ಫ್ಯಾಷನ್ನಿನ ಓಟದಲ್ಲಿ ಸದಾ ಮುಂದಿರಲು ಹೆಂಗಸರು ತಮ್ಮ ಕೂದಲಿನ ಮೇಕ್‌ಓವರ್‌ ಮಾಡಿಸುವುದಕ್ಕೆ ಮುಂದಾಗುತ್ತಾರೆ. ಈ ಮೇಕ್‌ಓವರ್‌ ಹೇರ್‌ ಕಟಿಂಗ್‌, ಹೇರ್‌ ಕಲರಿಂಗ್‌, ಹೇರ್‌ ಸ್ಪಾ ಮೂಲಕ ನಡೆಯುತ್ತದೆ. ಆದರೆ ಎಷ್ಟೋ ಹೆಂಗಸರಿಗೆ ಈ ಮೇಕ್‌ಓವರ್‌ ಮಾಡಿಸುವುದು ಹೇಗೆ ಎಂಬ ಮಾಹಿತಿ ಇರುವುದಿಲ್ಲ. ಅಂದರೆ ಅವರ ಮುಖ ಚಹರೆಗೆ ಅನುಸಾರ ಎಂಥ ಬಣ್ಣ ಆರಿಸಿಕೊಳ್ಳಬೇಕು ಎಂಬುದು ಗೊತ್ತಾಗುವುದಿಲ್ಲ. ಹೇರ್‌ ಕಲರ್‌ ಮಾಡಿಸುವ ಮುನ್ನ ಯಾವ ವಿಷಯಗಳ ಬಗ್ಗೆ ಎಚ್ಚರಿಕೆ ವಹಿಸಬೇಕು, ಕೂದಲನ್ನು ಸದಾ ಯಂಗ್‌ ಎನರ್ಜಿಟಿಕ್‌ ಆಗಿಟ್ಟುಕೊಳ್ಳುವುದು ಹೇಗೆ ಎಂಬುದನ್ನು ಗಮನಿಸೋಣವೇ?

ಹೇರ್‌ ಕಲರ್‌ನಿಂದ ಮೇಕ್‌ ಓವರ್‌

ಇತ್ತೀಚೆಗೆ ಹೇರ್‌ ಕಲರ್‌ನ್ನು ಕೇವಲ ಗ್ರೇ ಯಾ ಲೈಟ್‌ ಹೇರ್‌ ಕಲರ್‌ ಮಾಡಲು ಮಾತ್ರ ಬಳಸುತ್ತಿಲ್ಲ, ಬದಲಿಗೆ ಕಂಪ್ಲೀಟ್‌ ಲುಕ್‌ ಚೇಂಜ್‌ ಮಾಡಲು ಸಹ ಬಳಸುತ್ತಾರೆ. ಇದರಲ್ಲಿ ಇಂದಿನ ಯುವಜನತೆ ಪೂರ್ತಿ ಕೂದಲಿಗೆ ಕಲರ್‌ ಮಾಡುವ ಬದಲು, ಅರ್ಧ ಭಾಗದಷ್ಟು ಅಥವಾ ಒಂದು ಸೈಡ್‌ ಮಾತ್ರ ಕಲರ್‌ ಮಾಡಿಸುತ್ತಾರೆ. ಇದನ್ನೇ ಹೈಲೈಟಿಂಗ್‌ ಎನ್ನುತ್ತಾರೆ. ಈ ಟೆಕ್ನಿಕ್‌ನಿಂದ ಕೂದಲಿಗೆ ಕೇವಲ ಸ್ಟೈಲಿಶ್‌ ಲುಕ್‌ ಸಿಗುವುದು ಮಾತ್ರವಲ್ಲ, ಅದರ ನೈಸರ್ಗಿಕ ಸೌಂದರ್ಯ ಹೆಚ್ಚುತ್ತದೆ. ಆದರೆ ಈ ನಿಟ್ಟಿನಲ್ಲಿ ತುಸು ನಿರ್ಲಕ್ಷ್ಯ ವಹಿಸಿದರೂ, ಕೂದಲಿಗೆ ಹಾನಿ ತಪ್ಪಿದ್ದಲ್ಲ.

ಹಾಗಿದ್ದರೆ ಕೂದಲಿಗೆ ಹಾನಿಯಾಗದಂತೆ ಹೇರ್‌ ಕಲರ್‌ ಮಾಡುವ ಅಥವಾ ಮಾಡಿಸುವ ಮುನ್ನ ವಹಿಸಬೇಕಾದ ಎಚ್ಚರಿಕೆಗಳೇನು?

– ಹೇರ್‌ ಕಲರ್‌ ಕೊಳ್ಳುವ ಮುನ್ನ ಕಲರ್‌ ಎಕ್ಸ್ ಪೈರಿ ಡೇಟ್‌ ಅಗತ್ಯ. ಗಮನಿಸಿ, ಇಲ್ಲದಿದ್ದರೆ ಕೂದಲಿಗೆ ಹಾನಿ ತಪ್ಪಿದ್ದಲ್ಲ.

– ಕೂದಲಿಗೆ ಕಲರ್‌ ಮಾಡಿಸುವ ಮುನ್ನ ಅಗತ್ಯವಾಗಿ ಅಲರ್ಜಿ ಟೆಸ್ಟ್ ಮಾಡಿಸಿ, ಏಕೆಂದರೆ ಎಷ್ಟೋ ಸಲ ಹಲವು ಬಣ್ಣಗಳು ಕೂದಲಿಗೆ ಹಾನಿ ಮಾಡುತ್ತವೆ. ಅಮೋನಿಯಾಯುಕ್ತ ಬಣ್ಣ ನಿಮಗೆ ಹೊಂದದಿದ್ದರೆ, ಪ್ರೋಟೀನ್‌ಯುಕ್ತ ಬಣ್ಣಗಳನ್ನೇ ಆರಿಸಿ. ಅಮೋನಿಯಾದಿಂದ ನೋವು, ಉರಿ, ಕಡಿತ, ಶುಷ್ಕತೆ ಕೂದಲು ಉದುರುವಿಕೆ ಮುಂತಾದ ಹಾನಿಗಳಾಗುತ್ತವೆ.

– ಪರ್ಮನೆಂಟ್‌ ಹೇರ್‌ ಕಲರ್ಸ್‌ ಕೂದಲಿಗೆ ಶಾಶ್ವತ ಬಣ್ಣ ಕೊಡಿಸಿದರೆ, ಟೆಂಪರರಿ ಹೇರ್‌ ಕಲರ್ಸ್‌ ಕೇವಲ 5-6 ವಾರ ಮಾತ್ರ ಉಳಿಯುತ್ತದೆ.

ಕೂದಲಿಗೆ ಬಣ್ಣ ಹಚ್ಚುವ ಮೊದಲು

ಶ್ಯಾಂಪೂನಿಂದ ಅದನ್ನು ಚೆನ್ನಾಗಿ  ತೊಳೆದು ಒಣಗಿಸಿ. ಕೂದಲನ್ನು ಡೀಟ್ಯಾಂಗ್‌ ಮಾಡುತ್ತಾ, ಬ್ರಶ್‌ಗೆ ಬಣ್ಣ ಹಚ್ಚಿಕೊಂಡು, ಮೊದಲು ಇಡೀ ಹೇರ್‌ಲೈನ್‌ಗೆ ಅದನ್ನು ಹಚ್ಚಿರಿ. ನಂತರ ಮಧ್ಯ ಭಾಗಕ್ಕೆ ಬಣ್ಣ ಹಚ್ಚಿರಿ. ಅದಾದ ಮೇಲೆ ಇಯರ್‌ ಟು ಇಯರ್‌ ಪಾರ್ಟಿಂಗ್‌ ಮಾಡಿ, ತೆಳುವಾದ ಎಳೆಗಳನ್ನು ಹಿಡಿದು ಬಣ್ಣ ಹಚ್ಚಿರಿ.

– ನೀವು ಕೂದಲಿಗೆ ಸ್ಟ್ರೇಟ್‌ನಿಂಗ್‌ ಯಾ ಪರ್ಮಿಂಗ್‌ ಮಾಡಿಸುವುದಿದ್ದರೆ, ಹೇರ್‌ ಕಲರ್‌ ಮಾಡಿಸುವ 15-20 ದಿನಗಳ ನಂತರವೇ ಮಾಡಿಸಬೇಕು. ಏಕೆಂದರೆ ಹೇರ್‌ ಟ್ರೀಟ್‌ಮೆಂಟ್‌  ಹೇರ್‌ ಕಲರಿಂಗ್‌ ಮಧ್ಯೆ ಸಮಯಾಂತರದ ಕೊರತೆಯಾದರೆ, ಅದರಿಂದ ಕೂದಲಿಗೆ ಹಾನಿ ತಪ್ಪಿದ್ದಲ್ಲ.

– ಇಡೀ ಕೂದಲಿಗೆ ಕಲರಿಂಗ್‌ ಮಾಡಿಸದಿದ್ದರೆ, 6 ವಾರಗಳಲ್ಲಿ ರೂಟ್‌ ಟಚ್‌ ಅಪ್‌ ಮಾಡಿಸುತ್ತಿರಬೇಕು. ಇಲ್ಲದಿದ್ದರೆ ರೂಟ್‌ನಿಂದ ಬರುವ ಕೂದಲು ಈಗಾಗಲೇ ಬಣ್ಣ ಉಳಿದಿರುವ ನಿಮ್ಮ ಕೂದಲಿಗೆ ಮ್ಯಾಚ್‌ ಆಗುವುದಿಲ್ಲ. ಕಲರ್‌ ಹೆಚ್ಚು ದಿನ ಉಳಿಯಬೇಕೆಂದರೆ ಆದಷ್ಟೂ ಡಾರ್ಕ್‌ ಕಲರ್ಸ್‌ ಆರಿಸಿ.

– ಕಲರ್‌ ಮಾಡಿಸಿದ ನಂತರ ತಿಂಗಳಿಗೊಮ್ಮೆ ಹೇರ್‌ ಸ್ಪಾ ಅಗತ್ಯ ಮಾಡಿಸಿ. ಸ್ಪಾದಿಂದ ಕೂದಲಿಗೆ ಹೆಚ್ಚಿನ ಪೋಷಣೆ ಸಿಗುತ್ತದೆ, ಸ್ಕಾಲ್ಪ್ ನ ಕಂಡೀಶನಿಂಗ್‌ ಸುಧಾರಿಸುತ್ತದೆ.

– ಬಿರು ಬಿಸಿಲು ಹೇರ್‌ ಕಲರ್‌ನ್ನು ತೆಳು ಮಾಡುತ್ತದೆ. ಹೀಗಾಗಿ ಕಲರಿಂಗ್‌ ಆದ ನಂತರ ಹೊರಗೆ ಹೋಗುವಾಗೆಲ್ಲ ಛತ್ರಿ ಅಥವಾ ಕ್ಯಾಪ್‌ ಇರಲಿ.

– ಕಲರಿಂಗ್‌ ಮಾಡಿಸುವ 4-5 ತಿಂಗಳ ಮುಂಚಿನಿಂದಲೇ  ತಲೆಗೂದಲಿಗೆ ಮೆಹಂದಿ ಹಾಕಿಸಬಾರದು, ಇಲ್ಲದಿದ್ದರೆ ಕೂದಲಿಗೆ ಕಲರ್‌ ಮೆತ್ತುವುದೇ ಇಲ್ಲ. ಬದಲಿಗೆ ಮೆಹಂದಿ ಬಣ್ಣ ಹಾಗೂ ನಿಮ್ಮಿಷ್ಟದ ಬಣ್ಣ ಬೆರೆತು ಇನ್ನೇನೋ ಅವಾಂತರ ಆದರೂ ಆಶ್ಚರ್ಯವಿಲ್ಲ.

– ಕಲರಿಂಗ್‌ಗೆ ಮುಂಚೆ ಸೀಳು ತುದಿಯ ಕೂದಲನ್ನು ಅಗತ್ಯ ಟ್ರಿಮ್ ಮಾಡಿಸಿ.

– ಕಲರಿಂಗ್‌ ನಂತರ ಆರ್ಡಿನರಿ ಬದಲು ಸನ್‌ಸ್ಕ್ರೀನ್‌ಯುಕ್ತ ಶ್ಯಾಂಪೂವನ್ನೇ ಬಳಸಬೇಕು. ಆಗ ಕೂದಲು ಬಿಸಿಲಲ್ಲಿ ಮಾಸುವುದಿಲ್ಲ.

– ಕಲರಿಂಗ್‌ ನಂತರ ಕೂದಲಿಗೆ ಹೇರ್‌ ಗ್ಲಾಸ್‌ ಅಳವಡಿಸಿ. ಹೀಗೆ ಮಾಡುವುದರಿಂದ ಕಲರ್‌ನ ಆಯುಷ್ಯ ಹೆಚ್ಚುತ್ತದೆ.

– ನೀವು ನ್ಯಾಚುರಲ್ ಹೇರ್‌ ಕಲರ್‌ನ್ನೇ  ಬಯಸಿದರೆ ಆಗ ನೀವು ನಿಮ್ಮ ಹೇರ್‌ ಕಲರ್‌ಗೆ ಹತ್ತಿರದ ಶೇಡ್‌ನ್ನೇ ಆರಿಸಬೇಕು. ಉದಾ : ನಿಮ್ಮ ಕೂದಲಿನ ಬಣ್ಣ ತುಸು ಬ್ರೌನ್‌ ಆಗಿದ್ದರೆ, ನೀವು ಬ್ರೌನ್‌ ಬಣ್ಣದ ಡಾರ್ಕ್‌/ಲೈಟ್‌ ಶೇಡ್ಸ್ ಆರಿಸಬೇಕು.

– ತ್ವಚೆ ಮತ್ತು ಕಂಗಳ ಬಣ್ಣದ ಅನುಸಾರ, ಹೇರ್‌ ಕಲರ್‌ ಬಳಸಿರಿ. ಫೇರ್‌ ಕಲರ್ಸ್‌ ಆದ ಕಾಪರ್‌, ಬರ್ಗೆಂಡಿ, ಗೋಲ್ಡನ್‌ ಕಲರ್ಸ್‌ ಆರಿಸಿ. ಪಿಂಕಿಶ್‌ ಟೋನಿನ ಆ್ಯಶ್‌ ಟೋನ್‌ ಬಳಸಿ ನೋಡಿ. ರೆಡ್‌ ಗೋಲ್ಡನ್‌ ಕಲರ್ಸ್‌ ಆರಿಸಬೇಡಿ. ನಿಮ್ಮ ಕಂಗಳ ಬಣ್ಣ ಬ್ರೌನ್‌, ಗ್ರೀನ್‌ ಆಗಿದ್ದರೆ, ಅಂಥವರು ಮಾತ್ರ ಗೋಲ್ಡನ್‌ ಯಾ ರೆಡ್‌ ಆರಿಸಬೇಕು. ಅದೇ ನೀಲಿ ಗ್ರೇ ಕಂಗಳವರು ಗೋಲ್ಡನ್‌ ಯಾ ಆ್ಯಶ್‌ ಕಲರ್‌ ಆರಿಸಿ.

ಹೆಲ್ದಿ ಕೂದಲಿಗಾಗಿ ಹೇರ್‌ ಸ್ಪಾ

ತ್ವಚೆಯ ತರಹವೇ ಕೂದಲೂ ಸಹ ಪರಿಸರ ಮಾಲಿನ್ಯ, ಸ್ಟ್ರೆಸ್‌, ಕೆಮಿಕಲ್ಸ್ ನಿಂದ ಪ್ರಭಾವಿತಗೊಳ್ಳುತ್ತದೆ. ಇದರಿಂದ ಅದು ಬೇಗ ಶುಷ್ಕತೆಗೆ ಒಳಗಾಗುತ್ತದೆ, ಡ್ಯಾಂಡ್ರಫ್‌ ಹೆಚ್ಚುತ್ತದೆ, ಕೂದಲು ಉದುರಲೂಬಹುದು. ಹೀಗಾಗಿ ನಿರ್ಜೀವ ಶುಷ್ಕ ಕೂದಲನ್ನು ಹೊಳೆ ಹೊಳೆಯುವಂತೆ ಶಕ್ತಿಯುತ ಮಾಡಲು ಹೇರ್‌ ಸ್ಪಾಗಿಂತ ಉತ್ತಮ ವಿಧಾನ ಬೇರೊಂದಿಲ್ಲ. ಹೇರ್‌ ಸ್ಪಾ ಕೇವಲ ಕೂದಲಿನ ಆರೋಗ್ಯ ಸುಧಾರಿಸುವುದು ಮಾತ್ರವಲ್ಲ, ಇದು ಆಯಾ ಋತುಮಾನದ ಸಮಸ್ಯೆಗಳಿಂದಲೂ ಕೂದಲನ್ನು ರಕ್ಷಿಸುತ್ತದೆ. ಮಳೆಗಾಲ ಕೂದಲನ್ನು ಜಿಡ್ಡು ಜಿಡ್ಡು ಹಾಗೂ ಅಂಟಂಟು ಮಾಡುತ್ತದೆ, ಅದೇ ಚಳಿಗಾಲ ಕೂದಲನ್ನು ಒರಟು ಹಾಗೂ ಡ್ರೈ ಆಗಿಸುತ್ತದೆ. ಹೀಗಿರುವಾಗ ಈ ಸಂದರ್ಭದಲ್ಲಿ ಕೂದಲಿನ ಪ್ರಾಕೃತಿಕ ಸೌಂದರ್ಯ ಉಳಿಸಿಕೊಳ್ಳಲು ಹೇರ್‌ಸ್ಪಾ ಒಂದು ಉತ್ತಮ ವಿಧಾನ ಎನಿಸಿದೆ.

ಹೇರ್‌ ಸ್ಪಾ ಪ್ರಕ್ರಿಯೆ

ಹೇರ್‌ ಸ್ಪಾ ಮಾಡುವ ಮೊದಲು ಕೂದಲಿಗೆ ಶ್ಯಾಂಪೂ ಹಚ್ಚಬೇಕು. ಅದರ ನಂತರ ಕೂದಲಿಗೆ ಪೋಷಣೆ ಒದಗಿಸಲು, ಅದರ ಲೆಂಥ್‌ ಪೂರ್ತಿ ಎಣ್ಣೆ ಹಚ್ಚಬೇಕು. ಅಗತ್ಯವೆನಿಸಿದರೆ 2-3 ಬಗೆಯ ಎಣ್ಣೆ, ಅಂದರೆ ಆಲಿವ್, ಕೊಬ್ಬರಿ, ಬಾದಾಮಿ ಎಣ್ಣೆ ಬೆರೆಸಿ ಹಚ್ಚಬಹುದು. ನಂತರ 15-20 ನಿಮಿಷ ಮಸಾಜ್‌ ಮಾಡಿ. ಇದರಿಂದ ಕೂದಲಿನ ಬುಡ ಸಶಕ್ತಗೊಳ್ಳುತ್ತದೆ. ಆಗ ಕೂದಲಿನ ಶುಷ್ಕತೆ ದೂರವಾಗುತ್ತದೆ. ಇದಾದ ಮೇಲೆ ಸ್ಟೀಮಿಂಗ್‌ ನೀಡುತ್ತಾರೆ. ಇದರಿಂದ ಎಣ್ಣೆ ನೆತ್ತಿಯವರೆಗೂ ತಲುಪಿ, ಕೂದಲಿನ ಬುಡ ಸೇರಲು ಅನುಕೂಲ. ನೀವು ಮನೆಯಲ್ಲೇ ಹೇರ್‌ ಸ್ಪಾ ಮಾಡಿಕೊಳ್ಳುವುದಿದ್ದರೆ, ಆಗ ಹಾಟ್‌ ಟವೆಲ್ ಕೂಡ ತಲೆಗೆ ಸುತ್ತಿಕೊಳ್ಳಬಹುದು. ಇದಾಗಿ 10 ನಿಮಿಷದ ನಂತರ ಮೈಲ್ಡ್ ಶ್ಯಾಂಪೂನಿಂದ ಕೂದಲನ್ನು ತೊಳೆಯಬೇಕು, ಆಮೇಲೆ ಅದಕ್ಕೆ ಹೇರ್‌ ಮಾಸ್ಕ್ ಹಾಕಬೇಕು. ನಿಮ್ಮ ತಲೆಗೂದಲಿನ ಸಮಸ್ಯೆಗೆ ತಕ್ಕಂತೆ ಹೇರ್‌ ಮಾಸ್ಕ್ ಆರಿಸಿ. ಮಾಸ್ಕ್ ಧರಿಸಿದ 20 ನಿಮಿಷಗಳ ನಂತರ ಕೂದಲನ್ನು ನೀಟಾಗಿ ತೊಳೆದು, ಒಣಗಿಸಿ, ಸೂಪರ್‌ ಶೈನಿಂಗ್‌ ಬರುತ್ತದೆ!

– ಜಿ. ಲಲಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ