ಇಲಿ ಎಂತಹ ಒಂದು ಸಾಮಾಜಿಕ ಜೀವಿಯಾಗಿದೆ ಎಂದರೆ, ಅದರ ಸೆನ್ಸ್ ಆಫ್‌ ಹ್ಯೂಮರ್‌ ಬಹಳ ಅದ್ಭುತವಾಗಿರುತ್ತದೆ. ಅವು ಇತರೆ ಇಲಿಗಳೊಂದಿಗೆ ಆಟವಾಡುವಾಗ ಇದು ಹೆಚ್ಚು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಲಿಗಳಲ್ಲಿ ಕರುಣೆಯ ಭಾವನೆ ಕೂಡ ಹೆಚ್ಚು.2 ಇಲಿಗಳಲ್ಲಿ ಒಂದು ಇಲಿಗೆ ಏಟಾಗಿದ್ದರೆ, ಮತ್ತೊಂದು ಇಲಿ ತನಗೆ ದೊರೆತ ಆಹಾರವನ್ನು ತಿನ್ನದೆ ಹಾಗೆಯೇ ಬಿಟ್ಟು ಉಪವಾಸ ಕುಳಿತುಕೊಳ್ಳಬಹುದು. ಇಲಿಗಳ ವರ್ತನೆ ಮನುಷ್ಯನ ವರ್ತನೆಗೆ ಹೋಲಿಕೆ ಎನಿಸಬಹುದು. ಆದರೆ ದೈಹಿಕವಾಗಿ ಅವು ಮನುಷ್ಯನನ್ನು ಯಾವುದೇ ರೀತಿಯಲ್ಲಿ ಹೋಲುವುದಿಲ್ಲ. ಇಲಿಗಳ ಮೇಲೆ ನಡೆಸಲಾದ ಸಂಶೋಧನೆಗಳು ಕೂಡ ಮನುಷ್ಯನ ಮೇಲೆ ವ್ಯವಹಾರಿಕವಾಗಿ ಅನ್ವಯಿಸುವುದಿಲ್ಲ.

ಒಂದು ಆಶ್ಚರ್ಯದ ಸಂಗತಿಯೆಂದರೆ, ವಿಶ್ವದಲ್ಲಿ ಒಂದೆಡೆ ಸಮಾಜ ಕರುಣೆಯತ್ತ ವಾಲುತ್ತಿದೆ. ಇನ್ನೊಂದೆಡೆ 1 ಕೋಟಿಗೂ ಹೆಚ್ಚು ಇಲಿಗಳ ಮಾರಣಹೋಮದ ಬಗ್ಗೆ ಯಾರೊಬ್ಬರೂ ಚಕಾರ ಎತ್ತುತ್ತಿಲ್ಲ. ಫಲಿತಾಂಶರಹಿತ ಸಂಶೋಧನೆಗಳಿಂದಾಗಿ ವಿಜ್ಞಾನಿಗಳ ಮುಖಾಂತರ ಇಲಿಗಳು ನಿರ್ದಯವಾಗಿ ಸಾವನ್ನಪ್ಪುತ್ತಲೇ ಇವೆ.

ವೈಜ್ಞಾನಿಕ ಸಂಶೋಧನೆಗಳಲ್ಲಿ ಶೇ. 60ಕ್ಕಿಂತ ಹೆಚ್ಚು ಔಟ್‌ಸೋರ್ಸ್‌ ಅಂದರೆ ಹೊರಗುತ್ತಿಗೆಯಿಂದ ಮಾಡಿಸಲ್ಪಡುವಂಥ. ಅದರಲ್ಲಿ ಶೇ.30ರಷ್ಟು ಸಂಶೋಧನೆಗಳು ಮರುಪ್ರಯತ್ನದ ಸಂಶೋಧನೆಗಳಾಗಿವೆ.

ಭಾರತದಲ್ಲಿ ಯಾವುದೇ ಒಂದು ಪ್ರಾಣಿಯ ಮೇಲೆ ಸಂಶೋಧನೆ ಮಾಡಲು ನಿರ್ಬಂಧವಿದೆ. ಇದಕ್ಕಾಗಿ ಭಾರತ ಸರ್ಕಾರ ಆರ್ಗನೈಜೇಶನ್‌ ಫಾರ್‌ ಎಕನಾಮಿಕ್‌ ಕೋಆಪರೇಷನ್‌ ಅಂಡ್‌ ಡೆವಲಪ್‌ಮೆಂಟ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಹೊರತಾಗಿಯೂ ನಮ್ಮ ಕೆಲವು ವಿಜ್ಞಾನಿಗಳು ಅಂತರರಾಷ್ಟ್ರೀಯ ಸಂಶೋಧನೆಗಳನ್ನು ಕಾರಣವಿಲ್ಲದೆಯೇ ಮರು ಪ್ರಯತ್ನ ಮಾಡುತ್ತಿರುತ್ತಾರೆ.

ಸಂಶೋಧನೆಗಳ ಮರು ಪ್ರಯತ್ನದಿಂದಾಗಿ ಅವರು ವ್ಯಸ್ತವಾಗಿರಲು ಏನಾದರೊಂದು ಅವಕಾಶ ಸಿಗುತ್ತಲೇ ಇರುತ್ತದೆ. ಏಕೆಂದರೆ ಅವರ ಇಂತಹ ಶೇ.5ರಷ್ಟು ಸಂಶೋಧನೆಗಳು ವೈದ್ಯಕೀಯ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಂಕ ಪಡೆದುಕೊಳ್ಳಲು ಕೂಡ ಮಾಡಬೇಕಾಗಿ ಬರುತ್ತದೆ. ಶೇ.5 ರಷ್ಟು ಸಂಶೋಧನೆಗಳು ಮಾತ್ರ ನಿರ್ದಿಷ್ಟ ಕಾರಣಗಳಿಗಾಗಿ ನಡೆಸಲಾಗುತ್ತದೆ. ಇದರಲ್ಲಿನ 0.1 ರಷ್ಟು ಸಂಶೋಧನೆಗಳು ಮಾತ್ರ ಫಲಿತಾಂಶ ಪಡೆಯುತ್ತವೆ. ಇಷ್ಟೆಲ್ಲಾ ಆದ ಬಳಿಕ ಇಲಿಗಳ ಮೇಲೆ ನಡೆಸಲಾದ ಪ್ರೋಗ್ರಾಂಗಳನ್ನು ಮನುಷ್ಯರ ಮೇಲೆ ನಡೆಸಲಾಗುವುದಿಲ್ಲ. ವಿಜ್ಞಾನಿಗಳು ತಮ್ಮ ಕೈಚಳಕ ತೋರಿಸಲು ಇಲಿಗಳ ಮೇಲೆ ಪ್ರಯೋಗ ನಡೆಸುತ್ತಾರೆ. ಏಕೆಂದರೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಸುಲಭವಾಗಿ ಹುದ್ದೆ  ದೊರಕಿಸಿಕೊಳ್ಳುವುದಾಗಿರುತ್ತದೆ.

ಮಿತಿ ಮೀರಿದ ಕ್ರೌರ್ಯ

ಪ್ರಯೋಗಕ್ಕಾಗಿ ಇಲಿಗಳನ್ನೇ ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಏನು ಕಾರಣವಿರಬಹುದು? ಅವು ಕ್ರೂರಿಗಳಲ್ಲ ಹಾಗೂ ಸುಲಭವಾಗಿ ತಮ್ಮ ಸಂತಾನ ವೃದ್ಧಿಸಿಕೊಳ್ಳುವಂಥವು ಆಗಿರುತ್ತವೆ ಎಂಬ ಕಾರಣಕ್ಕಾಗಿಯೇ? ಮನುಷ್ಯ ದೇಹದ ಕ್ಲಿಷ್ಟತೆ ಅರಿಯಲು ಈಗಾಗಲೇ 1 ಕೋಟಿಯಷ್ಟು ಇಲಿಗಳ ಜೀವವನ್ನು ಪಡೆದಿವೆ. ನಾವು ಹಿಟ್ಲರ್‌ನನ್ನೇ ಮಹಾಕ್ರೂರಿ ಎಂದು ಕರೆಯುತ್ತೇವೆ. ಇಲಿಗಳನ್ನು ಭಾರಿ ಪ್ರಮಾಣದಲ್ಲಿ ಸಂಹಾರ ಮಾಡುವುದರ ಮೂಲಕ ನಮ್ಮನ್ನು ನಾವು ಏನೆಂದು ಕರೆಯಿಸಿಕೊಳ್ಳಬಹುದು?

ಚಿಕ್ಕಚಿಕ್ಕ ಪ್ರಯೋಗಗಳ ಸಂದರ್ಭದಲ್ಲಿ ಎಂತೆಂಥ ಕ್ರೌರ್ಯ ಎಸಲಾಗುತ್ತದೆ ಎಂಬುದನ್ನು ಕೇಳಿ ನೀವು ಬೆಚ್ಚಿ ಬೀಳಬಹುದು.

– ಇಲಿಗಳಿಗೆ ವಿದ್ಯುತ್‌ ಶಾಕ್‌ ಕೊಡಲಾಗುತ್ತದೆ. ಎಷ್ಟರ ಮಟ್ಟಿಗೆ ಆಘಾತ ತಡೆದುಕೊಳ್ಳಲು ಸಾಧ್ಯ ಎಂಬುದನ್ನು ಪರೀಕ್ಷಿಸಲಾಗುತ್ತದೆ.

– ಶಸ್ತ್ರಚಿಕಿತ್ಸೆಗೆ ಸಂಬಂಧಪಟ್ಟ ಸಂಶೋಧನೆಗಳ ಸಂದರ್ಭದಲ್ಲಿ ಇಲಿಗಳ ದೇಹವನ್ನು ವಿಕೃತಗೊಳಿಸಲಾಗುತ್ತದೆ. ಹೀಗೆ ಮಾಡಲು ಕಾರಣ ಕೆಲವು ವಿಶಿಷ್ಟ ಅಂಗಗಳ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯಿಸುತ್ತವೆ ಎಂಬುದನ್ನು ತಿಳಿದುಕೊಳ್ಳಲು.

– ಕೆಲವು ವಿಶೇಷ ಸಂಶೋಧನೆಗಳಲ್ಲಿ ಅದರ ದೇಹದಲ್ಲಿ ಕೊಕೇನ್‌ನಿಂದ ಹಿಡಿದು ಮೆಥಾಮೆಟಾಮೈನ್‌ನಂತಹ ಡ್ರಗ್ಸ್ ನ್ನು ಪಂಪ್‌ ಮಾಡಲಾಗುತ್ತದೆ.

– ಕ್ಯಾನ್ಸರ್‌ ಇರುವ ಗೆಡ್ಡೆಗಳು ಹಾಗೂ ಮಾನವ ದೇಹದ ಜೀವಕೋಶಗಳನ್ನು ಇಲಿಗಳ ದೇಹದಲ್ಲಿ ಸೇರಿಸಲಾಗುತ್ತದೆ. ಏಕೆಂದರೆ ಆನುವಂಶಿಕ ಸಂಶೋಧನೆಗಳ ಪರಿಣಾಮ ಏನೆಂದು ತಿಳಿಯಲು ಸಾಧ್ಯವಾಗಬೇಕು.

– ಅದರ ತಲೆಬುರುಡೆಯನ್ನು ಛಿದ್ರ ಮಾಡಲಾಗುತ್ತದೆ. ಅದರಲ್ಲಿ ಒಂದು ವಿಶಿಷ್ಟ ಬಗೆಯ ರಾಸಾಯನಿಕ ದ್ರವವನ್ನು ಸುರಿಯಲಾಗುತ್ತದೆ. ಏಕೆಂದರೆ ಮೆದುಳಿನಲ್ಲಿ ನಡೆಯುವ ತೀವ್ರ ಪ್ರಕ್ರಿಯೆಗಳನ್ನು ಅರಿಯಲು ಸಾಧ್ಯವಾಗಬೇಕು.

– ನಿರ್ದಯತೆ ಇಲ್ಲಿಗೇ ಕೊನೆಗೊಳ್ಳುವುದಿಲ್ಲ. ಪ್ರಯೋಗಗಳಲ್ಲಿ ಅವನ್ನು ಬಳಸಿಕೊಂಡು ಹಾಗೆಯೇ ಎಲ್ಲೆಂದರಲ್ಲಿ ಬಿಸಾಡುತ್ತಾರೆ.

ನಿರ್ದಯಿ ಸಂಶೋಧನೆ

ಔದ್ಯೋಗಿಕ ಕಂಪನಿಗಳಲ್ಲಿ ಇಲಿಗಳನ್ನು ಸಾಕಲಾಗುತ್ತದೆ. ಹೀಗೆ ಸಾಕಲು ಮುಖ್ಯ ಕಾರಣ ದೇಹವನ್ನು ದುರ್ಬಲಗೊಳಿಸುವ ರೋಗಗಳಾದ ಕ್ಯಾನ್ಸರ್‌ನ ಟ್ಯೂಮರ್‌, ಬೊಜ್ಜು, ಪೆರಾಲಿಸಿಸ್‌, ಒತ್ತಡಮುಕ್ತ ಇಮ್ಯೂನ್‌ ಸಿಸ್ಟಮ್ ಮತ್ತು ಖಿನ್ನತೆಗೆ ಸಂಬಂಧಪಟ್ಟ ಸಂಶೋಧನೆಗಳಿಂದ ಒಂದು ನಿರ್ಣಾಯಕ ಫಲಿತಾಂಶ ಕಂಡುಕೊಳ್ಳುವುದಾಗಿದೆ. ಇಷ್ಟೇ ಅಲ್ಲ, ಈ ಇಲಿಗಳನ್ನು ಇಡೀ ವಿಶ್ವದ ಪ್ರಯೋಗ ಶಾಲೆಗಳಿಗೆ ಕಳಿಸಲಾಗುತ್ತದೆ. ಈ ಮುಗ್ಧ ಜೀವಿಗಳ ಮೇಲೆ ನಡೆಸಲಾಗುವ ಪ್ರಯೋಗಗಳು ಎಷ್ಟೊಂದು ನಿರ್ದಯದಿಂದ ಕೂಡಿರುತ್ತವೆ ಎಂದರೆ ಆ ಕಾರ್ಯಾಚರಣೆ ನಡೆಸುವವರ ಬಗ್ಗೆ ನನಗೆ ಬಹಳ ನಿರಾಶೆಯಾಗುತ್ತದೆ. ನನಗೆ ಈ ಸಂಶೋಧಕರು ಹಾಗೂ ಬಾಂಬ್‌ ತಯಾರಿಸುವರು, ಅದನ್ನು ಭೂಗತ ರೀತಿಯಲ್ಲಿ ಅಡಗಿಸಿಡುವವರ ನಡುವೆ ಯಾವುದೇ ರೀತಿಯಲ್ಲಿ ವ್ಯತ್ಯಾಸ ಗೋಚರಿಸುವುದಿಲ್ಲ. ಬಾಂಬ್‌ ಹುದುಗಿಸಿ ಇಡುವವರು ಮುಗ್ಧ ಜನರ ಪ್ರಾಣ ತೆಗೆಯುತ್ತಾರೆ. ಅದೇ ರೀತಿ ಈ ವಿಜ್ಞಾನಿಗಳು ಮುಗ್ಧ ಪ್ರಾಣಿಗಳಿಗೆ ಹಿಂಸೆ ಕೊಟ್ಟು ಕೊಳಕು ನೀರಿನಲ್ಲಿ ಬಿಟ್ಟುಬಿಡುತ್ತಾರೆ. ಅಲ್ಲಿ ಅವು ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಿರುತ್ತವೆ. ಈ ತೆರನಾದ ಸಂಶೋಧನೆಗಳನ್ನು ತಿಳಿವಳಿಕೆಯ ಮಟ್ಟವನ್ನು ಪರೀಕ್ಷಿಸಲು ಕೈಗೊಳ್ಳಲಾಗುತ್ತದೆ.

ಈ ತೆರನಾದ ಸಂಶೋಧನೆಗಳಿಂದ ನಾನು ಪರಿಪೂರ್ಣವಾಗಿ ವಿಫಲನಾಗ್ತೀನಿ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ನಾನು ಅಷ್ಟೇ ಏಕೆ, ಆ ಜಾಗದಲ್ಲಿ ಬೇರೆ ಯಾರೇ ಇದ್ದರೂ ಅಷ್ಟೇ. ಆದಾಗ್ಯೂ ಈ ತೆರನಾದ ಸಂಶೋಧನೆ ನಡೆಸುವವರು ತಿಳಿವಳಿಕೆಯುಳ್ಳವರೊ ಅಥವಾ ಮೂರ್ಖರೋ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ?

ಇಲಿಗಳನ್ನು 131 ಡಿಗ್ರಿ ಫ್ಯಾರನ್‌ಹೀಟ್‌ನ ಬಿಸಿ ಪ್ಲೇಟ್‌ ಮೇಲೆ ಇರಿಸಲಾಗುತ್ತದೆ. ಹೀಗೆ ಮಾಡಲು ಕಾರಣ ನೋವಿನ ಅನುಭೂತಿ ಉಂಟಾದ ಬಳಿಕ ಅದು ಕೂಗಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ಯಾವುದೇ ನೋವು ನಿವಾರಕಗಳನ್ನು ಕೊಡದೆ ಅವುಗಳ ಬಾಲವನ್ನು ಕತ್ತರಿಸಿ ಹಾಕಲಾಗುತ್ತದೆ. ಇಲಿಗಳಿಗೆ ಮಾಡಲಾಗುವ ಹೆಚ್ಚಿನ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅನಸ್ಥೆಟಿಕ್‌ ಡೋಸ್‌ ಕೊಡುವುದೇ ಇಲ್ಲ. ಶಸ್ತ್ರಚಿಕಿತ್ಸೆಯ ಬಳಿಕ ನೋವು ಕಡಿಮೆ ಮಾಡುವ ಯಾವುದೇ ಔಷಧಿ ಕೊಡಲಾಗುವುದಿಲ್ಲ. ಸಂಶೋಧನೆಯ ಸಂದರ್ಭದಲ್ಲಿ ಬಹಳಷ್ಟು ಇಲಿಗಳು ಬೆಂದು ಹೋಗುತ್ತವೆ. ಅವುಗಳಿಗೆ ಅತೀ ಆಘಾತ ಉಂಟಾಗುತ್ತದೆ. ಅವುಗಳಿಗೆ ವಿಷ ಸಹ ಕುಡಿಸಬಹುದು. ಅಷ್ಟೇ ಅಲ್ಲ, ಅವುಗಳಿಗೆ ಯಾವುದೇ ಆಹಾರ ಕೊಡದೆ ಉಪವಾಸ ಇಡಲಾಗುತ್ತದೆ. ಈ ಎಲ್ಲ ಕಾರಣಗಳಿಂದ ಅವುಗಳ ಮೆದುಳು ಅಸ್ತವ್ಯಸ್ತಗೊಳ್ಳುತ್ತದೆ.

ಯಾವುದೇ ಪ್ರಯೋಗ ಅದು ಎಷ್ಟೇ ಆಕ್ರಂದನಕಾರಕ ಆಗಿರಬಹುದು ಅದು ನಿಷಿದ್ಧವಲ್ಲ. ಅವುಗಳಿಗೆ ನೋವು ನಿವಾರಣೆಗಳನ್ನು ಕೊಡಬೇಕೆನ್ನುವುದನ್ನು ಅಗತ್ಯ ಎಂದು ಪರಿಗಣಿಸಲಾಗುತ್ತದೆ.

ಪ್ರಯೋಗ ಶಾಲೆಗಳ ಒಳ ಭಾಗದಲ್ಲಿನ ವಿಡಿಯೋ ಫುಟೇಜ್‌ಗಳನ್ನು ನೋಡಿದಾಗ, ತಿಳಿದುಬರುವ ಸಂಗತಿಯೆಂದರೆ, ಬೋನಿನಲ್ಲಿ ಬಂಧಿಯಾಗಿರುವ ಇಲಿಗಳು ಸಾಕಷ್ಟು ಭಯಭೀತಗೊಂಡಿರುತ್ತವೆ. ಅವುಗಳನ್ನು ಇರಿಸಲಾಗಿರುವ ಬೋನಿನ ಸಮೀಪದಿಂದ ಯಾರಾದರೂ ಹೋದರೆ ಅವು ಒಮ್ಮೆಲೆ ಮುದುರಿಕೊಳ್ಳುತ್ತವೆ. ತಮ್ಮಲ್ಲಿ ಯಾರಾದರೊಬ್ಬರನ್ನು ವಿದ್ಯುತ್‌ ಶಾಕ್‌ ಕೊಡಲು, ನೋವುಕಾರಕ ಪ್ರಕ್ರಿಯೆಯ ಕಡೆ ಎಳೆದೊಯ್ಯುತ್ತಾರೆ ಎಂಬುದು ಗೊತ್ತೇ ಆಗುವುದಿಲ್ಲ. ಅವುಗಳ ಕಣ್ಣೆದುರಿನಲ್ಲಿಯೇ ತಮ್ಮ ಜೊತೆಗಾರ ಸಾಯುವುದನ್ನು ಕಣ್ಣಾರೆ ನೋಡುತ್ತವೆ.

3 ಪ್ರಯೋಗಗಳು, ಹಲವು ಪ್ರಾಣಿಗಳು

ಈ 3 ಪ್ರಯೋಗಗಳನ್ನು ಪ್ರತಿವರ್ಷ ಹಲವು ಪ್ರಾಣಿಗಳ ಮೇಲೆ ನಡೆಸಲಾಗುತ್ತದೆ.

ಕಣ್ಣುಗಳ ಪರೀಕ್ಷೆ : ಐ ಇರಿಟೆನ್ಸಿ ಅಥವಾ ಡ್ರೆಜ್‌ ಟೆಸ್ಟ್ ಸಂದರ್ಭದಲ್ಲಿ ಪ್ರಾಣಿಗಳ ಕಣ್ಣುಗಳಲ್ಲಿ ಒಂದು ಬಗೆಯ ದ್ರವವನ್ನು ಒತ್ತಾಯ ಪೂರ್ವಕವಾಗಿ ಹಾಕಲಾಗುತ್ತದೆ. ಅನಸ್ಥೇಶಿಯಾ ಹಾಗೂ ನೋವು ನಿವಾರಕಗಳನ್ನು ಉಪಯೋಗಿಸದೆಯೇ ಆ ದ್ರವವನ್ನು ಕಣ್ಣಿಗೆ ಹಾಕುವುದರಿಂದ ಪ್ರಾಣಿಗಳು ನೋವಿನಿಂದ ಅದೆಷ್ಟು ಒದ್ದಾಡುತ್ತವೆ ಎಂದರೆ, ಒಮ್ಮೊಮ್ಮೆ ಅವುಗಳ ಬೆನ್ನು ಮೂಳೆ ಸಹ ಮುರಿದುಹೋಗುತ್ತದೆ. ಕೆಲವು ಪ್ರಾಣಿಗಳಂತೂ ನೋವಿನಿಂದ ನರಳಿ ಸತ್ತೇ ಹೋಗುತ್ತವೆ.

ಸ್ಕಿನ್‌ ಟೆಸ್ಟ್ : ತ್ವಚೆಯ ಮೇಲೆ ಉಂಟಾಗುವ ಪ್ರತಿಕ್ರಿಯೆಗಳನ್ನು ಅರಿತುಕೊಳ್ಳಲು ಪ್ರಾಣಿಗಳ ತ್ವಚೆಯ ಸೂಕ್ಷ್ಮ ಭಾಗದಲ್ಲಿ ಅಪಾಯಕಾರಿ ರಾಸಾಯನಿಕವನ್ನು ಬಳಸಲಾಗುತ್ತದೆ. ಇಂತಹದರಲ್ಲಿ ಅವುಗಳ ದೇಹದ ಭಾಗದಲ್ಲಿ ಗಾಯದಿಂದ ರಕ್ತ ಒಸರುವುದೂ ಸಾಮಾನ್ಯವಾಗುತ್ತದೆ.

ಓವರ್‌ ಟಾಕ್ಸಿಟಿ : ಈ ಟೆಸ್ಟ್ ಸಂದರ್ಭದಲ್ಲಿ ಆರೋಗ್ಯವಂತ ಪ್ರಾಣಿಗೆ ಎಲ್ಡಿ 50 ರಸಾಯನವನ್ನು 14 ರಿಂದ 20 ದಿನಗಳವರೆಗೆ ಒತ್ತಾಯಪೂರ್ವಕವಾಗಿ ಕೊಡಲಾಗುತ್ತದೆ. ಈ ಪ್ರಕ್ರಿಯೆ ಪ್ರಾಣಿಗಳ ಸಾವು ಸಂಭವಿಸುವ ತನಕ ನಡೆಯುತ್ತಲೇ ಇರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಇಲಿಗಳು ಹಾಗೂ ಕೆಲವು ಪ್ರಕಾರದ ಪಕ್ಷಿಗಳ ಮೇಲೆ ನಡೆಸಲಾಗುವ ಪರೀಕ್ಷೆಗಳು ಆ `3ಆರ್‌’ನ ಭಾಗವಾಗಿಲ್ಲ. ಅವು ಜಗತ್ತಿನಾದ್ಯಂತದ ವಿಜ್ಞಾನಿಗಳನ್ನು ಒಂದುಗೂಡಿಸುತ್ತವೆ. `3 ಆರ್‌’ ಅಂದರೆ ರೀಪ್ಲೇಸ್‌ಮೆಂಟ್‌, ರಿಡಕ್ಷನ್‌ ಮತ್ತು ರಿಫೈನ್‌ಮೆಂಟ್‌ ಎಂದರ್ಥ. ರೀಪ್ಲೇಸ್‌ಮೆಂಟ್‌ ಅಂದರೆ ಸಂಶೋಧನೆಗಾಗಿ ಪ್ರಾಣಿಗಳ ಬದಲು ಕಂಪ್ಯೂಟರ್‌ನಿಂದ ಸೃಷ್ಟಿಸಲ್ಪಟ್ಟ ಅವುಗಳ ಪ್ರತಿಕೃತಿಗಳ ಮೇಲೆ ಆಗಬೇಕು. ರಿಡಕ್ಷನ್‌ ಅಂದರೆ ಸಂಶೋಧನೆಗಾಗಿ ಆದಷ್ಟು ಕಡಿಮೆ ಪ್ರಾಣಿಗಳನ್ನು ಬಳಸಬೇಕು. ರಿಫೈನ್‌ಮೆಂಟ್‌ ಅಂದರೆ ಸಂಶೋಧನೆಯ ವಿಧಾನಗಳು ಆದಷ್ಟೂ ಕಡಿಮೆ ನೋವು ಕಾರಕವಾಗಿರಬೇಕು.

ಯಾವುದೇ ವಿಜ್ಞಾನಿ ಸಂಶೋಧನೆ ನಡೆಸುವ ಸಿದ್ಧತೆ ಮಾಡುವ ಮುನ್ನ ಇಂಟರ್ನ್‌ ಓವರ್‌ಸೈಟ್‌ ಕಮಿಟಿಯಿಂದ `3 ಆರ್‌’ ಮಾನದಂಡಗಳ ಪ್ರಕಾರ ಅನುಮತಿ ಪಡೆಯಬೇಕಾಗುತ್ತದೆ. ವಾಸ್ತವದಲ್ಲಿ ಇಂತಹ ಯಾವುದೇ ನಿಯಮಗಳು ಸಂಶೋಧನೆಯ ಸಂದರ್ಭದಲ್ಲಿ ಇಲಿಗಳ ಮೇಲೆ, ಇತರೆ ಕೆಲವು ಪ್ರಾಣಿಗಳ ಮೇಲೆ ಅನ್ವಯಿಸುವುದಿಲ್ಲ. ಸಂಶೋಧನೆಯ ಸಂದರ್ಭದಲ್ಲಿ ವಿಜ್ಞಾನಿ ಪ್ರಾಣಿಯ ಮೇಲೆ ಕಾರಣವಿಲ್ಲದೆಯೇ ಎಷ್ಟೇ ಕ್ರೌರ್ಯ ಎಸಗಿದರೂ ಯಾವುದೇ ತಪ್ಪು ಅಥವಾ ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ. ಇಲ್ಲಿ ಕೆಲವು ಉದಾಹರಣೆಗಳನ್ನು ಕೊಡಲಾಗಿದೆ. ಸಾವಿರಾರು ಮರಿ ಇಲಿಗಳ ಮೇಲೆ ಪ್ರಯೋಗ ಮಾಡಿ ಒಂದು ನಿಷ್ಕರ್ಷೆಗೆ ಬರಲಾಗಿದೆ.

ಆರ್ಥರೈಟಿಸ್‌ ಟೆಸ್ಟ್ : ಔಷಧಿಗಳ ಪ್ರಯೋಗಗಳಿಂದ ಇಲಿಗಳಲ್ಲಿ ಉಂಟಾಗುವ ಸಮಸ್ಯೆ ವ್ಯಾಯಾಮದ ಪ್ರಕ್ರಿಯೆಯನ್ನು ಕಠಿಣಗೊಳಿಸುವ ಸಂಕೇತ ನೀಡುತ್ತವೆ.

ಈಗ ನೀವೇ ಯೋಚಿಸಿ, ತೆರಿಗೆ ಕಟ್ಟುವವರ ಹಣವನ್ನು ಈ ರೀತಿಯ ಸಂಶೋಧನೆಗಳಲ್ಲಿ ವಿನಿಯೋಗಿಸುವುದು ಎಷ್ಟರ ಮಟ್ಟಿಗೆ ಸರಿ?

ಇಲಿಗಳು ಕಹಿಯನ್ನು ಕೂಡ ತಿನ್ನುತ್ತವೆ. ಈ ಸಂಶೋಧನೆ ಮಾಡುವ ವಿಜ್ಞಾನಿಗಳು 10 ಇಲಿಗಳ ಕುತ್ತಿಗೆಯನ್ನು ಸೀಳಿ ಒಂದು ನರವನ್ನು ಕತ್ತರಿಸಿದರು. ಇದರ ಹೊರತಾಗಿ ಕಿವಿಯ ಪರದೆಯನ್ನು ಪಂಕ್ಚರ್‌ ಮಾಡಿ ನರವನ್ನು ಪ್ರತ್ಯೇಕಗೊಳಿಸಿದರು. ಆ ಬಳಿಕ ತಮ್ಮ ಕ್ರೂರತೆಯನ್ನು ಮರೆಮಾಚಲು ಈ ವಿಜ್ಞಾನಿಗಳು ವಿಜ್ಞಾನದ ಆಸರೆ ಪಡೆದುಕೊಂಡರು. ಏಕೆಂದರೆ ಸಂಶೋಧನೆಗಳಿಗೆ ಪೋಲಾಗುತ್ತಿರುವ ಹಣ ಹಾಗೂ ಪ್ರಾಣಿ ಹಿಂಸೆಯ ವಿರುದ್ಧ ಕೂಗೆಬ್ಬಿಸುವುರಿಂದ ಪಾರಾಗಲು ಮತ್ತು ಡಿಗ್ರಿ ಹಾಗೂ ಸಂಬಳ ಪಡೆಯುವುದೇ ಅವರ ಉದ್ದೇಶವಾಗಿರುತ್ತದೆ.

ನೈತಿಕವಾಗಿ ಈ ತೆರನಾದ ಕ್ರೂರತೆಯನ್ನು ಸಮರ್ಥಿಸಲಾಗದು. ಏಕೆಂದರೆ ಸಂಶೋಧನೆಯ ಸಂದರ್ಭದಲ್ಲಿ ಇಲಿಗಳು ಭಾರಿ ಆಕ್ರಂದನ ಮಾಡುತ್ತವೆ. ಹೆದರಿಕೆ ಮತ್ತು ಒತ್ತಡದಲ್ಲಿರುತ್ತವೆ.

ಭಾರತದಲ್ಲಿ ಸಿಪಿಸಿ

ಎಸ್‌ಇಎ ಪ್ರಾಣಿಗಳ ಮೇಲೆ ನಡೆಸಲಾಗುವ ಸಂಶೋಧನೆಗಳ ಮೇಲೆ ಕಣ್ಣಿಟ್ಟಿರುತ್ತದೆ. ಒಂದು ವಿಶ್ವವಿದ್ಯಾಲಯದ ಸಂಶೋಧಕರೊಬ್ಬರು ತಮ್ಮ ಸಂಶೋಧನೆ ಮುಗಿಸಲು 20 ವರ್ಷ ತೆಗೆದುಕೊಂಡರು.

ಈ ಸಂಶೋಧಕ ಒಂದು ನೀರಿನ ಟಬ್‌ನಲ್ಲಿ ನಟ್ಟ ನಡುವೆ ಒಂದು ಕಾರ್ಡನ್ನಿಟ್ಟರು. ಅದರ ಮೇಲೆ ಇಲಿಯನ್ನು ಕೂರಿಸಿದರು. ಸಾಕಷ್ಟು ಹೊತ್ತಿನ ಬಳಿಕ ಎದ್ದೇಳುವ ಸಾಮರ್ಥ್ಯ ಮುಗಿದಾಗ ಅದು ನೀರಿನಲ್ಲಿ ಮುಳುಗಿ ಸತ್ತುಹೋಯಿತು.

ನಮಗೆ ಇಂತಹ ಸಂಶೋಧಕರ ಅಗತ್ಯವಿದೆಯೇ?

– ಮೇನಕಾ ಗಾಂಧಿ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ