ಹುರಿದ ಕರಿದ ಪದಾರ್ಥಗಳನ್ನು ಸೇವಿಸುವ ಆಸಕ್ತಿ ಇದೆ. ಆದರೆ ಆರೋಗ್ಯದ ಕಾಳಜಿ ಅವನ್ನು ದೂರ ಇಡುವಂತೆ ಮಾಡಿದ್ದರೆ, ಈ ಎಣ್ಣೆ ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಹೆಚ್ಚಿನ ಫಿಟ್ನೆಸ್‌ ಪ್ರೇಮಿಗಳು ಆಹಾರದ ಬಾಬತ್ತಿನಲ್ಲಿ ಕರಿದ ಪದಾರ್ಥಗಳನ್ನು ದೂರ ಇಡಲು ನೋಡುತ್ತಾರೆ. ಏಕೆಂದರೆ ಕರಿದ ಪದಾರ್ಥಗಳು ಆರೋಗ್ಯಕ್ಕೆ ಹಾನಿಕರ ಎಂದು ಅವರಿವರು ಹೇಳುವುದನ್ನು ಕೇಳಿರುತ್ತಾರೆ.

ಅಂದಹಾಗೆ ಕರಿದ ಆಹಾರ ಪದಾರ್ಥಗಳು ದೇಹಕ್ಕೆ ಹಾನಿಕಾರಕವಲ್ಲ. ಆದರೆ ನೀವು ಆಹಾರ ಪದಾರ್ಥಗಳನ್ನು ಕರಿಯಲು ಯಾವ ಎಣ್ಣೆಯನ್ನು ಬಳಸುತ್ತೀರಿ ಎಂಬುದನ್ನು ಅವಲಂಬಿಸಿರುತ್ತದೆ. ಕರಿದ ಪದಾರ್ಥಗಳು ಆರೋಗ್ಯಕ್ಕೆ ಮಾರಕ ಎಂಬ ಹೇಳಿಕೆ ಸತ್ಯಕ್ಕೆ ದೂರ. ಎಳ್ಳೆಣ್ಣೆ ಎಂತಹ ಒಂದು ಅಡುಗೆ ಎಣ್ಣೆಯಾಗಿದೆ ಎಂದರೆ, ಅದರಲ್ಲಿ ಆಹಾರ ಪದಾರ್ಥಗಳನ್ನು ಕರಿದ ಬಳಿಕ ಅದು ಆರೋಗ್ಯಕರವಾಗಿರುತ್ತದೆ ಎಂಬುದು ನಿಮಗೆ ಗೊತ್ತೆ? ಎಳ್ಳೆಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳು ರುಚಿಕರವಾಗಿಯಂತೂ ಆಗಿಯೇ ಆಗಿರುತ್ತದೆ. ಜೊತೆಗೆ ಎಳ್ಳೆಣ್ಣೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಅನೇಕ ಲಾಭಗಳೂ ಆಗುತ್ತವೆ. ಹೀಗಾಗಿ ನೀವು ಕರಿದ ಪದಾರ್ಥಗಳ ಬಗ್ಗೆ ಮೂಗು ಮುರಿಯುವ ಅವಶ್ಯಕತೆ ಇಲ್ಲ.

ಇದೊಂದೇ ಎಣ್ಣೆ ಮಾತ್ರ ಆಹಾರ ಪದಾರ್ಥಗಳನ್ನು ಆರೋಗ್ಯಕರ ರೂಪದಲ್ಲಿ ಪರಿವರ್ತಿಸುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಈ ಎಳ್ಳೆಣ್ಣೆಯ ಬಳಕೆಯಿಂದ ಆಹಾರ ಹಳಸುವುದಾಗಲಿ, ದುರ್ನಾತ ಬೀರುವುದಾಗಲಿ ಆಗುವುದಿಲ್ಲ. ಸಂಶೋಧನೆಗಳ ಪ್ರಕಾರ, ಬೇರೆಲ್ಲ ಎಣ್ಣೆಗಳನ್ನು ಬಿಸಿ ಮಾಡುವುದರಿಂದ, ಎಣ್ಣೆಯಿಂದ ಆ್ಯಲ್ಡಿಹೈಡ್‌ ಎಂಬ ರಸಾಯನ ಹೊರಹೊಮ್ಮುತ್ತದೆ. ಅಲ್ಝೈಮರ್‌ನಂತಹ ಕ್ಯಾನ್ಸರ್‌ ಹಾಗೂ ನ್ಯೂರೋ ಅನುವಂಶಿಕ ರೋಗಗಳಿಗೆ ಕಾರಣವಾಗುತ್ತದೆ. ಆದರೆ ಎಳ್ಳೆಣ್ಣೆಯನ್ನು ಬಿಸಿ ಮಾಡಿದ ಬಳಿಕ ಅದರಲ್ಲಿನ ಆಂಟಿ ಆಕ್ಸಿಡೆಂಟ್‌ಗಳು ಕೊನೆಗೊಳ್ಳುವುದಿಲ್ಲ. ಇದರಿಂದಾಗಿ ಎಳ್ಳೆಣ್ಣೆಯಲ್ಲಿ ಕರಿದ ಪದಾರ್ಥಗಳು ರುಚಿಕರ ಆಗಿರುವುದರ ಜೊತೆಗೆ ಆರೋಗ್ಯಕರ ಆಗಿರುತ್ತವೆ.

ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚುವುದಿಲ್ಲ

ಯಾರಿಗೆ ಕರಿದ ಪದಾರ್ಥಗಳನ್ನು ತಿನ್ನುವ ಅಭ್ಯಾಸ ಇರುತ್ತದೋ ಅವರಿಗೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುವ ಭೀತಿ ಕಾಡುತ್ತಿರುತ್ತದೆ. ಇದೇ ಕಾರಣದಿಂದ ಅವರು ಕರಿದ ಪದಾರ್ಥಗಳೆಂದರೆ, ಮೂಗು ಮುರಿಯುತ್ತಿರುತ್ತಾರೆ. ಆದರೆ ಎಣ್ಣೆ ಪದಾರ್ಥಗಳನ್ನು ಸೇವಿಸುವ ಉತ್ಸುಕರಿಗೆ ಎಳ್ಳೆಣ್ಣೆ ಒಂದು ಒಳ್ಳೆಯ ಪಯಾರ್ಯ. ಅದಕ್ಕೆ ಫ್ಯಾಟಿ ಆ್ಯಸಿಡ್‌ ಮತ್ತು ಆ್ಯಂಟಿ ಆಕ್ಸಿಡೆಂಟ್‌ನಲ್ಲಿ ಫೈಟೊ ಎಸ್ಟ್ರೋಜೆನ್‌ ಚಲನವಲನ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಸಾಮರ್ಥ್ಯ ಹೊಂದಿರುತ್ತದೆ. ಬಹುತೇಕವಾಗಿ ಎಲ್ಲ ಬಗೆಯ ಡ್ರೈಫ್ರೂಟ್ಸ್, ಬೀಜಗಳು, ಧಾನ್ಯಗಳಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಗೊಳಿಸುವ ಫೈಟೊಸ್ಟೆರಾಸ್‌ನಲ್ಲಿ ಎಳ್ಳೆಣ್ಳೆ ಉಚ್ಚ ಶ್ರೇಣಿಯಲ್ಲಿ ಬರುತ್ತದೆ. ಫೈಟೊಸ್ಟೆರಾಸ್‌ನ ಸ್ಟೆರಾಸ್‌ ಸಸ್ಯ ರಚನಾತ್ಮಕವಾಗಿ ಕೊಲೆಸ್ಟ್ರಾಲ್ ಗೆ ಸಮಾನವಾಗಿರುತ್ತದೆ, ಅದು ಕರುಳಿನಲ್ಲಿ ಪ್ರವೇಶಿಸಿ, ಕೊಲೆಸ್ಟ್ರಾಲ್ ನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ಕಡಿಮೆಗೊಳಿಸುವ ಕೆಲಸ ಮಾಡುತ್ತದೆ.

ಎಳ್ಳೆಣ್ಣೆಯಿಂದ ಆರೋಗ್ಯವರ್ಧಕ ಆಹಾರ

ಬಾಣಲೆಯಲ್ಲಿ ಎಳ್ಳೆಣ್ಣೆ ಬಿಸಿ ಮಾಡಿ ಅಡುಗೆಗೆ ಬಳಸುವುದರಿಂದ, ಅತಿ ಕನಿಷ್ಠ ಮಟ್ಟದ ಆ್ಯಲ್ಡಿಹೈಡ್ಸ್ ತಯಾರಾಗುತ್ತವೆ. ಎಳ್ಳೆಣ್ಣೆಯಿಂದ ವ್ಯಂಜನಗಳನ್ನು ತಯಾರಿಸುವುದರಿಂದ, ದೇಹಕ್ಕೆ ಅನೇಕ ಲಾಭಗಳಿವೆ. ಏಕೆಂದರೆ ಇದರಲ್ಲಿನ ಓಲಿಕ್‌ ಆ್ಯಸಿಡ್‌ ನಿಜಕ್ಕೂ ಹೃದಯಕ್ಕೆ ಹಿತಕಾರಿ.

ಸಂಶೋಧನೆಗಳಿಂದ ತಿಳಿದು ಬಂದ ವಿಷಯವೆಂದರೆ, ಎಷ್ಟೋ ಬಗೆಯ ಎಣ್ಣೆಗಳು ವಿಭಿನ್ನ ತಾಪಮಾನದಲ್ಲಿ ಬೇರೆ ಬೇರೆಯಾಗಿ ವರ್ತಿಸುತ್ತವೆ ಎಂಬುದು ಸ್ಪಷ್ಟವಾಗಿದೆ. ಉದಾ : ಸೂರ್ಯಕಾಂತಿ ಬೀಜದ ಎಣ್ಣೆ 180 ಡಿಗ್ರಿ ತಾಪಮಾನದಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಯಿಸಬಹುದಾಗಿದೆ, ಆಗ ಮಾತ್ರ ಅದು ವಿಷಯುಕ್ತ ರಾಸಾಯನಿಕಗಳನ್ನು ಉತ್ಪಾದಿಸಬಲ್ಲದು. ಎಳ್ಳೆಣ್ಣೆಯಲ್ಲಿ ವಿಶೇಷ ರೂಪದಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳಾದ ಸೀಸಾಮೋಲ್‌, ಸೀಮಾಮಿನ್‌, ಸೀಸಾಮೆಲಿಸ್‌ಗಳನ್ನು ಕಾಣಬಹುದು. ಅಂದರೆ ಇದನ್ನು ಬಿಸಿ ಮಾಡಿದಷ್ಟೂ ಇದೇನು ವಿಷಯುಕ್ತ ಪದಾರ್ಥ ಉತ್ಪಾದಿಸದು ಎಂದರ್ಥ. ಇದರಲ್ಲಿ ವಿಟಮಿನ್‌  ಮತ್ತು ಪಾಲಿ ಅನ್‌ಸ್ಯಾಚುರೇಟೆಡ್‌ ಫ್ಯಾಟಿ ಆ್ಯಸಿಡ್‌ ಸಹ ಇರುತ್ತದೆ. ಈ ಆ್ಯಂಟಿಆಕ್ಸಿಡೆಂಟ್‌ನಲ್ಲಿ ಲಿವರ್‌ನಲ್ಲಿ ತಯಾರಾಗುವ ನಕಾರಾತ್ಮಕ ಕೊಲೆಸ್ಟ್ರಾಲ್ ನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಎಷ್ಟೋ ಅಧ್ಯಯನಗಳಿಂದ ತಿಳಿದು ಬಂದದ್ದೆಂದರೆ ಎಳ್ಳೆಣ್ಣೆಯಲ್ಲಿ ದೇಹದ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುವ ಅಪೂರ್ವ ಘಟಕಗಳಿರುವುದೂ ಖಾತ್ರಿಯಾಗಿದೆ.

– ಶ್ರಾವ್ಯಾ ಸಿದ್ದಾರ್ಥ

ಎಣ್ಣೆ  ಒಂದು ಕೆಲಸ ಹನ್ನೊಂದು

ಎಳ್ಳೆಣ್ಣೆಯನ್ನು ಬುದ್ಧಿವರ್ಧಕ ಎಂದೂ ಹೇಳಲಾಗುತ್ತದೆ. ಎಳ್ಳಿನಲ್ಲಿ ಪ್ರೋಟೀನ್‌, ಕ್ಯಾಲ್ಶಿಯಂ, ಬಿ. ಕಾಂಪ್ಲೆಕ್ಸ್ ಅಧಿಕ ಪ್ರಮಾಣದಲ್ಲಿ ಲಭ್ಯವಿದೆ. ಪ್ರತಿದಿನ ಕನಿಷ್ಠ 50 ಗ್ರಾಂ ಎಳ್ಳು ಸೇವಿಸುವುದರಿಂದ ಕ್ಯಾಲ್ಶಿಯಂ ಕೊರತೆ ನಿವಾರಿಸಬಹುದು. ಎಳ್ಳಿನ ಸೇವನೆಯಿಂದ ಮಾನಸಿಕ ದುರ್ಬಲತೆ ಮತ್ತು ಒತ್ತಡ ದೂರವಾಗುತ್ತದೆ. ಎಳ್ಳಿನಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ, ಆಕ್ಸೆಜೆಲಿಕ್‌ ಆ್ಯಸಿಡ್‌, ಅಮೀನೋ ಆ್ಯಸಿಡ್‌, ಪ್ರೋಟೀನ್‌, ವಿಟಮಿನ್‌ ಗಳು ಧಾರಾಳವಾಗಿವೆ. ಕಪ್ಪು ಎಳ್ಳು, ಬಿಳಿ ಎಳ್ಳು ಎರಡರ ಉಪಯೋಗ ಔಷಧಿಯ ರೂಪದಲ್ಲಿ ಆಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ