ನೀವು ವಿವಾಹ ಬಂಧನದಲ್ಲಿ ಬಂಧಿಸಲ್ಪಟ್ಟಾಗ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಗೋಚರಿಸುತ್ತವೆ. ಜೀವನದಲ್ಲಿ ಪ್ರೀತಿಯ ಜೊತೆ ಜೊತೆಗೆ ಜವಾಬ್ದಾರಿಗಳು ಕೂಡ ಬೆಸೆದು ಕೊಂಡಿರುತ್ತವೆ. ನೀವು ಸಂಗಾತಿಯ ಜೊತೆ ಜೊತೆಗೆ ಅವರ ಕುಟುಂಬದವರನ್ನು ಕೂಡ ಹೃದಯಪೂರ್ವಕವಾಗಿ ಸ್ವೀಕರಿಸುತ್ತೀರಿ. ಆಗ ನಿಮ್ಮ ಜೀವನದಲ್ಲಿ ಎಂದೂ ಮುಗಿಯದ ಖುಷಿಯ ಆಗಮನವಾಗುತ್ತದೆ.

ಗಂಡಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಅದರಲ್ಲಿ ಪ್ರೀತಿಯ ಜೊತೆ ಜೊತೆಗೆ ಒಳ್ಳೆಯ ಕೆಟ್ಟ ಮಾತುಗಳನ್ನು ಸ್ವೀಕರಿಸುವ ಭಾವನೆ ಕೂಡ ಇರುತ್ತದೆ. ಈ ಕುರಿತಂತೆ ನೀವು ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಆದರೆ ಒಂದು ಮಾತಂತೂ ಸತ್ಯ. ನಿಮ್ಮ ಸಂಬಂಧದ ಮೇಲೆ ನಿಮ್ಮ ತಂದೆತಾಯಿಯ ಪರಸ್ಪರ ಸಂಬಂಧ ಹೇಗಿತ್ತು ಎನ್ನುವುದು ಕೂಡ ಪ್ರಭಾವ ಬೀರುತ್ತದೆ. ನಿಮ್ಮ ವ್ಯಕ್ತಿತ್ವದ ಮೇಲೆ ನಿಮ್ಮ ಪೋಷಕರ ಛಾಪು ಇದ್ದೇ ಇರುತ್ತದೆ. ಜೀವನದ ಬಗೆಗೆ ನಿಮ್ಮ ದೃಷ್ಟಿಕೋನದಲ್ಲಿ ಸಾಕಷ್ಟು ಮಟ್ಟಿಗೆ ನಿಮ್ಮ ಪೋಷಕರ ಪ್ರಭಾವ ಗೋಚರಿಸುತ್ತದೆ.

ಎಷ್ಟೋ ಸಲ ಇಷ್ಟವಿಲ್ಲದಿದ್ದಾಗ್ಯೂ ನೀವು ನಿಮ್ಮ ಪೋಷಕರ ದುಶ್ಚಟಗಳನ್ನು ಕಲಿತುಕೊಂಡು ಬಿಡುವಿರಿ. ಅವು ಗೊತ್ತಿದ್ದೊ ಗೊತ್ತಿಲ್ಲದೆಯೊ ನಿಮ್ಮ ಸಂಬಂಧದ ಮೇಲೆ ಪ್ರಭಾವ ಬೀರುತ್ತವೆ.

ಒಂದು ವೇಳೆ ನಿಮ್ಮಲ್ಲಿ ಪೋಷಕರ ಯಾವುದಾದರೂ ಅಭ್ಯಾಸದಿಂದ ಸಂಗಾತಿಯ ಜೊತೆಗೆ ಸಂಬಂಧದಲ್ಲಿ ಇರಸುಮುರುಸು ಉಂಟಾಗುತ್ತಿದ್ದರೆ, ಆ ಅಭ್ಯಾಸವನ್ನು ತೊರೆಯಲು ಪ್ರಯತ್ನಿಸಿ.

ಒಮ್ಮೆ ಒಲುಮೆ ಇನ್ನೊಮ್ಮೆ ಮುನಿಸು

ರಿಲೇಶನ್‌ಶಿಪ್‌ ಕೌನ್ಸೆಲರ್‌ ಡಾ. ಶಶಿಕಲಾ ಅವರ ಪ್ರಕಾರ, ಗಂಡಹೆಂಡತಿಯ ಸಂಬಂಧ ಅತ್ಯಂತ ಸಂವೇದನಾಶೀಲವಾಗಿರುತ್ತದೆ. ಅದು ಪ್ರೀತಿ ಮತ್ತು ಮುನಿಸು ಎರಡರ ಸಂಗಮವೇ ಹೌದು. ಆದರೆ ಈ ಮುನಿಸು ಅಥವಾ ದೂರುಗಳು ಮಿತಿ ಮೀರಿದಾಗ, ಇಬ್ಬರ ಸಂಬಂಧದಲ್ಲಿ ಬಿರುಕು ಮೂಡಲು ಸಮಯ ಹಿಡಿಯುವುದಿಲ್ಲ. ವಾಸ್ತವ ಸಂಗತಿ ಏನೆಂದರೆ, ಗಂಡಹೆಂಡತಿಯ ಸಂಬಂಧ ತಮ್ಮ ಪೋಷಕರ ಹಾಗೆಯೇ ಇರಬೇಕೆಂದು ಬಯಸುತ್ತಾರೆ. ಈ ಕಾರಣದಿಂದಾಗಿಯೇ ಸಂಬಂಧದಲ್ಲಿ ನಿಕಟತೆ ದೂರವಾಗುತ್ತದೆ. ಗಂಡಹೆಂಡತಿ ಪರಸ್ಪರರ ಮೇಲೆ ದೋಷಾರೋಪಣೆ ಮಾಡಲು ಆರಂಭಿಸಿದಾಗ ಸಂಬಂಧದಲ್ಲಿ ಪ್ರೀತಿ ಉಸಿರುಗಟ್ಟತೊಡಗುತ್ತದೆ. ಆಗ ಸಣ್ಣಸಣ್ಣ ಮಾತಿಗೂ ಇಬ್ಬರೂ ವಾದವಿವಾದಕ್ಕೆ ಇಳಿಯತೊಡಗುತ್ತಾರೆ. ಸಾಮಾನ್ಯವಾಗಿ ಹೆಂಡತಿಯರು ಗಂಡ ತನಗೆ ಸಮಯ ಕೊಡುತ್ತಿಲ್ಲ ಎಂದು ದೂರುತ್ತಾರೆ. ಆಫೀಸಿನಿಂದ ಮನೆಗೆ ಬರುತ್ತಿದ್ದಂತೆ ಹೆಂಡತಿ ತನ್ನ ದೂರುಗಳ ಸರಮಾಲೆಯನ್ನೇ ಇಡುತ್ತಾಳೆನ್ನುವುದು ಗಂಡನ ತಕರಾರು ಆಗಿರುತ್ತದೆ. ಸಾಮಾನ್ಯವಾಗಿ ಗಂಡಹೆಂಡತಿಯರಲ್ಲೂ ಈ ತೆರನಾದ ಅಭ್ಯಾಸಗಳು ಅವರ ತಂದೆತಾಯಿಯರಿಂದಲೇ ಬರುತ್ತವೆ. ಒಂದುವೇಳೆ ಪೋಷಕರ ಅಭ್ಯಾಸಗಳನ್ನು ನಿಮ್ಮ ಮೇಲೆ ಹೇರಲಾಗುತ್ತಿದ್ದರೆ, ಇಷ್ಟವಿಲ್ಲದಿದ್ದರೂ ನೀವು ಅವುಗಳಿಗೆ ಶರಣಾಗಿಬಿಡುವಿರಿ. ಸುಖಮಯ ದಾಂಪತ್ಯಕ್ಕೆ ನೀವು ನಿಮ್ಮ ಸಂಗಾತಿಯ ಒಳಿತು ಕೆಡುಕುಗಳನ್ನು ಸಮನಾಗಿ ಸ್ವೀಕರಿಸಿ. ನಿಮ್ಮ ತಂದೆತಾಯಿಯರಲ್ಲಿದ್ದ ನಕಾರಾತ್ಮಕ ಸಂಗತಿಗಳು ನಿಮ್ಮ ಜೀವನದಲ್ಲಿ ಪ್ರವೇಶಿಸದಂತೆ ಎಚ್ಚರ ವಹಿಸಿ.

ಯಾವ ಪೋಷಕರ ಅಭ್ಯಾಸಗಳು ಸಂಬಂಧಗಳನ್ನು `ಟೇಕನ್‌ ಫಾರ್‌ ಗ್ರ್ಯಾಂಟೆಡ್‌' ಆಗಿದ್ದರೆ ಅವರ ಮಕ್ಕಳು ಕೂಡ ಅದನ್ನು ಹಾಗೆಯೇ ಭಾವಿಸುತ್ತಾರೆ. ಈ ತೆರನಾದ ಯೋಚನೆಗಳು ಸಂಬಂಧವನ್ನು ಚಿಗುರಲು ಅವಕಾಶ ಕೊಡುವುದಿಲ್ಲ. ಗಂಡಹೆಂಡತಿ ಪರಸ್ಪರರಿಗೆ ಪೂರಕವಾಗಿದ್ದರೆ, ಇಬ್ಬರೂ ಜೊತೆ ಜೊತೆಗೆ ಒಗ್ಗಟ್ಟಿನಿಂದ ಸಾಗುತ್ತಿದ್ದರೆ ಜೀವನದ ಗಾಡಿಯ ಓಟ ಸುಗಮವಾಗಿರುತ್ತದೆ. ಒಂದು ವೇಳೆ ಇಬ್ಬರ ಸಂಬಂಧದಲ್ಲಿ ಘರ್ಷಣೆ ಉಂಟಾದರೆ ಸಂಬಂಧದ ಎಳೆ ತುಂಡಾಗುವುದರಲ್ಲಿ ಸಂದೇಹವೇ ಇಲ್ಲ. ಸಂಬಂಧವನ್ನು ಸಹಜವಾಗಿ ಮುಂದುವರಿಸಿಕೊಂಡು ಹೋಗಲು, ಸಂಗಾತಿಯನ್ನು ಟೇಕನ್‌ ಫಾರ್‌ ಗ್ರ್ಯಾಂಟೆಡ್‌ ಅಂದುಕೊಳ್ಳುವ ತಪ್ಪು ಮಾಡಬೇಡಿ. ಸಂಗಾತಿಯನ್ನು ಸ್ನೇಹಿತ, ಸಹಪ್ರಯಾಣಿಕ ಎಂಬಂತೆ ಭಾವಿಸಿ, ಅವನೊಂದಿಗೆ ನಿಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳಲು ಪ್ರಯತ್ನಿಸಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ