ಸವಾಲುಗಳು ನನಗೆ ಏನಾದರೂ ಹೊಸದನ್ನು ಮಾಡಲು ಪ್ರೇರೇಪಿಸುತ್ತವೆ

ರಶ್ಮಿ ಶರ್ಮ ಕ್ರಿಯೇಟಿವ್‌ ಡೈರೆಕ್ಟರ್‌ ಮತ್ತು ಪ್ರೊಡ್ಯೂಸರ್‌

 ರಶ್ಮಿ ಶರ್ಮ ಟೆಲಿಫಿಲಮ್ಸ್

ಏನಾದರೂ ಮಾಡಿ ತೋರಿಸುವ ಹುಚ್ಚು ಮನದಲ್ಲಿದ್ದರೆ ಸಾಮಾನ್ಯ ವ್ಯಕ್ತಿಗಿಂತ ವಿಶೇಷ ವ್ಯಕ್ತಿಯಾಗಲು ದಾರಿ ಸಿಗುತ್ತದೆ. ರಶ್ಮಿಯೊಳಗೂ ಇಂತಹ ಒಂದು ಉತ್ಸಾಹವಿತ್ತು. ಅದೇನೆಂದು ವಿವರವಾಗಿ ತಿಳಿಯೋಣವೇ…….?

ಮಧ್ಯಮ ವರ್ಗದಲ್ಲಿ ಜನಿಸಿದ ರಶ್ಮಿ ಶರ್ಮ ಮುನ್ನಡೆದು ರೈಟರ್‌ನಿಂದ ಕ್ರಿಯೇಟಿವ್‌ ಡೈರೆಕ್ಟರ್‌ ಮತ್ತು ಪ್ರೊಡ್ಯೂಸರ್‌ ಆಗುತ್ತೇನೆಂದು ಎಂದೂ ಯೋಚಿಸಿರಲಿಲ್ಲ. ಆದರೆ ಪರಿಶ್ರಮ, ನಿಷ್ಠೆ ಹಾಗೂ ಏನನ್ನಾದರೂ ಮಾಡಿ ತೋರಿಸಬೇಕೆಂಬ ಹಠ ಅವರನ್ನು ಸಾಮಾನ್ಯರಿಂದ ವಿಶೇಷ ವ್ಯಕ್ತಿಯನ್ನಾಗಿಸಿತು. 2008ರಲ್ಲಿ ರಶ್ಮಿ ಮೊದಲ ಬಾರಿ `ರಾಜಾ ಕೀ ಆಯೇಗಿ ಬಾರಾತ್‌’ ಧಾರಾವಾಹಿಯಲ್ಲಿ ಕೆಲಸ ಮಾಡಿದರು. ನಂತರ `ರೆಹನಾ ಹೈ ತೇರಿ ಪಲಕೋಂ ಕೀ ಛಾವೋ‌ಮೆ,’ `ಮಿಸೆಸ್‌ ಕೌಶಿಕ್‌ ಕೀ 5 ಬಹೂಯೇ,’ `ದೇಶ್‌ ಕೀ ಬೇಟಿ ನಂದಿನಿ’ ಧಾರಾವಾಹಿಗಳೊಂದಿಗೆ ಅವರ ಯಶಸ್ಸಿನ ಸರಣಿ ಆರಂಭವಾಯಿತು. `ಸಾಥಿಯಾ ಸಾಥ್‌ ನಿಭಾನಾ’ ಮತ್ತು `ಸಸುರಾಲ್ ಸಿಮರ್‌ ಕಾ’ ಧಾರಾವಾಹಿಗಳು ಈಗ 1000ಕ್ಕೂ ಹೆಚ್ಚು ಎಪಿಸೋಡ್‌ಗಳನ್ನು ಪೂರೈಸಿವೆ. ಅವರ ಇತರ ಧಾರಾವಾಹಿಗಳು `ಶಕ್ತಿ,’ `ಸ್ವರಾಗಿನಿ,’ `ಸರೋಜಿನಿ,’ ಇತ್ಯಾದಿ ಯಾವಾಗಲೂ ಟಿಆರ್‌ಪಿ ರೇಸ್‌ನಲ್ಲಿ ಮುಂದಿವೆ. ಅವುಗಳಲ್ಲಿ ಕೆಲವು ಧಾರಾವಾಹಿಗಳ ಕಥೆಯನ್ನು ಸ್ವತಃ ರಶ್ಮಿ ಬರೆದಿದ್ದಾರೆ. ರಶ್ಮಿಯವರ ವ್ಯಕ್ತಿತ್ವವನ್ನು ಇನ್ನೂ ಕೊಂಚ ತಿಳಿಯೋಣ ಬನ್ನಿ :

ನಿಮ್ಮ ಮನಸ್ಸಿನಲ್ಲಿ ಪ್ರೊಡ್ಯೂಸರ್‌ ಆಗುವ ಕಲ್ಪನೆ ಯಾವಾಗ ಬಂತು?

ನಾನು ಇಂಡಸ್ಟ್ರಿಯಲ್ಲಿ ಕ್ರಿಯೇಟಿವ್ ಡೈರೆಕ್ಟರ್‌ ಆಗಿ ಕೆಲಸ ಆರಂಭಿಸಿದೆ. ಪ್ರೊಡ್ಯೂಸರ್‌ ಆಗುವ ಮೊದಲು ನಾನು ಹಲವಾರು ಧಾರಾವಾಹಿಗಳಲ್ಲಿ ಕ್ರಿಯೇಟಿವ್ ಹೆಡ್‌ ಆಗಿದ್ದೆ. ಆ ಧಾರಾವಾಹಿಗಳ ಕಥೆಯ ಬಗ್ಗೆ ಯೋಚಿಸುವುದು, ಸ್ಟೋರಿ ಲೈನ್‌ ತಯಾರಿಸುವುದು, ಅದನ್ನು ಪ್ರೇಕ್ಷಕರ ಮುಂದೆ ಪ್ರಸ್ತುತಪಡಿಸುವುದು ನನ್ನ ಕೆಲಸವಾಗಿತ್ತು. ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ ನಂತರ ಇಂದು ನಾನು ಇತರರಿಗಾಗಿ ಮಾಡುತ್ತಿರುವ ಕೆಲಸಗಳನ್ನು ನನಗಾಗಿಯೂ ಮಾಡಿಕೊಳ್ಳಬಹುದು ಅನ್ನಿಸಿತು. ಅಂದಹಾಗೆ ನಾವು ಇತರರಿಗಾಗಿ ಪ್ರಾಡಕ್ಟ್ಸ್ ಪ್ರೆಸೆಂಟ್‌ ಮಾಡುವಾಗ ನಮಗೆ ಹಲವಾರು ನಿರ್ಬಂಧಗಳಿರುತ್ತವೆ. ಇತರರ ಧಾರಾವಾಹಿಗಳನ್ನು ಮಾಡುವಾಗ ಒಂದು ವೇಳೆ ಈ ಶೋ ನನ್ನದಾಗಿದ್ದರೆ ಅದನ್ನು ಬೇರೊಂದು ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತಿದ್ದೆ ಅನ್ನಿಸಿತು. ಈ ಆಲೋಚನೆಗಳೊಂದಿಗೆ ಹಾಗೂ ಮೊದಲು ನನ್ನನ್ನು ಒಳ್ಳೆಯ ಕ್ರಿಯೇಟಿವ್‌ ಹೆಡ್‌ ಎಂದು ಸಾಬೀತುಪಡಿಸಿದ ನಂತರ ನಾನು ಪ್ರೊಡ್ಯೂಸರ್‌ ಆಗಲು ಯೋಚಿಸಿದೆ. ಅದು ನನಗೆ ಬಹಳ ಕಷ್ಟವಿತ್ತು. ಏಕೆಂದರೆ ನಾನೊಂದು ಮಧ್ಯಮವರ್ಗದ ಕುಟುಂಬದಿಂದ ಬಂದಿದ್ದೆ. ಹೀಗಾಗಿ ಅಷ್ಟು ದೊಡ್ಡ ಇನ್ವೆಸ್ಟ್ ಮೆಂಟ್‌ ಮಾಡುವುದು ಕಷ್ಟವಾಗಿತ್ತು. ಏನೇ ಮಾಡಿದರೂ ಸ್ವತಃ ಮಾಡಬೇಕಿತ್ತು. ಆದರೆ ಡೆಡಿಕೇಶನ್‌ ಮತ್ತು ಪ್ಯಾಶನ್‌ ಇದ್ದರೆ ನೀವು ಇಷ್ಟಪಟ್ಟಿದ್ದನ್ನು ನಿಮ್ಮಿಂದ ಮಾಡಿಸುತ್ತದೆ.

ಮೇಲ್‌ ಡಾಮಿನೇಟಿಂಗ್‌ ಗ್ಲ್ಯಾಮರ್‌ ಇಂಡಸ್ಟ್ರಿಯಲ್ಲಿ ನಿಮಗೊಂದು ಸ್ಥಾನ ಮಾಡಿಕೊಳ್ಳುವುದು ಎಷ್ಟು ಕಷ್ಟವಾಗಿತ್ತು?

ನಾನು ಈ ವಿಷಯವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ. ಗ್ಲ್ಯಾಮರ್‌ ಇಂಡಸ್ಟ್ರಿಯಲ್ಲಿ ಮೇಲ್‌ ಡಾಮಿನೇಶನ್‌ ಹೆಚ್ಚು ಸ್ಟ್ರಾಂಗ್‌ ಆಗಿದೆ. ಒಬ್ಬ ಮಹಿಳೆಯಾಗಿರುವುದರಿಂದ ನಿಮ್ಮ ವಿಷಯ ಪ್ರಸ್ತುತಪಡಿಸುವುದು ಹಾಗೂ ಅದನ್ನು ಒಪ್ಪಿಸುವುದು ಅತ್ಯಂತ ಕಷ್ಟದ ಕೆಲಸವಾಗಿದೆ. ಆದರೆ ಒಬ್ಬ ಮಹಿಳೆಯಾಗಿದ್ದೂ ನನ್ನನ್ನು ನಾನು ಎರಡೂ ಇಂಡಸ್ಟ್ರಿಯಲ್ಲಿ (ಫಿಲ್ಮ್ ಮತ್ತು ಟಿವಿ) ಉತ್ತಮ ರೀತಿಯಲ್ಲಿ ಪ್ರಸ್ತುತಪಡಿಸಿಕೊಂಡೆ. ನನ್ನ ವಿಷಯಗಳನ್ನು ಒಪ್ಪಿಸುವುದರಲ್ಲೂ ಯಶಸ್ವಿಯಾಗಿದ್ದೇನೆ. ನಾನು ಕ್ರಿಯೇಟಿವ್ ಹೆಡ್‌ ಆಗಿದ್ದಾಗ ಈ ಡಾಮಿನೇಶನ್‌ ಸಹಿಸಿಕೊಳ್ಳಬೇಕಾಗಿತ್ತು. ಆದರೆ ನನಗಿರುವ ಗಾಢ ನಂಬಿಕೆ ಏನೆಂದರೆ ನಮ್ಮ ಕೆಲಸ ನಮಗೆ ಚೆನ್ನಾಗಿ ಗೊತ್ತಿದ್ದರೆ, ನಮ್ಮ ಕೆಲಸದ ಬಗ್ಗೆ ಪ್ರಾಮಾಣಿಕರಾಗಿದ್ದರೆ, ನಮ್ಮನ್ನು ಯಾರೂ ಡಾಮಿನೇಟ್‌ ಮಾಡಲು ಸಾಧ್ಯವಿಲ್ಲ. ನನ್ನಲ್ಲಿ ಮೊದಲಿನಿಂದಲೂ ಕಲಿಯುವ ಹಂಬಲ ಇದೆ. ನಾನು ಬಹಳ ಕೆಳಗಿನ ಹಂತದಿಂದ ಕೆಲಸ ಮಾಡಲು ಶುರು ಮಾಡಿದ್ದೇನೆ. ಆದ್ದರಿಂದ ನನ್ನ ಕೆಲಸವನ್ನು ಚೆನ್ನಾಗಿ ತಿಳಿದುಕೊಂಡಿದ್ದೇನೆ ಮತ್ತು ಸರಿಯಾದ ನಿರ್ಣಯ ತೆಗೆದುಕೊಳ್ಳುವಲ್ಲಿ ಸಮರ್ಥಳಾಗಿದ್ದೇನೆ.

ನಿಮ್ಮ ವ್ಯಕ್ತಿತ್ವಕ್ಕೆ ಕಾಂತಿ ತರುವಲ್ಲಿ ನಿಮ್ಮ ತಂದೆಯ ಪಾತ್ರ ಹೇಗಿತ್ತು?

ನನ್ನ ತಂದೆ ಪ್ರಿನ್ಸಿಪಾಲ್ ಮತ್ತು ಅಮ್ಮ ಹೌಸ್‌ವೈಫ್‌ ಆಗಿದ್ದರು. ನಮ್ಮ ತಂದೆಗೆ ವರ್ಗವಾದ ಕಡೆಗೆಲ್ಲಾ ನಾವು ಅವರೊಂದಿಗೆ ಹೋಗುತ್ತಿದ್ದೆವು. ನನ್ನದು ಸಹ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಇಂದು ನನ್ನ ಜೀವನದಲ್ಲಿ ಇರುವ ಶಿಸ್ತು, ಕೆಲಸದ ಬಗ್ಗೆ ಇರುವ ಡೆಡಿಕೇಶನ್‌ ಮತ್ತು ನಾನು ಕೆಲಸದಲ್ಲಿ ಎಷ್ಟು ಕೇಂದ್ರೀಕೃತಳಾಗಿರುತ್ತೇನೋ ಅವೆಲ್ಲ ಅವರ ಕೊಡುಗೆಯೇ ಆಗಿದೆ. ನನ್ನ ತಂದೆ ಎಜುಕೇಶನ್‌ ಹಿನ್ನೆಲೆಯಿಂದ ಬಂದಿದ್ದರಿಂದ ಅವರು ಓಪನ್‌ ಮೈಂಡೆಡ್‌ ಆಗಿದ್ದರು. ನಿಮಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ದಿಶೆಯಲ್ಲಿ ಕೆರಿಯರ್‌ ರೂಪಿಸಿಕೊಳ್ಳಿ. ಆದರೆ ಓದಿನ ಬಗ್ಗೆ ವಿಶೇಷ ಗಮನ ಕೊಡಿ ಎನ್ನುತ್ತಿದ್ದರು. ಹುಡುಗನಾಗಲೀ, ಹುಡುಗಿಯಾಗಲೀ ವಿದ್ಯಾವಂತರಾಗುವುದು ಬಹಳ ಅವಶ್ಯಕ ಎನ್ನುತ್ತಿದ್ದರು.

ಇಂದು ಯಾವ ರೀತಿಯ ಸವಾಲುಗಳು ನಿಮ್ಮ ಮುಂದಿವೆ?

ಯಾವಾಗಲೂ ಏನಾದರೂ ಹೊಸದನ್ನು ಮಾಡುವುದು ಈ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಸವಾಲಾಗಿದೆ. ಅದು ಎಂದೂ ಮುಗಿಯುವುದೇ ಇಲ್ಲ. ಇಲ್ಲಿ ಅತ್ಯಂತ ದೊಡ್ಡ ಸವಾಲೆಂದರೆ ಹೊಸ ಕಾನ್ಸೆಪ್ಟ್ ಬಗ್ಗೆ ಯೋಚಿಸುವುದು. ಅದು ಬೇರೆ ಯಾರ ತಲೆಯಲ್ಲೂ ಇರಬಾರದು. ಅತ್ಯಂತ ವಿಭಿನ್ನವಾಗಿರಬೇಕು. ಇದು ನನಗೊಂದು ಸವಾಲು. ಜನ ಯೋಚಿಸುತ್ತಿರುವ ಬಗ್ಗೆ ನಾನು ಯೋಚಿಸಬಾರದು. ನನ್ನ ಆಲೋಚನೆ ಅವರಿಗಿಂತ ವಿಭಿನ್ನವಾಗಿರಬೇಕು. ಇಂಡಸ್ಟ್ರಿಯಲ್ಲಿ ಸ್ಪರ್ಧೆ ಬಹಳ ಹೆಚ್ಚಾಗಿದೆ. ಸಾಕಷ್ಟು ಹೊಸಬರು ಹೊಸ ಟ್ಯಾಲೆಂಟ್‌ನೊಂದಿಗೆ ಬರುತ್ತಿದ್ದಾರೆ. ಹೀಗಿರುವಾಗ ನನ್ನನ್ನು ನಾನು ಎಲ್ಲರಿಗಿಂತ ವಿಭಿನ್ನವಾಗಿಟ್ಟುಕೊಂಡು ನನ್ನ ವಿಷಯವನ್ನು ಸರಿಯಾದ ವಿಧಾನದಿಂದ ಪ್ರೇಕ್ಷಕರಿಗೆ ತಲುಪಿಸುವುದು ಒಂದು ಸವಾಲು. ಅದು ನನಗೆ ಏನಾದರೂ ಹೊಸ ಕೆಲಸ ಮಾಡಲು ಪ್ರೇರೇಪಿಸುತ್ತದೆ.

ನಿಮ್ಮ ಯಶಸ್ಸಿನ ಹಿಂದೆ ಯಾರಿದ್ದಾರೆ?

ನನ್ನನ್ನು ನಾನು ಯಶಸ್ವಿ ಎಂದು ಹೇಳಿಕೊಳ್ಳುವ ಹಂತಕ್ಕೆ ನಾನಿನ್ನೂ ತಲುಪಿಲ್ಲ ಎಂದು ಅನಿಸುತ್ತದೆ. ಆದರೆ ಇಷ್ಟು ಮಾತ್ರ ಹೇಳಬಲ್ಲೆ. ನನ್ನ ಹಲವಾರು ವರ್ಷಗಳ ಪರಿಶ್ರಮ ಯಶಸ್ಸು ತಂದಿದೆ ಮತ್ತು ಅದರಿಂದ ನನಗೆ ಪ್ರೇರಣೆ ಸಿಗುತ್ತಿದೆ. ನಾನು ಇಂದು ಈ ಸ್ಥಾನದಲ್ಲಿರುವುದಕ್ಕೆ ನನ್ನ ಜೀವನ ಸಂಗಾತಿ ಪವನ್‌ಗೆ ಕೃತಜ್ಞಳಾಗಿದ್ದೇನೆ. ಅವರು ನನಗೆ ಯಾವಾಗಲೂ ಉತ್ತೇಜನ ನೀಡಿದರು, ಸ್ವಾತಂತ್ರ್ಯ ಕೊಟ್ಟರು, ಪ್ರೋತ್ಸಾಹಿಸಿದರು, ಸದಾ ಗೈಡ್‌ ಮಾಡುತ್ತಿರುತ್ತಾರೆ. ಒಂದು ವೇಳೆ ನಿಮ್ಮ ಸಂಗಾತಿ ಸರಿಯಾಗಿದ್ದು, ಯಾವಾಗಲೂ ನಿಮ್ಮ ಜೊತೆಗಿದ್ದರೆ ನಿಮ್ಮ ಇಡೀ ಬದುಕು ಬದಲಾಗುತ್ತದೆ. ಇಂದು ನಾನು ಏನೇ ಆಗಿದ್ದರೂ ಅದರ ಕ್ರೆಡಿಟ್‌  ಅವರಿಗೂ ಹೋಗುತ್ತದೆ. ಇಲ್ಲದಿದ್ದರೆ ನಾನು ಬಹಳ ನಾಚಿಕೆಯ ಸ್ವಭಾವದವಳು. ಇಷ್ಟೆಲ್ಲ ಸಾಧಿಸುವುದು ನನಗೆ ಬಹಳ ಕಷ್ಟವಾಗುತ್ತಿತ್ತು.

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ