ಇತ್ತೀಚಿನ ಆಧುನಿಕ ಫ್ಯಾಷನ್ ಪ್ರಕಾರ ಎಲ್ಲಾ ಹುಡುಗಿಯರಿಗೂ ಟೈಟ್ ಸ್ಕಿನ್ ಜೀನ್ಸ್ ಧರಿಸುವುದೇ ಇಷ್ಟ. ಅವರಿಗೆ ಇದು ಕಂಫರ್ಟೆಬಲ್ ಹೌದೋ ಅಲ್ಲವೋ ಇಲ್ಲಿ ಮುಖ್ಯವಲ್ಲ. ಎಲ್ಲಿಗೆ ಹೋದರೂ ಅದನ್ನೇ ಧರಿಸುವ ರೂಢಿಯಾಗಿದೆ. ಅವರ ಪ್ರಕಾರ ಈ ಉಡುಗೆಯಲ್ಲಿ ಅವರ ಫಿಗರ್ ಇನ್ನಷ್ಟು ಸೆಕ್ಸಿಯಾಗಿ ಎದ್ದು ಕಾಣುತ್ತದಂತೆ. ಆಗ ಎಲ್ಲರ ಗಮನ ಇವರ ಕಡೆಯೇ ಹರಿಯುತ್ತದೆ ಎನ್ನುತ್ತಾರೆ. ಆದರೆ ಈ ಟೈಟ್ ಜೀನ್ಸ್ ನಿಮ್ಮ ಆರೋಗ್ಯಕ್ಕೆ ಹಾನಿಕರ ಎಂದು ನಿಮಗೆ ಗೊತ್ತಿದೆಯೇ? ಇದರ ಕಾರಣದಿಂದ ನೀವು ಆಸ್ಪತ್ರೆ ಸೇರಬೇಕಾಗಿ ಬಂದರೂ ಆಶ್ಚರ್ಯವಿಲ್ಲ.
ಇತ್ತೀಚೆಗೆ ನಗರದ ಒಬ್ಬ ಹುಡುಗಿಗೆ ಹೀಗೆ ಆಯಿತು. ಸ್ಟೈಲಿಶ್ ಸೆಕ್ಸೀ ಎನಿಸಲು ಈ ಹುಡುಗಿ ಸದಾ ನಡೆಯಲಾಗದಂಥ ಟೈಟ್ ಜೀನ್ಸ್ ಧರಿಸುತ್ತಿದ್ದಳು. ಕೊನೆಗೆ ಇದು ಅವಳನ್ನು ಆಸ್ಪತ್ರೆಗೆ ಸೇರಿಸಿತು. ಅವಳ ಕಾಲುಗಳಲ್ಲಿನ ಮಾಂಸಖಂಡದಲ್ಲಿ ರಕ್ತದ ಸಂಚಾರ ಆಗುತ್ತಿರಲಿಲ್ಲ ಎಂಬುದು ಅಲ್ಲಿ ಗೊತ್ತಾಯಿತು. ಅವಳ ಸ್ಥಿತಿ ಹೇಗಾಗಿತ್ತೆಂದರೆ, ಅವಳಿಂದ ನೆಟ್ಟಗೆ ನಿಲ್ಲಲಿಕ್ಕೂ ಆಗುತ್ತಿರಲಿಲ್ಲ. ಅವಳು ಇತರರ ನೆರವಿನಿಂದ ಒಂದೊಂದೇ ಹೆಜ್ಜೆ ಇಟ್ಟು ಬರುವಷ್ಟರಲ್ಲಿ ಬಸವಳಿದಿದ್ದಳು.
ಫ್ಯಾಷನ್ ಜೊತೆ ಹೆಜ್ಜೆ ಹಾಕುತ್ತಾ ತಮ್ಮನ್ನು ತಾವು ಅಪ್ಡೇಟ್ ಆಗಿರಿಸಿಕೊಳ್ಳುವುದು ಒಳ್ಳೆಯ ವಿಷಯ. ಆದರೆ ಈ ಕಾರಣಕ್ಕಾಗಿ ಆರೋಗ್ಯವನ್ನು ನಿರ್ಲಕ್ಷಿಸುವುದು ಖಂಡಿತಾ ಒಳ್ಳೆಯದಲ್ಲ. ಟೈಟ್ ಜೀನ್ಸ್ ಫಿಗರ್ಗೆ ಏನೇ ಸೆಕ್ಸೀ ಲುಕ್ಸ್ ನೀಡಲಿ, ಅದು ಲಾಸ್ ಮಾಡುವುದಂತೂ ನಿಜ. ಈ ಕಾರಣದಿಂದ ಹೆಲ್ತ್ ಪ್ರಾಬ್ಲಮ್ಸ್ ಹೆಚ್ಚುತ್ತವೆ. ಇದನ್ನು ಹೆಣ್ಣುಮಕ್ಕಳು ಕಡೆಗಣಿಸುತ್ತಾರೆ.
ಪ್ರಜ್ಞೆ ತಪ್ಪುವುದು : ಸದಾ ಟೈಟ್ ಫಿಟಿಂಗ್ನ ಉಡುಗೆ ಧರಿಸುವುದರಿಂದ, ಉಸಿರು ಕಟ್ಟಿದಂತೆ ಆಗುತ್ತದೆ. ಅದು ಅಪಾಯದ ಮುನ್ಸೂಚನೆ ಆಗದಿರಲಿ. ಇದರಿಂದ ಪ್ರಜ್ಞೆ ತಪ್ಪುವ ಸಾಧ್ಯತೆ ಉಂಟು.
ಬೆನ್ನು ನೋವಿನ ಸಮಸ್ಯೆ : ಇಂದಿನ ಕಾಲದಲ್ಲಿ ಅಧಿಕ ಸಂಖ್ಯೆಯಲ್ಲಿ ಹೆಣ್ಣುಮಕ್ಕಳು ಲೋ ವೇಯ್ಸ್ಟ್ ಜೀನ್ಸ್ ಧರಿಸ ಬಯಸುತ್ತಾರೆ. ಟೈಟ್ ಲೋ ವೇಯ್ಸ್ಟ್ ಜೀನ್ಸ್ ಬೆನ್ನಿನ ಮಸಲ್ಸ್ ನ್ನು ಕಂಪ್ರೆಸ್ ಮಾಡಿ, ಹಿಪ್ ಬೋನ್ನ ಮೂಮೆಂಟ್ಗೆ ಅಡ್ಡಿಪಡಿಸುತ್ತವೆ. ಇದರಿಂದ ಸ್ಪೈನಲ್ ಬ್ಯಾಕ್ಗೆ ಹೆಚ್ಚಿನ ಒತ್ತಡ ಬಿದ್ದು, ನೋವಿನ ಸಮಸ್ಯೆ ಹೆಚ್ಚುತ್ತದೆ.
ಹೊಟ್ಟೆನೋವು : ಟೈಟ್ ಡ್ರೆಸ್ ಧರಿಸಿದಾಗ ಬಟ್ಟೆ ಹೊಟ್ಟೆ ಭಾಗಕ್ಕೆ ಗಟ್ಟಿಯಾಗಿ ಬಿಗಿಯುತ್ತದೆ. ಇದರಿಂದ ಹೊಟ್ಟೆ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ, ಹೊಟ್ಟೆ ನೋವು ಹೆಚ್ಚುತ್ತದೆ. ಜೊತೆಗೆ ಟೈಟ್ ಜೀನ್ಸ್ ನಿಂದ ಪಚನಕ್ರಿಯೆಯೂ ಸರಿಯಾಗದೆ, ಅಸಿಡಿಟಿಗೆ ದಾರಿ ಮಾಡುತ್ತದೆ.
ಮೈಕೈ ನೋವು : ಟೈಟ್ ಜೀನ್ಸ್ ತೊಡೆಯ ನರಗಳನ್ನು ಕಂಪ್ರೆಸ್ ಮಾಡುತ್ತದೆ, ಇದರಿಂದ ಆ ಭಾಗ ಉರಿ ಉರಿ, ಹಿಂಸಕಾರಕ ಎನಿಸುತ್ತದೆ. ಇದರಿಂದ ತಲೆ ನೋವು, ಮೈಕೈ ನೋವು ಮುಂತಾದವು ಹೆಚ್ಚುತ್ತದೆ. ಇಷ್ಟು ಮಾತ್ರವಲ್ಲ, ಟೈಟ್ ಜೀನ್ಸ್ ದೆಸೆಯಿಂದ ಕುರ್ಚಿ ಮೇಲೆ ಕುಳಿತೇಳುವುದು ಕಷ್ಟವಾಗುತ್ತದೆ. ಚಕ್ಕಳಮಕ್ಕಳ ಹಾಕಿ ನೆಲದ ಮೇಲೆ ಕೂರುವುದಂತೂ ಅಸಾಧ್ಯದ ಮಾತು. ಇದರಿಂದ ಬಾಡಿ ಪೋಸ್ಚರ್ ಕೆಡುತ್ತದೆ.
ತಪ್ಪದ ಸುಸ್ತು ಸಂಕಟ : ಟೈಟ್ ಜೀನ್ಸ್ ಧರಿಸುವುದರಿಂದ ಬಲು ಬೇಗನೆ ಸುಸ್ತು ಸಂಕಟಕ್ಕೆ ಒಳಗಾಗುತ್ತೇವೆ. ಇದರ ಪ್ರಭಾವ ನಮ್ಮ ಕೆಲಸದ ಮೇಲಾಗುತ್ತದೆ. ಆಗ, ಆಫೀಸಿನಲ್ಲಿ ಸಡಿಲವಾದ ಹಗುರ ಡ್ರೆಸ್ ಧರಿಸುವಂತಿದ್ದರೆ ಎಂದು ಯೋಚಿಸುತ್ತೇವೆ. ನಿಮಗೂ ಹೀಗೆ ಅನಿಸಿದ್ದರೆ, ಕೆಲವು ದಿನ ಸಡಿಲ ಉಡುಗೆಗಳನ್ನೇ ಧರಿಸಿ ನೋಡಿ, ಆಗ ನಿಮಗೇ ವ್ಯತ್ಯಾಸ ತಿಳಿಯುತ್ತದೆ.
ಯೀಸ್ಟ್ ಇನ್ಫೆಕ್ಷನ್ : ಇದು ಮುಖ್ಯವಾಗಿ ದೇಹದಲ್ಲಿ ಎಲ್ಲೆಲ್ಲಿ ಹೆಚ್ಚು ಬೆವರು ಸುರಿಯುತ್ತದೋ ಅಂಥ ಕಡೆ ಕಾಣಿಸುತ್ತದೆ. ಟೈಟ್ ಜೀನ್ಸ್ ಧರಿಸುವುದರಿಂದ ದೇಹಕ್ಕೆ ಬೇಕಾದ ಪ್ರಮಾಣದಲ್ಲಿ ಗಾಳಿ ಆಡುವುದಿಲ್ಲ. ಈ ಕಾರಣ ದೇಹದಲ್ಲಿ ಯೀಸ್ಟ್ ಪ್ರಮಾಣ ಹೆಚ್ಚುತ್ತದೆ. ಇದರ ದೆಸೆಯಿಂದ ದೇಹಾದ್ಯಂತ ಉರಿ, ನವೆ, ಕಡಿತ, ನೋವು ಮೂಡುತ್ತದೆ. ಇದನ್ನು ಎಂದೂ ನಿರ್ಲಕ್ಷಿಸಬೇಡಿ.
ಫಂಗಲ್ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ನ ಅಪಾಯ : ಟೈಟ್ ಜೀನ್ಸ್ ದೆಸೆಯಿಂದ ಫಂಗಲ್ ಬ್ಯಾಕ್ಟೀರಿಯಲ್ ಇನ್ಫೆಕ್ಷನ್ನಿನ ಅಪಾಯ ಹೆಚ್ಚುತ್ತದೆ. ಇದರಿಂದ ತ್ವಚೆ ಮೇಲೆ ಕೆಂಪು ದದ್ದು, ಗುಳ್ಳೆಗಳೇಳುತ್ತವೆ. ರಾಶಸ್ ಕೂಡ ಹೆಚ್ಚುತ್ತವೆ.
ಜೀನ್ಸ್ ಜೊತೆ ಇನ್ನಿತರ ಟೈಟ್ ಔಟ್ಫಿಟ್ಸ್ : ಕೇವಲ ಟೈಟ್ ಸ್ಕಿನಿ ಜೀನ್ಸ್ ಮಾತ್ರವೇ ನಮ್ಮನ್ನು ಇಷ್ಟೆಲ್ಲ ಆರೋಗ್ಯದ ಸಮಸ್ಯೆಗೆ ದೂಡುತ್ತವೆ ಎಂದು ಭಾವಿಸದಿರಿ. ಜೊತೆಗೆ ಇನ್ನಿತರ ಎಷ್ಟೋ ಟೈಟ್ ಔಟ್ಫಿಟ್ಸ್ ನಿಂದಲೂ ಈ ಬಾಧೆ ತಪ್ಪಿದ್ದಲ್ಲ. ಅದರಲ್ಲಿ ಮುಖ್ಯಾಗಿ ಶೇಪ್ವೇರ್ ಮಾತ್ರವಲ್ಲದೆ ಟೈಟ್ ಬ್ರಾ, ಪ್ಯಾಂಟಿ, ಫಿಟಿಂಗ್ ಟೀಶರ್ಟ್, ಟೈಟ್ ಬೆಲ್ಟ್, ಹೈಹೀಲ್ಸ್ ಇತ್ಯಾದಿಗಳೂ ಮಾರಕ.
– ಎನ್. ಅಂಕಿತಾ
ಟೈಟ್ ಜೀನ್ಸ್ ಇಷ್ಟವಾಗುವುದೇಕೆ?
ಆಧುನಿಕ ಹುಡುಗಿಯರಿಗೆ ತಾವು ಟೈಟ್ ಫಿಟಿಂಗ್ ಡ್ರೆಸ್ ಧರಿಸಿದರೆ ಮಾತ್ರ ಸೆಕ್ಸಿಯಾಗಿ ಕಾಣಿಸುತ್ತೇವೆ ಅನಿಸುತ್ತದೆ.
ಹುಡುಗರ ಆಕರ್ಷಣೆ ಗಿಟ್ಟಿಸಲು ಇದು ಮೂಲಮಂತ್ರ.
ಬೋಲ್ಡ್ ಕಾನ್ಛಿಡೆಂಟ್ ಆಗಿ ಕಂಡಬರಲು.
ಅಪ್ಡೇಟ್ ಸ್ಟೈಲಿಶ್ ಆಗಿರಲು.
ತಮ್ಮ ಮಾಡ್ ಸ್ಟೈಲ್ ನಿಂದ ಸಮಯಸ್ಕ ಹುಡುಗಿಯರ ಹೊಟ್ಟೆಯುರಿಸಿ ಮೆರೆಯಲು.
ಇತರರನ್ನು ನೋಡಿ ಅಂಧಾನುಕರಣೆ.