ಬೇಸಿಗೆ ಅಥವಾ ಮಳೆಗಾಲದ ಋತುವಿಗೆ ತಕ್ಕಂತೆ ಫ್ಯಾಷನ್‌ ಬದಲಾಗುತ್ತದೆ. ಬೇಸಿಗೆಯಿಂದ ಪ್ರತಿಯೊಬ್ಬರೂ ತೊಂದರೆಗೆ ಒಳಗಾಗುತ್ತಾರೆ. ಈ ದಿನಗಳಲ್ಲಿ ಏನನ್ನು ಧರಿಸುವುದು ಎಂಬುದೇ ದೊಡ್ಡ ಚಿಂತೆಯಾಗುತ್ತದೆ. ಅದು ಸ್ಟೈಲಿಶ್‌ ಆಗಿಯೂ ಇರಬೇಕು, ಬಿಸಿಲಿನ ಝಳ ಕಾಡಬಾರದು. ಬೇಸಿಗೆಯ ದಿನಗಳಲ್ಲಿ ಕಾಟನ್‌ ಉಡುಗೆಗಳು ಎಲ್ಲಕ್ಕಿಂತ ಬೆಸ್ಟ್ ಎಂಬುದರಲ್ಲಿ ಎರಡು ಮಾತಿಲ್ಲ. ಇದು ಬೆವರನ್ನು ಹೀರಿಕೊಂಡು, ಬಿಸಿಲಿನ ಉಷ್ಣತೆಯಿಂದ ರಕ್ಷಣೆ ನೀಡುತ್ತದೆ. ಬಿಸಿಲು ಹೆಚ್ಚಾಗಿರುವ ದಿನಗಳಲ್ಲಿ ಫ್ಯಾಷನ್‌ಗೆ ತಕ್ಕಂತೆ ಡ್ರೆಸ್‌ ಆರಿಸುವುದೇ ಒಂದು ಸವಾಲಾಗುತ್ತದೆ. ಏಕೆಂದರೆ ಈ ಸಮಯದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇರುತ್ತದೆ. ಜನ ಹೊರಗಿನ ಸುತ್ತಾಟ ಪಿಕ್ನಿಕ್‌, ಪ್ರವಾಸ ಎಂದು ಪ್ಲಾನ್‌ ಮಾಡುತ್ತಾರೆ. ಇಂಥ ಸಮಯದಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು ಹಿತಕರ ಎನಿಸುವ ಉಡುಗೆ ಧರಿಸಬೇಕಾದುದು ಅತ್ಯವಶ್ಯಕ.

ಈ ಕುರಿತಾಗಿ ಇಲ್ಲಿವೆ ಕೆಲವು ಸಲಹೆಗಳು :

– ಬಿಸಿಲಿನ ಧಗೆಯನ್ನು ಪರಾವರ್ತಿತಗೊಳಿಸಿ, ಉಷ್ಣತೆಗೆ ಪರಿಹಾರ ನೀಡುವಂಥ ಉಡುಗೆ ಧರಿಸಿ.

– ಈ ಬಿಸಿಲಿನ ದಿನಗಳಲ್ಲಿ ನ್ಯಾಚುರಲ್ ಫ್ಯಾಬ್ರಿಕ್‌ ಆದ ಕಾಟನ್‌, ಖಾದಿ, ಮಕ್ಮಲ್, ವಾಯಲ್ ನಂಥವೇ  ಸರಿ.

– ಫ್ಯಾಬ್ರಿಕ್‌ ನಂತರ ಬಣ್ಣಗಳ ಆಯ್ಕೆಯಲ್ಲಿ ಜಾಣ್ಮೆ ಇರಲಿ. ಆ್ಯಕ್ವಾ ಬ್ಲೂ, ಬೇಜ್‌, ಪೀಚ್‌ ಬಣ್ಣಗಳನ್ನು ಆರಿಸಿ. ಈ ಬಣ್ಣಗಳು ಮಾನಸಿಕ ರೂಪದಲ್ಲೂ ತಂಪು ನೀಡುತ್ತವೆ. ಈ ಸೀಸನ್‌ನಲ್ಲಿ ಕಪ್ಪು ಅಥವಾ ಅತಿ ಡಾರ್ಕ್‌ ಬಣ್ಣ ಬಳಸಬೇಡಿ.

– ಡ್ರೆಸ್‌ಗಳು ಅತಿ ಟೈಟ್‌ ಆಗಿರುವುದು ಬೇಡ. ದೇಹಕ್ಕೆ ಬಿಗಿಯಾದ ಬಟ್ಟೆ ಧರಿಸುವುದರಿಂದ ಬೆವರು ಹರಿಯುವುದು ಮಾತ್ರವಲ್ಲ, ಬಟ್ಟೆ ದೇಹಕ್ಕೆ ಅಂಟಿಕೊಳ್ಳುವುದರಿಂದ ಅಸಹ್ಯವಾಗಿಯೂ ಕಾಣುತ್ತದೆ. ಹೀಗಾಗಿ ಲೂಸ್‌ ಫಿಟಿಂಗ್‌ನ ಉಡುಗೆಗಳನ್ನೇ ಧರಿಸಿರಿ.

– ಹೊರಗಿನ ಸುತ್ತಾಟಕ್ಕೆ ಫುಲ್ ಸ್ಲೀವ್ಡ್ ಡ್ರೆಸ್‌ ಟಾಪ್ಸ್ ಆರಿಸಿ. ಇದು ಬೆವರನ್ನು ಸುಲಭವಾಗಿ ಹೀರುತ್ತದೆ.

– ಪ್ರಿಂಟ್‌ವುಳ್ಳ ಉಡುಗೆಗಳಲ್ಲಿ ಡಿಜಿಟಲ್ ಪ್ರಿಂಟ್‌, ರೋಟರಿ ಪ್ರಿಂಟ್‌ ಇತ್ಯಾದಿ ಆರಿಸಿ.

– ಈ ಸೀಸನ್‌ನಲ್ಲಿ ಕೇಪ್ರಿ, ಕುರ್ತಾ, ಪ್ಲಾಜೋ ಪ್ಯಾಂಟ್‌, ಸ್ಕರ್ಟ್‌ ಇತ್ಯಾದಿ ಗಾಳಿಯಾಡುವಂಥ ಉಡುಗೆಗಳನ್ನೇ ಧರಿಸಿರಿ. ಜೊತೆಗೆ ಸ್ಲೀವ್ ಲೆ‌ಸ್‌ ಟಾಪ್‌ ಅಥವಾ ಸೀರೆಗೆ ಸ್ಲೀವ್ ಲೆ‌ಸ್‌ ಬ್ಲೌಸ್‌ ಧರಿಸಿರಿ.

– ಜೀನ್ಸ್ ಬದಲು ಟ್ರೌಸರ್ಸ್‌ ಧರಿಸಿರಿ. ಲಿನೆನ್‌ ಟ್ರೌಸರ್ಸ್‌ ಹೆಚ್ಚು ಆರಾಮದಾಯಕ ಎನಿಸುತ್ತದೆ.

– ಬೇಸಿಗೆಯಲ್ಲಿ ಮೇಕಪ್‌ ಲೈಟ್‌ ಆಗಿರಬೇಕು. ಲಿಪ್‌ ಕಲರ್‌  ಐ ಲೈನರ್ಸ್‌ ಬೆಟರ್‌ ಎನಿಸುತ್ತದೆ. ಅಧಿಕ ಮೇಕಪ್‌ ಈ ಸಮಯದಲ್ಲಿ ಕರಗಿಹೋಗುತ್ತದೆ, ನಿಮ್ಮ ಸೌಂದರ್ಯಕ್ಕೆ ಚ್ಯುತಿ ತರುತ್ತದೆ. ಸನ್‌ಸ್ಕ್ರೀನ್‌ ಅಗತ್ಯ ಹಚ್ಚಿಕೊಳ್ಳಿ.

– ಜ್ಯೂವೆಲರಿ ಸಹ ಲೈಟ್‌ ಆಗಿರಲಿ ಅಥವಾ ಧರಿಸದ್ದಿದರೂ ಸರಿ. ಹ್ಯಾಟ್‌, ಸನ್‌ಗ್ಲಾಸಸ್‌  ಈ ಸೀಸನ್‌ಗೆ ಹಿತಕರ ಎನಿಸುತ್ತದೆ.

– ಕ್ಲೋಸ್ಡ್ ಶೂಸ್‌ ಅಥವಾ ಸ್ಯಾಂಡಲ್ಸ್ ಧರಿಸಬೇಡಿ.

– ಫ್ರೆಶ್‌  ಕೂಲ್‌ ಫೀಲ್‌ ಆಗಲು ಹೈಜೀನ್‌ ಕಡೆ ಹೆಚ್ಚಿನ ಗಮನ ಕೊಡಿ.

ಹೀಗೆ ಬೇಸಿಗೆ ಕಳೆದ ಮೇಲೆ ಬರುತ್ತದೆ ಮಳೆಗಾಲ. ಬೇಸಿಗೆಯ ಝಳ ಬಿಡಿಸಿ ತುಂತುರು ಹನಿ ತಂಪೇನೋ ನೀಡುತ್ತದೆ, ಆದರೆ ಎಂಥ ಡ್ರೆಸ್‌ ಧರಿಸುವುದು ಎಂಬುದೇ ಸಮಸ್ಯೆ. ಹೀಗಾಗಿ ಈ ಕೆಳಗಿನ ಸಲಹೆಗಳನ್ನು ನೆನಪಿಡಿ :

– ಮಳೆಗಾಲದಲ್ಲಿ ಪಾಲಿಯೆಸ್ಟರ್‌, ರೆಯಾನ್‌, ಮಿಕ್ಸ್ಡ್ ಮ್ಯಾನ್‌ ಮೇಡ್‌ ಫ್ಯಾಬ್ರಿಕ್‌, ಲೈಕ್ರಾ, ಜಾರ್ಜೆಟ್‌, ನೈಲಾನ್‌ ಇತ್ಯಾದಿ ಧರಿಸಿ. ಇವು ನೆನೆದರೂ ಬೇಗ ಒಣಗುತ್ತವೆ. ಇವು ಮೈಗೆ ಅಂಟಿಕೊಳ್ಳುವುದೂ ಇಲ್ಲ.

– ಕಾಟನ್‌ ವಸ್ತ್ರ, ಜೀನ್ಸ್ ಇತ್ಯಾದಿ ಮಳೆಗಾಲಕ್ಕೆ ಬೇಡ. ಏಕೆಂದರೆ ನೆನೆದಾಗ ಇವು ಬೇಗನೆ ಕ್ರಶ್‌  ಆಗುತ್ತವೆ, ಒಣಗಲಿಕ್ಕೆ ಹೆಚ್ಚು ಸಮಯ ಬೇಕು.

– ಈ ಸೀಸನ್‌ನಲ್ಲಿ ಡಾರ್ಕ್‌ ಕಲರ್ಸ್‌ ಧರಿಸಿರಿ. ಮಳೆಗಾಲದಲ್ಲಿ ಋತುಮಾನ ಡಲ್ ಯಾ ಗ್ರೇ ಎನಿಸುತ್ತದೆ. ಹೀಗಿರುವಾಗ ಫ್ರೆಶ್‌ ಕಲರ್ಸ್‌ ನಿಮ್ಮ ಮನಸ್ಸಿಗೆ ಹಿತಕರ ಎನಿಸುತ್ತದೆ. ಫ್ರೆಶ್‌ ರೆಡ್‌, ಬರ್ನ್‌ ಆರೆಂಜ್‌, ಎಮೆರಾಲ್ಡ್ ಗ್ರೀನ್‌, ಬ್ರೈಟ್‌ ಯೆಲ್ಲೋ…. ಇತ್ಯಾದಿ ತಾಜಾ ಎನಿಸುತ್ತದೆ.

– ಮಳೆ ಬರುವಾಗ ನೀಲೆಂಥ್‌ ಡ್ರೆಸೆಸ್‌ ಧರಿಸಿರಿ. ಇದರಿಂದ ಉಡುಗೆಯ ಅಡಿ ಭಾಗ ಒದ್ದೆ ಆಗುವ ಭಯವಿಲ್ಲ. ಕೇಪ್ರಿ, ಮಿಡಿ, ನೀಲೆಂಥ್‌ ಪ್ಲಾಜೋ ಇರಲಿ. ನಿಮ್ಮ ಉಡುಗೆಗೆ ತಕ್ಕಂತೆ ಲಿಪ್‌ಸ್ಟಿಕ್‌ ಆರಿಸಿ. ಫೌಂಡೇಶನ್‌ ವಾಟರ್‌ಪ್ರೂಫ್‌ ಆಗಿರಲೇಬೇಕು.

– ಮಳೆಗಾಲದಲ್ಲಿ ಆರ್ದ್ರತೆ ತಲೆಗೂದಲಿನ ಸಿಕ್ಕು ಹೆಚ್ಚಿಸುತ್ತದೆ. ಆದ್ದರಿಂದ ಕೊಂಡೆ ಅಥವಾ ಜಡೆ ಹಾಕಿಕೊಳ್ಳಲು ಮರೆಯದಿರಿ, ಆದಷ್ಟೂ ಮಳೆಯಲ್ಲಿ ನೆನೆಯಬೇಡಿ.

– ಡ್ರೆಸ್‌ನ್ನು ಸ್ಟೈಲಿಶ್‌ಗೊಳಿಸಲು ಕಲರ್‌ಫುಲ್ ಜ್ಯಾಕೆಟ್‌, ವಿಂಡ್‌ಶಿಟರ್‌ ಇತ್ಯಾದಿ ಧರಿಸಿ. ನಿಮ್ಮ ಉಡುಗೆಗೆ ತಕ್ಕಂತೆ ಬಣ್ಣ ಬಣ್ಣದ ಕೊಡೆ ಇರಲಿ.

– ಈ ಸಂದರ್ಭದಲ್ಲಿ ಲೆದರ್‌ ಚಪ್ಪಲಿ, ಸ್ಯಾಂಡಲ್ಸ್ ಧರಿಸಬೇಡಿ. ಇವು ಬೇಗನೆ ಒದ್ದೆ ಆಗಿ ಒಣಗಲು ಹೆಚ್ಚು ಸಮಯ ಬೇಕು. ಬದಲಿಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವು ಬಗೆಯ ಸ್ಟೈಲಿಶ್‌ ರಬ್ಬರ್‌ ಶೂಸ್‌, ಪ್ಲಾಸ್ಟಿಕ್‌ ಫುಟ್‌ವೇರ್‌ ಧರಿಸಿರಿ. ಹೀಲ್‌ರಹಿತ ಚಪ್ಪಲಿ, ಗಮ್ ಬೂಟ್ಸ್, ಜೆಲಿ ಶೂಸ್‌ ಇತ್ಯಾದಿ ಧರಿಸಿ. ಆಗ ಜಾರಿ ಬೀಳುವ ಭಯವಿಲ್ಲ.

– ಈ ಕಾಲದಲ್ಲಿ ಹೊರಗಿನಿಂದ ಮನೆಗೆ ಬಂದ ಮೇಲೆ ಫುಟ್‌ವೇರ್‌ನ್ನು ತೊಳೆದು ಒಣಗಲು ಬಿಡಿ. ಜೊತೆಗೆ ಪಾದಗಳನ್ನೂ ತೊಳೆದು ಶುಭ್ರಗೊಳಿಸಿ. ಆಗ ಕಾಲಿನ ಬೆರಳು ಸಂದಿಗೆ ಯಾವುದೇ ಸೋಂಕು ತಗುಲುವ ಭೀತಿ ಇಲ್ಲ.

– ಜಿ. ಸುಮಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ