆ ಆರ್ಗನೈಜೇಶನ್‌ನ ವಾರ್ಷಿಕ ವರದಿಯ ಪ್ರಕಾರ ಮಹಿಳೆಯರು ನಗರದಲ್ಲಿಯೇ ಇರಲಿ, ಹಳ್ಳಿಯಲ್ಲಿಯೇ ಇರಲಿ ಪುರುಷರಿಗಿಂತ ಅದೆಷ್ಟೊ ಪಟ್ಟು ಹೆಚ್ಚು ಕೆಲಸ ಮಾಡುತ್ತಾರೆ.
ರಾಷ್ಟ್ರೀಯ ಮಾದರಿ ಸಮೀಕ್ಷೆ 6ನೇ ರೌಂಡಿನ ಅಂಕಿಅಂಶಗಳು ಮತ್ತೊಂದು ತಪ್ಪುಕಲ್ಪನೆಯನ್ನು ನಿವಾರಿಸುತ್ತವೆ. ನಗರ ಪ್ರದೇಶದ ಮಹಿಳೆಯರು ಸಾಕ್ಷರರಾಗುವ ಮೂಲಕ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದಾರೆ. ಅಂಕಿಅಂಶಗಳಿಂದ ತಿಳಿದುಬರುವ ಸಂಗತಿಯೆಂದರೆ, ಗ್ರಾಮೀಣ ಕ್ಷೇತ್ರದ ಮಹಿಳೆಯರಿಗೆ ಹೋಲಿಸಿದರೆ, ನಗರಪ್ರದೇಶದ ಮಹಿಳೆಯರು ಹೆಚ್ಚು ಶ್ರಮದಾಯಕವಲ್ಲದ ಮನೆಗೆಲಸಗಳಲ್ಲಿ ವ್ಯಸ್ತರಾಗಿದ್ದಾರೆ.
ಎನ್‌ಎಸ್‌ಎಸ್‌ಓ ಅಂಕಿಅಂಶಗಳ ಪ್ರಕಾರ, ಶೇ.64ರಷ್ಟು ಮಹಿಳೆಯರು 15ಕ್ಕೂ ಹೆಚ್ಚಿನ ವಯಸ್ಸಿನವರಾಗಿದ್ದು, ಮನೆಗೆಲಸಗಳಲ್ಲಿ ವ್ಯಸ್ತರಾಗಿದ್ದಾರೆ. ಗ್ರಾಮೀಣ ಕ್ಷೇತ್ರದ ಮಹಿಳೆಯರ ಪ್ರಮಾಣ ಶೇ.60ರಷ್ಟಾಗಿದೆ.
ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರ ಕುರಿತಾದ ಅಂಕಿಅಂಶಗಳನ್ನು ಗಮನಿಸಿದರೆ, ಹೆಚ್ಚಿನ ಪ್ರತಿಶತ ಮಹಿಳೆಯರು ಮನೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿದ್ದಾರೆ. ಅದರಿಂದಾಗಿ ಅವರಿಗೆ ಯಾವುದೇ ಆರ್ಥಿಕ ಲಾಭ ಇಲ್ಲ. ಈ ಅಂಕಿಅಂಶಗಳಿಂದ ಮಹಿಳೆಯರ ಮನೆಗೆಲಸವನ್ನು ಶ್ರಮ ಎಂದು ಭಾವಿಸಿ ಅದಕ್ಕೂ ತಮಗೆ ಸಂಭಾವನೆ ದೊರೆಯಬೇಕೆಂಬ ಬೇಡಿಕೆಗೆ ಬಲ ಬಂದಿದೆ. ಗಮನಿಸಬೇಕಾದ ಒಂದು ಸಂಗತಿಯೆಂದರೆ, ಶೇ.92ರಷ್ಟು ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ಮನೆಗೆಲಸಗಳಲ್ಲಿಯೇ ಕಳೆಯುತ್ತಾರೆ.
ಅಂದಹಾಗೆ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 1 ಲಕ್ಷ ಮನೆಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು. ಇದರಲ್ಲಿನ ಅಚ್ಚರಿದಾಯಕ ವಿಷಯವೆಂದರೆ, ಹೆಚ್ಚಿನ ಮಹಿಳೆಯರು ತಾವು ಮನೆಗೆಲಸನ್ನು ಸ್ವಇಚ್ಛೆಯಿಂದ ಮಾಡುತ್ತಿರುವುದಾಗಿ ಹೇಳಿದರು. ಗ್ರಾಮೀಣ ಮಹಿಳೆಯರು ಈ ಕುರಿತಂತೆ ಹೇಳಿದ್ದೇನೆಂದರೆ, ತಮ್ಮ ಮನೆಗೆಲಸ ಮಾಡಲು ಬೇರೆ ಯಾರೂ ಇಲ್ಲ. ಹಾಗಾಗಿ ತಾವು ಈ ಕೆಲಸ ಮಾಡುತ್ತಿದ್ದುದಾಗಿ ಹೇಳಿದರು.
ಜುಲೈ 2011ರಿಂದ ಜೂನ್ 2012ರ ತನಕದ 68ನೇ ರೌಂಡಿನ ಸಮೀಕ್ಷೆಯಿಂದ ಸ್ಪಷ್ಟವಾಗುವುದೇನೆಂದರೆ, ನಗರ ಪ್ರದೇಶಗಳಲ್ಲಿ ಸಣ್ಣ ಕುಟುಂಬಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಹೀಗಾಗಿ ಮನೆಯ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಸದಸ್ಯರ ಸಂಖ್ಯೆ ಕಡಿಮೆಯಾಗಿದೆ.
ಮತ್ತೊಂದು ಆಸಕ್ತಿದಾಯಕ ಸಂಗತಿ ಎಂದರೆ ಶೇ.34ರಷ್ಟು ಗ್ರಾಮೀಣ ಮಹಿಳೆಯರು ತಮಗೆ ಮನೆಯಲ್ಲಿಯೇ ಯಾವುದಾದರೂ ಕೆಲಸ ಮಾಡುವ ಅಕಾಶ ಸಿಕ್ಕರೆ ಅದನ್ನು ಖುಷಿಯಿಂದ ಪೂರೈಸುವುದಾಗಿ ಹೇಳುತ್ತಾರೆ. ನಗರ ಪ್ರದೇಶದ ಶೇ.28ರಷ್ಟು ಮಹಿಳೆಯರು ಕೂಡ ತಮಗೂ ಬೇರೆ ಕೆಲಸ ಸಿಕ್ಕರೆ ಮಾಡುವ ಇಚ್ಛೆ ವ್ಯಕ್ತಪಡಿಸಿದರು.
ಎರಡೂ ಕಡೆ ಶೇ.8ರಷ್ಟು ಮಹಿಳೆಯರಿಗೆ ಹೆಚ್ಚಿನ ಸಮಯ ಅಡುಗೆಮನೆಯಲ್ಲಿ ಕಳೆಯಬೇಕಾಗಿ ಬರುವುದಿಲ್ಲ.
ಮನೆಗೆಲಸದ ಹೊರತಾಗಿ ಮಹಿಳೆಯರು ಮನೆಯಲ್ಲಿದ್ದುಕೊಂಡು ಯಾವ ಯಾವ ಬಗೆಯ ಕೆಲಸಗಳನ್ನು ಮಾಡಲು ಪ್ರಾಮುಖ್ಯತೆ ಕೊಡುತ್ತಾರೆ? ಸಮೀಕ್ಷೆಯಿಂದ ಹೊರಬಿದ್ದ ಸಂಗತಿಯೆಂದರೆ, ಹೊಲಿಗೆ ಕೆಲಸ ಮಹಿಳೆಯರಿಗೆ ಹೆಚ್ಚು ಪ್ರೀತಿಯ ಕೆಲಸ. ಎರಡೂ ಕ್ಷೇತ್ರಗಳಲ್ಲಿ ಶೇ.95ರಷ್ಟು ಮಹಿಳೆಯರು ನಿಯಮಿತವಾಗಿ ಕೆಲಸ ಮಾಡುವುದಕ್ಕೆ ಆದ್ಯತೆ ಕೊಡುತ್ತಾರೆ. ಮಹಿಳೆಯರ ಆಸಕ್ತಿ ಸ್ವಯಂ ಉದ್ಯೋಗದಲ್ಲೂ ಇದೆ. ವ್ಯಾಪಾರ ಮಾಡಲು ಸಾಲ ಸೌಲಭ್ಯ ರಿಯಾಯಿತಿ ಹಾಗೂ ಸೌಲಭ್ಯ ಕಲ್ಪಿಸಬೇಕೆನ್ನುವುದು ಅವರ ಮಹದಾಸೆಯಾಗಿರುತ್ತದೆ.