ಶಾಲಾ ಬಾಲಕಿಯರಷ್ಟೇ ಅಲ್ಲ. ಶಾಲಾ ಬಾಲಕರೊಂದಿಗೂ ಹೆಚ್ಚುತ್ತಿರುವ ರೇಪ್ ಪ್ರಸಂಗಗಳು ಭಯ ಮತ್ತು ಆತಂಕದ ಪರಿಸ್ಥಿತಿ ತರುತ್ತಿವೆ. ಶಾಲಾ ಮಕ್ಕಳೊಂದಿಗೆ ಲೈಂಗಿಕ ಚಟುವಟಿಕೆಗಳು ಶತಮಾನಗಳಿಂದ ನಡೆದು ಬರುತ್ತಿವೆ. ಆದರೆ ಜನ ಸುಶಿಕ್ಷಿತರಾದಂತೆ, ಸಮಾಜದಲ್ಲಿ ಕಾನೂನಿನ ಭಯ ಹೆಚ್ಚಿದಂತೆ, ಪುರುಷರು ತಮ್ಮ ಮಿತಿಗಳನ್ನು ಅರ್ಥ ಮಾಡಿಕೊಂಡಾಗ ಈ ದುಷ್ಕೃತ್ಯಗಳು ನಡೆಯುವುದಿಲ್ಲ ಎಂಬ ಭರವಸೆ ಇತ್ತು. ಆದರೆ ಹಾಗಾಗುತ್ತಿಲ್ಲ. ಈಗ ಸಣ್ಣ ವಿಷಯಗಳೂ ಪ್ರಮುಖ ಸುದ್ದಿಯಾಗುತ್ತವೆ ಮತ್ತು ಭಯಭೀತ ವಾತಾವರಣ ಉಂಟುಮಾಡುತ್ತವೆ.
ಈಗ ಇಡೀ ವಿಶ್ವದಲ್ಲಿ ಸೆಕ್ಸ್ ವ್ಯವಹಾರವಾಗಲೀ ಛೇಡಿಸುವಿಕೆಯಾಗಲೀ, ಕಡಿಮೆಯಾಗುತ್ತಿಲ್ಲ. ಕಠಿಣ ಕಾನೂನುಗಳಿರುವ ದೇಶಗಳಲ್ಲೂ ಸಹ ಭೀಕರವಾಗಿ ತುಳಿತಕ್ಕೊಳಗಾಗುವ ಪ್ರಸಂಗಗಳು ನಡೆಯುತ್ತಿವೆ. ಇನ್ನು ಕಾನೂನಿನ ಬಗ್ಗೆ ಜಾಗರೂಕತೆಯಿಲ್ಲದ ಭಾರತದಂತಹ ದೇಶದಲ್ಲಿ ಪರಿಸ್ಥಿತಿ ದಯನೀಯವಾಗಿದೆ. ಆದರೂ ತಂದೆ ತಾಯಿಯರು ತಮ್ಮ ಹೆಣ್ಣು ಮಕ್ಕಳ ಮದುವೆಯನ್ನು 14 ವರ್ಷಕ್ಕೆ ಮಾಡಿ ಮುಗಿಸಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವ ಅನಿವಾರ್ಯತೆ ಉಂಟಾಗುತ್ತಿಲ್ಲ ಎಂದು ಹೇಳಬಹುದು.
ಸೆಕ್ಸ್ ಅಪರಾಧಗಳಿಗೆ ಒಂದು ಮುಖ್ಯ ಕಾರಣವಂತೂ ಪ್ರಾಕೃತಿಕವಾಗಿದೆ. ಆದರೆ ಪ್ರಕೃತಿಯಂತೂ ಪರಸ್ಪರ ಹೊಡೆದಾಡಲು, ಪರಸ್ಪರ ಮೇಲೆರಗುವ ಮತ್ತು ಪರಸ್ಪರರ ಮೇಲೆ ದಾಳಿ ಮಾಡುವುದನ್ನು ಕಲಿಸಿತ್ತು. ಮಾನವ ತನ್ನ ನೂರಾರು ವರ್ಷಗಳ ಇತಿಹಾಸದಲ್ಲಿ ಈ ಪ್ರವೃತ್ತಿಯ ಮೇಲೆ ವಿಜಯ ಸಾಧಿಸಿದ್ದಾನೆ. ಇಂದು ರಸ್ತೆಯಲ್ಲಿ ತಿಂಗಳುಗಟ್ಟಲೇ ದುಬಾರಿ ವಸ್ತು ಬಿದ್ದಿದ್ದರೂ ಯಾರೂ ಎತ್ತಿಕೊಳ್ಳುವುದಿಲ್ಲ. ರಸ್ತೆಗಳಲ್ಲಿ ನಗರಸಭೆಗಳ ಕಬ್ಬಿಣದ ಬೆಂಚು, ನೀರಿನ ಹ್ಯಾಂಡ್‌ಪಂಪ್, ಸಿಗ್ನಲ್, ಬ್ಯಾರಿಯರ್ ಇತ್ಯಾದಿ ಸುಲಭವಾಗಿ ಕಳ್ಳತನವಾಗುವುದಿಲ್ಲ. ಏಕೆಂದರೆ ಸಮಾಜ ಶಿಕ್ಷಣ ಕೊಟ್ಟಿದೆ. ಮನೆಯಿಂದ ಹೊರಹೋಗುವ ಪ್ರತಿ ಮಹಿಳೆಯೂ ಸುರಕ್ಷಿತಳೆಂದು ತಿಳಿಯುತ್ತಾಳೆ. ಅವಳ ಚೀರಾಟ ಅವಳನ್ನು ರಕ್ಷಿಸುತ್ತದೆ. ಏನಾದರೂ ಆಪತ್ತು ಸಂಭವಿಸಿದರೆ ಬಹಳಷ್ಟು ಸಂದರ್ಭಗಳಲ್ಲಿ ಅಪರಾಧಿಗಳನ್ನು ಹಿಡಿಯಲಾಗುತ್ತದೆ. ಪರಿಸ್ಥಿತಿ ಕೆಟ್ಟದಾಗಿದ್ದರೂ ಅಷ್ಟೊಂದು ಹದಗೆಟ್ಟಿಲ್ಲ.
ಶಾಲಾ ಮಕ್ಕಳ ವಿಷಯದಲ್ಲಿ ತಂದೆ ತಾಯಿ ಹಾಗೂ ಜನ ಸಾಮಾನ್ಯರು ನಿಶ್ಚಿಂತರಾಗಿದ್ದುಬಿಡುತ್ತಾರೆ ಮತ್ತು ಅವರು ಸುರಕ್ಷತೆಗೆ ಸಾಧಾರಣ ಉಪಾಯಗಳನ್ನೂ ಕೈಗೊಳ್ಳುವುದಿಲ್ಲ. ಇದೇ ಅವರ ದೊಡ್ಡ ತಪ್ಪು. ಸಣ್ಣ ಮಕ್ಕಳು, ಹುಡುಗ ಹುಡುಗಿಯರಿಬ್ಬರಿಗೂ ಪರಿಚಿತ, ಅಪರಿಚಿತ ವ್ಯಕ್ತಿಗಳ ಹಿಡಿತದಲ್ಲಿ ಸಿಕ್ಕಿಕೊಳ್ಳಬಾರದೆಂದು ಎಚ್ಚರಿಸುವುದು ಅಗತ್ಯ. ಪ್ರೀತಿ ಮತ್ತು ಕಾಮದ ಭಾವನೆಗಳ ವ್ಯತ್ಯಾಸ ತಿಳಿಸಬೇಕು. ಮಕ್ಕಳನ್ನು ಭಯಭೀತರನ್ನಾಗಿಸದೆ ತಮ್ಮನ್ನು ರಕ್ಷಿಸಿಕೊಳ್ಳುವುದನ್ನು ಕಲಿಸುವುದು ಅಗತ್ಯ. ಅದಕ್ಕಾಗಿ ಮಕ್ಕಳಿಗೆ ಶಿಕ್ಷಣ ಕೊಡುವ ಅಗತ್ಯವಿದ್ದರೆ ತಂದೆತಾಯಿಯರಿಗೂ ಶಿಕ್ಷಣ ಕೊಡುವ ಅಗತ್ಯವಿದೆ. ಇಬ್ಬರಿಗೂ ಕ್ಲಾಸ್ ತೆಗೆದುಕೊಳ್ಳಬೇಕು.
ಉದ್ಯೋಗಸ್ಥ ತಾಯಿತಂದೆಯರು ದುಪ್ಪಟ್ಟು ಎಚ್ಚರಿಕೆಯಿಂದಿರಬೇಕು. ಅವರು ತಮ್ಮ ಮನೆಯನ್ನು, ಏನೂ ತಿಳಿಯದ ಮುಗ್ಧ ಮಕ್ಕಳ ಮೇಲೆ ಬಿಟ್ಟುಹೋಗಬಾರದು. ತಮ್ಮ ಮಕ್ಕಳನ್ನೂ ಸೇರಿಸಿ ಒಂದು ಗ್ರೂಪ್ ಮಾಡಬೇಕು. 3-4 ಮಕ್ಕಳು ಸರತಿಯ ಪ್ರಕಾರ ಒಬ್ಬೊಬ್ಬರ ಮನೆಯಲ್ಲಿದ್ದು ಅಪ್ಪ ಅಮ್ಮ ಕೆಲಸದಿಂದ ಹಿಂದಿರುಗುವವರೆಗೆ ತಮ್ಮ ಹೋಂವರ್ಕ್ ಇತ್ಯಾದಿ ಮಾಡಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಪಾಲಿಸುವ ಸರಿಯಾದ ವಿಧಾನಗಳನ್ನು ತಿಳಿದುಕೊಳ್ಳಬೇಕು. ಮಕ್ಕಳೇ ಸ್ವತಃ ಕಲಿತುಕೊಳ್ಳುತ್ತಾರೆ ಎಂದುಕೊಳ್ಳಬಾರದು. ಸರ್ಕಾರಗಳು, ಕಾನೂನುಗಳು, ಪೊಲೀಸರು ಮತ್ತು ಸಂಸ್ಥೆಗಳನ್ನು ಹೆಚ್ಚು ಅಲಂಬಿಸುವುದೂ ತಪ್ಪು. ಮಕ್ಕಳ ವಿಷಯದಲ್ಲಿ ಸದಾ ಜಾಗರೂಕರಾಗಿರುವುದು ಅಗತ್ಯ.