ಮಾಸ್ಟರ್‌ಶೆಫ್‌ ಕೀರ್ತಿ ಭೌತಿಕಾ

ಕೇಕ್‌ ತಯಾರಿಸುವುದರಿಂದ ಶುರುವಾದ ಕೀರ್ತಿಯ ಕುಕಿಂಗ್‌ ಕಲೆ ನಿರಂತರವಾಗಿ ಹರಿದುಬಂದು, ಆಕೆಗೆ ಮಾಸ್ಟರ್‌ಶೆಫ್‌ ಪಟ್ಟ ಕೊಡಿಸಿದೆ. ಬನ್ನಿ, ಆಕೆ ಹೇಗೆ ಯಶಸ್ಸಿನ ಸೋಪಾನಗಳನ್ನೇರಿ ಶಿಖರ ತಲುಪಿದರೆಂದು ತಿಳಿಯೋಣ....!

`ಮಾಸ್ಟರ್‌ಶೆಫ್‌ ಸೀಸನ್‌-5'ರ ವಿಜೇತರೆನಿಸಿದ ಕೀರ್ತಿ ಭೌತಿಕಾ, ಕೋಲ್ಕತಾದ ಬಿರ್ಲಾ ಕಾಲೇಜಿನ ನ್ಯೂಟ್ರಿಶನ್‌ ಪದವೀಧರೆ. ಅಲ್ಲಿನ ಸಾಫ್ಟ್ ಲೇಕ್‌ ಎಂಬಲ್ಲಿ ಕೀರ್ತಿ ಒಂದು ಯಶಸ್ವೀ ಬೇಕರಿ ನಡೆಸುತ್ತಿದ್ದಾರೆ. ಇದನ್ನು ಬೇಕರಿ ಬದಲು ಕೇಕರಿ ಅನ್ನಿ ಅಂತಾರೆ ಕೀರ್ತಿ. ತಮ್ಮ ಶುಗರ್‌ ಪ್ಲಮ್ ಕೇಕರಿಯಿಂದ ಈ ಬೇಕರಿ ಆರಂಭಿಸಿದ ಕೀರ್ತಿ, `ಕೇಕರಿ' ಹೆಸರಿನಿಂದಲೇ ಅಪಾರ ಕೀರ್ತಿ ಗಳಿಸಿದ್ದಾರೆ. ಕಾಲೇಜಿನಲ್ಲಿ ಪದವಿ ಶಿಕ್ಷಣದ ಜೊತೆ ಜೊತೆಯಲ್ಲೇ ಕೀರ್ತಿ ಬೇಕರಿ ಶಾಪ್‌ನ್ನು ಚೆನ್ನಾಗಿ ನಡೆಸಿದರು. ಕಳೆದ ಹಲವಾರು ವರ್ಷಗಳಿಂದ ಕೀರ್ತಿಯ ವರ್ಕ್‌ ಶೆಡ್ಯೂಲ್‌ ಬಲು ವ್ಯವಸ್ಥಿತವೆಂದೇ ಹೇಳಬೇಕು. ಟೈಂ ಮ್ಯಾನೇಜ್‌ಮೆಂಟ್‌ನಿಂದ ಹಿಡಿದು ಬೇಕರಿ ಮ್ಯಾನೇಜ್‌ಮೆಂಟ್‌ವರೆಗೂ ಎಲ್ಲಾ ಕೆಲಸಗಳನ್ನೂ ಈಕೆ ಬಲು ಶ್ರದ್ಧೆಯಿಂದ ಗಮನಿಸಿಕೊಳ್ಳುತ್ತಾರೆ. ಈ ಕಾರಣದಿಂದಲೇ ಈಕೆಯ ಕೆಲಸ ಬೆಳಗ್ಗೆ 5 ರಿಂದ ಆರಂಭಗೊಂಡು, ರಾತ್ರಿ ಊಟ ಮುಗಿಸಿ ಮಲಗಲು ಹೊರಟಾಗ 1 ಗಂಟೆ ಆಗಿರುತ್ತದೆ.

ಕೀರ್ತಿ ತಮ್ಮ ಫೈನಲ್ ಡಿಶ್‌ನಿಂದ ಮಾಸ್ಟರ್‌ಶೆಫ್‌ನ ಜಡ್ಜ್ ಗಳಾದ ವಿಕಾಸ್‌ ಖನ್ನಾ, ಕುಣಾಲ್‌ ಕಪೂರ್‌, ಜೋರಾಬರ್‌ ಕಾವ್ಯಾರನ್ನು ಮೆಚ್ಚಿಸುವಲ್ಲಿ ಯಶಸ್ವಿಯಾದರು. ಕೀರ್ತಿ ಜೊತೆಗಿನ ಮಾತುಕಥೆಯ ಮುಖ್ಯಾಂಶಗಳು :

ಕುಕಿಂಗ್‌ ಕ್ಷೇತ್ರದಲ್ಲಿ ಮಾಸ್ಟರಿ ಸಾಧಿಸಬೇಕು. ಅದರಲ್ಲಿ ಭವಿಷ್ಯ ಕಾಣಬೇಕೆಂದು ಯಾವಾಗ ನಿರ್ಧರಿಸಿದಿರಿ?

ನಾನು 11ನೇ ತರಗತಿಯಲ್ಲಿ ಕಲಿಯುವಾಗಿನಿಂದಲೇ ನನಗೆ ಬೇಕಿಂಗ್‌ನಲ್ಲಿ ಅಪಾರ ಆಸಕ್ತಿ. ಕ್ಲಾಸ್‌ನಲ್ಲಿ ನಮಗೆ ಬೇಸಿಕ್‌ ಬೇಕಿಂಗ್‌ ಬಗ್ಗೆ ತಿಳಿಸಿದರು. ಮೊದಲ ಸಲ ಮಾಡಿದಾಗ ಕೇಕ್‌ ಖಂಡಿತಾ ಚೆನ್ನಾಗಿ ಬರಲಿಲ್ಲ. ಆಗಿನಿಂದ ನನ್ನ ಪ್ರಯತ್ನ ಮುಂದುವವರಿಯುತ್ತಲೇ ಇದೆ. ಹೇಗಾದರೂ ಇದನ್ನು ಕರಗತ ಮಾಡಿಕೊಳ್ಳಬೇಕೆಂಬುದೇ ನನ್ನ ಹಠ. ಹೀಗಾಗಿ ನಾನು ಟಿ.ವಿ., ಇಂಟರ್‌ನೆಟ್‌ಗಳಿಂದಲೂ ಕೇಕ್‌ ತಯಾರಿಕೆಯ ವಿವಿಧ ವಿಧಾನಗಳ ಕುರಿತು ತಿಳಿದುಕೊಂಡೆ. ನಾನು ಈ ಮಾಧ್ಯಮಗಳಿಂದ ಬಹಳಷ್ಟು ಕಲಿತುಕೊಂಡೆ. ಅಂತೂ ಕೊನೆಗೆ ಯಶಸ್ಸು ದೊರಕಿತು. ಉತ್ತಮ ಕೇಕ್‌ ಮಾಡುವುದನ್ನು ಬ್ಲ್ಯಾಕ್‌ ಫಾರೆಸ್ಟ್ ಕೇಕ್‌ ಮತ್ತು ಚಾಕಲೇಟ್‌ ಟ್ರಫ್‌ ಕೇಕ್‌ನಿಂದ ಆರಂಭಿಸಿದೆ. ಇದಾದ ಮೇಲೆ ನಾನು ನನ್ನ ಫ್ಯಾಮಿಲಿ, ಫ್ರೆಂಡ್ಸ್ ಗಾಗಿ ಆಗಾಗ ತರತರಹದ ಕೇಕ್‌ ತಯಾರಿಸತೊಡಗಿದೆ. ಅಲ್ಲಿಂದ ನನಗೆ ಹಿಂದಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಅಷ್ಟು ಹೊತ್ತಿಗೆ ನನಗೆ ಭವಿಷ್ಯದಲ್ಲಿ ಏನು ಮಾಡಬೇಕು ಎಂಬ ಸುಳಿವು ಸಿಕ್ಕಿತ್ತು! ಕುಕಿಂಗ್‌ನಲ್ಲಿ ನನಗೆ ಇಷ್ಟೊಂದು ಸಂತೋಷ ಸಿಗುತ್ತಿರುವಾಗ ಇದನ್ನೇ ನನ್ನ ಪ್ರೊಫೆಶನ್ ಆಗಿ ಏಕೆ ಮಾಡಿಕೊಳ್ಳಬಾರದು ಎನಿಸಿತು.

ಮಾಸ್ಟರ್‌ಶೆಫ್‌ ಜರ್ನಿ ಬಗ್ಗೆ ತಿಳಿಸಿ. ಯಾವಾಗ ನಿಮಗೆ ಬಹಳ ಹೆಮ್ಮೆ ಎನಿಸಿತು?

ಈ ಜರ್ನಿ ನಿಜಕ್ಕೂ ವಂಡರ್‌ಫುಲ್! ಪ್ರತಿ ಚಾಲೆಂಜ್‌ನಲ್ಲೂ ನಾನು ಹೊಸ ಹೊಸತನ್ನು ಕಲಿಯುತ್ತಿದ್ದೆ. ಈ ಶೋನ ಹಿರಿಮೆ ಎಂದರೆ ನಮ್ಮಂಥ ಸ್ಪರ್ಧಿಗಳು ಇಲ್ಲಿ ಪ್ರತಿದಿನ ಹೊಸ ಹೊಸ ವಿಷಯ ಕಲಿಯಬಹುದು. ಅಷ್ಟು ಮಾತ್ರವಲ್ಲ, ಬಹಳಷ್ಟು ಜನರ ಜೊತೆ ಬೆರೆತು ಚರ್ಚಿಸಿದೆ. ಅವರೆಲ್ಲ ವಿಶ್ವದ ವಿವಿಧ ಪ್ರಾಂತ್ಯಗಳಿಂದ ಬಂದವರು. ಶೋ ಕಾರಣ ವಿಶ್ವದ ನಾನಾ ಭಾಗಗಳನ್ನು ನೋಡುವಂತಾಯಿತು. ಈ ಶೋನಲ್ಲಿ ಭಾಗವಹಿಸಿದ ನಾವೆಲ್ಲರೂ ಒಂದು ದೊಡ್ಡ ಕುಟುಂಬದ ಸದಸ್ಯರಂತೆ ಭಾವಿಸುತ್ತಿದ್ದೆ. ನನ್ನ ಕುಟುಂಬದಿಂದ ದೂರವಾಗಿ ಬಹಳಷ್ಟು ದಿನ ಹೊರಗಿರಬೇಕಾದುದು ಇದೇ ಮೊದಲ ಸಲ, ಅದೂ ಹಲವಾರು ತಿಂಗಳುಗಳು! ನನಗೆ ಬಹಳಷ್ಟು ಮಂದಿ ಹೊಸ ಹೊಸ ಫ್ರೆಂಡ್ಸ್ ಸಿಕ್ಕಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ